ಉಡುಪಿ | ಗಾಂಧಿಯ ಚಿಂತನೆಗಳನ್ನು ಇಂದಿನ ಕಾಲಕ್ಕೆ ಅನ್ವಯಿಸಿಕೊಳ್ಳಬೇಕಾಗಿದೆ – ಡಾ. ಸುಧಾಕರ ದೇವಾಡಿಗ

Date:

ಗಾಂಧಿಯ ಚಿಂತನೆಗಳನ್ನು ಇಂದಿನ ಕಾಲಕ್ಕೆ ಅನ್ವಯಿಸಿಕೊಳ್ಳಬೇಕು ಅವರನ್ನು ಕಸಿಗೊಳಿಸುವ ಪ್ರಯತ್ನವನ್ನು ಮಾಡಬೇಕು. ಹರಿಯುವ ನದಿಯಂತೆ ಗಾಂಧಿಯ ವ್ಯಕ್ತಿತ್ವ, ಬದುಕನ್ನು ಇಡಿಯಾಗಿ ನೋಡಿದರೆ ಮಾತ್ರ ಗಾಂಧಿ ಸರಿಯಾಗಿ ಅರ್ಥವಾಗಲು ಸಾಧ್ಯ ಎಂದು ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ.ಸುಧಾಕರ ದೇವಾಡಿಗ ಹೇಳಿದ್ದಾರೆ.

- Advertisement -

ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ-ಸಾಹಿತ್ಯ ವಿಚಾರ ವೇದಿಕೆ ಉಡುಪಿ ಮತ್ತು ಕಾರ್ಕಳದ ಶ್ರೀಭುವನೇಂದ್ರ ಕಾಲೇಜಿನ ಸಾಹಿತ್ಯ ಸಂಘದ ಸಹಯೋಗದೊಂದಿಗೆ ಶನಿವಾರ ಕಾಲೇಜಿನ ಸಭಾಂಗಣದಲ್ಲಿ `ಕನ್ನಡ ಕಂಡ ಮನಸು- ಗಾಂಧಿ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ರೈತ ಸಮುದಾಯದ ಪರವಾದ ಹೋರಾಟದಿಂದ ಪ್ರಾರಂಭಗೊಂಡು, ಕರ ನಿರಾಕರಣೆಯ ಚಳುವಳಿ ಮುಂತಾದ ಸಂದರ್ಭಗಳಲ್ಲಿ ಯಾವುದನ್ನೂ ಲೆಕ್ಕಿಸದೆ ಅವರು ಸಾಗಿದರು. ಹೀಗೆ ಗಾಂಧಿ ಇಂತಹ ಚಳುವಳಿಗಳ ನೇತಾರನಾಗಿ ಮೊದಲ್ಗೊಂಡು ಅನೇಕಾನೇಕ ಬದಲಾವಣೆಗಳಿಗೆ ಕಾರಣರಾಗಿ ಅವರ ಅಸ್ತಿತ್ವ ಇನ್ನೂ ಅಚ್ಛಳಿಯದೆ ನಿಂತಿವೆ ಎಂದರು.

WhatsApp Image 2025 10 18 at 9.57.53 AM

ಅಹಿಂಸೆ ಮತ್ತು ಸತ್ಯಾಗ್ರಹವನ್ನು ಒಂದು ವೃತದಂತೆ ಪಾಲಿಸಿದವರು ಗಾಂಧಿ. ಹಿಂಸೆ ಮತ್ತು ಯುದ್ಧಗಳಿಂದ ಮುಕ್ತತೆಯನ್ನು ಪಡೆಯಬೇಕೆಂಬ ಇಚ್ಛೆಗಾಗಿ ಹಂಬಲಿಸಿದವರು. ಅವೆರಡೂ ಇವತ್ತಿಗೂ ಪತ್ರ ಬಲ ಅಸ್ತ್ರಗಳಾಗಿ ನಮ್ಮ ಮುಂದೆ ನಿಂತಿದೆ. ಇದೇ ದಾರಿಯಲ್ಲಿ ನಾವೂ ನಡೆಯಬೇಕು. ಇಲ್ಲದೆ ಹೋದರೆ ನಾವು ಮನುಷ್ಯರಾಗಿ ಉಳಿಯುವುದಿಲ್ಲ. ಮನುಷ್ಯನನ್ನು ಯಂತ್ರಗಳು ದಾಸ್ಯಕ್ಕೆ ಗುರಿಪಡಿಸುತ್ತವೆ. ಅವನ ಜೀವ ಚೈತನ್ಯವನ್ನು ಅವು ಕಸಿಯುವಂತೆ ಮಾಡುತ್ತವೆ ಅನ್ನುವುದಕ್ಕೆ ಗಾಂಧಿ ಯಂತ್ರ ವಿರೋಧಿ ಯಾಗಿದ್ದರೇ ಹೊರತು ಬೇರೇನೂ ಅಲ್ಲ. ಇವತ್ತಿನ ಕಾಲಮಾನಕ್ಕೆ ಅವರ ಚಂತನೆಗಳು ನಿಜಕ್ಕೂ ದಾರ್ಶನಿಕ ಸತ್ಯವಾಗಿದೆ ಎಂದರು.

