ರಾಜ್ಯದಲ್ಲಿ ಹುಲಿ ಉಗುರು ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿದ್ದು, ವಾಣಿಜ್ಯನಗರಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಉದ್ಯಮಿಗಳಾದ ವಜ್ರಮುನಿ ಶಿರಕೋಳ ಮತ್ತು ಅಯ್ಯಪ್ಪ ಶಿರಕೋಳ ಅವರ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ಇಲ್ಲಿನ ಕೋಯಿನ್ ರಸ್ತೆಯ ಉದ್ಯಮಿಗಳಾದ ವಜ್ರಮುನಿ ಶಿರಕೋಳ ಮತ್ತು ಅಯ್ಯಪ್ಪ ಶಿರಕೋಳ ಅವರ ಮನೆ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಎರಡು ಹುಲಿ ಉಗುರಿನ ಪೆಂಡೆಂಟ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಲಯ ಅರಣ್ಯಧಿಕಾರಿ ಆರ್. ಎಸ್. ಉಪ್ಪಾರ ನೇತೃತ್ವದ ತಂಡ ಶೋಧನಡೆಸಿದೆ.
ಜಾತ್ರೆಯಲ್ಲಿ ಖರೀದಿಸಿದ್ದ ಪ್ಲಾಸ್ಟಿಕ್ ಹುಲಿ ಉಗುರನ್ನ ಬಂಗಾರದ ಸರಕ್ಕೆ ಹಾಕಿಕೊಂಡಿದ್ದೆ. ಎರಡು ತಿಂಗಳ ಹಿಂದೆ ಅದು ತುಂಡಾಗಿದ್ದರಿಂದ ತೆಗೆದಿದ್ದೇವೆ ಎಂದು ಉದ್ಯಮಿ ವಜ್ರಮುನಿ ಶಿರಕೋಳ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಉದ್ಯಮಿ ಹುಲಿ ಉಗುರು ಧರಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.