ಮೈಸೂರು | ಸಿಜೆಐ ಬಿ.ಆರ್. ಗವಾಯಿ ಮೇಲೆ ಶೂ ಎಸೆತ ಪ್ರಕರಣ; ಜಿಲ್ಲಾದ್ಯಂತ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

Date:

ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿ ವತಿಯಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿಯವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆತ ಖಂಡಿಸಿ ಪ್ರತಿಭಟನೆ ನಡೆಸಿದರು.

- Advertisement -

ಮೊಘಲರ ಕಾಲದಲ್ಲಿ ಭಗ್ನಗೊಂಡ ವಿಷ್ಣು ಮೂರ್ತಿ ಪುನರ್ ನವೀಕರಣಕ್ಕೆ ಆದೇಶ ನೀಡುವಂತೆ ಕೋರಿದ್ದರು. ನ್ಯಾಯಮೂರ್ತಿಗಳು ಸದರಿ ಪ್ರಕರಣ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ, ಆರ್ಕಲಾಜಿಕಲ್ ಸರ್ವೇ ಆಫ್ ಇಂಡಿಯಾ ಇಲಾಖೆಯಲ್ಲಿ ಪರಿಹರಿಸಿಕೊಳ್ಳುವಂತೆ ಸೂಚಿಸಿದರು. ಕೂಡಲೇ ಸನಾತನ ಪದ ಪ್ರಯೋಗದೊಂದಿಗೆ ಶೂ ಎಸೆತಕ್ಕೆ ಮುಂದಾದ ಘಟನೆಯನ್ನು ಒಕ್ಕೋರಲಿನಿಂದ ಖಂಡಿಸಿದರು. ಕೃತ್ಯ ಎಸಗಿರುವ ವಕೀಲನ ಮೇಲೆ ಕಾನೂನು ರೀತ್ಯಾ ಕ್ರಮವಹಿಸುವಂತೆ ಆಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಪ್ರತಿಭಟನೆಯಲ್ಲಿ ಬೆಟ್ಟಯ್ಯಕೋಟೆ, ಅಲಗೂಡು ಶಿವಕುಮಾರ್, ಶಂಭುಲಿಂಗ ಸ್ವಾಮಿ, ಚೋರನಹಳ್ಳಿ ಶಿವಣ್ಣ, ಶಿವಬುದ್ದಿ, ಪಿ. ಮರಂಕಯ್ಯ, ಕಂದೇಗಾಲ ಶ್ರೀನಿವಾಸ್, ಮಹೇಶ್ ಮಲಾರ, ನಿಂಗರಾಜು ಹೆಗ್ಗನೂರು, ಅತ್ತಿಕುಪ್ಪೆ ರಾಮಕೃಷ್ಣ, ರಾಜು ಚಿಕ್ಕಹುಣಸೂರು, ರಾಜು ಕುಕ್ಕೂರು ಸೇರಿದಂತೆ ಹಲವರು ಇದ್ದರು.

ನಂಜನಗೂಡು :

