ತುಮಕೂರು | ಪತ್ರಿಕಾರಂಗದಲ್ಲಿರುವ ಕಾಪಿ-ಪೇಸ್ಟ್ ಸಂಸ್ಕೃತಿಗೆ ಇತಿಶ್ರೀ ಹಾಡಬೇಕು: ಡಾ. ಕೆ ನಾಗಣ್ಣ

Date:

ನಿರಂತರ ಬರವಣಿಗೆ ಸವಾಲನ್ನು ಪತ್ರಕರ್ತರು ಸದಾ ಎದುರಿಸಿ ಬರವಣಿಗೆಗೆ ಹೆಚ್ಚಿನ ಒತ್ತು ನೀಡಬೇಕು. ಸಮಾಜದ ಅಭಿವೃದ್ಧಿಗೆ, ಸಾಮಾಜಿಕ ಕಳಕಳಿ ಬಗ್ಗೆ ಬರೆಯುವ ಬರಹಗಳು ಜನರ ಬದುಕನ್ನ ರೂಪಿಸುತ್ತವೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ಹಾಗೂ ಜನರಿಗೆ ಪ್ರಯೋಜವಾಗುವಂತಹ ಮಾಹಿತಿಯನ್ನು ಮಾಧ್ಯಮದವರು ವಿಶ್ಲೇಷಿಸಿ ಜನರ ಎದುರು ತರಬೇಕು. ಕಲ್ಪನೆಯ ಬರಹಕ್ಕೆ ಒತ್ತು ನಿಡದೇ ಪತ್ರಿಕಾರಂಗದಲ್ಲಿರುವ ಕಾಪಿ-ಪೇಸ್ಟ್ ಸಂಸ್ಕೃತಿಗೆ ಇತಿಶ್ರೀ ಹಾಡಬೇಕು ಎಂದು ತುಮಕೂರಿನ ಹಿರಿಯ ಪತ್ರಕರ್ತ ಡಾ. ಕೆ ನಾಗಣ್ಣ  ಅಭಿಪ್ರಾಯಪಟ್ಟರು.

- Advertisement -

ತುಮಕೂರು ನಗರದ ಎಸ್‌ಎಸ್‌ಐಟಿ ಕ್ಯಾಂಪಸ್ ಆವರಣದ ಚಾಣಕ್ಯ ಬ್ಲಾಕ್‌ನ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ನಡೆದ ಮಾಧ್ಯಮ ಅಧ್ಯಯನ ಕೇಂದ್ರದ ರೇಡಿಯೋ ಸಿದ್ಧಾರ್ಥ 90.8 ಎಫ್.ಎಂ ಮತ್ತು ಪ್ರಿಂಟ್ ಮೀಡಿಯ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘ (ರಿ), ತುಮಕೂರು ಇವರ ಸಹಯೋಗದೊಂದಿಗೆ ಮಾಧ್ಯಮಗಳ ಸವಾಲು ಮತ್ತು ಬರವಣಿಗೆ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಮಾಧ್ಯಮ ಅಂದರೆ ಯಾರೊಂದಿಗೂ ಬೆರೆಯುತ್ತಿರಲಿಲ್ಲ, ಆದರೆ ಇತ್ತೀಚೆಗೆ ಪತ್ರಕರ್ತರು ಎಲ್ಲರೂ ನಮ್ಮವರೇ ಎಂಬ ಭಾವನೆಯಿಂದ ಎಲ್ಲರ ಜೊತೆಗೆ ಇರುವ ಉದಾಹರಣೆಗಳು ಕಾಣುತ್ತಿವೆ ಸಮಾಜದಲ್ಲಿ ಮಾಧ್ಯಮದ ಜವಾಬ್ದಾರಿ ಹೆಚ್ಚಿಸುವ ಹೊಣೆಗಾರಿಕೆ ಪತ್ರಕರ್ತರು ಹೊಂದಬೇಕಾಗಿದೆ ಎಂದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಮಾಧ್ಯಮ ಸಮಾಜದ ನಾಲ್ಕನೇ ಅಂಗ ಸದಾ ವಾಸ್ತವ ಸುದ್ಧಿ ನೀಡಬೇಕು. ಪತ್ರಕರ್ತರು ಮಾಧ್ಯಮ ಕೇತ್ರದಲ್ಲಿನ ಹಲವಾರು ಸವಾಲುಗಳನ್ನು ಧೈರ್ಯವಾಗಿ ಎದುರಿಸುವ ಛಲ ಹೊಂದಬೇಕು. ಮುಂದುವರಿದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವಸ್ತುನಿಷ್ಠ ಸುದ್ದಿಗೆ ಮಾನ್ಯತೆ ನೀಡಿ ಸಮಾಜಕ್ಕೆ ಪೂರಕವಾದ ತನಿಖಾ ವರದಿಗಳ ಸಾರವನ್ನು ಜನರಿಗೆ ತಿಳಿಯಪಡಿಸಬೇಕು ಎಂದರು. 

1003376351

ವಿದ್ಯಾ ವಾಹಿನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮಾತನಾಡಿ 30 ವರ್ಷಗಳ ಹಿಂದೆ ಪತ್ರಿಕೆಗಳಿಂದ ನಮಗೆ ಸುದ್ದಿಗಳು ಸಿಗುತ್ತಿದ್ದವು ಆದರೆ ಇತ್ತೀಚೆಗೆ ತಂತ್ರಜ್ಞಾನದ ಪ್ರಭಾವದಿಂದಾಗಿ ಕ್ಷಣಾರ್ಧದಲ್ಲಿ ಪ್ರಪಂಚದ ಮೂಲೆ ಮೂಲೆಯ ಮಾಹಿತಿಯನ್ನು ತಿಳಿಯಬಹುದಾಗಿದೆ ಇಂದು ಪತ್ರಿಕೋದ್ಯಮಕ್ಕೆ ಹತ್ತಿರವಾಗುವಂತೆ ನಾಗರಿಕ ಪತ್ರಿಕೋದ್ಯಮವು ವಿಸ್ತಾರವಾಗಿದ್ದು ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪ್ರತಿಯೊಂದು ಘಟನೆಯು ಸುದ್ದಿ ರೂಪವಾಗಿ ಜನರ ಕೈಗೆ ತಲುಪುತ್ತಿದ್ದು ಇದನ್ನೇ ಬಂಡವಾಳವಾಗಿಸಿಕೊಂಡಿರುವ ರಾಜಕೀಯ ವ್ಯಕ್ತಿಗಳು ಇಂದು ಮಾತನಾಡುತ್ತ ನನ್ನ ಸುದ್ದಿ ನಾನೇ ಬರೆದು ಕೋಳ್ಳುತ್ತೇನೆ ಎಂಬ ನಿಟ್ಟಿನಿನಲ್ಲಿ ನಾಗರಿಕ ಪತ್ರಿಕೋದ್ಯಮವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಇಂದಿನ ಮಾಧ್ಯಮಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಆದರೆ ಪತ್ರಿಕೆಗಳು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿರುವ ಕಾರಣದಿಂದಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಪತ್ರಿಕೋದ್ಯಮ ಕ್ಷೇತ್ರದ ನೀತಿ ನಿಯಮಗಳನ್ನು ಪಾಲನೆ ಮಾಡಿದಾಗ ಮಾತ್ರ ಮಾಧ್ಯಮಕ್ಕೆ ಬೆಲೆ ತಂದಂತಾಗುತ್ತದೆ ಎಂದು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಕಾನೂನು ವಿಭಾಗದ ವಕೀಲರಾದ ಸೂರ್ಯ ಮುಕುಂದರಾಜ್ ಎಲ್.  ಮಾತನಾಡಿ ಪತ್ರಕರ್ತರಿಗೆ ಕಾರ್ಯಾಗಾರಗಳು ಕಮ್ಮಟಗಳು ತರಬೇತಿ ಶಿಬಿರಗಳು ಬಹು ಮುಖ್ಯವಾಗಿ ಅವಶ್ಯಕವಾಗಿರುತ್ತವೆ ಪತ್ರಕರ್ತರು ಇಂದು ಸುದ್ದಿ ನೀಡುವ ಭರಾಟೆಯಲ್ಲಿ ವೈಭವಿ ಕೃತ ಭಾಷೆಯನ್ನು ಬಳಸುತ್ತಾರೆ. ಅರ್ಥಗರ್ಭಿತವಾದ ಸುದ್ದಿಗಳು ವಿಶ್ವಾಸ ಅರ್ಹತೆಗೆ ಹತ್ತಿರವಾಗುತ್ತವೆ. ಈ ನಿಟ್ಟಿನಲ್ಲಿ ನ್ಯಾಯಾಲಯದ ಸುದ್ದಿಯನ್ನು ರಾಜಕೀಯದ ಸುದ್ದಿಯಂತೆ ಮಸಾಲೆ ಸೇರಿಸಿ ವೈಭವಿಕರಿಸುವ ಪ್ರಮೇಯ ಬರುವುದಿಲ್ಲ. ಜನರಿಗೆ ವಾಸ್ತವತೆಯ ಅರಿವನ್ನು ಮೂಡಿಸುವುದು ಮುಖ್ಯವಾಗಿದ್ದು ಭಾಷೆಯ ಹಿಡಿತದಲ್ಲಿ ಇಂದು ಸೋಶಿಯಲ್ ಮತ್ತು ಡಿಜಿಟಲ್ ಮೀಡಿಯಾಗಳು ಜನಪರ ಧ್ವನಿಯಾಗಿ ಕೆಲಸ ಮಾಡಬೇಕಾಗಿದೆ ಇತ್ತೀಚೆಗೆ ಪತ್ರಿಕೋದ್ಯಮದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು ಇದ್ದರಿಂದ ಬರುವ ಸುಧಾರಿತ ಭಾಷೆಯ ಬಗ್ಗೆ ಹಿಡಿತ ಸಾಧಿಸಬೇಕಿದೆ ಎಂದು ತಿಳಿಸಿದರು.

ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ ಬಿ ಟಿ ಮುದ್ದೇಶ್ ಮಾತನಾಡಿ  ಪತ್ರಕರ್ತರು ಮೊದಲು ಓದುವ ಬರೆಯುವ ಕೌಶಲ್ಯವನ್ನು ಹೊಂದಬೇಕು. ಕಾನೂನುಗಳ ಬಗ್ಗೆ ಹೆಚ್ಚು ಅಧ್ಯಯನ ನಡೆಸಿ ಸಣ್ಣ ಸಣ್ಣ ಮಾಹಿತಿಯ ಅರಿವನ್ನು ಹೊಂದಬೇಕು ಮಾಧ್ಯಮದಲ್ಲಿ ಇತ್ತೀಚೆಗೆ ಸನ್ನಿವೇಶವನ್ನು ನೋಡದೆ ವಿಶ್ಲೇಷಣೆ ಮಾಡುವ ಕಲ್ಪನೆಯ ಸುದ್ದಿ ವಾಸ್ತವಕ್ಕೆ ಹತ್ತಿರವಿರುವುದಿಲ್ಲ.  ತಾಂತ್ರಿಕವಾಗಿ ಉದ್ಭವಾಗಿರುವ ಮೋಜು ಜರ್ನಲಿಸಂ ಬರವಣಿಗೆಗೆ ದೊಡ್ಡ ಸವಾಲಾಗಿ ನಿಂತಿದೆ ಸಮಾಜದಲ್ಲಿ ಹೆಚ್ಚಾಗುತ್ತಿವೆ. ಮಾಧ್ಯಮ ಕ್ಷೇತ್ರದಲ್ಲಿ ವಯಸ್ಸು ಮುಖ್ಯವಾಗುವುದಿಲ್ಲ ಕೌಶಲ್ಯಾಭರಿತ ಸುದ್ದಿಗೆ ಹೆಚ್ಚು ಒತ್ತು ನೀಡಬೇಕು. ಇಂತಹ ಸವಾಲುಗಳ ನಡುವೆಯೂ ಮುದ್ರಣ ಮಾಧ್ಯಮ ಉಳಿಕೊಂಡಿದೆ ಎಂದರು.

