“ಕಳೆದ 40 ವರ್ಷಗಳಿಂದ ಮಾದಿಗ ಸಮುದಾಯವು ಸಾಮಾಜಿಕ ಸಮಾನತೆಗಾಗಿ ನಡೆಸುತ್ತಿರುವ ಒಳ ಮೀಸಲಾತಿ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸುಪ್ರೀಂ ಕೋರ್ಟ್ ಆದೇಶವಿದ್ದರೂ ಜಾರಿಗೆ ಸಬೂಬು ನೀಡುತ್ತಿರುವುದು ಖಂಡನೀಯ,” ಎಂದು ಕರ್ನಾಟಕ ರಾಜ್ಯ ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಹೆಚ್. ಹುಚ್ಚಯ್ಯ ಕಿಡಿಕಾರಿದರು
ತುಮಕೂರು ನಗರದ ಕುಣಿಗಲ್ ರಸ್ತೆಯ ನಾಗಾರ್ಜುನ ಬ್ಯಾಂಕ್ ಆವರಣದಲ್ಲಿ ನಡೆದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಬರುವ ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಗಳ ನಂತರ ಸರ್ಕಾರ ಒಳ ಮೀಸಲಾತಿ ಜಾರಿ ಮಾಡದಿದ್ದರೆ, ರಾಜ್ಯಾದ್ಯಂತ ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ಹುಚ್ಚಯ್ಯ ಎಚ್ಚರಿಸಿದರು.
ಸರ್ಕಾರಿ ಕಾರ್ಯಕ್ರಮ ಬಹಿಷ್ಕಾರ: ಸರ್ಕಾರದ ಧೋರಣೆಯನ್ನು ಪ್ರತಿಭಟಿಸಿ ಮಾದಿಗ ಸಮುದಾಯದ ಮುಖಂಡರು ಅಧಿಕೃತ ಸರ್ಕಾರಿ ಜಯಂತಿ ಕಾರ್ಯಕ್ರಮಗಳನ್ನು ಬಹಿಷ್ಕರಿಸಿ, ಜಿಲ್ಲೆಯ ವಿವಿಧೆಡೆ ಪ್ರತ್ಯೇಕವಾಗಿ ಬಾಬೂಜಿ ಜಯಂತಿ ಆಚರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿಪರ ಚಿಂತಕ ಕೆ ದೊರೈರಾಜು ಮಾತನಾಡಿ ನಮ್ಮ ಜನಾಂಗ ಇಕ್ಕಟ್ಟು ಬಿಕಟ್ಟು ಎದುರಿಸುತ್ತುದ್ದು ಅತಂತ್ರ ಸ್ಥಿತಿಯಲ್ಲಿದೆ ಇಂದು ಆಚರಣೆಗಳು ಆರಾಧನೆಯಾಗಿವೆ ಈ ನಿಟ್ಟಿ ಬಾಬು ಜಗ ಜೀವನ್‌ರಾಂ ಆಚರಣೆ ಸಂದರ್ಭದಲ್ಲಿ ಅವರ ತತ್ವಾದರ್ಶ ಪಾಲನೆ ಮಾಡಬೇಕು ಅದು ಹಾಗುತ್ತಿಲ್ಲ ನಾವು ಭಿನ್ನವಾಗಿ ಯೋಚಿಸಬೇಕಿದೆ. ಜಗತ್ತಿನಲ್ಲಿ ಯುದ್ದ ನಡೆತ್ತಿದೆ ಅದರ ನೋವು ಎಲ್ಲಾ ಸಮಾಜದ ಜನರಿಗೆ ನೋವು ಉಂಟಾಗಿದೆ ಇದು ಪ್ರಕೃತಿಗೂ ತಟ್ಟಿದೆ ಸಮಾಜಿಕ ಜಾತಿ ಸಂಘರ್ಷವನ್ನು ನಾವು ಅನುಭವಿಸುತ್ತಿದ್ದೇವೆ ಸಾಮಾಜಿಕ ಚಿಂತಕ ಜಗ ಜೀವರಾಂ ವಿಚಾರ ವಿಮರ್ಶೆ ವಿನಿಮಯ ಮಾಡಬೇಕಿದೆ ತತ್ವಾದರ್ಶ ಪಾಲನೆಯಾಗಬೇಕಿದೆ. ಜಯಂತಿ ಆಚರಣೆ ವೇಳೆ ಜಗ ಜೀವನ ರಾಂ ಅವರ ಸಾಹಿತ್ಯ ತಿಳಿಯಬೇಕು ಅವರ ಬಗ್ಗೆ ಅಧ್ಯಯನ ನಡೆಸಬೇಕಿದೆ ಎಂದು ತಿಳಿಸಿದರು.
ಡೆಮಾಕ್ರಾಟಿಕ್ ಉದ್ದೇಶ ಜಾರಿಯಾಗುತ್ತಿಲ್ಲ ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣ ಮಾಡಲು ಮಂದಾಗಬೇಕಿದೆ…ಚಳವಳಿ ರಾಜಕಾರಣಿಗಳು ಜಗಜೀವನ್ ರಾಂ ಅವರ ಮಾದರಿ ಅನುಸರಿಸಬೇಕಿದೆ ದ್ವೇಷ ಉಗುಳುವ ಕಾಲದಲ್ಲಿ ಜಾತಿ ಬೀಜ ಬೀತ್ತುವ ಸಮಯದಲ್ಲಿ ನಾವುಗಳು ಇದ್ದೆವೆ ಎಂದರು.
ಪರಿಸರ ಹೋರಾಟಗಾರ.ಯತಿರಾಜ್ ಮಾತನಾಡಿ ದೇಶ ದೊಡ್ಡದು ಎಂದು ಸರ್ಕಾರ ಹೇಳುತ್ತಿದೆ ಜಾಗತಿಕ ಕಾರಣದಿಂದ ದೇಶ ಹಾಳಾಗಿದೆ ಸೋಷಿಯಲ್ ಮೀಡಿಯಾಗಳಿಂದ ಸುಳ್ಳು ಸುದ್ದಿ ಮೂಲಕ ತಪ್ಪು ಮಾಹಿತಿ ರವಾನೆಯಾಗುತ್ತಿದೆ ಇಂದು ಯುದ್ದ ಸಂಘರ್ಷ ಗಳು ನಡೆಯುತ್ತಿವೆ ಯುವ ಸಮುದಾಯದ ಒಂದಾಗಿದೆ ರಾಜಕೀಯ ಪಕ್ಷಗಳ ಹಿತಾಸಕ್ತಿ ಕಿತ್ತೊಗೆಯಬೇಕು ಎಂದರು.
ಕಮ್ಯುನಿಸ್ಟ್ ಪಕ್ಷಗಳು ಸಮಾಜ ಮುನ್ನಡೆಸಲು ವಿಫಲವಾಗಿವೆ ಬಾಬು ಜಗ ಜೀವನ್‌ರಾಂ ಅವರು ಅವರ ಆಡಳಿತದ ವೈಖರಿ ಉದ್ದೇಶ ನೋಡಬೇಕಿದೆ ಸಮ ಸಮಾಜದ ಅಭಿವೃದ್ಧಿ ಮಾಡುವ ಗಂಭೀರವಾದ ಚಿಂತನೆ ಬಾಬೂಜಿ ತತ್ವಾದರ್ಶ ಪಾಲನೆ ಹೋರಾಟದಿಂದ ಯಾಗಬೇಕಿದೆ ಎಂದರು.
ಪಾವಗಡ ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ. ಮಾತನಾಡಿ ಅಸ್ಪಷ್ಯರಲ್ಲಿ ಅಂಬೇಡ್ಕರ್ ಜಗಜೀವನ ರಾಂ ಅಚರಣೆ ಒಂದೆ ತಿಂಗಳ ಜಯಂತಿ ಗಳಿದ್ದರೂ ಅಂಬೇಡ್ಕರ್ ಜಯಂತಿ ತರ ಬಾಬೂಜಿ ಜಯಂತಿ ಇರಲ್ಲ ಅಂಬೇಡ್ಕರ್ ಅವರಂತೆ ನಮ್ಮ ಸಮುದಾಯದ ಇನ್ನೊಂದು ಆಸ್ಮೀತೆ ಬಾಬೂಜಿ ಅವರ ರಾಜಕೀಯ ಇತಿಹಾಸ ದಲ್ಲಿ ಅನ್ಯಾಯದ ವಿರ್ರುದ್ದ ಹೋರಾಟ ಮಾಡಿಕೊಂಡು ಬಂದು ಹಸಿರು ಕ್ರಾಂತಿ ಮಾಡಿದವರು ಇಡೀ ದೇಶದಲ್ಲಿ ಎಲ್ಲರೂ ಸಮವಾಗಿ ಬಾಳಬೇಕೆಂದು ಕನಸು ಕಂಡವರು ಎಂದು ತಿಳಿಸಿದರು.
ಹಿರಿಯ ಮುಖಂಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆಂಚ ಮಾರಾಯ್ಯ ಅವರು ಮಾತನಾಡಿ ಇಂದು ಸಾಂಕೇತಿಕವಾಗಿ ಬಾಬು ಜಗಜೀವನ್ ರಾಮ್ ಸರ್ಕಾರಿ ಕಾರ್ಯಕ್ರಮವನ್ನು ಒಳ ಮೀಸಲಾತಿ ಜಾರಿ ಮಾಡಲಿಲ್ಲವೆಂದು ಬಹಿಷ್ಕಾರ ಮಾಡಿದ್ದೇವೆ ಆದರೆ ನಮ್ಮ ಕುಟುಂಬಸ್ಥರು ಸಮುದಾಯ ಎಲ್ಲಾ ಸೇರಿ ಬಾಬೂಜಿ ಅವರ ಜಯಂತಿ ಆಚರಣೆಯನ್ನು ವಿಜೃಂಭಣೆಯಿAದ ಮಾಡುತ್ತಿದ್ದೇವೆ ಸರ್ಕಾರ ಮತ್ತು ಜಿಲ್ಲಾ ಮಂತ್ರಿಗಳು ಮೀಸಲಾತಿ ಜಾರಿ ಮಾಡಲು ಮೀನ ಮೇಷ ಎಣಿಸುತ್ತಿದ್ದಾರೆ ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಜಿಲ್ಲಾ ಮಂತ್ರಿಗಳು ಜಾಣ್ಮೆ ನಡೆ ಇಡುತ್ತಿದ್ದಾರೆ ಈ ಗಾಗಿ ಎಲ್ಲಾ ಮುಖಂಡರು ಸಮುದಾಯದವರುಒಗ್ಗೊಡ ಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಹನುಮಯ್ಯ, ಒಳ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ವೈಕೆ ಬಾಲಕೃಷ್ಣ, ಡಿಟಿ ವೆಂಕಟೇಶ್, ಹೆಚ್ ಆರ್ ಹನುಮಂತರಾಯಪ್ಪ, ಪಾವಗಡ ಶ್ರೀರಾಮ್, ಕೊಟ್ಟ ಶಂಕರ್. ಕೊಡಿಯಲ್ ಮಹಾದೇವ, ಯೋಗೀಶ್, ಟಿಸಿ ರಾಮಯ್ಯ ಸೇರಿದಂತೆ ಮಾದಿಗ ಮಹಾಸಬಾದ ವಿವಿಧ ತಾಲ್ಲೂಕ್ ಅದ್ಯಕ್ಷರು ಮಾದಿಗ ಸಮುದಾಯದ ವಿವಿಧ ಪ್ರಶಸ್ತಿ ಪುರಸ್ಕೃತರು ಇತರರು ಉಪಸ್ಥಿತರಿದ್ದರು.




