ಕಥನ ಜಗತ್ತು ಮನುಷ್ಯನನ್ನು ಜೀವಂತವಾಗಿಡುತ್ತದೆ. ಕಥೆಗಳಲ್ಲಿ ನಾವು ನಮ್ಮ ನೋವು, ನಲಿವು, ಹೋರಾಟ ಮತ್ತು ಅನುಭವಗಳನ್ನು ಕಾಣುತ್ತೇವೆ. ಕಥೆಯ ಭಾಷೆಗೆ ಸೌಹಾರ್ದತೆಯ ಶಕ್ತಿ ಇದ್ದು, ಒಂದು ಒಳ್ಳೆಯ ಕಥೆ ಮನುಷ್ಯರ ನಡುವಿನ ಗೋಡೆಗಳನ್ನು ಒಡೆದು, ಪರಸ್ಪರ ಅರ್ಥೆÊಸಿಕೊಳ್ಳುವ ಮನೋಭಾವ ಬೆಳೆಸುತ್ತದೆ ಎಂದು ಹಿರಿಯ ಪತ್ರಕರ್ತ ಹಾಗೂ ಲೇಖಕರಾದ ಚ. ಹ. ರಘುನಾಥ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಡಾ. ಡಿ. ವಿ. ಜಿ. ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಹಾಗೂ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಜೂ. 23 ಮಂಗಳವಾರದAದು ಆಯೋಜಿಸಿದ್ದ ಕನ್ನಡ ಕಥಿಸಿದ ಸೌಹಾರ್ದ ನೆಲೆಗಳು ಎಂಬ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ರೊಟ್ಟಿಯ ಕಥೆಯ ಮೂಲಕವೂ ಮನುಷ್ಯರ ಬದುಕಿನ ವರ್ತಮಾನಗಳನ್ನು ಅರಿಯಬಹುದು ಎಂದು ಲಂಕೇಶ್ ಅವರು ತೋರಿಸಿಕೊಟ್ಟಿದ್ದಾರೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಮೋಹನ ಹೆಚ್. ಎಸ್. ಮಾತನಾಡಿ ಭಾರತವು ಬಹುತ್ವ ಧರ್ಮಗಳ ಸಂಗಮವಾದ ರಾಷ್ಟç. ವೈವಿಧ್ಯತೆಯಲ್ಲಿರುವ ಏಕತೆಯನ್ನು ಅರಿತು, ನಮ್ಮ ಬದುಕಿನ ದಾರಿಗಳನ್ನು ಮರೆಯದೆ ಉತ್ತಮ ಸಮಾಜ ನಿರ್ಮಾಣದ ಜ್ಞಾನ ಬೆಳೆಸಿಕೊಂಡಾಗ ಮಾತ್ರ ಉಜ್ವಲ ಭವಿಷ್ಯ ಸಾಧ್ಯ. ಇಂತಹ ಭವಿಷ್ಯವನ್ನು ಕಟ್ಟಿಕೊಳ್ಳಲು ಕನ್ನಡದ ಕಥೆಗಳು ಸಾಕ್ಷಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ಮನುಷ್ಯನ ಬದುಕು ಕೇವಲ ಘಟನೆಗಳ ಸರಮಾಲೆಯಲ್ಲ, ಅದೊಂದು ಕಥೆ. ಪ್ರತಿಯೊಬ್ಬರ ಅನುಭವ, ಕನಸು, ಸೋಲು-ಗೆಲುವುಗಳು ಸೇರಿ ಅವರದೇ ಆದ ಕಥನವನ್ನು ರೂಪಿಸುತ್ತವೆ. ಕಥೆಗಳು ನಮ್ಮನ್ನು ನಮ್ಮೊಂದಿಗೆ ಮತ್ತು ಇತರರೊಂದಿಗೆ ಜೋಡಿಸುತ್ತವೆ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಸಂಚಾಲಕರಾದ ಸುಮಾ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ದಿನಗಳಲ್ಲಿ ನಾವು ರೇಷ್ಮೆ ಹುಳುವಿನಂತೆ ನಮ್ಮದೇ ಸೀಮಿತ ವಲಯಗಳಲ್ಲಿ ಬದುಕುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ‘ಸೌಹಾರ್ದ ನೆಲೆಗಳು’ ಸರಣಿಯು ಮಾನವೀಯ ಮೌಲ್ಯಗಳನ್ನು ಬೆಳೆಸುವ ಮಹತ್ವದ ಕಾರ್ಯ ಮಾಡುತ್ತಿದೆ. ಸರಳ ಮತ್ತು ಚಿಕ್ಕ ಪುಸ್ತಕಗಳ ಮೂಲಕ ಯುವಜನರಲ್ಲಿ ಚಿಂತನ ಶಕ್ತಿ, ಮಾನವೀಯತೆ, ಸಹಬಾಳ್ವೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಡಿ. ವಿ. ಜಿ. ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಪ್ರೊ. ಅಣ್ಣಮ್ಮ ಮಾತನಾಡಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಸೇರಿದಂತೆ ಕನ್ನಡ ಸಾಹಿತ್ಯದ ಎಲ್ಲಾ ಕಾಲಘಟ್ಟಗಳು ಕಥಾ ಜಗತ್ತನ್ನು ಸಮೃದ್ಧಗೊಳಿಸಿವೆ. ಕಥೆಗಳು ಕೇವಲ ಮನರಂಜನೆಯ ಸಾಧನಗಳಲ್ಲ. ಅವು ಮಾನವೀಯತೆ, ಕರುಣೆ ಮತ್ತು ಸಹಾನುಭೂತಿಯನ್ನು ಬೆಳೆಸುವ ಶಕ್ತಿಯನ್ನು ಹೊಂದಿವೆ. ಆದ್ದರಿಂದ ಕಥೆಗಳು ಜೀವನದ ಪ್ರತಿಬಿಂಬವೂ ಹೌದು, ಸಮಾಜದ ಕನ್ನಡಿಯೂ ಹೌದು ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್ ಕರಿಯಪ್ಪ ಎನ್., ಸರ್ವ ಸದಸ್ಯರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಪ್ರೊ. ನಾಗಭೂಷಣ ಬಗ್ಗನಡು ಉಪಸ್ಥಿತರಿದ್ದರು.