ಅಕಾಡೆಮಿ ಸದಸ್ಯ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂಧಿಯ ಮನುಷತ್ವವನ್ನು ಸಮಾಜ ಇಂದಿಗೂ ಇಟ್ಟುಕೊಳ್ಳ ಬೇಕಾದ ಅಗತ್ಯವಿದೆ. ಗಾಂಧಿಯಂತಹ ವ್ಯಕ್ತಿತ್ವದ ಮನುಷ್ಯ ಯಾವ ದೇಶದಲ್ಲಿಯೂ ಇರಲಾದರು. ಮಹಾತ್ಮ ಗಾಂಧಿಗೆ ಸತ್ಯವೆಂಬುದು ಸಿಕ್ಕಿರುವ ಸಂಗತಿಯಾಗಿರಲಿಲ್ಲ. ಅದು ಹುಡುಕುವ ಬಗೆಯಾಗಿತ್ತು. ಅವರೊಬ್ಬ ಮಾಂತ್ರಿಕ ಶಕ್ತಿಯ ಸಂಕೇತ. ತಾಯ್ತನದ ಪ್ರತಿನಿಧಿ. ಅವರ ಸ್ವದೇಶಿ ಕಲ್ಪನೆಯನ್ನು ನಾವು ಅರಿತುಕೊಳ್ಳಬೇಕು. ಅನ್ಯರನ್ನು ಅವಲಂಬಿಸದ ಸ್ವಾತಂತ್ರö್ಯವನ್ನು ಚರಕದಿಂದ ಕಂಡುಕೊಡವರು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಎ.ಕೋಟ್ಯಾನ್ ಮಾತನಾಡಿ, ಕಾಲೋಚಿತ ಮತ್ತು ಕಾಲಾತೀತ ಚಿಂತನೆಗಳು ಗಾಂಧಿಯವರದ್ದು. ಈ ಕಾಲದವರೆಗೂ ಕೂಡಾ ಗಾಂಧೀಜಿಯವರ ಎಲ್ಲ ಆದರ್ಶಗಳು ಜೀವಂತವಾಗಿವೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕಿದೆ. ದಾರ್ಶನಿಕರ ಬದುಕಿನ ಕಾಲ ಮತ್ತು ಅವರ ಮರಣದ ಬಳಿಕ ಅವರ ಚಿಂತನೆಗಳು ದ್ವಿಗುಣಗೊಳ್ಳುತ್ತದೆ ಎನ್ನುವುದಕ್ಕೆ ಅವರು ಸ್ಪಷ್ಟ ಉದಾಹರಣೆಯಾಗಿದೆ ಎಂದರು.

ಗಾಂಧಿ ಸತ್ಯ ಮತ್ತು ಅಹಿಂಸೆಯನ್ನು ಬಿಡದೆ ಅದನ್ನೇ ಪಾಲಿಸಿದವರು. ಕೇವಲ ವಸ್ತ್ರ ಸಂಸ್ಕೃತಿಯಿಂದ ಮಾತ್ರವೇ ಗಾಂಧಿ ತತ್ವವನ್ನು ಅರಿಯ ಬೇಕಾಗಿಲ್ಲ. ಒಳ್ಳೆಯ ವಸ್ತ್ರಸಂಹಿತೆಯನ್ನು ಹೊಂದಿದವರೂ ಗಾಂಧಿಯ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುತ್ತಾರೆ. ಮೌಢ್ಯಗಳು ಮತ್ತು ಚಿಂತನಾ ಕ್ರಮಗಳು ನಮ್ಮಲ್ಲಿ ಬದಲಾಗದೆ ಇದ್ದರೆ ಸಮಾಜ ಮುಂದು ವರಿಯುಲು ಅಸಾಧ್ಯ. ಎಲ್ಲ ದಾರ್ಶನಿಕರ ದಾರಿಗಳು, ಆದ್ಯತೆಗಳು ಬೇರೆ ಇದ್ದರೂ ಅವರೆಲ್ಲರ ಆಶಯ ಮತ್ತು ಗುರಿ ಸಮಾಜಮುಖಿಯಾಗಿತ್ತು ಅನ್ನುವುದನ್ನು ನಾವು ನೆನಪಿಟ್ಟುಕೊಳ್ಳಬೇಕು ಎಂದು ಅವರು ತಿಳಿಸಿದರು.

