ಎಸ್ಐಆರ್ ಪ್ರಕ್ರಿಯೆಯ ಮೂಲಕ ದಲಿತರು, ಅಲ್ಪಸಂಖ್ಯಾತರು ಹಾಗೂ ಒಬಿಸಿ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಎನ್‌ಆರ್‌ಸಿ ಹಾಗೂ ಸಿಎಎ ಕ್ರಮಗಳ ಮುಂದುವರಿದ ಭಾಗವಾಗಿಯೇ ಎಸ್‌ಐಆರ್ ಉದ್ದೇಶ ಹೊಂದಿದೆ ಎಂದು ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ಶರಣಕುಮಾರ ಮುದ್ದಮ್ಮಗುಡ್ಡಿ ಖಂಡಿಸಿದರು.
ನಗರದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ಹಿಟ್ಲರ್ ಕಾಲದಲ್ಲಿ ನಡೆದ ನರಮೇಧದ ರೀತಿಯಲ್ಲೇ ಕೇಂದ್ರ ಸರ್ಕಾರ ಎಸ್‌ಐಆರ್ ಅನ್ನು ಜಾರಿಗೆ ತರುತ್ತಿದ್ದು, ಇದು ರಕ್ತರಹಿತ ನರಮೇಧ ನಡೆಸುವ ಪ್ರಕ್ರಿಯೆಯಾಗಿದೆ ಎಂದರು. ನಂತರ ಎಸ್ಐಆರ್ ಕರಪತ್ರ ಬಿಡುಗಡೆಗೊಳಿಸಿದರು.
ಇಡೀ ದೇಶದಲ್ಲಿ ಚುನಾವಣೆಗಳು ನಡೆಯಬಾರದು ಎಂಬ ಕುತಂತ್ರದ ಭಾಗವಾಗಿ ಕೇಂದ್ರ ಸರ್ಕಾರ ಎಸ್‌ಐಆರ್ ಜಾರಿಗೆ ತರುತ್ತಿದೆ. ಈಗಾಗಲೇ ಪಶ್ಚಿಮ ಬಂಗಾಳ, ಬಿಹಾರ ಸೇರಿ ಇನ್ನು ಕೆಲವು ರಾಜ್ಯಗಳಲ್ಲಿ ಎಸ್ಐಆರ್ ಪ್ರಕ್ರಿಯೆ ಮೂಲಕ ಜನಸಾಮಾನ್ಯರ ಹಕ್ಕು ಕಸಿದಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬೀದಿ ನಾಯಿಗಳ ದಾಳಿ; ಮೂವರು ಮಕ್ಕಳಿಗೆ ಗಾಯ
ಇದೇ 30ರಂದು ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಎಸ್‌ಐಆರ್ ವಿರೋಧಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಜಾತ್ಯತೀತ ಮನಸುಗಳು, ಸಂಘಟನೆಗಳು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಕರೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಮಾತ್ ಇಸ್ಲಾಂ ಹಿಂದೆ ಜಿಲ್ಲಾ ಮುಖಂಡರು ಅಸೀಮುದ್ದೀನ್ ಅಖ್ತರ್, ದಲಿತ ಮುಖಂಡರು ಭೀಮಣ್ಣ ನಗನೂರು, ಗ್ರಾಕುಸ ಗುಂಡಪ್ಪ, ಇನ್ನಿತರರು ಉಪಸ್ಥಿತರಿದ್ದರು.




