ಶಿವಮೊಗ್ಗ ನಗರದಲ್ಲಿ ವಾಹನ ಸಂಚಾರ ದಟ್ಟಣೆ ಬಗೆಹರಿಸುವಂತೆ ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಆಮ್ ಆದಿ ಪಾರ್ಟಿ ಕಾರ್ಯಕರ್ತರು ಶಿವಮೊಗ್ಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿ, “ಇತ್ತೀಚಿನ ಕೆಲವು ತಿಂಗಳುಗಳಿಂದ ಎನ್ ಟಿ ರಸ್ತೆ, ಟೆಂಪೋಸ್ಟಾಂಡ್ ಬಳಿ ಟ್ರಾಫಿಕ್ ಹೆಚ್ಚಾಗಿದ್ದು, ಸಾಕಷ್ಟು ರಸ್ತೆ ಅಪಘಾತಗಳು ಸಂಭವಿಸಿ ಪ್ರಾಣ ಹಾನಿಗಳೂ ಆಗಿವೆ. ಈ ಸ್ಥಳದ ಅಕ್ಕಪಕ್ಕದಲ್ಲಿ ಪ್ರಾಥಮಿಕ ಶಾಲೆ ಹಾಗೂ ಕಾಲೇಜು ಇದ್ದು, ಈ ಟೆಂಪೋ ಸ್ಟ್ಯಾಂಡೇ ವಿದ್ಯಾರ್ಥಿಗಳ ಬಸ್ ನಿಲ್ದಾಣವಾಗಿದೆ” ಎಂದರು.
“ಅದೇ ರಸ್ತೆ ಮಾರ್ಗವಾಗಿ ಅನೇಕ ಪ್ರತಿಷ್ಠಿತ ಆಸ್ಪತ್ರೆಗಳಾದ ನಾರಾಯಣ ಹೃದಯಾಲಯ, ಶಂಕರ್ ಕಣ್ಣಿನ ಆಸ್ಪತ್ರೆ ಹಾಗೂ ಪಿಯರ್‌ಲೈಟ್ ಕಾರ್ಖಾನೆಯೂ ಇದ್ದು, ಪಕ್ಕದಲ್ಲಿ ಕೃಷಿ ಇಲಾಖೆ ಕಚೇರಿ ಇದೆ. ಆರ್‌ಎಂಎಲ್ ನಗರದ 1ನೇ ಹಂತ, 2ನೇ ಹಂತದ ಬಡಾವಣೆಯ ಮುಖ್ಯ ರಸ್ತೆಯಾಗಿದೆ. ಈ ವೃತ್ತದಲ್ಲಿ ಯಾವುದೇ ತರಹದ ಸಂಚಾರಿ ನಿಯಮಗಳು ಪಾಲನೆ ಆಗುತ್ತಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ; ತೀವ್ರ ಚರ್ಚೆ
ಜಿಲ್ಲಾಧಿಕಾರಿಯವರು ಈ ಬಗ್ಗೆ ಗಮನ ಹರಿಸಿ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಬೇಕು. ಸಾರ್ವಜನಿಕರಿಗೆ ಉಂಟಾಗುತ್ತಿರುವ ಅನಾನುಕೂಲತೆಯ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಂಡು ಟ್ರಾಫಿಕ್ ಸಿಗ್ನಲ್ ಲೈಟ್ ಆಳವಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಶಿವಕುಮಾರ್ ಗೌಡ್ರು, ನಜೀರ್ ಅಹಮದ್, ಸುರೇಶ್ ಕೌಟೆಕಾರ್ ಸೇರಿದಂತೆ ಇತರರು ಇದ್ದರು.