ಬಸವಕಲ್ಯಾಣ| ಪತ್ರಕರ್ತರಿಗೆ ಸಾಮಾಜಿಕ ಕಾಳಜಿ ಮುಖ್ಯ : ರಶ್ಮಿ ಎಸ್.

Date:

ಓದುವ ಹವ್ಯಾಸ ಕಡಿಮೆಯಾಗಿರುವುದರಿಂದ ಜನರ ನೆಮ್ಮದಿಯೂ ಕಳೆದು ಹೋಗುತ್ತಿದೆ. ಪತ್ರಿಕೆಗಳು ಸೇರಿ ಒಟ್ಟು ಏನನ್ನಾದರೂ ಓದುವಿಕೆ ಇದ್ದರೆಯೇ ಅಂತಃಕರಣದ ಸಮಾಜ ರೂಪಿಸಲು ಸಾಧ್ಯ ಎಂದು ಹಿರಿಯ ಪತ್ರಕರ್ತೆ ರಶ್ಮಿ ಎಸ್ ಹೇಳಿದರು.

- Advertisement -

ಬಸವಕಲ್ಯಾಣ ತಾಲೂಕಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಪತ್ರಿಕಾ ದಿನಾಚರಣೆ ಹಾಗೂ ʼಶಂಕರ ಪ್ರಸಾದ ದುಬೆʼ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

“ಕಲ್ಯಾಣದಲ್ಲಿ 12ನೇ ಶತಮಾನದಲ್ಲಿಯೇ ಸಿಟಿಜನ್ ಜರ್ನಲಿಸಂ ಆರಂಭವಾಗಿತ್ತು. ಸಮಾಜದ ಓರೆಕೋರೆಗಳನ್ನು ಗುರುತಿಸುವ, ಸಮಸ್ಯೆಗಳನ್ನು ಗ್ರಹಿಸುವ, ಪರಿಹಾರ ಕಂಡುಕೊಳ್ಳುವ, ಪ್ರಭುತ್ವ ಪ್ರಶ್ನಿಸುವ ಕೆಲಸ ವಚನಕಾರರು ಅಂದೇ ಮಾಡಿದ್ದರು. ಹಾಗೆಯೇ ಅವರು ಸಾತ್ವಿಕ ಮಾರ್ಗ ಅನುಸರಿಸಿದ್ದರು. ಸಾಮಾಜಿಕ ಕಾಳಜಿ ಪತ್ರಿಕೆ, ಪ್ರಭುತ್ವ ಮತ್ತು ಆಡಳಿತದ ಮೂಲ ಕೇಂದ್ರವಾಗಬೇಕು” ಎಂದರು.

ಶಾಸಕ ಶರಣು ಸಲಗರ ಸಮಾರಂಭ ಉದ್ಘಾಟಿಸಿ ಮಾತನಾಡಿ, “ರಾಜಕಾರಣಿಗಳ ಬಗ್ಗೆ ನಂಬಿಕೆ ಕಡಿಮೆಯಾಗಿದ್ದರಬಹುದು. ಪತ್ರಿಕೆಗಳ ಮೇಲೆ ಜನರ ನಂಬಿಕೆ ಗಾಢವಾಗಿದೆ. ಸಮಾಜದ ಅಂಕು ಡೊಂಕು ತಿದ್ದುವ ಕೆಲಸ ಮಾಧ್ಯಮಗಳು ಮಾಡುತ್ತವೆ. ರಾಜಕಾರಣಿಗಳಿಂದ ಆಗದ ಕೆಲಸಗಳು ಮಾಧ್ಯಮದಿಂದ ಸಾಧ್ಯವಾಗಿವೆ” ಎಂದರು.

“ಪತ್ರಿಕಾ ಭವನಕ್ಕೆ ನಿವೇಶನ ಇದ್ದರೆ, ಅದಕ್ಕೆ ಬೇಕಾದ ಅನುದಾನವನ್ನು ಕೆಕೆಆರ್‌ಡಿಬಿಯಿಂದ ಮಂಜೂರು ಮಾಡಿ ಪತ್ರಿಕಾ ಭವನ ನಿರ್ಮಿಸುವ ಭರವಸೆ ವ್ಯಕ್ತಪಡಿಸಿದರು. ಪತ್ರಕರ್ತರು ಅನೇಕ ಸಂಗತಿಗಳನ್ನು ಬರೆದು ನಮ್ಮ ಗಮನಕ್ಕೆ ತಂದಿದ್ದಾರೆ. ನಾನು ಅವುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದೇನೆ” ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಮಾತನಾಡಿ, “ಸಾಮಾಜಿಕ ಬೆಳವಣಿಗೆಗೆ ಮಾಧ್ಯಮ ಹೆಚ್ಚು ಒತ್ತು ನೀಡಿದೆ. ಆಡಳಿತಾತ್ಮಕ ಸುಧಾರಣೆ, ಪ್ರಭುತ್ವದ ಪ್ರಜ್ಞಾಪೂರ್ವಕ ಕೆಲಸಕ್ಕೆ ಅಣಿಯಾಗಲು ಎಚ್ಚರಿಸುತ್ತದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪತ್ರಿಕಾ ಭವನ ನಿರ್ಮಾಣ ಮತ್ತು ಪತ್ರಕರ್ತರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಮೊದಲ ಆದ್ಯತೆಗೆ ಶ್ರಮಿಸುವೆ” ಎಂದರು.

