ರೈತ ಮತ್ತು ಕಾರ್ಮಿಕರ ಹಕ್ಕುಗಳಿಗೆ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನ.26ರಿಂದ 28ವರೆಗೆ ಬೆಂಗಳೂರಿನ ಪ್ರೀಡಂಪಾರ್ಕನಲ್ಲಿ 72ಗಂಟೆಗಳ ನಿರಂತರ ಹೋರಾಟಕ್ಕೆ ಕರೆ ನೀಡಿದ್ದು, ಸರ್ಕಾರಿ ಭೂಮಿ ಸಾಗುವಳಿ ಮಾಡುವ ರೈತರು ಭಾಗವಹಿಸುವಂತೆ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಆಂಜಿನಯ್ಯ ಕುರುಬದೊಡ್ಡಿ ಮನವಿ ಮಾಡಿದ್ದಾರೆ.
ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಸರ್ಕಾರಗಳು ಬಗರ ಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡಲು ಮುಂದಾಗುತ್ತಿಲ್ಲ. ಅನೇಕ ಹಂತದ ಹೋರಾಟಗಳು ನಡೆಸಿದ್ದರೂ ಕೇವಲ ಭರವಸೆಗಳನ್ನು ನೀಡುತ್ತಾ ಬರುತ್ತಿವೆ. ದೇವದುರ್ಗ, ಲಿಂಗಸೂಗೂರು, ಮಾನವಿ ಸೇರಿದಂತೆ ಅನೇಕ ತಾಲೂಕಗಳಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಕಿರುಕುಳ ನೀಡಲಾಗುತ್ತಿದೆ.
ಅರಣ್ಯ ಹಕ್ಕು ಕಾಯ್ದೆಯನ್ನುಜಾರಿಗೊಳಿಸುವುದು, ಸರ್ಕಾರ ಭೂಮಿ ಉಳುಮೆ ಮಾಡುತ್ತಿರುವ ರೈತರಿಗೆ ಪಟ್ಟಾ ನೀಡಲು ನಡೆಯಲಿರು ಹೋರಾಟದಲ್ಲಿ ಜನರು ಭಾಗವಹಿಸಬೇಕು, ಒಂದು ಸಾವಿರ ಜನರು ಬೆಂಗಳೂರು ಹೋರಾಟಕ್ಕೆ ತೆರಳಲು ಉದ್ದೇಶಿಸಲಾಗಿದೆ ಎಂದರು.
ಗ್ರಾಮೀಣ ಕೂಲಿಕಾರರ ಸಂಘದ ಸಂಚಾಲಕ ರಾಹುಲ ಮಾತನಾಡಿ, ದುಡಿಯುವ ಜನರ ಆಶಯಗಳಿಗೆ ವಿರುದ್ಧವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆದುಕೊಳ್ಳುತ್ತಿದ್ದು, ಸಾಗುವಳಿದಾರರಿಗೆ ಪಟ್ಟಾ ನೀಡಲು ರಾಜಭವನ ಚಲೋ ಕಾರ್ಯಕ್ರಮ ನಡೆಸಲಾಗುತ್ತಿದೆ. 50ಸಾವಿರಕ್ಕೂ ಅಧಿಕ ಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರೈತರು, ಕಾರ್ಮಿಕರು, ದಲಿತ ಪರವಾದ ಸಂಘಟನೆಗಳು, ಜನರು ಭಾಗವಹಿಸುವಂತೆ ಮನವಿ ಮಾಡಿದರು. ಈ ಸಂದರ್ಬದಲ್ಲಿ ಹನುಮಂತ ಗುಂಜಳ್ಳಿ, ರಮೇಶ, ಸ್ವಾಮಿದಾಸ, ಶಿವರಾಜ ಉಪಸ್ಥಿತರಿದ್ದರು.