ಸೌಹಾರ್ದದ ವಿವೇಕದಿಂದ ದೇಶವನ್ನು ಕಟ್ಟಬೇಕಾಗಿದೆ: ಎಸ್ ಜಿ ಸಿದ್ದರಾಮಯ್ಯ

Date:

“ನಮ್ಮ ಎದೆಯೊಳಗೆ ಪ್ರೀತಿ, ಸಹಬಾಳ್ವೆ, ಸಂವಿಧಾನದ ಆಶಯವಿದೆ. ನಾವು ದೊಣ್ಣೆಯನ್ನು ಕೈಯಲ್ಲಿ ಹಿಡಿಯುವವರಲ್ಲ. ಬೀದಿಯಲ್ಲಿ ಲಾಠಿ, ದೊಣ್ಣೆ ಹಿಡಿದು ಹೋಗುವುದು ಭಯೋತ್ಪಾದನೆ. ನಮ್ಮೆದೆಯೊಳಗಿರುವ ಸೌಹಾರ್ದದ ವಿವೇಕದಿಂದ ದೇಶವನ್ನು ಕಟ್ಟಬೇಕಾಗಿದೆ” ಎಂದು ಹಿರಿಯ ಸಾಹಿತಿ ಎಸ್ ಜಿ ಸಿದ್ದರಾಮಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

- Advertisement -

ದ್ವೇಷ ಅಳಿಯಲಿ, ಪ್ರೀತಿ ಉಳಿಯಲಿ ಎಂದು ಬೆಂಗಳೂರು ನಗರದ ಟೌನ್ ಹಾಲ್ ಮುಂಭಾಗದಲ್ಲಿ ‘ಸಂವಿಧಾನ ದೀವಿಗೆ ಭಾವೈಕ್ಯತಾ ನಡಿಗೆ – ಸೌಹಾರ್ದ ದೀಪಾವಳಿ’ಯನ್ನು, ಸೌಹಾರ್ದ ಕರ್ನಾಟಕದ ವತಿಯಿಂದ ಆಚರಿಸಲಾಯಿತು. ಕಾರ್ಪೋರೇಷನ್ ಸರ್ಕಲ್‌ನಿಂದ ಮರೆವಣಿಗೆ ಹೊರಟು ಟೌನ್ ಹಾಲ್‌ವರೆಗೂ ನಡಿಗೆ ಬಂದ ನಾಡಿನ ಹಿರಿಯ ಪ್ರಜ್ಞಾವಂತರು, ಸಾಹಿತಿಗಳು, ಗಣ್ಯರು ದ್ವೇಷ ಅಳಿಯಲಿ‌, ಪ್ರೀತಿ ಉಳಿಯಲಿ ಎಂಬ ಸಂದೇಶವನ್ನು ಸಾರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18...

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ ವಿಶಾಲ ವೃಕ್ಷ, ಪ್ರಕೃತಿ ಮತ್ತು ಬದುಕಿನ ಸಂಬಂಧದ ಪ್ರತಿಫಲನ. ಗೊಂಡ್ ಆದಿವಾಸಿ ಕಲಾವಿದನ ಚಿತ್ರ ಕಲಾಕೃತಿಯೊಂದು ಆತನ ಮರಣದ 25...

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಇದನ್ನು ಓದಿದ್ದೀರಾ? ರೈತರ ಅರ್ಜಿ ಕಸಕ್ಕೆ ಎಸೆದ ಸಿಎಂ ಸಿದ್ದರಾಮಯ್ಯಗೆ ಯಾವ ಶಿಕ್ಷೆ: ಜೆಡಿಎಸ್‌ ಪ್ರಶ್ನೆ