ಶ್ರೀಭುವನೇಂದ್ರ ರೆಸಿಡೆನ್ಷಿಯಲ್ ಸ್ಕೂಲ್‌ನ ಸಂಚಾಲಕ ವೆಂಕಟೇಶ ಪ್ರಭು, ಗಾಂಧಿಯ ಅಸ್ತಿತ್ವದ ಸಂಕೇತವಾದ ಚರಕವನ್ನು ಸುತ್ತಿ ನೂಲನ್ನು ತೆಗೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಕೋರಿದರು. ವೇದಿಕೆಯಲ್ಲಿ ಭುವನೇಂದ್ರ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯ ಎರ್ಮಾಳ್ ಮೋಹನ ಶೆಣೈ, ಸಾಹಿತ್ಯ ಸಂಘದ ಪ್ರತಿನಿಧಿಗಳಾದ ಹಿತ ಹಾಗೂ ಶ್ರೀನಿಧಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕಿ ಹಾಗೂ ವಿಭಾಗ ಮುಖ್ಯಸ್ಥೆ ಪ್ರೊ. ವನಿತಾ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ವಿಖ್ಯಾತ್ ಕುಲಾಲ್ ಗಾಂಧಿ ಪ್ರಿಯ ಮಂತ್ರ ಪಠಿಸಿದರು. ರಕ್ಷಿತಾ ಮತ್ತು ಬಳಗ ಪ್ರಾರ್ಥಿಸಿದರು. ಚಕೋರ ಉಡುಪಿ ಜಿಲ್ಲಾ ಸಂಚಾಲಕ, ಕನ್ನಡ ಉಪನ್ಯಾಸಕ ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸುಲೋಚನಾ ಪಚ್ಚಿನಡ್ಕ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ವಂದೇ ಭಾರತ್ ಸ್ಲೀಪರ್ ರೈಲು ಯಾದಗಿರಿಯಲ್ಲಿ ನಿಲುಗಡೆಗೆ ಒತ್ತಾಯಿಸಿ ಮನವಿ

ಬೆಂಗಳೂರು-ಮುಂಬೈ ನಡುವೆ ಸಂಚರಿಸುವ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್‌ಗೆ ಯಾದಗಿರಿ ರೈಲು...

ಹಾವೇರಿ | ಬರಪರಿಹಾರ ಹೆಚ್ಚಳ ಮಾಡುವಂತೆ ಆಗ್ರಹಿಸಿ ರೈತ ಸಂಘ ಸರ್ಕಾರಕ್ಕೆ ಹಕ್ಕೊತ್ತಾಯ

"ಸತತ ಬರಗಾಲ ಹಾಗೂ ಅನಾವೃಷ್ಟಿಯಿಂದ ಕಷ್ಟದಲ್ಲಿರುವ ರೈತರಿಗೆ ಸರ್ಕಾರ ನೀಡುತ್ತಿರುವ ಬಟವಾಡೆ...

ಹಾವೇರಿ | ಪ್ರಜಾಪ್ರಭುತ್ವ ಉಳಿಸಿ, ಮತ ಬಚಾವೋ, ದೇಶ ಬಚಾವೋ : ಕಾಂಗ್ರೇಸ್ ಪಕ್ಷದಿಂದ ಪ್ರತಿಭಟನಾ ಸಮಾವೇಶ

ಹಾವೇರಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಮೈಲಾರಪ್ಪ...

ಭೋವಿ ಸಮುದಾಯದ ಅರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಲು ಮುತುವರ್ಜಿ ವಹಿಸಿ : ರಾಮಪ್ಪ ಎಂ

ಭೋವಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ...