ಶಿವಮೊಗ್ಗ | ಬಿರ್ಲಾ ಎಸ್ಟೇಟ್ ಹೆಸರಿನಲ್ಲಿ ಆನ್‌ಲೈನ್ ವಂಚನೆ! 8 ಲಕ್ಷ ರೂ. ಕಳೆದುಕೊಂಡ ಉದ್ಯಮಿ

Date:

ಕಡಿಮೆ ದರಕ್ಕೆ ಕಬ್ಬಿಣದ ಸರಳುಗಳನ್ನು ನೀಡುತ್ತೇವೆ ಎಂದು ನಂಬಿಸಿ, ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ವಂಚಕರು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಉದ್ಯಮಿಗೆ ಕಬ್ಬಿಣದ ಸರಳುಗಳ ಅಗತ್ಯವಿದ್ದ ಕಾರಣ, ಯಾವುದು ಉತ್ತಮ ಹಾಗೂ ಕಡಿಮೆ ದರದಲ್ಲಿ ಸಿಗಬಹುದು ಎಂದು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ.

- Advertisement -

ಈ ಸಂದರ್ಭದಲ್ಲಿ ಅವರಿಗೆ Birla Estate Pvt Ltd ಎಂಬ ವೆಬ್‌ಸೈಟ್‌ನಲ್ಲಿ ಟೋಲ್ ಫ್ರೀ ಸಂಖ್ಯೆಯೊಂದು ಕಾಣಿಸಿದೆ. ಅದಕ್ಕೆ ಉದ್ಯಮಿ ಕರೆ ಮಾಡಿದಾಗ ವಂಚಕರು ತಮಗೆ ಕಡಿಮೆ ದರದಲ್ಲಿ ಸರಳುಗಳನ್ನು ಪೂರೈಸುವುದಾಗಿ ನಂಬಿಸಿದ್ದಾರೆ.ಇದನ್ನು ಸತ್ಯವೆಂದು ನಂಬಿದ ಉದ್ಯಮಿ, ತಮಗೆ 15 ಟನ್ ಕಬ್ಬಿಣದ ಸರಳುಗಳು ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಆಗ್ನೇಯ ಪದವೀಧರ ಕ್ಷೇತ್ರ: ಕಾಂಗ್ರೆಸ್-ಬಿಜೆಪಿ ನಡುವೆ ಬಿರುಸಿನ ಸ್ಪರ್ಧೆ!

ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಕಾವು ಪಡೆದುಕೊಂಡಿದ್ದು, ಬಿಜೆಪಿ–ಜೆಡಿಎಸ್ ಮೈತ್ರಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಯ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್‌ನಿಂದ ಶಶಿ ಹುಲಿಕುಂಟೆಮಠ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ...

ವಿಜಯಪುರ | ಪ್ಲಾಟ್‌ಫಾರ್ಮ್‌ ಮೇಲೆ ಹರಿವ ಚರಂಡಿ ನೀರು;...

"ಚರಂಡಿ ನೀರಿನ್ಯಾಗ ದಿನ ಹೋಗಾಕ ಹತ್ತಿವಿ…" ಇದು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಪ್ರಯಾಣಿಕರ ಅಳಲು. ಪ್ಲಾಟ್‌ಫಾರ್ಮ್‌-1ರಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜವಾಬ್ದಾರಿಯಿಂದ...

ವಂಚಕರು 15 ಟನ್ ಕಬ್ಬಿಣಕ್ಕೆ 8,02,500 ಮೊತ್ತದ ಇನ್‌ವಾಯ್ಸ್ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಕಳುಹಿಸಿದ್ದಾರೆ. ಅಲ್ಲದೆ ಅಡ್ವಾನ್ಸ್​ ಆಗಿ​​ 4,50,000 ಪಾವತಿಸುವಂತೆ ತಿಳಿಸಿದ್ದಾರೆ. ಅದರಂತೆ ಉದ್ಯಮಿ ಮೊದಲು ಆ ಹಣವನ್ನು ಪಾವತಿಸಿದ್ದಾರೆ. ಮರುದಿನ ಮತ್ತೆ ಕರೆ ಮಾಡಿದ ವಂಚಕರು, ಬಾಕಿ ಇರುವ 3,52,500 ಹಣವನ್ನು ಪಾವತಿಸಿದರೆ ಕಬ್ಬಿಣದ ಸರಳುಗಳನ್ನು ಕಳುಹಿಸಿಕೊಡುವುದಾಗಿ ತಿಳಿಸಿದಾಗ, ಉದ್ಯಮಿ ಉಳಿದ ಹಣವನ್ನೂ ಕಳುಹಿಸಿದ್ದಾರೆ.

ಆದರೆ, ತದನಂತರವೂ ಕರೆ ಮಾಡಿದ ವಂಚಕರು ಇ-ವೇ ಬಿಲ್ ಮಾಡಲು ಇನ್ನಷ್ಟು ಹಣ, ಅಂದರೆ 91,500 ಪಾವತಿಸುವಂತೆ ಕೇಳಿದಾಗ ಉದ್ಯಮಿಗೆ ಅನುಮಾನ ಬಂದಿದೆ. ತಕ್ಷಣ ತಮ್ಮ ಸ್ನೇಹಿತರಲ್ಲಿ ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ತಿಳಿದುಬಂದಿದೆ. ಈ ರೀತಿಯಾಗಿ Birla Estate Pvt Ltd ಹೆಸರಿನಲ್ಲಿ ನಟಿಸಿ, ಕಬ್ಬಿಣದ ಸರಳುಗಳನ್ನು ಕೊಡುವುದಾಗಿ ನಂಬಿಸಿ ಒಟ್ಟು 8,02,500 ಹಣವನ್ನು ವಂಚನೆಯಿಂದ ವರ್ಗಾಯಿಸಿಕೊಂಡವರನ್ನು ಪತ್ತೆ ಹಚ್ಚಿಕೊಡುವಂತೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ

ಗದಗ ಜಿಲ್ಲೆಯ ಮುಳಗುಂದದ ಶ್ರೀ ಆರ್. ಎನ್. ದೇಶಪಾಂಡೆ ಸರ್ಕಾರಿ ಪ್ರಥಮ...

ಶಿವಮೊಗ್ಗ | ಫೇಕ್ ಸ್ಕ್ರೀನ್​ ಶಾಟ್​ ನಂಬಿದ ಶಿಕ್ಷಕಿ: 12 ದಿನಗಳಲ್ಲಿ ರೂ.6,85 ಲಕ್ಷಕ್ಕೆ ಪಂಗನಾಮ!

ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ ವಂಚಕರು,...

ಶಿವಮೊಗ್ಗ | ಸಿಇಒ ಹೇಮಂತ್‌ಗೆ ಬೀಳ್ಕೊಡುಗೆ; ನೂತನ ಸಿಇಒ ರಿಷಿ ಆನಂದ್‌ ಸ್ವಾಗತಿಸಿದ ಜಿ.ಪಂ

ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ನಿಕಟಪೂರ್ವ...

ಅಭಿಮಾನಿಗಳ ಆಸೆಯಂತೆ ದಸರೆಗೆ ಮರಳಿದ ಅಭಿಮನ್ಯು

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಕೊಡಗಿನ ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು...