ಉಡುಪಿ | ಯುದ್ಧ ನಿಲ್ಲಲಿ, ಶಾಂತಿ ನೆಲೆಸಲಿ, ಮಾನವೀಯ ಮೌಲ್ಯಗಳು ಉಳಿಯಲಿ : ರಾಮಾಂಜಿ ನಮ್ಮ ಭೂಮಿ

Date:

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧಗಳ ದಾಹ ಇಂದು ಕೇವಲ ಆ ಪ್ರದೇಶಗಳಿಗೆ ಸೀಮಿತವಾಗಿಲ್ಲ, ಅದರ ಪರಿಣಾಮ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ಆರ್ಥಿಕ ಅಸ್ಥಿರತೆ, ಪರಿಸರ ಹಾನಿ, ಮಾನವೀಯ ಮೌಲ್ಯಗಳ ಕುಸಿತ. ಈ ಎಲ್ಲವುಗಳು ಯುದ್ಧದ ನೆರಳು ಹೇಗೆ ವ್ಯಾಪಕವಾಗಿದೆ ಎಂಬುದನ್ನು ತೋರಿಸುತ್ತವೆ. ಒಂದೆಡೆ ಶಾಂತಿಯ ಕೋರಿಕೆಗಳು ಹೆಚ್ಚಾಗುತ್ತಿದ್ದರೂ, ಇನ್ನೊಂದೆಡೆ ಹಿಂಸಾಚಾರ ನಿರಂತರವಾಗಿ ಮುಂದುವರಿಯುತ್ತಿರುವುದು ಮಾನವ ಸಮಾಜದ ದುರಂತದ ಚಿತ್ರಣವಾಗಿದೆ.

- Advertisement -
1010419165

ಈ ಹಿನ್ನೆಲೆಯಲ್ಲೇ ಉಡುಪಿಯಲ್ಲಿ ಒಬ್ಬ ಯುವಕ ತನ್ನದೇ ರೀತಿಯಲ್ಲಿ ಮೌನದ ಮೂಲಕ ಪ್ರಬಲ ಸಂದೇಶ ನೀಡಲು ಮುಂದಾಗಿದ್ದಾನೆ. ಕುಂದಾಪುರದ ಅಂತಾರಾಷ್ಟ್ರೀಯ ದುಡಿಯುವ ಮಕ್ಕಳ ಸಂಸ್ಥೆ ‘ನಮ್ಮ ಭೂಮಿ’ಯ ಪ್ರತಿನಿಧಿ, ಮಕ್ಕಳ ಹಕ್ಕುಗಳ ಹೋರಾಟಗಾರ, ರಂಗಭೂಮಿ ಕಲಾವಿದ ಹಾಗೂ ಕನ್ನಡ ಉಪನ್ಯಾಸಕರಾದ ರಾಮಾಂಜಿ ಕಳೆದ ಒಂದು ತಿಂಗಳಿನಿಂದ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಸಂಬಂಧಿ ಘಟನೆಗಳನ್ನು ಗಮನಿಸಿ ಮನನೊಂದು, ಮಾನವ ಜನಾಂಗದ ಮೇಲೆ ನಡೆಯುತ್ತಿರುವ ಹಿಂಸೆ ಹಾಗೂ ಪ್ರಕೃತಿಯ ಮೇಲೆ ಆಗುತ್ತಿರುವ ದಬ್ಬಾಳಿಕೆಗೆ ವಿರೋಧವಾಗಿ ನೈತಿಕ ಪ್ರತಿಭಟನೆ ನಡೆಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...
1010419168

ಶನಿವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರಿನ ಗಾಂಧಿ ಪ್ರತಿಮೆ ಸಮೀಪ ಅವರು ಮೌನ ಧರಣಿ ಆರಂಭಿಸಿದ್ದು, ಇದು ಮಹಾತ್ಮ ಗಾಂಧಿಯ ಅಹಿಂಸಾ ತತ್ವದಿಂದ ಪ್ರೇರಿತವಾಗಿದೆ. ಯಾವುದೇ ಘೋಷಣೆಗಳಿಲ್ಲದೆ, ಮಾತಿಲ್ಲದೆ, ಕೇವಲ ಮೌನದ ಮೂಲಕವೇ ಯುದ್ಧ ವಿರೋಧದ ಸಂದೇಶ ಸಾರುತ್ತಿರುವುದು ಈ ಪ್ರತಿಭಟನೆಯ ವಿಶೇಷತೆಯಾಗಿದೆ.

ಈ ಕುರಿತು ಈದಿನ.ಕಾಮ್‌ ಜೊತೆ ಮಾತನಾಡಿದ ಮಕ್ಕಳ ಹಕ್ಕುಗಳ ಹೋರಾಟಗಾರ ಹಾಗೂ ಉಪನ್ಯಾಸಕ ರಾಮಾಂಜಿ ನಮ್ಮ ಭೂಮಿ, ಜಗತ್ತಿನಲ್ಲಿ ಈಗಾಗಲೇ ಯುದ್ಧಗಳು ನಡೆಯುತ್ತಿದ್ದು, ಅದರ ಪರಿಣಾಮವಾಗಿ ಜನರ ಜೀವನ ಅಸ್ಥವ್ಯಸ್ಥವಾಗಿದೆ. ಈ ಯುದ್ಧಗಳು ಪ್ರಕೃತಿಯ ಮೇಲೂ ಗಂಭೀರ ಪರಿಣಾಮ ಬೀರುತ್ತಿವೆ. ಮನುಷ್ಯನು ಈಗಾಗಲೇ ಪ್ರಕೃತಿಯನ್ನು ಹಾಳು ಮಾಡಿದ್ದಾನೆ, ಇನ್ನೂ ಅದನ್ನು ಹಾನಿಗೊಳಿಸುತ್ತಲೇ ಇದ್ದಾನೆ. ಆದರೂ ಪ್ರಕೃತಿ ತನ್ನ ಜೀವಂತಿಕೆಯಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿದೆ. ಆದರೆ ಮನುಷ್ಯನ ಕ್ರಿಯೆಗಳ ಪರಿಣಾಮವಾಗಿ, ಒಂದು ಕಡೆ ಬಾಂಬ್‌ ಸ್ಫೋಟಗಳ ಪರಿಣಾಮ ಕಂಡುಬರುತ್ತಿದ್ದರೆ, ಇನ್ನೊಂದು ಕಡೆ ಅದರ ವಿರುದ್ಧವಾದ ದುಷ್ಪರಿಣಾಮಗಳನ್ನು ನಾವು ಅನುಭವಿಸುತ್ತಿದ್ದೇವೆ,” ಎಂದು ಹೇಳಿದರು.

“ಹೀಗಾಗಿ, ನಮ್ಮ ಸಮಾಜದಲ್ಲಿ ಮಾನವೀಯ ಮೌಲ್ಯಗಳು ನೆಲೆಗೊಳ್ಳಬೇಕು. ಯುದ್ಧಗಳು ಕೊನೆಗೊಳ್ಳಬೇಕು, ಶಾಂತಿ ನೆಲೆಸಬೇಕು. ಮುಖ್ಯವಾಗಿ ‘ನಾವು ಬದುಕಬೇಕು ಮತ್ತು ಇತರರು ಬದುಕಬೇಕು’ ಎನ್ನುವ ತತ್ವವನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಈ ಹಿನ್ನೆಲೆಯಲ್ಲಿಯೇ ಉಡುಪಿಯಲ್ಲಿ ಈ ಅಭಿಯಾನವನ್ನು ಹಮ್ಮಿಕೊಂಡಿದ್ದೇನೆ. ಇಂದು ಇದನ್ನು ಪ್ರಾರಂಭಿಸಿದ್ದು, ರಾಜ್ಯ ಮಟ್ಟದ ಅಭಿಯಾನವಾಗಿ ಮುಂದುವರಿಸುವ ಉದ್ದೇಶ ಹೊಂದಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಜಿಲ್ಲೆಗೆ ಭೇಟಿ ನೀಡಿ ಪ್ರಕೃತಿ, ಯುದ್ಧ ಮತ್ತು ಅದರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ,” ಎಂದು ತಿಳಿಸಿದರು. ಇದೇ ವೇಳೆ, “ಇಂದಿನ ಕಾಲದಲ್ಲಿ ಮಾನವೀಯ ಸಂಬಂಧಗಳು ನಿಧಾನವಾಗಿ ನಾಶವಾಗುತ್ತಿವೆ,” ಎಂದು ಅವರು ಬೇಸರ ವ್ಯಕ್ತಪಡಿಸಿದರು.

1010419171

ರಾಮಾಂಜಿ ಅವರ ಈ ಕ್ರಮವು ಯುದ್ಧದ ಪರಿಣಾಮಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ಶಾಂತಿ, ಮಾನವೀಯತೆ ಮತ್ತು ಪ್ರಕೃತಿ ಸಂರಕ್ಷಣೆಯ ಅಗತ್ಯವನ್ನು ನೆನಪಿಸುವ ಪ್ರಯತ್ನವಾಗಿದೆ. ಇಂತಹ ವೈಯಕ್ತಿಕ ಮಟ್ಟದ ಪ್ರತಿಭಟನೆಗಳು ಸಮಾಜದಲ್ಲಿ ಸಣ್ಣ ಅಲೆಗಳಾಗಿ ಶುರುವಾಗಿ, ದೊಡ್ಡ ಬದಲಾವಣೆಗೆ ದಾರಿ ಮಾಡಿಕೊಡಬಹುದು ಎಂಬ ವಿಶ್ವಾಸವನ್ನು ಅವರ ಧರಣಿ ವ್ಯಕ್ತಪಡಿಸುತ್ತದೆ.

ಒಟ್ಟಾರೆ, ಯುದ್ಧದ ಕಹಿ ಅನುಭವಗಳು ಜಗತ್ತನ್ನು ಕಂಗೆಡಿಸುತ್ತಿರುವ ಈ ಸಮಯದಲ್ಲಿ, ಉಡುಪಿಯಲ್ಲಿ ನಡೆಯುತ್ತಿರುವ ಈ ಮೌನ ಧರಣಿ ಶಾಂತಿಯ ಅಗತ್ಯವನ್ನು ಮರುಉಚ್ಚರಿಸುವ ಸಾಂದರ್ಭಿಕ ಹಾಗೂ ಅರ್ಥಪೂರ್ಣ ಪ್ರಯತ್ನವಾಗಿ ಕಾಣಿಸುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ.17ರಿಂದ ಮೂರು ದಿನಗಳ ಕಾಲ ಅದ್ದೂರಿ ಚಾಮರಾಜನಗರ ದಸರಾ

ಚಾಮರಾಜನಗರದಲ್ಲಿ ಅಕ್ಟೋಬರ್ 17, 18 ಮತ್ತು 19ರಂದು ಮೂರು ದಿನಗಳ ಕಾಲ...

ಧಾರವಾಡ | ಪಶ್ಚಿಮ ಪದವೀಧರರ ಕ್ಷೇತ್ರ ಕಣದಲ್ಲಿ 14 ಅಭ್ಯರ್ಥಿಗಳು; ಅ.23ರಂದು ಮತದಾನ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಅಕ್ಟೋಬರ್ 23ರಂದು...

ಚಿಕ್ಕಮಗಳೂರು | ಬೆಳೆ ನಷ್ಟ: ಇಬ್ಬರ ರೈತರ ಸಾವು 

ಸಕಾಲಕ್ಕೆ ಮಳೆಯಾಗದೆ ಬೆಳೆ ನಷ್ಟ ಉಂಟಾಗಿದ್ದು, ಸಾಲ ತೀರಿಸಲಾಗದೆ ಮನನೊಂದ ಇಬ್ಬರು...

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...