“ನಾವು ಒಂದು ಕಡೆ ಸಂವಿಧಾನದ ದೀವಿಗೆಯನ್ನು ಹಿಡಿದು ಹೊರಟಿದ್ದರೆ, ಇನ್ನೊಂದು ಕಡೆ ಕೆಲ ದೊಣ್ಣೆ ನಾಯಕರು ದೊಣ್ಣೆಯನ್ನು ಹಿಡಿದು ಊರೆಲ್ಲ ಓಡಾಡುತ್ತಿದ್ದಾರೆ. ಇದು ಚರ್ಚೆಯಾಗಬೇಕು. ನಿರುದ್ಯೋಗ, ಹಸಿವಿನ ಸಮಸ್ಯೆ ಕಾಡುತ್ತಿರುವ ಸಮಯದಲ್ಲಿ, ಸಂವಿಧಾನಕ್ಕೆ ಬಹುದೊಡ್ಡ ಸಂಚಕಾರ ಬಂದಿರುವ ಹೊತ್ತಿನಲ್ಲಿ, ನಮ್ಮ ಯುವಮನಸ್ಸುಗಳು ಸಂವಿಧಾನ ವಿರೋಧಿಗಳ ಜೊತೆ ಕೈಜೋಡಿಸಿ ನಮ್ಮ ಮನೆಗೆ ನಾವೇ ಬೆಂಕಿ ಹಾಕಿಕೊಳ್ಳುತ್ತಿದ್ದೇವೆ. ಇದರಿಂದ ನಮ್ಮ ಯುವಜನರು ಹೊರಗಡೆ ಬರಬೇಕು. ಸಂವಿಧಾನದ ಮೌಲ್ಯಗಳನ್ನು ಉಳಿಸಬೇಕು” ಎಂದು ಹಿರಿಯ ಹೋರಾಟಗಾರ ಮಾವಳ್ಳಿ ಶಂಕರ್ ಹೇಳಿದರು.

“ಆರ್‌ಎಸ್ಎಸ್‌ಗೆ ನೂರು ವರ್ಷ ಆಗಿರುವುದು ಭಾರತದ ಸೌಹಾರ್ದತೆಗೆ, ಜಾತ್ಯತೀತ ತತ್ವಕ್ಕೆ ಮಾರಕ. ಅದಕ್ಕಾಗಿ ನಾವು ಮತ್ತೆ ಮತ್ತೆ ಸೌಹಾರ್ದತೆ, ಭಾವೈಕ್ಯತೆ ಉಳಿಸುವ ಬಗ್ಗೆ ಮಾತನಾಡಬೇಕು. ಯುವಕರನ್ನು, ಹೊಸತಲೆಮಾರನ್ನು ಸೌಹಾರ್ದ ನಡಿಗೆಯೆಡೆಗೆ ಕರೆತರಬೇಕಿದೆ” ಎಂದು ಚಿಂತಕ, ಶಿಕ್ಷಣತಜ್ಞ ಬಿ ಶ್ರೀಪಾದ ಭಟ್ ಹೇಳಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಗಾಂಧೀಜಿ ಆದರ್ಶಗಳು ಯುವಕರಿಗೆ ದಾರಿದೀಪ: ಪವನಕುಮಾರ ವಳಕೇರಿ

ಬ್ರಿಟಿಷರ ವಿರುದ್ಧ ಶಾಂತಿ, ಅಹಿಂಸೆ ಹಾಗೂ ತಾಳ್ಮೆಯ ಮಾರ್ಗದಲ್ಲಿ ಹೋರಾಡಿ ದೇಶಕ್ಕೆ...

ಕಲಬುರಗಿ | ರಂಗಭೂಮಿಯಲ್ಲಿ ಅಪ್ರತಿಮ ಕಲಾಸೇವೆ; ಶ್ರೀಧರ ವಗ್ಗಿಗೆ ರಾಜ್ಯಮಟ್ಟದ ‘ಕಲಾ ತಪಸ್ವಿ’ ಪ್ರಶಸ್ತಿ

ಚಿಂಚೋಳಿ ತಾಲ್ಲೂಕಿನ ಕನಕಪುರ ಗ್ರಾಮದ ರಂಗಭೂಮಿ ಕಲಾವಿದ ಶ್ರೀಧರ ವಗ್ಗಿ ಅವರಿಗೆ...

ಕಲಬುರಗಿ | ಎಸ್‌ಐಆರ್ ವಿರುದ್ಧ ಸಿಡಿದೆದ್ದ ಪ್ರಗತಿಪರ ಸಂಘಟನೆಗಳು; ಜ್ಞಾನೇಶ್ ಕುಮಾರ್ ಪ್ರತಿಕೃತಿ ದಹನ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಜೇವರ್ಗಿ ತಾಲೂಕು...

ಕಲಬುರಗಿ | ಅನುದಾನಿತ ಹಾಸ್ಟೆಲ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಮಾಲಕನ ವಿರುದ್ಧ ಪ್ರಕರಣ ದಾಖಲು

ಸರಕಾರಿ ಅನುದಾನಿತ ಮಹಿಳಾ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ...