ನಿಯಮ ಉಲ್ಲಂಘಿಸಿದ ಕ್ರಷರ್‌ಗಳಿಗೆ ಒಟಿಎಸ್ ಭಾಗ್ಯ? ಜನರ ಹಣಕ್ಕೆ ರಿಯಾಯಿತಿ ಏಕೆ?

Date:

ಒಂದು ಕಡೆ ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆ, ಪಿಂಚಣಿ ಪರಿಷ್ಕರಣೆ ಹಾಗೂ ಸರ್ಕಾರಿ ವೆಚ್ಚ ನಿಯಂತ್ರಣದ ಚರ್ಚೆ ನಡೆಯುತ್ತಿರುವಾಗ, ಮತ್ತೊಂದೆಡೆ ಸರ್ಕಾರ ರಾಯಧನ ಮತ್ತು ದಂಡ ಬಾಕಿ ಉಳಿಸಿಕೊಂಡಿರುವ ಕ್ರಷರ್ ಮಾಲೀಕರಿಗೆ ಒನ್ ಟೈಂ ಸೆಟಲ್‌ಮೆಂಟ್(ಒಟಿಎಸ್) ಮೂಲಕ ಭಾರೀ ರಿಯಾಯಿತಿ ನೀಡುತ್ತಿದ್ದು, ʼನಿಯಮ ಉಲ್ಲಂಘಿಸಿದ ಕ್ರಷರ್‌ಗಳಿಗೆ ಒಟಿಎಸ್ ಭಾಗ್ಯವೇಕೆ? ಎಂಬುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

- Advertisement -

ತುಮಕೂರು ಜಿಲ್ಲೆಯಲ್ಲಿ ರಾಯಧನ ಮತ್ತು ದಂಡವನ್ನು ಹಲವು ವರ್ಷಗಳಿಂದ ಪಾವತಿಸದೆ ಉಳಿಸಿಕೊಂಡಿರುವ ಕ್ರಷರ್‌ಗಳಿಗೆ ಸರ್ಕಾರ ಒಟಿಎಸ್ ಅವಕಾಶ ನೀಡಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡ ಮನ್ನಾ ಅಥವಾ ದೊಡ್ಡ ಪ್ರಮಾಣದ ರಿಯಾಯಿತಿ ನೀಡುವ ಕ್ರಮವು, ನಿಯಮ ಪಾಲಿಸಿ ಸಮಯಕ್ಕೆ ಸರಿಯಾಗಿ ಹಣ ಪಾವತಿಸಿದವರಲ್ಲಿ ಅಸಮಾಧಾನ ಮೂಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಈ ವಿಚಾರವಾಗಿ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಸರ್ಕಾರವೂ ಎಚ್ಚೆತ್ತುಕೊಂಡಿದ್ದು, ಪಾವಗಡ ಶಾಸಕ ಹೆಚ್ ವಿ ವೆಂಕಟೇಶ್ ಅವರಿಗೆ ಸೇರಿದ ಕ್ರಷರ್‌ಗೆ ಒಟಿಎಸ್ ಅಡಿಯಲ್ಲಿ ಬಾಕಿ ಹಣ ಪಾವತಿಸುವಂತೆ ನೋಟಿಸ್ ಜಾರಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸುಮಾರು 10 ಕೋಟಿ ರೂಪಾಯಿ ಬಾಕಿಯಲ್ಲಿ 6 ಕೋಟಿ ರೂಪಾಯಿ ರಿಯಾಯಿತಿ ನೀಡಿ, ಉಳಿದ 4 ಕೋಟಿ ರೂಪಾಯಿ ಪಾವತಿಸುವಂತೆ ಸೂಚಿಸಲಾಗಿದೆ ಎನ್ನಲಾಗುತ್ತಿದೆ. ಈ ಬೆಳವಣಿಗೆ ಒಟಿಎಸ್ ನೀತಿಯ ಉದ್ದೇಶ ಹಾಗೂ ಪಾರದರ್ಶಕತೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಾಹಿತಿಯ ಪ್ರಕಾರ, “ತುಮಕೂರು ಜಿಲ್ಲೆಯಲ್ಲಿ 186 ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 146 ಕ್ರಷರ್‌ಗಳು ರಾಯಧನ ಮತ್ತು ದಂಡವನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಆ 146 ಕ್ರಷರ್‌ಗಳಿಗೆ ಒಟಿಎಸ್ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 437 ಕೋಟಿ ರೂಪಾಯಿಗೂ ಅಧಿಕ ರಾಯಧನ ಮತ್ತು ದಂಡ ಬಾಕಿ ಇದೆ. ಈ ಮೊತ್ತವನ್ನು ಒಟಿಎಸ್ ಯೋಜನೆಯಡಿ ಆರು ತಿಂಗಳೊಳಗೆ ನಾಲ್ಕು ಕಂತುಗಳಲ್ಲಿ ಪಾವತಿಸಬೇಕು” ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಲಿಂಗರಾಜು ತಿಳಿಸಿದ್ದಾರೆ.

ಒಟಿಎಸ್ ಅಗತ್ಯವೇ? ಅಥವಾ ತಪ್ಪು ಸಂದೇಶವೇ?

ಸರ್ಕಾರದ ವಾದದ ಪ್ರಕಾರ, ಹಲವು ವರ್ಷಗಳಿಂದ ವಸೂಲಾಗದ ಬಾಕಿಯನ್ನು ಒಟಿಎಸ್ ಮೂಲಕವಾದರೂ ಸಂಗ್ರಹಿಸುವುದು ಉತ್ತಮ. ನ್ಯಾಯಾಲಯದ ವ್ಯಾಜ್ಯಗಳು ಮತ್ತು ದೀರ್ಘಾವಧಿಯ ವಸೂಲಾತಿ ಪ್ರಕ್ರಿಯೆಗಿಂತ, ಕನಿಷ್ಠ ಒಂದು ಭಾಗವಾದರೂ ಸರ್ಕಾರದ ಖಜಾನೆಗೆ ಬರಲಿದೆ ಎಂಬುದು ಆಡಳಿತದ ದೃಷ್ಟಿಕೋನವಾಗಿರಬಹುದು. ಆದರೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆಗಳು ಬೇರೆ ರೀತಿಯವು.
ನಿಯಮ ಉಲ್ಲಂಘಿಸಿದವರಿಗೆ ರಿಯಾಯಿತಿ ನೀಡಿದರೆ, ಪ್ರಾಮಾಣಿಕವಾಗಿ ಹಣ ಪಾವತಿಸಿದವರಿಗೆ ನ್ಯಾಯ ಎಲ್ಲಿದೆ? ಕೋಟಿ ಕೋಟಿ ರೂಪಾಯಿ ದಂಡ ಮನ್ನಾ ಮಾಡುವ ಮೂಲಕ ಸರ್ಕಾರ ತಪ್ಪಿತಸ್ಥರಿಗೆ ಪ್ರೋತ್ಸಾಹ ನೀಡುತ್ತಿರುವುದೇ? ಇದೇ ಮಾದರಿಯನ್ನು ಮುಂದೆಯೂ ಅನುಸರಿಸಿದರೆ, ಭವಿಷ್ಯದಲ್ಲಿ ಯಾರು ಸಮಯಕ್ಕೆ ಸರಿಯಾಗಿ ರಾಯಧನ ಪಾವತಿಸುತ್ತಾರೆ? ಜನರ ಆಸ್ತಿಯ ಹಣ ಯಾರಿಗಾಗಿ? ರಾಯಧನ ಎಂಬುದು ಖಾಸಗಿ ಆದಾಯವಲ್ಲ. ರಾಜ್ಯದ ಖನಿಜ ಸಂಪತ್ತನ್ನು ಬಳಸಿದ ಪ್ರತಿಫಲವಾಗಿ ಸರ್ಕಾರಕ್ಕೆ ಬರುವ ಆದಾಯ. ಈ ಹಣ ರಸ್ತೆ, ಶಾಲೆ, ಆಸ್ಪತ್ರೆ, ಕುಡಿಯುವ ನೀರು ಸೇರಿದಂತೆ ಸಾರ್ವಜನಿಕ ಅಭಿವೃದ್ಧಿಗೆ ಬಳಕೆಯಾಗಬೇಕಾದ ಸಂಪನ್ಮೂಲ. ಆದ್ದರಿಂದ ಬಾಕಿ ಮೊತ್ತವನ್ನು ಸಂಪೂರ್ಣವಾಗಿ ವಸೂಲಿ ಮಾಡಬೇಕೇ ಹೊರತು, ಭಾರೀ ರಿಯಾಯಿತಿ ನೀಡಬಾರದು” ಎಂಬ ಅಭಿಪ್ರಾಯ ಹಲವರಿಂದ ವ್ಯಕ್ತವಾಗುತ್ತಿದೆ.

ಕ್ರಷರ್‌ಗಳಿಗೆ ಒಟಿಎಸ್‌ ಭಾಗ್ಯ 1

ವಿಶೇಷವಾಗಿ ಜನಪ್ರತಿನಿಧಿಗಳು ಅಥವಾ ಪ್ರಭಾವಿ ವ್ಯಕ್ತಿಗಳಿಗೆ ಸೇರಿದ ಕ್ರಷರ್‌ಗಳಿಗೂ ಇದೇ ಸೌಲಭ್ಯ ಸಿಗುತ್ತಿರುವುದು ಪಾರದರ್ಶಕತೆ ಕುರಿತು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿದ್ದೀರಾ? ಬೀದರ್‌ | ಮಳೆ ಕೊರತೆ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರು, ಬರಪೀಡಿತ ಜಿಲ್ಲೆ ಘೋಷಿಸಲು ಸಿಎಂಗೆ ಮನವಿ

ಒಟಿಎಸ್ ಮೂಲಕ ವರ್ಷಗಳಿಂದ ಸಿಲುಕಿದ್ದ ಹಣ ಸರ್ಕಾರಕ್ಕೆ ಮರಳುವುದೇ ಮುಖ್ಯವೇ? ಅಥವಾ ನಿಯಮ ಉಲ್ಲಂಘಿಸಿದವರಿಗೆ ರಿಯಾಯಿತಿ ನೀಡುವುದರಿಂದ ಕಾನೂನು ಪಾಲನೆಯ ಮೌಲ್ಯ ಕುಗ್ಗುವುದೇ ದೊಡ್ಡ ಸಮಸ್ಯೆಯೇ? ಎಂಬುದರ ನಡುವೆ ಸಮತೋಲನ ಸಾಧಿಸುವುದು ಸರ್ಕಾರಕ್ಕೆ ಸವಾಲಾಗಿದೆ. ಆದರೆ ಒಂದು ವಿಷಯ ಸ್ಪಷ್ಟ. 437 ಕೋಟಿ ರೂಪಾಯಿ ಸಾರ್ವಜನಿಕರ ಹಣ, ಸಂಪೂರ್ಣವಾಗಿ ಸರ್ಕಾರದ ಖಜಾನೆಗೆ ಸೇರಿ ಜನರ ಅಭಿವೃದ್ಧಿಗೆ ಬಳಸಬೇಕು ಎಂಬುದು ಜನಸಾಮಾನ್ಯರ ನಿರೀಕ್ಷೆಯಾಗಿದೆ.

ಸರ್ಕಾರ ಒಟಿಎಸ್ ಅನ್ನು ಕೇವಲ ಬಾಕಿ ವಸೂಲಾತಿಯ ಸಾಧನವಾಗಿಯೇ ಬಳಸುತ್ತದೆಯೇ, ಅಥವಾ ದೊಡ್ಡ ಪ್ರಮಾಣದ ರಿಯಾಯಿತಿ ನೀಡುವ ಮೂಲಕ ಹೊಸ ವಿವಾದಕ್ಕೆ ಕಾರಣವಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

WhatsApp Image 2024 08 09 at 10.52.48 1578a566
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ.2 ಮೀಸಲಾತಿ ಸ್ವಾಗತಾರ್ಹ: ಮುತ್ತಣ್ಣ ಮೇತ್ರಿ

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಗಳ ನೇಮಕಾತಿಯಲ್ಲಿ ಶೇ.2ರಷ್ಟು...

ವಿಜಯಪುರ | ಉದ್ಯೋಗ ಖಾತ್ರಿ ಪೂರ್ಣ ಕೂಲಿ ಪಾವತಿಗೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿರುವ ಕೂಲಿಕಾರರಿಗೆ ಅವರ ಶ್ರಮಕ್ಕೆ ತಕ್ಕಂತೆ...

ಬೀದರ್‌ | ಆಟವಾಡುತ್ತಿದ್ದ ಸಹೋದರರ ಮೇಲೆ ಬೀದಿ ನಾಯಿ ದಾಳಿ, ಬ್ರಿಮ್ಸ್‌ಗೆ ದಾಖಲು

ಮನೆಯ ಮುಂದೆ ಆಟವಾಡುತ್ತಿದ್ದ ಸಹೋದರರ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ,...