ಸಹಾಯಕ ಆಯುಕ್ತ ಪ್ರಕಾಶ್ ಕುದರಿ ಅವರು ಮಾತನಾಡಿ, “ಸರ್ಕಾರದ ಯೋಜನೆಗಳು ಅನುಷ್ಠಾನಕ್ಕೆ ತರುವ ಕೆಲಸ ಮಾಧ್ಯಮಗಳಿಂದ ನಡೆಯುತ್ತದೆ. ಮಾಧ್ಯಮಗಳು ಸಾರ್ವಜನಿಕರ ಮತ್ತು ಸರ್ಕಾರದ ನಡುವಿನ ಸೇತುವೆಯಾಗಿವೆ. ವಾಸ್ತವ ಸುದ್ದಿಗಳಿಗೆ ಮಾಧ್ಯಮ ಬೆಳಕು ಚೆಲ್ಲುತ್ತದೆ” ಎಂದರು.

ಡಿವೈಎಸ್ಪಿ ಮಡೋಳಪ್ಪ ಅವರು ಮಾತನಾಡಿ, “ಯಾವುದೇ ಘಟನೆಯಾದರೂ ಪೊಲೀಸರು ಮತ್ತು ಪತ್ರಕರ್ತರು ಘಟನಾ ಸ್ಥಳಕ್ಕೆ ಹೋಗುತ್ತಾರೆ. ಪೊಲೀಸರ ತನಿಖೆ ಮತ್ತು ಪತ್ರಕರ್ತರ ಪರಿಶೀಲನೆ ವಸ್ತುನಿಷ್ಠತೆಗೆ ಆದ್ಯತೆ ಇರುತ್ತದೆ. ಪತ್ರಿಕೆಗಳು ಸಂವಿಧಾನದ ನಾಲ್ಕನೇ ಅಂಗವೆಂದು ಕರೆಯಲಾಗುತ್ತದೆ. ಈ ಸಮಾಜದಲ್ಲಿ ಪತ್ರಿಕೆ ಮತ್ತು ಪೊಲೀಸರ ಸೇವೆ ಬಹಳ ಮಹತ್ವವಾಗಿದೆ” ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ ಮಾತನಾಡಿ, “ದೇಶದ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ವೇಳೆ ಪತ್ರಿಕೆಗಳ ಪಾತ್ರ ದೊಡ್ಡದು. ಪತ್ರಿಕೆಗಳು ಸಮಾಜದ ಕನ್ನಡಿ. ಹಲವು ಸಮಸ್ಯೆಗಳನ್ನು ಆಡಳಿತ ವ್ಯವಸ್ಥೆ ಎದುರಿಗೆ ತಂದಿಡುವ ಕೆಲಸ ಮಾಡುತ್ತವೆ” ಎಂದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಶಶಿಕಾಂತ ಶೆಂಬೆಳ್ಳಿ ಮಾತನಾಡಿ, “ಇತ್ತೀಚಿನ ಹೊಸ ತಲೆಮಾರಿನ ಝೆನ್ ಜಿ ಯುವಕರು ಮುಖ್ಯ ವಾಹಿನಿಯ ಪತ್ರಕರ್ತರ ಭ್ರಮೆ ಅಳಿಸಿದ್ದಾರೆ. ಪತ್ರಕರ್ತರು ನಿರಂತರ ಅಧ್ಯಯನ ಮೈಗೂಡಿಸಿಕೊಳ್ಳುವ ಜೊತೆಗೆ ಸತ್ಯ ಶೋಧನೆ, ಪ್ರಾಮಾಣಿಕ ವರದಿಗಾರಿಕೆ ಮಾಡುವ ಬದ್ಧತೆಗೆ ಆದ್ಯತೆ ಇರಲಿ” ಎಂದರು.

ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ ನಾರಾಯಣರಾವ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಬಸವಕಲ್ಯಾಣ ತಾಲೂಕಿನ ಎಲ್ಲಾ ಪತ್ರಕರ್ತರಿಗೆ, ವಿದ್ಯುನ್ಮಾನ, ಸಾಮಾಜಿಕ ಮಾಧ್ಯಮ ಹಾಗೂ ಪತ್ರಿಕಾ ಎಜೆಂಟರಿಗೂ ಸನ್ಮಾನಿಸಿ ಗೌರವಿಸಲಾಯಿತು.

