ತುಮಕೂರು | ಇವ್ರನ್ನ ನನ್ ತನ್ಕ ಬಿಟ್ಟಿದ್ ಯಾರು?’: ವಿಶೇಷ ಚೇತನರ ಅಳಲು ಕೇಳದ ಪಾಲಿಕೆ ಆಯುಕ್ತರು!

Date:

ತುಮಕೂರು ನಗರದಲ್ಲಿ ನಡೆಯುತ್ತಿರುವ ಪುಟ್‌ಪಾತ್ ತೆರವು ಕಾರ್ಯಾಚರಣೆಯಿಂದ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಅಂಗವಿಕಲರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಬದುಕಿಗೆ ಆಸರೆಯಾಗಿರುವ ಅಂಗಡಿಗಳನ್ನು ತೆರವುಗೊಳಿಸದಂತೆ ಮನವಿ ಮಾಡಲು ಪಾಲಿಕೆ ಆಯುಕ್ತರನ್ನು ಭೇಟಿಯಾದ ಅಂಗವಿಕಲರಿಗೆ ಸೂಕ್ತ ಸ್ಪಂದನೆ ದೊರೆಯಲಿಲ್ಲ ಎಂಬ ಆರೋಪ ಕೇಳಿಬಂದಿದೆ.

- Advertisement -

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪುಟ್‌ಪಾತ್ ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಸಾವಿರಾರು ವ್ಯಾಪಾರಿಗಳ ನಡುವೆ ಪುಟ್‌ಪಾತ್‌ನಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕುತ್ತಿರುವ ಅಂಗವಿಕಲರ ಸಂಖ್ಯೆ ಕೇವಲ ಹತ್ತಾರು ಜನರಷ್ಟಿದೆ. ಆದರೆ, ಈ ಹತ್ತಾರು ಅಂಗವಿಕಲರ ಬದುಕಿಗೂ ಇದೀಗ ತೆರವು ಕಾರ್ಯಾಚರಣೆಯ ಬಿಸಿ ತಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳಾ ಮೀಸಲಾತಿ ಮರೆಯಲ್ಲಿ ಕ್ಷೇತ್ರ ಮರುವಿಂಗಡಣೆ: ವಿರೋಧ ಪಕ್ಷಗಳ...

2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅನಗತ್ಯವಾಗಿ ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ತಳುಕು ಹಾಕಿರುವ ಮೋದಿ ಸರ್ಕಾರದ ನಡೆ, ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂಸದೀಯ ಇತಿಹಾಸದಲ್ಲಿಯೇ ಒಂದು ಅಪರೂಪದ ರಾಜಕೀಯ ಹಾಗೂ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ....

ಖಾಸಗಿ ವೈದ್ಯರ ಎಡವಟ್ಟು; ಬಡ ಕುಟುಂಬದ ಆಧಾರ ಸ್ತಂಭ...

ಆತ ಕೂಲಿ‌ ಕೆಲಸ ಮಾಡಿಕೊಂಡು ಹಂಗೊ ಹೆಂಗೋ ಜೀವನ‌ ನಡೆಸಿಕೊಂಡು ಬಂದಿದ್ದ ಚಿರ ಯೌವ್ವನದ ಯುವಕ. ತನ್ನ ಮನೆ ಜವಾಬ್ದಾರಿಯನ್ನು ತನ್ನದೇ ಹೆಗಲ ಮೇಲೆರಿಸಿ ಕಷ್ಟಪಟ್ಟು ದುಡಿದು ತನ್ನ ಇಬ್ಬರು ಸಹೋದರಿಯರಿಗೆ ಮದುವೆಯನ್ನೂ...

ಭಾಷಣಗಳಲ್ಲಿ ಆಗಾಗ ಎಡವಟ್ಟು, ಸುಳ್ಳು-ಅತಿಶಯೋಕ್ತಿಯೇ ಮೇಲುಗೈ: ನವಭಾರತದ ‘ಪಪ್ಪು’...

ಒಂದು ಕಾಲದಲ್ಲಿ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡಲು ಬಳಸುತ್ತಿದ್ದ 'ಪಪ್ಪು' ಎಂಬ ಪದವೇ ಇದೀಗ ಮೋದಿ ಅವರತ್ತ ತಿರುಗಿದೆ. 1987-88ರ ಡಿಜಿಟಲ್ ಕ್ಯಾಮೆರಾ-ಇಮೇಲ್ ಕಥೆಯಿಂದ ಹಿಡಿದು ಐತಿಹಾಸಿಕ ಪ್ರಮಾದಗಳವರೆಗೆ, ಮೋದಿ ಅವರ...

ಈ ಹಿನ್ನೆಲೆಯಲ್ಲಿ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮುರುಗೇಶ್, ಕಾರ್ಯದರ್ಶಿ ಎಸ್. ಬಾಬು, ಮಹಮದ್ ಅಲಿ ಸೇರಿದಂತೆ ಅಂಗವಿಕಲರು ಪಾಲಿಕೆ ಆಯುಕ್ತರನ್ನು ಭೇಟಿಯಾಗಿ, ಅಂಗವಿಕಲ ಪುಟ್‌ಪಾತ್ ವ್ಯಾಪಾರಿಗಳ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು, ಕನಿಷ್ಠ ಮಾನವೀಯ ನೆಲೆಯಲ್ಲಿ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡುವ ವೇಳೆ ಆಯುಕ್ತರು ‘ಇವ್ರನ್ನ ನನ್ ತನ್ಕ ಬಿಟ್ಟಿದ್ ಯಾರು?’ ಎಂದು ಹೇಳಿರುವುದು ಅಂಗವಿಕಲರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಎಸ್. ಬಾಬು ಆರೋಪಿಸಿದ್ದಾರೆ.

‘ನಾವು ಯಾರ ಹಕ್ಕನ್ನೂ ಕಸಿದುಕೊಳ್ಳಲು ಬಂದಿಲ್ಲ. ದುಡಿದು ತಿನ್ನಲು ನಮಗೆ ಸಾಧ್ಯವಾಗುವ ಸಣ್ಣ ಅವಕಾಶವನ್ನು ಮಾತ್ರ ಕೇಳುತ್ತಿದ್ದೇವೆ. ಕನಿಷ್ಠ ಅಂಗವಿಕಲರ ಅಂಗಡಿಗಳನ್ನಾದರೂ ಯಥಾಸ್ಥಿತಿಯಲ್ಲಿ ಮುಂದುವರಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದೇವೆ. ಆದರೆ ನಮ್ಮ ಮನವಿಗೆ ಸ್ಪಂದನೆ ಸಿಗಲಿಲ್ಲ’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

IMG 20260820 WA0180

ನಡೆಯಲು ಸಾಧ್ಯವಾಗದ ಪ್ರಕಾಶ್ ರೆಡ್ಡಿ ಅವರು ಸ್ವತಃ ನಂದಿನಿ ಬೂತ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರೊಂದಿಗೆ ಇಮ್ರಾನ್, ಪ್ರಕಾಶ್ ಆರ್., ಮಂಜಮ್ಮ, ಶಬ್ಬೀರ್ ಪಾಷ, ಶಾಹೀನ್ ತಾಜ್, ಧನಂಜಯ್, ವಿನಯ್ ಸೇರಿದಂತೆ ಹಲವು ಅಂಗವಿಕಲರು ಬೆಳಗ್ಗೆಯಿಂದ ಪಾಲಿಕೆ ಆವರಣದಲ್ಲಿ ಕಾದು, ಕೊನೆಗೆ ಅಂಗಡಿಗಳ ತೆರವಿಗೆ ಜೆಸಿಬಿಯೊಂದಿಗೆ ಬಂದ ಪಾಲಿಕೆ ಅಧಿಕಾರಿಗಳಿಗೆ ತಮ್ಮ ಪರಿಸ್ಥಿತಿಯನ್ನು ವಿವರಿಸಿ ಮನವಿ ಸಲ್ಲಿಸಿದ್ದಾರೆ.

‘ತುಮಕೂರು ನಗರದಲ್ಲಿ ಸುಮಾರು ಐದು ಸಾವಿರ ಅಂಗವಿಕಲರಿದ್ದೇವೆ. ಇಡೀ ನಗರದ ಪುಟ್‌ಪಾತ್‌ಗೆ ನಮ್ಮ ಹತ್ತಾರು ಅಂಗವಿಕಲರ ಬದುಕು ಭಾರವಾಗುವುದಿಲ್ಲ. ನಮಗೆ ಯಾರ ದಯೆಯೂ ಬೇಡ. ನಮ್ಮ ಕಾಲ ಮೇಲೆ ನಾವು ನಿಂತು ದುಡಿದು ತಿನ್ನಲು ಅವಕಾಶ ಮಾತ್ರ ಬೇಕು’ ಎಂದು ಎಸ್. ಬಾಬು ಮನವಿ ಮಾಡಿದ್ದಾರೆ.

ಅಂಗವಿಕಲರಿಗೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತಿದೆ. ಆದರೆ, ಮತ್ತೊಂದೆಡೆ ಬದುಕಿಗಾಗಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿರುವ ಅಂಗವಿಕಲರ ಅಂಗಡಿಗಳನ್ನೂ ತೆರವುಗೊಳಿಸಿದರೆ ಅವರು ಜೀವನ ನಡೆಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

‘ಇನ್ನು ಮುಂದೆ ನಾವು ಅಂಗವಿಕಲರು ದುಡಿದು ತಿನ್ನಲು ಪುಟ್‌ಪಾತ್‌ನಲ್ಲಿ ಸಣ್ಣ ವ್ಯಾಪಾರ ಮಾಡಲು ಜಾಗ ಹುಡುಕಿಕೊಂಡು ಬರಲು ಕೂಡ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನಮ್ಮ ಬದುಕನ್ನು ಪರಿಗಣಿಸಿ ಮಾನವೀಯ ದೃಷ್ಟಿಯಿಂದ ಸರ್ಕಾರ ಮಧ್ಯಪ್ರವೇಶಿಸಬೇಕು’ ಎಂದು ಅಂಗವಿಕಲರು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ಗಮನ ಸೆಳೆದಿರುವ ಎಸ್. ಬಾಬು, ‘ಕೃಷ್ಣ ಭೈರೇಗೌಡರೇ, ದಯವಿಟ್ಟು ರಾಜ್ಯದಾದ್ಯಂತ ಅಂಗವಿಕಲರಿಗೆ ತಾವು ಇರುವಲ್ಲಿಯೇ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಸ್ವಾವಲಂಬಿ ಬದುಕು ನಡೆಸಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದ್ದಾರೆ.

ಪುಟ್‌ಪಾತ್ ತೆರವು ಕಾರ್ಯಾಚರಣೆ ನಗರಗಳ ಸುವ್ಯವಸ್ಥೆ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಗತ್ಯವಾದರೂ, ಬದುಕಿಗಾಗಿ ಸಣ್ಣ ವ್ಯಾಪಾರವನ್ನೇ ಅವಲಂಬಿಸಿರುವ ಅಂಗವಿಕಲರಿಗೆ ಪರ್ಯಾಯ ವ್ಯವಸ್ಥೆ ಅಥವಾ ವಿಶೇಷ ವಿನಾಯಿತಿ ಕಲ್ಪಿಸುವ ಮೂಲಕ ಅವರ ಜೀವನೋಪಾಯಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಕನ್ನಡ ಕೇವಲ ಮಾತನಾಡುವ ಭಾಷೆಯಲ್ಲ, ಆಸ್ವಾದಿಸುವ ಸಂಸ್ಕೃತಿ: ಪ್ರೊ. ಕೃಷ್ಣೇಗೌಡ

ಕನ್ನಡ ಭಾಷೆಯನ್ನು ಕೇವಲ ಮಾತನಾಡುವುದಷ್ಟೇ ಅಲ್ಲ, ಅದರ ಸೊಗಡು, ಸಾಹಿತ್ಯ ಮತ್ತು...

ತಿಪಟೂರು | ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಓದುವ ಸಂಸ್ಕೃತಿ ಬೆಳೆಸಬೇಕು: ಸಿ.ಬಿ. ಶಶಿಧರ್

 ಮಕ್ಕಳಲ್ಲಿ ಮೂಢನಂಬಿಕೆಗಳ ಬದಲಿಗೆ ವೈಚಾರಿಕತೆ, ವೈಜ್ಞಾನಿಕ ಚಿಂತನೆ ಹಾಗೂ ತರ್ಕಬದ್ಧ ಆಲೋಚನೆಗಳನ್ನು...

ತುಮಕೂರು | ಜಾತಿ ಮೀರಿ ಮಾನವೀಯತೆ ಸಾರುವ ತತ್ವಪದಗಳು : ಎಚ್.ಎಸ್. ಶಿವಪ್ರಕಾಶ್

 ನಶ್ವರವಾದ ಈ ಜಗತ್ತಿನಲ್ಲಿ ಎಲ್ಲವೂ ಬದಲಾಗುತ್ತಲೇ ಇರುತ್ತವೆ. ಆದರೆ, ಈ ಬದಲಾವಣೆಗಳ...

ತುಮಕೂರು | ಬಲಿತವರು ಬಡ ದಲಿತರನ್ನು ಇನ್ನೂ ಕೈಯೊಡ್ಡುವ ಪರಿಸ್ಥಿತಿಯಲ್ಲಿಯೇ ಇಟ್ಟಿದ್ದಾರೆ : ಎಚ್. ಡಿ. ಕುಮಾರಸ್ವಾಮಿ

ಬಲಿತ ದಲಿತ ಎಂದು ನನ್ನ ವಿರುದ್ಧ ಪೋಸ್ಟರ್ಗಳನ್ನು ಅಂಟಿಸುತ್ತಿರುವ ಕಿಡಿಗೇಡಿಗಳು ಮೊದಲು...