ಶಿವಮೊಗ್ಗ | ರಾಜ್ಯ ಚೆಸ್ ಟೂರ್ನಿ ಉದ್ಘಾಟನೆ ; ಮನಸ್ಸನ್ನು ಕೇಂದ್ರೀಕರಿಸಲು ಚೆಸ್ ಆಟ ಅತ್ಯಗತ್ಯ : ಸಿಪಿಐ ಸಂತೋಷ್ ಕುಮಾರ್ ಡಿ ಕೆ

Date:

ಶಿವಮೊಗ್ಗ ಚೆಸ್‌ನಲ್ಲಿ ಒತ್ತಡದಲ್ಲಿ ಯೋಚನೆ ಮಾಡುವ ಶಕ್ತಿಯಿದೆ. ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಗುಣವಿದೆ. ಪ್ರತಿ ಹಂತದಲ್ಲೂ ಸಮಸ್ಯೆಯನ್ನೆದುರಿಸುವ ಸಂದರ್ಭವಿದೆ. ಇಂತಹ ಸಮಸ್ಯೆ ಮೂಲಕವೇ ಸಮರ್ಪಕ ಉತ್ತರ ಕಂಡುಕೊಳ್ಳುವ ಆಟ ಚೆಸ್ ಆಗಿದೆ ಎಂದು ಜೆಸಿಐ ಇಂಡಿಯಾದ ಝೋನ್-೨೪ರ ಅಧ್ಯಕ್ಷ ಗೌರೀಶ್ ಭಾರ್ಗವ್ ಹೇಳಿದರು.

- Advertisement -

ಅವರು ಶುಕ್ರವಾರ ನಗರದಲ್ಲಿ ಆರಂಭವಾದ ೧೯ರ ಒಳಗಿನವರ ರಾಜ್ಯಮಟ್ಟದ ಚೆಸ್ ಚಾಂಪಿಯನ್ ಶಿಪ್‌ಟೂರ್ನಿಯನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಮಾತನಾಡಿದರು. ಚೆಸ್ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕನಾಗುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಇದರಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಯಾವೆಲ್ಲ ಗುಣಗಳು ಬೇಕೋ ಅವೆಲ್ಲವೂ ಇವೆ. ಈ ಆಟದ ಮೂಲಕ ಹೆಸರುಗಳಿಸಿ ದೇಶವನ್ನು ಪ್ರತಿನಿಧಿಸುವಂತಾಗಬೇಕು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ವಿದ್ಯಾರ್ಥಿ ದೆಸೆಯಿಂಸಲೇ ಉತ್ತಮ ಹವ್ಯಾಸದ ಆಟಗಳನ್ನು ರೂಢಿಸಿಕೊಂಡು ಸ್ಪರ್ಧಾ ಮನೋಭಾವದಿಂದ ಆಡುವುದು ಮುಖ್ಯ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿದ್ದ ವಿನೋಬನಗರ ಸಿಪಿಐ ಡಿ ಕೆ ಸಂತೋಷ್‌ಕುಮಾರ್, ಚೆಸ್ ಉತ್ತಮ ಹವ್ಯಾಸದ ಆಟ. ಮನಸ್ಸನ್ನು ಕೇಂದ್ರೀಕರಿಸಲು ಇದು ಅತ್ಯಗತ್ಯ ಎಂದರು.

ಕ್ರೀಡಾ ಮತ್ತು ಸ್ಪರ್ಧಾ ಮನೋಭಾವದಿಂದ ಆಟವನ್ನು ಆಡಿದರೆ ಯಶಸ್ಸು ಸಾಧ್ಯ. ಮಕ್ಕಳು ಬಾಲ್ಯದಿಂದಲೇ ಇಂತಹ ಆಟದ ಮೂಲಕ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕೆಂದರು.

ವೇದಿಕೆಯಲ್ಲಿ ಜೆಸಿಐ ಝೋನ್-೨೪ರ ಸಂಭಾವ್ಯ ಉಪಾಧ್ಯಕ್ಷ ಪ್ರಮೋದ ಶಾಸ್ತ್ರಿ, ಚಾಣಕ್ಯ ಚೆಸ್ ಸ್ಕೂಲ್ ಮುಖ್ಯಸ್ಥ ವಿಲ್ಸನ್ ಅಂದ್ರಾದೆ, ಮುಖ್ಯ ತೀರ್ಪುಗಾರ ಪ್ರಾಣೇಶ್ ಯಾದವ್, ಶಿವಮೊಗ್ಗ ಚೆಸ್ ಅಸೋಸಿಯೇಶನ್ ಕಾರ್ಯದರ್ಶಿ ಸಚಿನ್, ಕುಂದಾಪುರದ ಕಾಶ್ವಿ ಚೆಸ್ ಸ್ಕೂಲ್‌ನ ನರೇಶ್, ಚಿರಂತನ್ ಜೆಸಿಐನ ಕಾರ್ಯದರ್ಶಿ ವೈಷ್ಣವಿ, ಚಾಣಕ್ಯ ಚೆಸ್‌ನ ಆಶಾ ಅಂದ್ರಾದೆ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ ಗ್ರಾಮಸ್ಥರು

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು...

ಉಡುಪಿ | ಫಾರಂ-7 ಅರ್ಜಿಗಳ ದುರುಪಯೋಗಕ್ಕೆ ಕಡಿವಾಣ ಹಾಕಿ: ಕಥೊಲಿಕ್ ಸಭಾ ಆಗ್ರಹ

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಫಾರಂ-7 ಅರ್ಜಿಗಳ ದುರುಪಯೋಗ...

ವಿಜಯಪುರ | ಕೆ-ಸೆಟ್ ಪರೀಕ್ಷೆ ಪಾರದರ್ಶಕತೆಗೆ ಕಟ್ಟುನಿಟ್ಟಿನ ಕ್ರಮ: ಡಾ. ಔದ್ರಾಮ

ಅ. 11ರಂದು ನಡೆಯಲಿರುವ ಕೆ-ಸೆಟ್ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಚ್ಚುಕಟ್ಟಾಗಿ ನಡೆಸಲು...

ಕೋಲಾರ | ಪಶು ವೈದ್ಯರ ಖಾಲಿ ಹುದ್ದೆ ಭರ್ತಿಗೆ ರೈತಸಂಘ ಆಗ್ರಹ

ಪಶು ಇಲಾಖೆಯಲ್ಲಿ ಖಾಲಿ ಇರುವ ಪಶು ವೈದ್ಯರ ಹುದ್ದೆಗಳನ್ನು ತಕ್ಷಣ ಭರ್ತಿ...