ಮೇವು ಬ್ಯಾಂಕ್‌ಗಾಗಿ ರೈತರ ರಣಕಹಳೆ: ಎತ್ತಿನಗಾಡಿ, ಟ್ರ್ಯಾಕ್ಟರ್, ಗೋವುಗಳೊಂದಿಗೆ ತುಮಕೂರಿನತ್ತ ತಿಪಟೂರು ರೈತರ ಜಾಥಾ

Date:

ಬರದ ಬರೆಗೆ ಬೆಂದ ಜಾನುವಾರುಗಳಿಗೆ ಮೇವು ಕೊಡಿ ಎಂದು ಆಗ್ರಹಿಸಿ ತಿಪಟೂರಿನಿಂದ ಹೊರಟ ರೈತರ ಎತ್ತಿನಗಾಡಿ–ಟ್ರ್ಯಾಕ್ಟರ್ ಜಾಥಾ ಶನಿವಾರ ಗುಬ್ಬಿ ತಲುಪಿತು. ಮೂರು ದಿನಗಳಿಂದ ಹಳ್ಳಿಗಳನ್ನು ದಾಟಿ ಸಾಗಿ ಬಂದ ಈ ಹೋರಾಟ, ಈಗ ತುಮಕೂರು ಜಿಲ್ಲಾಧಿಕಾರಿ ಕಚೇರಿಯತ್ತ ಮುಖ ಮಾಡಿದೆ.

- Advertisement -

ಹಳ್ಳಿಕಾರ್ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ (ರಿ) ರೈತ ಶಕ್ತಿ ಸಂಯುಕ್ತವಾಗಿ ಈ ಜಾಥಾ ಹಮ್ಮಿಕೊಂಡಿವೆ. ತುಮಕೂರು ಜಿಲ್ಲೆಯ ಪ್ರತಿ ಹೋಬಳಿಗೆ ಒಂದರಂತೆ ಮೇವು ವಿತರಣಾ ಕೇಂದ್ರ (ಮೇವು ಬ್ಯಾಂಕ್) ಸ್ಥಾಪಿಸಬೇಕು ಮತ್ತು ವಿದ್ಯುತ್ ಸಮಸ್ಯೆ ಬಗೆಹರಿಸಬೇಕು ಎಂಬುದು ಪ್ರಮುಖ ಬೇಡಿಕೆಗಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ಕವಿತೆ | ಏನೂ ಇಲ್ಲ- ನಾಸೆರ್...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಇರಾನಿನ ಕವಿ ನಾಸೆರ್ ಫಯ್ಜ್ ಅವರ ಕವನವೊಂದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಹೆಚ್‌ ಭಾಗ್ಯ ಅಳುವ ಮಗವೊಂದನು ಸುಟ್ಟು ಬೂದಿ ಮಾಡಿದರು. ಅವನು ಏನೂ ಇಲ್ಲವೆಂದ. ತನ್ನೆಲ್ಲಾ...

ಕರ್ನಾಟಕ SIR | ಮತ ಹಕ್ಕಿಗೇ ಕನ್ನ: ಪರಿಶೋಧನಾ...

ಪ್ರಜಾಪ್ರಭುತ್ವದ ಅಡಿಪಾಯವೇ ಮತದಾರ ಮತ್ತು ಮತದಾನ. ಆದರೆ, ಈ ಅಡಿಪಾಯವನ್ನೇ ಕೆಡವುವ ಸಂಚು ನಡೆದಿದೆ. ಕೇಂದ್ರ ಸರ್ಕಾರ (ಮೋದಿ-ಶಾ ಜೋಡಿ) ಮತ್ತು ಚುನಾವಣಾ ಆಯೋಗ (ಗ್ಯಾನೇಶ್‌ ಕುಮಾರ್‌) ಜಂಟಿಯಾಗಿ ಎಸ್‌ಐಆರ್‌ ಹೆಸರಿನಲ್ಲಿ ಅರ್ಹ...

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು...

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ ಮಹಿಳಾ ಕ್ರೀಡಾಪಟುಗಳ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ಬಡತನ, ಗಾಯದ ನೋವು ಹಾಗೂ ಸಮಾಜದ ಕಟ್ಟುಪಾಡುಗಳನ್ನು ಮೆಟ್ಟಿ ನಿಂತು 14 ಚಿನ್ನದ...

ಗುಬ್ಬಿ ತಾಲ್ಲೂಕಿನ ಬಾಗೂರು ಗೇಟ್ ಬಳಿ ಉಳಿದಿದ್ದ ರೈತರು ಬೆಳಿಗ್ಗೆ ತಮ್ಮ ರಾಸುಗಳೊಂದಿಗೆ ಹೊರಟು ಮಧ್ಯಾಹ್ನ ಗುಬ್ಬಿ ಪಟ್ಟಣ ಪ್ರವೇಶಿಸಿದರು. ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಬಳಿಕ ತುಮಕೂರಿನತ್ತ ಜಾಥಾ ಮುಂದುವರಿಸಿದರು.