ಜನವಿರೋಧಿ, ಜೀವ ವಿರೋಧಿ ಮೌಲ್ಯಗಳನ್ನು ಒಳಗೊಂಡಿರುವ ಮನುಧರ್ಮ ಪ್ರತಿಪಾದಿಸುವ ಹಿಂದೂ ಪ್ಯಾಸಿಸ್ ಶಕ್ತಿಗಳು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಂವಿಧಾನದ ಮೇಲೆ ದಾಳಿ ನಡೆಸಿವೆ. ಅಂತಹದ್ದೇ ಘಟನೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯುವುದರ ಮೂಲಕ ತಮ್ಮ ಕೀಳು ಮನಸ್ಥಿತಿ ಜಗತ್ ಜಾಹೀರು ಮಾಡಿಕೊಂಡಿದೆ. ಇಂತಹ ಮನಸ್ಥಿತಿಯ ವ್ಯಕ್ತಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಯೋಜಕರಾದ ಕಾರ್ಯ ಬಸವಣ್ಣ, ತಾಲ್ಲೂಕು ಸಂಯೋಜಕ ಗಟ್ಟವಾಡಿ ಶಿವರಾಜು, ಹೆಜ್ಜಿಗೆ ಪ್ರಕಾಶ್, ಕಂದೇಗಾಲ ಶಿವಣ್ಣ, ಕಳಲೆ ಕುಮಾರ್, ಕಂದೇಗಾಲ ಕೃಷ್ಣಮೂರ್ತಿ, ಕೃಷ್ಣ ಮಲ್ಕುಂಡಿ, ರವಿ ಕೆರೆಹುಂಡಿ, ಸಿದ್ದರಾಜು ಕಳಲೆ, ಪುಟ್ಟಬುದ್ದಿ, ಸೋಮಣ್ಣ, ರಾಜಶೇಖರ್, ಜ್ಯೋತಿ, ಚಿಕ್ಕಣ್ಣ, ನಾಗರಾಜು, ಶಿವಣ್ಣ, ಮಹದೇವಯ್ಯ, ಮಹದೇವಸ್ವಾಮಿ, ಶ್ಯಾಮ್ ಸುಂದರ್, ಜಗದೀಶ್ ಸೇರಿದಂತೆ ಇನ್ನಿತರರು ಇದ್ದರು.

ಹುಣಸೂರು (ರತ್ನಾಪುರಿ) :

ತಾಲ್ಲೂಕಿನ ರತ್ನಾಪುರಿ ಮುಖ್ಯರಸ್ತೆಯ ಬಸ್ ನಿಲ್ದಾಣದ ಬಳಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಅಂಗಡಿ ಮುಂಗಟ್ಟುಗಳ ಮುಚ್ಚುವುದರ ಮೂಲಕ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ನ್ಯಾಯಮೂರ್ತಿಗಳ ಮೇಲೆ ಶೂ ಎಸೆತ ಪ್ರಕರಣ ದೇಶದ ದುರಂತ. ದಲಿತರೆನ್ನುವ ಕಾರಣಕ್ಕೆ ವಕೀಲ ನಡೆದುಕೊಂಡಿರುವ ರೀತಿ ಖಂಡನಿಯ. ಇಂತಹ ದುರ್ಮಾರ್ಗಿಗಳು ಸಂವಿಧಾನ ವಿರೋಧಿ ಕೆಲಸದಲ್ಲಿ ನಿರತರಾಗಿದ್ದು, ಇದಕ್ಕೆಲ್ಲ ಮನುವಾದಿಗಳ ಕುತಂತ್ರ. ನೀಚ ಕೃತ್ಯವೆಸಗಿದ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ಮುಖಂಡರಾದ ಹರಿಹರ ಆನಂದಸ್ವಾಮಿ, ಪುಟ್ಟಸ್ವಾಮಿ, ಜಿ.ಪಂ. ಮಾಜಿ ಸದಸ್ಯ ಡಿ.ಕೆ. ಕುನ್ನೇಗೌಡ, ಅಜ್ಗರ್ ಪಾಷ, ನಾಗೇಶ ರಾವ್ ಮೆಗಾಣೆ, ವೆಳಂಗಿರಿ, ವಿಜೇಂದ್ರ ಕುಮಾರ್, ವಿಶ್ವನಾಥ್, ಪ್ರಸನ್ನ, ಸುದರ್ಶನ ಸಿಂಗ್, ಶಿವಕುಮಾರ್, ಸುರೇಶ್ ಸೇರಿದಂತೆ ಇನ್ನಿತರರು ಇದ್ದರು.

ಹುಣಸೂರು(ಪಟ್ಟಣ) :

