ಮೈಸೂರು | ಸಂವಿಧಾನದ ಮೂಲ ಉದ್ದೇಶ-ಆಶಯವನ್ನು ಯುವಜನತೆ ಮರೆಯಬಾರದು: ಬಾಬುರಾಜ್ ಪಲ್ಲದನ್

Date:

ಮೈಸೂರಿನ ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ ದೇಸಿರಂಗ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ‘ಮೇರಾ ಭಾರತ್ ಮಹಾನ್’ ನಾಟಕದ ಮೂಲ ರಚನಕಾರ ಹಾಗು ವಕೀಲರಾದ ಬಾಬುರಾವ್ ಪಲ್ಲದನ್ ಮಾತನಾಡಿ, ‘ಸಂವಿಧಾನದ ಆಶಯ-ಉದ್ದೇಶವನ್ನು ಯುವಜನತೆ ಮರೆಯಬಾರದು’ ಎಂದರು.

- Advertisement -

“ಸಂವಿಧಾನ ಪ್ರಸ್ತಾವನೆಯು ಕೇವಲ ಓದಿಗೆ ಮಾತ್ರ ಸೀಮಿತಗೊಳ್ಳದೆ, ಅದರ ಮೂಲ ಉದ್ದೇಶ ಮತ್ತು ಆಶಯಗಳನ್ನು ಯುವಜನತೆ ಮರೆಯಬಾರದೆಂದರೆ ಪ್ರಸ್ತಾವನೆಯ ಪ್ರಸ್ತುತತೆಯನ್ನು ದೃಶ್ಯ ಮಾಧ್ಯಮದ ಮೂಲಕ ಸಮರ್ಥವಾಗಿ ಕಟ್ಟಿಕೊಡಬೇಕು. ಈ ಹಿನ್ನೆಲೆಯಲ್ಲಿ ಮೆರಾ ಭಾರತ್ ಮಹಾನ್ ನಾಟಕವನ್ನು ರಚಿಸಲಾಗಿದೆ. ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವಂತಹ ಪ್ರಸಂಗಗಳು ನಾಡಿನಾದ್ಯಂತ ನಡೆಯುತ್ತಿರುವುದನ್ನು ನೋಡಿಯು ನೋಡದವರಂತೆ ಇರುವುದು ಈ ದೇಶದ ನಾಗರೀಕನಿಗೆ ತಕ್ಕ ಗುಣವಲ್ಲ. ಅದರಲ್ಲಿಯೂ, ಯುವ ಜನತೆಗೆ ಈ ಬಗ್ಗೆ ಹೆಚ್ಚು ಅರಿವು ಮೂಡಿಸುವ ಅಗತ್ಯ ಎಂದಿಗಿಂತಲೂ ಇಂದು ಹೆಚ್ಚಾಗಿದೆ” ಎಂದು ಅಭಿಪ್ರಾಯಪಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಲೇಖಕರಾದ ನಾ. ದಿವಾಕರ್ ಮಾತನಾಡಿ, “ದೃಶ್ಯ ಮಾಧ್ಯಮದ ಮೇಲುಗೈ ಹೆಚ್ಚಾಗಿರುವ ಈ ದಿನಗಳಲ್ಲಿ ಸಂವಿಧಾನದ ಆಶಯಗಳನ್ನು ಸಹ ದೃಶ್ಯ ಮಾಧ್ಯಮದಿಂದಲೇ ಸಮರ್ಥವಾಗಿ ತಲುಪಿಸಿದರೆ ಅದು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುವುದು. ಕನ್ನಡದಲ್ಲಿ ಇಂತಹ ರಂಗಪ್ರಯೋಗಗಳು ಹೆಚ್ಚಬೇಕೆಂದು” ಆಶಯ ವ್ಯಕ್ತಪಡಿಸಿದರು.

ದೇಸಿರಂಗದ ಶಿಬಿರಾರ್ಥಿಗಳಿಂದ ಪ್ರದರ್ಶನಗೊಂಡ ಮೇರಾ ಭಾರತ್ ಮಹಾನ್ ನಾಟಕದ ಮೊಟ್ಟ ಮೊದಲರಂಗ ಪ್ರಯೋಗ ಇದಾಗಿದ್ದು, ಸಮಾಜದ ಸ್ವಾಸ್ಥ್ಯ ಕಾಯುವ ನಿಟ್ಟಿನಲ್ಲಿ ಈ ನಾಟಕ ಅತ್ಯಂತ ಅಗತ್ಯವಾಗಿದೆ. ಮುಂಬರುವ ದಿನಗಳಲ್ಲಿ ಈ ನಾಟಕದ ಪ್ರಯೋಗಗಳನ್ನು ಹೆಚ್ಚಿನ ವೇದಿಕೆಗಳಲ್ಲಿ ಮಾಡುತ್ತೇವೆ ಎಂದು ಟ್ರಸ್ಟ್ ನ ಸಂಸ್ಥಾಪಕರು ಹಾಗೂ ನಾಟಕದ ನಿರ್ದೇಶಕರು ಆದ ಕೃಷ್ಣ ಜನಮನ ಹೇಳಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ನಂಜನಗೂಡಿನಲ್ಲಿ ಮರಗಳ ಹನನ; ಸಂಘಟನೆಗಳಿಂದ ಪ್ರತಿಭಟನೆ

ಸಮಾರೋಪ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ವಿಮರ್ಶಕರಾದ ಕಾಳೇಗೌಡ ನಾಗವಾರ, ನಾಟಕದ ಸಹನಿರ್ದೇಶಕಿ ಡಾ. ಬಿ.ಎಸ್ ದಿನಮಣಿ, ಮೈಸೂರಿನ ರಂಗಕರ್ಮಿ ಡಿ. ನಾಗೇಂದ್ರ ಕುಮಾರ್ ಹಾಗೂ ಕನ್ನಡಕ್ಕೆ ಅನುವಾದಿಸಿದ ಮಧುರಾಣಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೂನ್ಯ ಜನವಸತಿ!

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು...

‘SIR’ ಪರಿಶೋಧ-ಪ್ರತಿರೋಧ: ಸೆ.29ರಂದು ಮೈಸೂರಿನಲ್ಲಿ ಪ್ರಕಾಶ್ ರಾಜ್ ಸಂವಾದ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision-SIR) ಪ್ರಕ್ರಿಯೆ...

ಉಡುಪಿ | ಹೆತ್ತ ತಾಯಿಯನ್ನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಮಗ

ಹೆತ್ತ ತಾಯಿಯನ್ನೇ ಮಗ ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿರುವ ಅಮಾನವೀಯ ಘಟನೆ...

ಬಳ್ಳಾರಿ | ಲಾರಿ ಪಲ್ಟಿ; ಸ್ಟೀನಿಂಗ್ ಯಂತ್ರ ಬಿದ್ದು ಯುವಕ ದುರ್ಮರಣ

ಜಿಲ್ಲೆ ಸಂಡೂರು ತಾಲ್ಲೂಕಿನ ಉಬ್ಬಳಗಂಡಿ ಗ್ರಾಮದ ಬಳಿ ಮೈನ್‌ಸ್‌ನ ಸ್ಟೀನಿಂಗ್ ಯಂತ್ರವನ್ನು...