ಭೀಮರಾಯನ ಗುಡಿ ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ, ಸರ್ಕಾರಿ ನೌಕರರ ತಾಲೂಕು ಅಧ್ಯಕ್ಷ ದಿಲೀಪಕುಮಾರ್ ಉತ್ತಮ, ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಪ್ಪಾರಾವ್ ಸೌದಿ, ಪ್ರಶಸ್ತಿ ಪ್ರಯೋಜಕರಾದ ಚಂದ್ರಶೇಖರ ದುಬೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಘಟಕದ ಉಪಾಧ್ಯಕ್ಷ ಪೃಥ್ವಿರಾಜ ಎಸ್., ಖಜಾಂಚಿ ಸುನಿಲ್ ಕುಮಾರ್ ಕುಲಕರ್ಣಿ, ತಾಲೂಕು ಮಟ್ಟದ ಪದಾಧಿಕಾರಿಗಳಾದ ಡಿ.ಕೆ.ಪ್ರಹ್ಲಾದ್, ಶಿವಪುತ್ರ ಪಾಟೀಲ, ಪ್ರದೀಪ್ ವಿಸಾಜಿ, ವೀರಶೆಟ್ಟಿ ಮಲಶೆಟ್ಟಿ, ಕಲ್ಯಾಣರಾವ ಮದರಗಾಂವಕರ್, ಮಾಣಿಕ್ ಭುರೆ, ಧನರಾಜ್ ರಾಜೋಳೆ, ಎಂಡಿ ಖುತಬೋದ್ದಿನ್, ಖಾಜಾ ಸರ್ತಾಜೋದ್ದೀನ್, ಸಿದ್ದಲಿಂಗ ಗಡ್ಡೆ, ಮಲ್ಲಿಕಾರ್ಜುನ ಬಂಡೆ, ವೀರಶೆಟ್ಟಿ ಯರಂಡಗೆ, ಜುಬೇರ್ ನವಾಜ್, ಮಲ್ಲಿಕಾರ್ಜುನ ಮಲಶೆಟ್ಟಿ, ಶರದ್ ದುಬೆ, ವಿಜಯಕುಮಾರ ಬೆಲ್ದೆ ಮತ್ತು ಶಂಕರ್ ಪ್ರಸಾದ್ ದುಬೆ ಪರಿವಾರದವರು ಉಪಸ್ಥಿತರಿದ್ದರು.

ಇದನ್ನೂ ಓದಿ : ಬೀದರ್‌ | ರಾಹುಲ್ ಗಾಂಧಿ ವಿರುದ್ಧದ ಹೇಳಿಕೆ: ಶಾಸಕ ಯಶ್ಪಾಲ್ ಮೇಲೆ ಎಫ್‌ಐಆರ್ ದಾಖಲಿಸಲು ಆಗ್ರಹ

ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಾರ್ಥಂಡ ಜ್ಯೋಶಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಮುಳೆ ಪ್ರಶಸ್ತಿ ಪತ್ರ ವಾಚಿಸಿದರು. ಜಿಲ್ಲಾ ಕಾರ್ಯಕಾರಿ ಸದಸ್ಯ ಗುರುನಾಥ ಗಡ್ಡೆ ಪ್ರಾಸ್ತಾವಿಕ ಮಾತನಾಡಿದರು. ಎಂ.ಡಿ.ನೈಮೋದ್ದಿನ್ ವಂದಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR ­| ಫಾರ್ಮ್-7 ದುರ್ಬಳಕೆ: ವರದಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ತಾಕೀತು!

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ‘ಫಾರ್ಮ್-7’ ನಮೂನೆಗಳನ್ನು ಅಪಾರ ಪ್ರಮಾಣದಲ್ಲಿ...

ವಿಮಲ್ ಜಾಹೀರಾತು ವಿವಾದ: ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ ನಟ ಅಜಯ್ ದೇವಗನ್! 

'ವಿಮಲ್ ಏಲಕ್ಕಿ' ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಇಲಾಖೆ...

ಅವಳ ಕಣ್ಣೋಟ | ‘ಅರುವಿ’- ಉಸಿರುಗಟ್ಟುವ ನೋವು, ಉರಿಯುವ ಸಿಟ್ಟು

ಚಿತ್ರದ ಮತ್ತೊಂದು ಮುಖ್ಯ ಚರ್ಚೆ ಕ್ಷಮೆಯ ಕುರಿತದ್ದು. ಅರುವಿ ತನ್ನನ್ನು ಶೋಷಿಸಿದ...

2047ರ ವೇಳೆಗೆ ರಾಜ್ಯದ ನಗರ ಜನಸಂಖ್ಯೆ 70%ಗೆ ಏರಿಕೆ: ಸಿಎಂ ಡಿ.ಕೆ ಶಿವಕುಮಾರ್

ಕರ್ನಾಟಕದ ನಗರ ಪ್ರದೇಶಗಳ ಜನಸಂಖ್ಯೆಯು ಪ್ರಸ್ತುತ 46% ಇದ್ದು, 2047ರ ವೇಳೆಗೆ...