ತುಮಕೂರು | ನ. 22 ರಿಂದ ಮನ-ಮನೆಗೂ ಸಂವಿಧಾನ ಜಾಥಾ ಕಾರ್ಯಕ್ರಮ : ಕೆ.ದೊರೈರಾಜ್

Date:

ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಂವಿಧಾನ ಸ್ನೇಹಿ ಬಳಗ ಬೆಂಗಳೂರು ಜಂಟಿಯಾಗಿ ನವೆಂಬರ್ 22 ರಿಂದ 26ರವರೆಗೆ ಮನ-ಮನೆಗೂ ಸಂವಿಧಾನ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹಿರಿಯ ಹೋರಾಟಗಾರ ಕೆ.ದೊರೈರಾಜ್ ತಿಳಿಸಿದರು

- Advertisement -

ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಸಂವಿಧಾನ ಜಾರಿಯಾಗಿ 76ವರ್ಷ ಕಳೆದಿದ್ದು ಹಲವಾರು ಸಾಮಾಜಿಕ ಪರಿವರ್ತನೆಗೊಳ್ಳಲು ಕಾರಣವಾಗಿದೆಯಾದರು ಪೂರ್ಣ ಮಟ್ಟದಲ್ಲಿ ಸಮಾಜ ಬದಲಾವಣೆ ಕಂಡಿಲ್ಲ, ಇತ್ತೀಚಿನ ದಿನಗಳಲ್ಲಿ ಸಂವಿಧಾನ ಪೀಠಿಕೆಯನ್ನು ಶಾಲಾ ಕಾಲೇಜುಗಳಲ್ಲಿ ಓದಿಸುತ್ತಿದ್ದರೂ ಅದರ ಸಂಪೂರ್ಣ ಆಶಯಗಳನ್ನು ನಾಗರೀಕರು ತಿಳಿದುಕೊಳ್ಳುವಲ್ಲಿ ವಿಫಲರಾಗಿದ್ದು,  ಇದರ ಭಾಗವಾಗಿ ಸಾರ್ವಜನಿಕರು, ವಿದ್ಯಾರ್ಥಿ ಯುವಜನರು, ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನ- ಮನೆಗೂ ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಈ ಜಾಥ ವಿನೂತನವಾಗಿದೆ ಎಂದು ತಿಳಿಸಿದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

 ನವೆಂಬರ್ 26, 1949 ರಂದು ಭಾರತದ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತು, ಇದನ್ನು ಸಂವಿಧಾನ ದಿನ ಎಂದು ಆಚರಿಸಲಾಗುತ್ತದೆ. ನಮ್ಮ ಸಂವಿಧಾನ ಅಂಗೀಕರಿಸಿ 76 ವರ್ಷಗಳ ಸಂಭ್ರಮದಲ್ಲಿದ್ದೇವೆ, ಸಂವಿಧಾನದ ಆಶ್ರಯದಲ್ಲಿ ನಮ್ಮ ದೇಶ ಬಹಳಷ್ಟು ಪ್ರಗತಿ ಕಂಡಿದೆ 1947ಕ್ಕೆ ಹೋಲಿಸಿದರೆ ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಾಗಿದೆ, ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಮತ್ತು ಅವಕಾಶಗಳು ಹೆಚ್ಚಾಗಿದೆ, ಜಾತಿಯ ಹಿಡಿತ ಸ್ವಲ್ಪ ಕಡಿಮೆಯಾಗಿದೆ, ಸಾರ್ವಜನಿಕ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆ ಮುಂಚೆಗಿಂತ ವಿಸ್ತೃತಗೊಂಡಿದೆ. ಆದರೆ ನಾವು ಇನ್ನು ಸಹ ಸಮ ಸಮಾಜ ನಿರ್ಮಿಸಲು ಸಾಧ್ಯವಾಗಿಲ್ಲ, ಎಲ್ಲರಿಗೂ ಘನತೆಯ ಬದುಕನ್ನು ಖಾತ್ರಿಪಡಿಸಲು, ಅಸ್ಪೃಶ್ಯತೆ ತೊಲಗಿಸಲು ಸಾಧ್ಯವಾಗಿಲ್ಲ, ಅಸಮಾನತೆ ಹೆಚ್ಚುತ್ತಿದೆ, ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚಾಗಿವೆ, ಸಾರ್ವಜನಿಕ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯ ಗುಣಮಟ್ಟ ಹೆಚ್ಚು ಮಾಡುವ ಬದಲು ಸರ್ಕಾರಗಳು ಅದನ್ನು ಖಾಸಗೀಕರಿಸುತ್ತಿದ್ದಾರೆ, ಸಂವಿಧಾನದ ಆಶಯಗಳಾದ ಸ್ಥಾನಮಾನದ ಸಮಾನತೆಯ ಹಾಗೂ ಅವಕಾಶಗಳ ಸಮಾನತೆ, ಘನತೆ, ಸಾಮಾಜಿಕ ನ್ಯಾಯ ಹಾಗೂ ಸ್ವಾತಂತ್ರ್ಯ ಮರಿಚಿಕೆಯಾಗಿ ಉಳಿಯುವುದೇ ಎಂಬ ಆತಂಕವಿದೆ ಎಂದರು.