ರೈತ ಶಕ್ತಿ ಜಿಲ್ಲಾಧ್ಯಕ್ಷ ಎನ್. ಪದ್ಮನಾಭ ಮಾತನಾಡಿ, “ಬರಗಾಲದಿಂದ ಜಾನುವಾರುಗಳಿಗೆ ಮೇವು ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ಹೋಬಳಿಯಲ್ಲಿ ಮೇವು ಬ್ಯಾಂಕ್ ತೆರೆದು ಸಮರ್ಪಕವಾಗಿ ಮೇವು ವಿತರಿಸಬೇಕು, ಗ್ರಾಮೀಣ ಪ್ರದೇಶಗಳಿಗೆ ಸಾಕಷ್ಟು ವಿದ್ಯುತ್ ಪೂರೈಸಬೇಕು” ಎಂದು ಒತ್ತಾಯಿಸಿದರು.

Advertisements

ಜೊತೆಗೆ, ರೈತರಿಗೆ ಬಾಕಿ ಇರುವ ರಾಗಿ ಹಣವನ್ನು ತಕ್ಷಣ ಪಾವತಿಸಬೇಕು. ಮುಂದೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯ ನಿಯಮದಂತೆ ರಾಗಿ ಖರೀದಿಸಿದ 72 ಗಂಟೆಗಳೊಳಗೆ ಹಣ ರೈತರ ಖಾತೆಗೆ ಜಮೆಯಾಗಬೇಕು ಎಂದೂ ಆಗ್ರಹಿಸಿದರು.

ಹಳ್ಳಿಕಾರ್ ರೈತ ಸಂಘದ ವಿನಯ್ ಮೊಡೆನೂರು ಮಾತನಾಡಿ, “ಕಳೆದ 63 ದಿನಗಳಲ್ಲಿ ತಿಪಟೂರು ತಾಲೂಕು ಕಚೇರಿಗೆ ಮೂರು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೀಗಾಗಿ ಅಕ್ಟೋಬರ್ 1ರಂದು ತಿಪಟೂರಿನ ಶ್ರೀ ಶಿವಕುಮಾರಸ್ವಾಮೀಜಿ ವೃತ್ತದಿಂದ ಎತ್ತಿನ ಬಂಡಿ, ಟ್ರ್ಯಾಕ್ಟರ್ ಮತ್ತು ಗೋವುಗಳೊಂದಿಗೆ ಜಾಥಾ ಆರಂಭಿಸಲಾಯಿತು. ತುಮಕೂರು ಜಿಲ್ಲಾಧಿಕಾರಿ ಕಚೇರಿ ಬಳಿ ತೆರಳಿ ಮನವಿ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಮೇವು ಬ್ಯಾಂಕ್ ಸ್ಥಾಪಿಸಿ ಜಾನುವಾರುಗಳಿಗೆ ಸಮರ್ಪಕ ಮೇವು ಪೂರೈಸುವವರೆಗೆ ಹೋರಾಟ ಹಿಂಪಡೆಯುವುದಿಲ್ಲ ಎಂದು ರೈತ ಮುಖಂಡರು ಎಚ್ಚರಿಸಿದರು.

ತಿಪಟೂರು ತಾಲೂಕು ಅಧ್ಯಕ್ಷ ನೊಣವಿನಕೆರೆ ಈಶ್ವರ್, ಗುಬ್ಬಿ ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಶ್ರೀಧರ್, ಪರಮೇಶ್, ತ್ಯಾಗಟೂರು ವಸಂತಮ್ಮ, ವಿನಯ್ ಕುಮಾರ್, ದಿಲೀಪ್, ಲೋಕೇಶ್, ಮಂಜುನಾಥ್ ಸೇರಿದಂತೆ ವಿವಿಧ ರೈತಪರ ಸಂಘಟನೆಗಳ ಮುಖಂಡರು, ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ವಿಶ್ವ ಹೃದಯ ದಿನ : ವಿದ್ಯಾರ್ಥಿಗಳಿಗೆ ಸಿಪಿಆರ್ ಜೀವ ರಕ್ಷಕ ತರಬೇತಿ

ವಿಶ್ವ ಹೃದಯ ದಿನದ ಅಂಗವಾಗಿ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಕಾರ್ಡಿಯೋಥೊರಾಸಿಕ್...

ಶಿರಾ | ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿರುವ ₹5,300 ಕೋಟಿ ತಕ್ಷಣ ಬಿಡುಗಡೆ ಮಾಡಿ : ಮುರಳೀಧರ ಹಾಲಪ್ಪ

 ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಘೋಷಿಸಿರುವ ₹5,300...

ತುಮಕೂರು ವಿವಿಯಿಂದ ವರುಣ್‌ರಾಜ್ ಜಿ ಅವರಿಗೆ ಪಿಎಚ್‌.ಡಿ. ಪದವಿ ಪ್ರದಾನ

ತುಮಕೂರು ವಿಶ್ವವಿದ್ಯಾನಿಲಯದ ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ...

ಮಧುಗಿರಿ | ವ್ಯಾಕರಣ ಎಂದರೆ ಕೇವಲ ನಿಯಮಗಳಲ್ಲ: ಪ್ರೊ ಡಿ ಎಸ್ ಮುನೀಂದ್ರಕುಮಾರ್

  ಕೇಶಿರಾಜ ಬರೆದ ‘ಶಬ್ದಮಣಿದರ್ಪಣ’ವು ಕನ್ನಡ ಭಾಷೆಗೆ ಹಿಡಿದ ಸ್ವಚ್ಛವಾದ ಕನ್ನಡಿ....