ಗುಬ್ಬಿ | ಶಿಕ್ಷಣ ಜೊತೆ ಕ್ರೀಡೆ ಮಕ್ಕಳಿಗೆ ಅಗತ್ಯ : ಬಿಇಒ ನಟರಾಜು

Date:

ವಿದ್ಯಾರ್ಥಿ ಬದುಕಿನಲ್ಲಿ ಶಿಕ್ಷಣದ ಜೊತೆಯಲ್ಲಿ ಕ್ರೀಡೆಯೂ ಕೂಡ ಬಹಳ ಮುಖ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು ಹೇಳಿದರು.

- Advertisement -

 ಗುಬ್ಬಿ  ಪಟ್ಟಣದ ಶುಭೋದಯ ಪ್ರೌಢಶಾಲಾ ಆವರಣದಲ್ಲಿ ಕಸಬಾ ಹೋಬಳಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ನಾಲ್ಕು ಗೋಡೆಯ ಮಧ್ಯದಲ್ಲಿ ಕಲಿಯುವ ಶಿಕ್ಷಣ ಒತ್ತಡ ತರುತ್ತದೆ. ಈ ಜೊತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಹವ್ಯಾಸ ಅತ್ಯಗತವಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚೀನಾದ ಅತಿಕ್ರಮಣಕ್ಕೆ ಅಡ್ಡ ಬಿದ್ದು, ಸಿಟ್ಟಿಗೆ ಅಣೆಕಟ್ಟು ಕಟ್ಟಲು...

ಕೇಂದ್ರದಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ- ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ, ಅತ್ತ ಚೀನಾದ ಅತಿಕ್ರಮಣಕ್ಕೆ ಖಡಕ್ ಉತ್ತರವನ್ನೂ ನೀಡುತ್ತಿಲ್ಲ, ಇತ್ತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿ ಸ್ಥಳೀಯ ಅಸ್ಮಿತೆಯನ್ನು ಗೌರವಿಸುತ್ತಲೂ...

ಬಾಗಲಕೋಟೆ | ಓದುಗರಿಲ್ಲದೆ ಧೂಳು ಹಿಡಿಯುತ್ತಿರುವ ಪುಸ್ತಕಗಳು; ಡಿಜಿಟಲ್...

ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಆಧುನಿಕ ಡಿಜಿಟಲ್ ಗ್ರಂಥಾಲಯವೊಂದು ಸಾರ್ವಜನಿಕರ ಬಳಕೆಗೆ ಸಿಗದೆ ಮೂಲೆಗುಂಪಾಗಿರುವ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ಓದುಗರ ಹಾಗೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಬೇಕಿದ್ದ...

ಖಾಲಿ ಜೇಬಿನ ಸರ್ಕಾರ, ಪಟ್ಟು ಬಿಡದ ಕಬ್ಬು ಬೆಳೆಗಾರರು;...

ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕೆಂದು ಆಗ್ರಹಿಸಿ ಆರಂಭವಾದ ಹೋರಾಟ...

ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುವುದಕ್ಕೆ ಎಲ್ಲಾ ರೀತಿಯ ಶಿಕ್ಷಣ ಮತ್ತು ಶಿಕ್ಷಣೇತರ ಚಟುವಟಿಕೆಗಳು ಅವಶ್ಯಕತೆ ಇದೆ ಆಗ ಮಾತ್ರ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಪರಿಪೂರ್ಣವಾಗುತ್ತದೆ ಎಂದು ಹೇಳಿದರು.

 ಶುಭೋದಯ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಅಮರ್ ಮಾತನಾಡಿ 38 ವರ್ಷಗಳಿಂದಲೂ ಸಹ ನಮ್ಮ ಸಂಸ್ಥೆಯು ಶಿಕ್ಷಣ ಮತ್ತು, ಕ್ರೀಡೆಗೆ ಅತ್ಯಂತ ಹೆಚ್ಚಿನ ಮಹತ್ವವನ್ನು ನೀಡುತ್ತಾ ಬಂದಿದ್ದು, ಈ ಬಾರಿ ಕಸಬಾ ಹೋಬಳಿಯ ಕ್ರೀಡಾಕೂಟ ನಮ್ಮ ಸಂಸ್ಥೆಯಲ್ಲಿ ನಡೆಯುತ್ತಿರುವುದು ಖುಷಿ ನೀಡಿದೆ. ಆಗಮಿಸಿರುವಂತಹ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದೇವೆ. ವಿದ್ಯಾರ್ಥಿಗಳು ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡೆಯಲ್ಲಿ ಭಾಗವಹಿಸಿದಾಗ ಖಂಡಿತವಾಗಿ ಯಶಸ್ಸು ಕಾಣಬಹುದು ಎಂದು ಹೇಳಿದರು.

 ಕ್ರೀಡಾ ಪ್ರೋತ್ಸಾಹಕ ಸಿ.ಆರ್.ಶಂಕರ್ ಕುಮಾರ್ ಮಾತನಾಡಿ ಚಿಕ್ಕ ವಯಸ್ಸಿನಿಂದಲೇ ವಿದ್ಯಾರ್ಥಿಗಳು ಕ್ರೀಡೆಯತ್ತ ಮನಸು ಮಾಡಿದರೆ ಮುಂದಿನ ದಿನದಲ್ಲಿ ಉತ್ತಮವಾದ ಕ್ರೀಡಾಪಟುಗಳಾಗಿ ಬೆಳೆಯುವುದಕ್ಕೆ ಎಲ್ಲಾ ರೀತಿಯ ಸಹಕಾರವಾಗುತ್ತದೆ ಎಂದು ಹೇಳಿದರು.

 ದೈಹಿಕ ಶಿಕ್ಷಣಧಿಕಾರಿ ನಾಗರತ್ನ ಮಾತನಾಡಿ ಹೋಬಳಿ ಮಟ್ಟದ ನಂತರ ತಾಲೂಕು, ಜಿಲ್ಲಾ ಮಟ್ಟದಲ್ಲಿಯೂ ಸಹ ವಿದ್ಯಾರ್ಥಿಗಳು ಭಾಗವಹಿಸಬೇಕಾಗಿದೆ ಎಲ್ಲ ಹೋಬಳಿಗಳ ನಂತರ ತಾಲೂಕು ಮಟ್ಟದ ಕ್ರೀಡಾಕೂಟವು ಸಹ ನಡೆಯುತ್ತದೆ ಎಂದು ಹೇಳಿದರು.

 ಕ್ರೀಡಾಕೂಟದಲ್ಲಿ ಬಿಆರ್ ಸಿ ಮಧುಸೂದನ್, ಪಪಂ ಮಾಜಿ ಸದಸ್ಯರಾದ ಶಿವಕುಮಾರ್ ಕೃಷ್ಣಮೂರ್ತಿ, ಪ್ರಾಥಮಿಕ ಪಾಠಶಾಲೆಯ ಪದಾಧಿಕಾರಿಗಳಾದ ಅರುಣ್ ಕುಮಾರ್, ಸಿಂಧು, ಶಶಿಧರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್, ಶಿಕ್ಷಕರ ಸಂಘದ ಪದಾಧಿಕಾರಿಗಳು ಕಾಂತರಾಜು, ಚನ್ನಬಸವ ಆರಾಧ್ಯ ಸೇರಿದಂತೆ ಶುಭೋದಯ ವಿದ್ಯಾ ಸಂಸ್ಥೆಯ ಎಲ್ಲಾ ಬೋಧಕರು, ಬೋಧಕೇತರರು ಸಿಬ್ಬಂದಿ ವರ್ಗ, ಕ್ರೀಡಾಕೂಟದ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ವಿಜಯೇಂದ್ರ ಎದುರೇ ಬಿಜೆಪಿ ಬಣಗಳ ಕಿತ್ತಾಟ: ಹೆಸರು ಹೇಳದ್ದೇ ಗಲಾಟೆಗೆ ಕಾರಣ

 ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಯ ವೇಳೆ ಮುಖಂಡರೊಬ್ಬರ ಹೆಸರು ಪ್ರಸ್ತಾಪಿಸಲಿಲ್ಲ...

ಮೇವು ಬ್ಯಾಂಕ್‌ಗಾಗಿ ರೈತರ ರಣಕಹಳೆ: ಗೋವುಗಳೊಂದಿಗೆ ತುಮಕೂರಿನತ್ತ ರೈತರ ಜಾಥಾ!

ಬರದ ಬರೆಗೆ ಬೆಂದ ಜಾನುವಾರುಗಳಿಗೆ ಮೇವು ಕೊಡಿ ಎಂದು ಆಗ್ರಹಿಸಿ ತಿಪಟೂರಿನಿಂದ...

ಗುಬ್ಬಿ | ಸ್ವಚ್ಚತೆ ನಮ್ಮ ಆಂತರಿಕ ಪ್ರತಿಬಿಂಬ : ಪಿಡಿಒ ಶೇಖರ್

 ಗಾಂಧೀಜಿ ಅವರ ಸ್ವಚ್ಛ ಭಾರತ್ ಕನಸು ನಮ್ಮ ಪರಿಸರ ಮಾಲಿನ್ಯ ನಿಯಂತ್ರಣದ...

ಗುಬ್ಬಿ | ಬರಗಾಲ ಕಾಮಗಾರಿ ಆರಂಭಕ್ಕೆ ಒತ್ತಾಯ: ಸೆ.28ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತಸಂಘ ಪ್ರತಿಭಟನೆ

ಬರಪೀಡಿತ ಪ್ರದೇಶಗಳನ್ನು ಘೋಷಿಸಿದ್ದರೂ ಸರ್ಕಾರ ಈವರೆಗೆ ಯಾವುದೇ ಬರಗಾಲ ಪರಿಹಾರ ಕಾಮಗಾರಿಗಳನ್ನು...