ರಾಯಚೂರು | ಎರಡನೇ ಬೆಳೆಗೆ ನೀರು ಕೊಡುವಂತೆ ಪಕ್ಷಾತೀತವಾಗಿ ಜಿಲ್ಲಾ ಉಸ್ತುವಾರಿಗೆ ಮನವಿ

Date:

ತುಂಗಭದ್ರಾ ಎಡದಂಡೆ ಕಾಲುವೆ ಹಾಗೂ ಬಲದಂಡೆ ಕಾಲುವೆಯ ವ್ಯಾಪ್ತಿಯ ಜಿಲ್ಲೆಯ ರೈತರಿಗೆ ಎರಡನೇ ಬೆಳೆಗೆ ನೀರು ಕೊಡುವಂತೆ ಮಾಜಿ ಸಂಸದರು, ಹಾಲಿ ಶಾಸಕರು, ಮಾಜಿ ಶಾಸಕರು ಹಾಗೂ ದಿ ಗಂಜ್ ಮರ್ಚಂಟ್ಸ್ ಅಸೋಸಿಯೇಷನ್ ವತಿಯಿಂದ ಪಕ್ಷತೀತವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಬಾರಿ ಅತಿವೃಷ್ಟಿಯಿಂದ ನಾಲ್ಕು ಜಿಲ್ಲೆಗಳಾದ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತರು ಬೆಳೆದ ಬಹುತೇಕ ಎಲ್ಲಾ ಬೆಳೆಗಳು ಹಾನಿಯಾಗಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ತುಂಗಭದ್ರ ಜಲಾಶಯದಿಂದ ಎರಡನೇ ಬೆಳೆಗೆ ನೀರು ಬರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ಕರ್ನಾಟಕ ಸರ್ಕಾರ ತುಂಗಭದ್ರ ಜಲಾಶಯದ 33 ಗೇಟುಗಳನ್ನು ಬದಲಾಯಿಸುವುದಕ್ಕಾಗಿ ಎರಡನೇ ಬೆಳೆಗೆ ನೀರು ಒದಗಿಸಲಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿರುತ್ತದೆ ಎಂದರು.

ಜಲಾಶಯ ಗೇಟ್‌ಗಳ ತಜ್ಞರಾದ ಕನ್ನಯ್ಯ ನಾಯ್ಡು, ಅವರನ್ನು ನಾವುಗಳು ಬೇಟಿಯಾಗಿ ಚರ್ಚಿಸಿದಾಗ ಅವರು ತುಂಗಭದ್ರ ಬೋರ್ಡಿನ ನಿರ್ಣಯದಂತೆ ಜನವರಿ-2026 ಅಂತ್ಯಕ್ಕೆ ಈಗಾಗಲೇ ಟೆಂಡರ್ ಕರೆದಿರುವ ಗುತ್ತಿಗೆದಾರರು ಸಂಪೂರ್ಣ ಗೇಟುಗಳನ್ನು ತಯಾರಿಸಬೇಕು. ತದನಂತರ ಮೂರರಿಂದ ನಾಲ್ಕು ತಿಂಗಳಲ್ಲಿ ಜಲಾಶಯದ ಎಡಭಾಗದಿಂದ ಒಂದು ತಂಡ, ಬಲ ಭಾಗದಿಂದ ಒಂದು ತಂಡವನ್ನು ರಚಿಸಿ, ಎಲ್ಲಾ ಗೇಟುಗಳನ್ನು ಅಳವಡಿಸಲು ಸಾಧ್ಯವಿದೆ ಎಂದು ಕನ್ನಯ್ಯ ನಾಯ್ಡು ಅವರು ನಮಗೆ ತಿಳಿಸಿರುತ್ತಾರೆ ಎಂದರು.

ಈ ಸಾರಿ ತುಂಗಭದ್ರ ಜಲಾಶಯಕ್ಕೆ ಒಳಹರಿವು ಪ್ರತಿದಿನ ಇನ್ನೂ ಹೆಚ್ಚುತ್ತಿದ್ದು, 80 ಟಿಎಂಸಿ ನೀರನ್ನು ಶೇಖರಿಸಿ ಇಡಲಾಗಿದೆ. ಅಂತ್ಯಕ್ಕೆ ಒಳಹರಿವು ಬರುವ ನಿರೀಕ್ಷೆ ಇದೆ. ಇನ್ನೂ 6 ರಿಂದ 7 ಟಿಎಂಸಿ ನೀರು ಡಿಸೆಂಬರ್-೨೦೨೫ರ ಒದಗಿಸಿದಲ್ಲಿ ಎರಡನೇ ಬೆಳೆ ರೈತರ ಕೈ ಸೇರುತ್ತದೆ. ಇದರಿಂದ ರೈತರು, ವ್ಯಾಪಾರಸ್ತರು, ಕಾರ್ಮಿಕರು, ಹಾಗಾಗಿ ಎರಡನೇ ಬೆಳೆಗೆ ಮಾರ್ಚ ೩೦ರ ವರೆಗೆ ನೀರು ಉದ್ಯಮೆದಾರರು ಹಾಗೂ ಸರ್ಕಾರಕ್ಕೆ ಲಾಭವಾಗುತ್ತದೆ ಎಂದು ತಿಳಿಸಿದರು.