ಇದೇ ಸಂದರ್ಭದಲ್ಲಿ ಶ್ರೀ ಸಿದ್ದಾರ್ಥ ಮಾಧ್ಯಮದ ಅಧ್ಯಯನ ಕೇಂದ್ರದ ಪತ್ರಿಕೋದ್ಯಮದ ವಿದ್ಯಾರ್ಥಿ ವರ್ಷಿತ ಎಂ ನಾಗರಾಜ್ ಸಂಪಾದಕತ್ವದಲ್ಲಿ  ಹೊರತಂದ ವಿಶೇಷ ಪ್ರಾಯೋಗಿಕ ಪತ್ರಿಕೆ ಸಿದ್ಧಾರ್ಥ ಸಂಪದವನ್ನು ಗಣ್ಯರು ಬಿಡುಗಡೆಗೊಳಿಸಿದರು.

 ಪತ್ರಕರ್ತರಾದ ವಿರೂಪಾಕ್ಷಿ ಕಡ್ಲೆ ಅವರು ಮುದ್ರಣ ಮಾಧ್ಯಮ ಬರವಣಿಗೆ ಕುರಿತು ಗೋಷ್ಠಿಯನ್ನು ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಪ್ರಿಂಟ್ ಮೀಡಿಯ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಸಿ.ಡಿ.ಕೃಷ್ಣಮೂರ್ತಿ, ಸಹಾಯಕ ಪ್ರಾಧ್ಯಾಪಕರಾದ ಡಾ,ಜ್ಯೋತಿ, ನವೀನ್ ಎನ್.ಜಿ. ರೇಡಿಯೋ ವಿಭಾಗದ ಗೌತಮ್, ಹರೀಶ್ ಸೇರಿದಂತೆ ಪ್ರಿಂಟ್ ಮೀಡಿಯ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು ದಸರಾ | ಬೆಳಕಿನ ಹಬ್ಬದ ಹಿಂದೆ ಕತ್ತಲ ಲೆಕ್ಕ!

 ನಾಡಹಬ್ಬ ದಸರಾಕ್ಕೆ ತುಮಕೂರು ನಗರ ಸಜ್ಜಾಗುತ್ತಿದೆ. ನಗರದ ಪ್ರಮುಖ ರಸ್ತೆಗಳು, ವೃತ್ತಗಳು...

ತುಮಕೂರು | ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಜನಪ್ರತಿನಿಧಿಗಳ ಸಹಕಾರ ಅಗತ್ಯ : ಆರೋಗ್ಯ ಸಚಿವ ಯು.ಟಿ. ಖದರ್

 ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.95ರಷ್ಟು ಅಗತ್ಯ ಸವಲತ್ತುಗಳು ಲಭ್ಯವಿದ್ದು, ಯಾವುದೇ ಕೊರತೆಗಳಿದ್ದರೆ...

ತುಮಕೂರು | ರೇಡಿಯೋದಿಂದ ಕ್ಯಾಮೆರಾವರೆಗೆ : ವಿದ್ಯಾರ್ಥಿಗಳ ಕೈಗೆ ಬಂದ ಮಾಧ್ಯಮದ ನೈಜ ಅನುಭವ

ಮೂರು ದಿನಗಳ ಮಾಧ್ಯಮ ಕಾರ್ಯಾಗಾರದಲ್ಲಿ ಸಂದರ್ಶನ, ರೇಡಿಯೋ ಕಾರ್ಯಕ್ರಮ ನಿರ್ಮಾಣ ಹಾಗೂ...

ತುಮಕೂರು | ಜಿಪಂ – ತಾಪಂ ಮೀಸಲು ಅಂತಿಮ: ಮಹಿಳೆಯರಿಗೆ ಸಿಂಹಪಾಲು

ತುಮಕೂರು ಜಿಲ್ಲೆಯ ಗ್ರಾಮೀಣ ರಾಜಕೀಯದ ಮುಂದಿನ ಚಿತ್ರಣಕ್ಕೆ ಮುನ್ನುಡಿ ಬರೆಯುವಂತೆ ಜಿಲ್ಲಾ...