ರಾಯಚೂರು | ಮನೆ ಕಳ್ಳತನ ; 88,000 ರೂ ಜಪ್ತಿ ಮೂವರ ಆರೋಪಿ ಬಂಧನ

Date:

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬಾಗಿಲು ಮುರಿದು ನಗದು ಹಣ ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಕದೀಮರನ್ನು ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

- Advertisement -

ಬಂಧಿತ ಆರೋಪಿಗಳಾದ ರಾಕೇಶ ಕಲಮಲ, ಯಶವಂತ ಅಲಿಯಾಸ್ ಯಲ್ಲಾಲಿಂಗ ಕಲಮಲಾ, ಶಿವಕುಮಾರ ಅಲಿಯಾಸ್ ಶಿವ ಕಲಮಲಾ ಒಂದೇ ಗ್ರಾಮದ ಆರೋಪಿಗಳಾಗಿದ್ದು ಬಂಧಿತರಿಂದ ಒಂದುವರೆ ತೊಲೆ
ಬಂಗಾರದ ಟಿಕಮಣಿ(ಹಾರ), ಎರಡು ಜೊತೆ ಬೆಳ್ಳಿಯ 24 ತೊಲೆ ಕಾಲು ಚೈನ್‍ಗಳು, ನಗದು ಹಣ ಸೇರಿ ಒಟ್ಟು 88,000 ರೂ ಗಳನ್ನು ಜಪ್ತಿ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

ಆ. 26 ರಂದು ಕಲಮಲಾ ಗ್ರಾಮದ ವೆಂಕಟೇಶ ಎನ್ನುವವರ ಮನೆಯಲ್ಲಿ ಯಾರು ಇಲ್ಲದೆ ಸಮಯದಲ್ಲಿ ಬಾಗಿಲು ಕೀಲಿ ಹೊಡೆದು ಆಲಮಾರಿ ಮುರಿದು 1/2 ತೊಲೆ ಬಂಗಾರದ ಟಿಕಮಣಿ (ಹಾರ) ಎರಡು ಜೊತೆ ಬೆಳ್ಳಿಯ ಕಾಲು ಚೈನ್‍ಗಳು ಒಟ್ಟು 24 ತೊಲೆ, ಹಾಗೂ ನಗದು ಹಣ ಸೇರಿ ಒಟ್ಟು 88,000 ರೂಗಳ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ, ಅವರ ಮಾರ್ಗದರ್ಶನದಲ್ಲಿ,ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಸ್ವಾಮಿ, ಹಾಗೂ ಜಿ.ಹರೀಶ,ಪೊಲೀಸ್ ಉಪಾಧೀಕ್ಷಕ ಶಾಂತವೀರ ಈ. ಅವರ ಮೇಲ್ವಿಚಾರಣೆಯಲ್ಲಿ ಸಿಪಿಐ ಸಾಬಯ್ಯ ನೇತೃತ್ವದಲ್ಲಿ ಪಿಎಸ್‍ಐ ಪ್ರಕಾಶರೆಡ್ಡಿ ಡಂಬಳ ಹಾಗೂ ಸಿಬ್ಬಂದಿಯವರಾದ ನಾಗಪ್ಪ ಎಎಸ್ಐ ಗೌಸ ಪಾಶ, ಶಾಂತಕುಮಾರ, ನರಸಿಂಹಲು, ಮಹೆಬೂಬ ಅಲಿ, ಮಹೇಶ್ವರ ರೆಡ್ಡಿ ಮತ್ತು ಅಜೀಮ್ ರವರನ್ನು ಒಳಗೊಂಡ ವಿಶೇಷ ತಂಡ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಅಂಗನವಾಡಿ ಕೇಂದ್ರದಲ್ಲಿ 20 ದಿನಗಳಿಂದ ಉಪಹಾರವಿಲ್ಲ — ಸಾರ್ವಜನಿಕರ ಆಕ್ರೋಶ

ಪ್ರಕರಣ ಕಾರ್ಯಾಚರಣೆಗೆ ನಿಯೋಜಿಸಿದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಶಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತ–ಜಪಾನ್ ತಂತ್ರಜ್ಞಾನ ಸಹಕಾರದಿಂದ ಹೊಸ ಉದ್ಯಮ ಅವಕಾಶ: ನವತಾ ಹಿರೋಷಿ

ಜಪಾನ್‌ನ ತಂತ್ರಜ್ಞಾನ ಹಾಗೂ ಕೈಗಾರಿಕಾ ಅನುಭವಕ್ಕೆ ಭಾರತದ ಯುವಶಕ್ತಿ ಮತ್ತು ಡಿಜಿಟಲ್...

ಕೋಲಾರ | ತಡೆಹಿಡಿದಿದ್ದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮರುಸ್ಥಾಪನೆ

ಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ರೀದ್ ಪಾಷಾ ಅವರ...

ಉಡುಪಿ | ಹಿರಿಯ ನಾಗರಿಕರನ್ನು ಗೌರವಯುತವಾಗಿ ನೋಡಿಕೊಳ್ಳಿ: ಎಂ.ಎ. ಗಫೂರ್

ಸಮಾಜದಲ್ಲಿ ಹಿರಿಯ ನಾಗರಿಕರು ತಮ್ಮದೇ ಆದ ಸ್ಥಾನಮಾನ ಹೊಂದಿದ್ದು, ಅವರನ್ನು ಗೌರವಯುತವಾಗಿ...

ಎಂಆರ್‌ಪಿಎಲ್ ದುರಂತ: ಮೃತ ಮನೀಶ್ ಕುಟುಂಬಕ್ಕೆ ₹1.20 ಕೋಟಿ ಪರಿಹಾರ

ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್ (ಸಿಎಚ್‌ಟಿಯು)ನಲ್ಲಿ ಬುಧವಾರ ಸಂಭವಿಸಿದ ದುರಂತದಲ್ಲಿ ಮೃತಪಟ್ಟ...