ರಾಯಚೂರು | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

Date:

ಜನರಿಂದ ಜನರಿಗಾಗಿ ಜನರಿಗೋಸ್ಕರ ರೂಪಿತಗೊಂಡ ಸಂವಿಧಾನ ಆಶಯಗಳನ್ನು ಜಾರಿಗೊಳಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಸಣ್ಣನೀರಾವರಿ ಸಚಿವ ಎನ್ ಎಸ್ ಬೋಸರಾಜ ಅವರು ಹೇಳಿದರು.

ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ನಗರಸಭೆಗಳ ಸಹಯೋದಲ್ಲಿ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್‌ 15ರಂದು ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ಸಂವಿಧಾನ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ವೈವಿಧ್ಯತೆಯಲ್ಲಿ ಏಕತೆ ಸಾರುವ ಸಂವಿಧಾನ ಭ್ರಾತೃತ್ವ, ಸಾಮರಸ್ಯದ ಭಾವನೆಯನ್ನು ಮೂಡಿಸಿ ರಕ್ತಪಾತವಿಲ್ಲದೆ ಸಮಾಜ ನಿರ್ಮಾಣ ಮಾಡಲು ಪ್ರೇರಣೆಯಾಗಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಎಲ್ಲರಿಗೂ ದೊರೆಯುವಂತೆ ಮಾಡುವ ಮೂಲಕ ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ದೆ ಮತ್ತು ಉಪಾಸನಾ ಸ್ವಾತಂತ್ರ್ಯವನ್ನು ನೀಡಿದ್ದು, ಸಂವಿಧಾನ ಆಶಯಗಳನ್ನು ಅರ್ಥೈಸಿಕೊಂಡು ಅನುಷ್ಠಾನಕ್ಕೆ ತರಲು ಪ್ರತಿಯೊಬ್ಬರ ಸಹಕಾರವೂ ಅಗತ್ಯವಾಗಿದ್ದು, ರಾಷ್ಟ್ರದ ಏಕತೆಯೊಂದಿಗೆ ಸಮಾನ ಅವಕಾಶ ನೀಡಲು ಸಹಕರಿಸಬೇಕಿದೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಂವಿಧಾನ ಓದುವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಎಲ್ಲರಿಗೂ ಸಂವಿಧಾನ ಪುಸ್ತಕಗಳನ್ನು ವಿತರಿಸಲಾಯಿತು. ಸಚಿವ ಎನ್ ಎಸ್ ಬೋಸರಾಜು ಅವರು ಸಂವಿಧಾನ ಪೀಠಿಕೆ ಓದಿದರು.

ಈ ಸುದ್ದಿ ಓದಿದ್ದೀರಾ? ಗದಗ | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಹಲವು ಶಾಲೆಯಿಂದ ಎಂಟು ಸಾವಿರಕ್ಕೂ ಅಧಿಕ ಮಕ್ಕಳು ಭಾಗಿಯಾದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ತುಕರಾಂ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ದುರಗೇಶ, ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ತಹಶೀಲ್ದಾರ್, ಸಮಾಜ ಕಲ್ಯಾಣ ಅಧಿಕಾರಿ ಮಹೇಶ ಪೋತ್ದಾರ‌, ನಗರಸಭೆ ಸದಸ್ಯರುಗಳಾದ ಜಯಣ್ಣ, ಜಿಂದಪ್ಪ, ದರೂರು ಬಸವರಾಜ, ತಿಮ್ಮಪ್ಪ ನಾಯಕ, ಪಾರಮಸಲ್ ಸುಖಾಣ, ಮಹ್ಮದಶಾಲಂ, ಅಮರೇಗೌಡ ಹಂಚಿನಾಳ, ಹರಿರಾಂಪುರು, ನರಸಿಂಹಲು ಮಾಡಗಿರಿ, ಬಸವರಾಜ ಪಾಟೀಲ್ ಅತ್ತನೂರು ಸೇರಿದಂತೆ ಬಹುತೇಕ ಮುಖಂಡರು, ಹಲವು ಶಾಲಾ ಕಾಲೇಜುಗಳು ಶಿಕ್ಷಕರು, ಅಧಿಕಾರಿಗಳು ಇದ್ದರು.

ಸಿಟಿಜನ್‌ ಜರ್ನಲಿಸ್ಟ್‌ ಹಫೀಜುಲ್ಲ
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಸರ್ವಾಧಿಕಾರಿ ಧೋರಣೆ ಅಂತ್ಯಗೊಳಿಸಲು ಮತದಾರರು ಮುಂದಾಗಬೇಕು: ಎಸ್ ಆರ್ ಹೀರೆಮಠ

ಪ್ರಜಾಪ್ರಭುತ್ವ ವ್ಯವಸ್ಥೆಯು ಅಪಾಯಕ್ಕೆ ಸಿಲುಕಿದ್ದು, ಏಕವ್ಯಕ್ತಿ ಸರ್ವಾಧಿಕಾರಿ ಧೋರಣೆ ಅಂತ್ಯಗೊಳಿಸಲು ಜನರು...

ರಾಯಚೂರು | ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಹುದ್ದೆ ಭರ್ತಿ; ಗುತ್ತಿಗೆ ನೌಕರರ ಖಾಯಂಗೆ ಒತ್ತಾಯ

ರಾಯಚೂರು ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ಹಾಗೂ ಗುತ್ತಿಗೆ ನೌಕರರನ್ನು...

ರಾಯಚೂರು | ಮಳಿಗೆ ತೆರವು ಮಾಡಲು ಹೋಗಿದ್ದ ನಗರಸಭೆ ಸಿಬ್ಬಂದಿ; ಮಾರಕಾಸ್ತ್ರ ಹಿಡಿದು ಬೆದರಿಕೆ

ನಗರಸಭೆ ವ್ಯಾಪ್ತಿಗೆ ಬರುವ ಮಳಿಗೆಗಳನ್ನು ಖಾಲಿಮಾಡಿಸಲು ಹೋಗಿದ್ದ ನಗರಸಭೆ ಸಿಬ್ಬಂದಿಗಳಿಗೆ ಮಾರಕಾಸ್ತ್ರ...

ರಾಯಚೂರು | ಮಾ.3ರಿಂದ 5ರವರೆಗೆ ತೆಲಂಗಾಣದಲ್ಲಿ ರಾಷ್ಟ್ರೀಯ ಐಕ್ಯತಾ ಸಮ್ಮೇಳನ

ಸಿಪಿಐ(ಎಂಎಲ್) ಮಾಸ್ ಲೈನ್ ಸಮಿತಿಯಿಂದ ಮಾ.3ರಿಂದ 5ರವರೆಗೆ ತೆಲಂಗಾಣ ಖಮ್ಮಂನಲ್ಲಿ ರಾಷ್ಟ್ರೀಯ...