ಸಮಾನ ಮನಸ್ಕ ಸಂಘಟನೆ ಹೋರಾಟಗಾರರು ಸಂವಿಧಾನ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಕೇಶ್ ಕಿಶೋರ್ ವಿರುದ್ಧ ಯುಎಪಿಎ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿಯವರ ಮೇಲೆ ಕಲಾಪದ ವೇಳೆ ಶೂ ಎಸೆದು ಘನ ನ್ಯಾಯಾಲಯಕ್ಕೆ ಅಪಮಾನ ಎಸಗಿದ ಸನಾತನಿ ವಕೀಲನನ್ನು ಬಂಧಿಸಿ, ದೇಶದ್ರೋಹಿ ಪ್ರಕರಣದಡಿ ಬಂಧಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜೆ. ಮಹದೇವ, ರೇಣುಕಾ, ಮಹಾದೇವಮ್ಮ, ವಾರದರಾಜು, ಕೊಳಗಟ್ಟಕೃಷ್ಣ, ಎಂ. ಆರ್.ಪ್ರಕಾಶ್, ವೇಣುಕುಮಾರ್, ಸಿ.ಪುಟ್ಟಮಲ್ಲು, ರತ್ನಾಪುರಿ ಡೇವಿಡ್, ಕಾಂತರಾಜು, ನಂಜುಂಡ, ಮುಂಜಾಮಿಲ್ ಸೇರಿದಂತೆ ಇನ್ನಿತರರು ಇದ್ದರು.

ಹೆಗ್ಗಡದೇವನ ಕೋಟೆ :

ಜೀವಿಕ ಸಂಘಟನೆ (ಸಂವಿಧಾನ ಸಂರಕ್ಷಣಾ ಪಡೆ) ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ದೇಶದ್ರೋಹಿ ರಾಕೇಶ್ ಕುಮಾರ್ ನನ್ನು ದೇಶದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಸೋಮವಾರಪೇಟೆ | ಲಂಚ ಪಡೆವಾಗ ಲೋಕಾಯುಕ್ತ ಬಲೆಗೆ ಗ್ರಾ.ಪಂ. ಅಧ್ಯಕ್ಷೆ

ಪ್ರತಿಭಟನೆಯಲ್ಲಿ ಜೀವಿಕ ಬಸವರಾಜ್, ಶಿವರಾಜ್ ಮುದ್ದು ಮಲ್ಲಯ್ಯ,ಮಲಾರ ಮಹದೇವ್, ಚಿಕ್ಕಣ್ಣ, ಕಾಡುಮನೆಪ್ರಸನ್ನ, ಮಲ್ಲಿಕಾರ್ಜುನ್, ಮಲ್ಲಿಗಮ್ಮ, ಶ್ರೀನಿವಾಸ್, ನಾಗರಾಜು, ಜಯಮ್ಮ, ಸವಿತಾ, ರುದ್ರಪ್ಪ, ನಯಾಜ್, ಗೋಪಾಲ್ ರಾಜ್, ಮಲ್ಲಿಕಾರ್ಜುನ್, ವೇಣುಗೋಪಾಲ್ಸೇರಿದಂತೆಇನ್ನಿತರರುಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ ಹೋದ ಬೆಳಗಾವಿ ರೈತರು

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ...

ಬಾಗೇಪಲ್ಲಿ | ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲ : ಸುನಂದ ಆರೋಪ

ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದ್ದು,...

​ಚಿಂತಾಮಣಿ | ಅನಾಥನೆಂದು ಹೇಳಿ ಟಿಕೆಟ್ ಪಡೆದು ಗೆದ್ದರು, ಅಭಿವೃದ್ಧಿಗೆ ಕೊಡುಗೆಯೇ ಇಲ್ಲ:ಪ್ರದೀಪ್ ಈಶ್ವರ್ ವಿರುದ್ಧ ಹರಿದಾಯ್ದ ಜಿ.ಎಲ್. ಶಂಕರ್

ಚಿಂತಾಮಣಿ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್...

ಕೋಲಾರ | ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶರೈತರ ಹಕ್ಕುಗಳ ಅರಿವಿನಿಂದ ಅರಣ್ಯ ಅಧಿಕಾರಿಗಳಿಗೆ ನಡುಕ: ಆರ್. ಶ್ರೀನಿವಾಸನ್

ರೈತರು ನಿದ್ದೆ ಮಾಡುವ ಸಂದರ್ಭವನ್ನು ಬಳಸಿಕೊಂಡು ಬೆಳಗಿನ ಜಾವ ಪೊಲೀಸ್ ಬೆಂಗಾವಲಿನಲ್ಲಿ...