ಈ ಬಾರಿ ಎಡದಂಡೆ ನಾಲೆಗೆ ಸುಗ್ಗಿಬೆಳೆ ಕಾಲುವೆಯಲ್ಲಿ ಪ್ರತಿ ವರ್ಷಕ್ಕಿಂತ ಮುಂಚಿತವಾಗಿ ನೀರು ಬಿಟ್ಟಿದ್ದರಿಂದ ಹಾಗೂ ಮಳೆ ಬಂದಿದ್ದರಿಂದ ರೈತರ ಭತ್ತದ ನಾಟಿ ಹಾಗೂ ಇನ್ನುಳಿದ ಬೆಳೆಗಳನ್ನು ಮುಂಚಿತವಾಗಿ ಬಿತ್ತನೆ ಮಾಡಿದ್ದು, ನವೆಂಬರ್ ಕೊನೆಯಲ್ಲಿ ಭತ್ತವು ಸಂಪೂರ್ಣವಾಗಿ ಕಟಾವಿಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ನವೆಂಬರ್ 10ನೇ ತಾರೀಖಿನೊಳಗೆ ನೀರು ಬಿಡುವ ತೀರ್ಮಾನ ಮಾಡಿದಲ್ಲಿ ರೈತರು ಸಸಿ ಮಡಿ ತಯಾರು ಮಾಡಿಕೊಂಡು ಡಿಸೆಂಬರ್ ನಲ್ಲಿ ನಾಟಿ ಮಾಡಲು ಅನುಕೂಲವಾಗುತ್ತದೆ.

ಇದರಿಂದ ಮಾರ್ಚ್ ತಿಂಗಳ ಒಳಗೆ ರೈರಿತಗೆ ಬೆಳೆ ಕೈ ಸೇರುತ್ತದೆ. ಫೆಬ್ರವರಿ ತಿಂಗಳಿನಲ್ಲಿ ಜಲಾಶಯದಲ್ಲಿ 40 ಟಿಎಂಸಿ ಗಿಂತ ಕೆಳಗೆ ನೀರು ಉಳಿಯುತ್ತದೆ ಆವಾಗಲೇ ಗೇಟ್‌ಗಳ ಅಳವಡಿಕೆ ಪ್ರಾರಂಭಿಸಿದರೆ ಜೂನ್ ಅಂತ್ಯದೊಳಗೆ ಎಲ್ಲಾ ಗೇಟ್‌ಗಳನ್ನು ಅಳವಡಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತೀರ್ಮಾನವನ್ನು ಮರು ಪರಿಶೀಲಿಸಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕೆಂದು ಮನವಿ ಮಾಡಿದರು.

- Advertisement -

ಈ ಸುದ್ದಿ ಓದಿದ್ದೀರಾ? ರಾಯಚೂರು | ಹಿಂದೂ ರಥೋತ್ಸವಕ್ಕೆ ಮುಸ್ಲಿಮರಿಂದ ₹2 ಲಕ್ಷ ದೇಣಿಗೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಈ ಸಂದರ್ಭದಲ್ಲಿ ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಶಾಸಕ ಡಾ.ಶಿವರಾಜ್ ಪಾಟೀಲ್, ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ, ಬಿ.ವಿ.ನಾಯಕ, ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಬಸನಗೌಡ ವ್ಯಾಗವಾಟ್, ಗಂಗಾಧರ ನಾಯಕ, ಮುಖಂಡ ಹರವಿ ನಾಗನಗೌಡ, ಬೆಲ್ಲಂ ನರಸರೆಡ್ಡಿ, ವಿಶ್ವನಾಥ ಪಾಟೀಲ್ ಕ್ಯಾದ್ದಿಗೇರಾ ಸೇರಿದಂತೆ ಅನೇಕರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ: ಅಧಿಸೂಚನೆ ಪ್ರಕಟ, ಅಕ್ಟೊಬರ್ 23ಕ್ಕೆ ಮತದಾನ

ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಸೆ.29ರಂದು ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಬೆಳಗಾವಿ...

ವಿಜಯಪುರ | ಹಿಂದಿ ಭಾಷೆ-ಸಾಹಿತ್ಯದ ವಿವಿಧ ಆಯಾಮಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿಂದಿ ಅಧ್ಯಯನ ವಿಭಾಗದ...

ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದ ಸಚಿವರು

ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಬೇತಮಂಗಲದಲ್ಲಿರುವ ಸಮಾಜ...

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...