ಸಂವಿಧಾನ ಸ್ನೇಹಿ ಬಳಗದ ಪೂರ್ಣ ರವಿಶಂಕರ್ ಮತ್ತು ಅಶ್ವಿನಿ ಬೋಧ್ ಮಾತನಾಡಿ ಸಂವಿಧಾನದ ಪೀಠಿಕೆಯ ಭರವಸೆಗಳನ್ನು ಈಡೇರಿಸಬೇಕೆಂದರೆ ನಮ್ಮ ಸಂವಿಧಾನದ ಮೌಲ್ಯಗಳು ಪ್ರತಿ ಮನೆಯಲ್ಲೂ ಮನಸ್ಸಿನಲ್ಲೂ ಬೇರೂರಬೇಕು. ಶೋಷಿತರು ದಮನಿತರು ತಮ್ಮ ಹಕ್ಕಿನ ಬಗ್ಗೆ ತಿಳಿಯಬೇಕು. ಪ್ರತಿರೋಧದ ಹಕ್ಕು ಉಳಿಯಬೇಕು ಈ ನಿಟ್ಟಿನಲ್ಲಿ ಸಂವಿಧಾನದ ಮೌಲ್ಯಗಳನ್ನು ಪ್ರತಿ ಬೀದಿ, ಮನೆ ಹಾಗೂ ಮನಸ್ಸಿಗೆ ತಲುಪಿಸಲು ಪ್ರಗತಿಪರ ಸಂಘಟನೆಗಳ ಒಕ್ಕೂಟ-ತುಮಕೂರು, ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಂವಿಧಾನ ಸ್ನೇಹಿ ಬಳಗ ಬೆಂಗಳೂರು ಜಂಟಿಯಾಗಿ 5 ದಿವಸಗಳ ಸಂವಿಧಾನ ಜಾಥಾವನ್ನು ತುಮಕೂರಿನಲ್ಲಿ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು

 ಮನ-ಮನೆಗೂ ಸಂವಿಧಾನ ಕಾರ್ಯಕ್ರಮವು ನವೆಂಬರ್ 22 ರಂದು ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಧ್ವನಿಸುವ ವಿವಿಧ ಕ್ಷೇತ್ರದ ಗಣ್ಯರಿಂದ ನಗರದ ಬಾಪೂಜಿ ವಿದ್ಯಾಸಂಸ್ಥೆಯ ಕಲಾಕಾಲೇಜಿನಲ್ಲಿ ಉದ್ಘಾಟನೆ ಮೂಲಕ ಚಾಲನೆಗೊಂಡು 26ಕ್ಕೇ ಸಮಾರೋಪಗೊಳ್ಳಲಿದೆ, ನವೆಂಬರ್ 23 ರಂದು ನಗರದ ವಿವಿಧ ಸ್ಲಂಗಳಲ್ಲಿ ಹಾಗೂ ಸಂಜೆ 5. ಗಂಟೆಗೆ ಅಮಾನಿಕೆರೆ ನೂತನ ಸಂವಿಧಾನ ಪೀಠಿಕೆ ಮುಂದೆ ಸಾರ್ವಜನಿಕರೊಂದಿಗೆ ಸಂವಿಧಾನ ಕುರಿತು ಕಾರ್ಯರಕ್ರಮ ನಡೆಯಲಿದೆ. ನವೆಂಬರ್ 24 ಮತ್ತು 25 ರಂದು ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿಗಳೊಂದಿಗೆ ಹಾಗೂ ಗ್ಲೋಬಲ್ ಶಾಹೀನ್ ಮಹಿಳಾ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮಗಳು ನಡೆಯಲಿದೆ, ನವೆಂಬರ್ 26 ರಂದು ತುಮಕೂರು ನಗರದ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಕರ್ನಾಟಕದ ಹಲವು ಭಾಷೆಗಳಲ್ಲಿ ಸಂವಿಧಾನ ಪೀಠಿಕೆಯ ವಿಡಿಯೋ ಬಿಡುಗಡೆ ಹಾಗೂ ಜಂಗಮ ಕಲೆಕ್ಟೀವ್ ಪ್ರಸ್ತುತ ಪಡಿಸುವ ‘ಬಾಬ್ ಮಾರ್ಲೆ ಫ್ರಮ್ ಕೋಡಿಹಳ್ಳಿ’ ರವರ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿನೀಡಿದರು 

ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಎನ್.ಕೆ ಸುಬ್ರಮಣ್ಯ ಮತ್ತು ಎ.ನರಸಿಂಹಮೂರ್ತಿ ಮಾತನಾಡಿ ಸಂವಿಧಾನದ ಆತ್ಮ-ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಬಂಧುತ್ವ-ಇವುಗಳನ್ನು ಜನಸಾಮಾನ್ಯರಿಗೆ ತಲುಪಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಕಾರ್ಯಕ್ರಮಗಳನ್ನು ಮಾಧ್ಯಮ ಸ್ನೇಹಿತರು ತಮ್ಮ ಸುದ್ದಿಗಳಲ್ಲಿ ಬಿತ್ತರಿಸುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಎಲ್ಲೆಡೆ ಕೊಂಡೊಯ್ಯಲು ಸಹಕರಿಸಬೇಕೆಂದು ಮನವಿ ಮಾಡುತ್ತೇವೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಸಾವಿತ್ರಿ ಬಾಯಿಪುಲೆ ಸಂಘಟನೆಯ ಅನುಪಮಾ ತುಮಕೂರು ಸ್ಲಂ ಸಮಿತಿಯ ಶಂಕ್ರಯ್ಯ, ಅರುಣ್. ತಿರುಮಲಯ್ಯ, ಕೃಷ್ಣಮೂರ್ತಿ, ರಾಜು, ಎಪಿಸಿಆರ್ ಸಂಯೋಜಕರಾದ ತಾಜುದ್ದೀನ್. ಮಾದಿಗ ಪ್ರಚಾರ ಸಮಿತಿಯ ಮನೋಜ್ ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಮಖಂಡಿ | ದಲಿತ ಸಾಹಿತ್ಯ ಶೋಷಣೆಯ ವಿರುದ್ಧದ ಧ್ವನಿ: ಪರಶುರಾಮ ಮಹಾರಾಜನವರ

ಅಸ್ಪೃಶ್ಯತೆ, ಸಾಮಾಜಿಕ ತಾರತಮ್ಯ ಹಾಗೂ ಶೋಷಣೆಯ ವ್ಯವಸ್ಥೆಯ ವಿರುದ್ಧ ಪ್ರಶ್ನೆ ಎತ್ತಿ,...

ವಿಜಯಪುರ | ವಿಶೇಷಚೇತನರ ಸಬಲೀಕರಣಕ್ಕೆ ವಿವಿಧ ಯೋಜನೆ: ಆನ್‌ಲೈನ್ ಅರ್ಜಿ ಆಹ್ವಾನ

ವಿಜಯಪುರ ಜಿಲ್ಲೆಯ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ...

ಬಾಗಲಕೋಟೆ | ಬರದ ಹೊಡೆತಕ್ಕೆ ಬೆಳೆ ನಿರ್ನಾಮ! ಎಕರೆಗೆ ರೂ.30 ಸಾವಿರ ಖರ್ಚು, ಕೈ ಸೇರದ ಫಸಲು

ಬಾಗಲಕೋಟೆ ಜಿಲ್ಲೆಯ ರೈತರು ಬಿತ್ತನೆ, ಗೊಬ್ಬರ, ಕೂಲಿ ಸೇರಿದಂತೆ ಎಕರೆಗೆ ರೂ.25ರಿಂದ...

ಸಾಗರ | ಡಾ. ಹೆಚ್. ಗಣಪತಿಯಪ್ಪ ಸ್ಮಾರಕ ಅಭಿವೃದ್ಧಿಗೆ ಶಾಸಕರಿಗೆ ಮನವಿ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ದಿವಂಗತ ಹೆಚ್.ಗಣಪತಿಯಪ್ಪ...