ಪ್ರೀಮಿಯಂ ಲೇಖನ | ಲಿಂಗತತ್ವದ ಇಸ್ಲಾಮೀಕರಣ ಎಂದರೇನು? ಮುಸಲ್ಮಾನರು-ಲಿಂಗಾಯತರನ್ನು ಪರಸ್ಪರ ಎತ್ತಿಕಟ್ಟುವುದೇ?

Date:

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹೀನಾಯ ಸೋಲು ಹಾಗು ಈ ಸರಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಿಸಿದ ನಂತರ ಹಿಂದುತ್ವವಾದಿಗಳು ತೀವ್ರವಾಗಿ ಹತಾಶೆಗೊಂಡಿದ್ದಾರೆ. ಪಕ್ಷ ರಾಜಕಾರಣದಲ್ಲಿ ಹಿಂದುತ್ವ ಸಿದ್ಧಾಂತವನ್ನು ಮುನ್ನೆಲೆಗೆ ತಂದು ಲಿಂಗಾಯತ ನಾಯಕತ್ವವನ್ನು ಗೌಣಗೊಳಿಸಲಾಗಿದೆ.

- Advertisement -

ಕಳೆದ ವರ್ಷ ಕಾರ್ಯಕ್ರಮವೊಂದರ ಬಹಿರಂಗ ವೇದಿಕೆಯಲ್ಲಿ ಲಿಂಗಾಯತ ಮಠಾಧೀಶರೊಬ್ಬರು ಮುಸ್ಲಿಮ್ ಧರ್ಮೀಯರಲ್ಲಿರುವ ‘ಜಕಾತ್’ ಮತ್ತು ಲಿಂಗಾಯತ ಧರ್ಮೀಯರಲ್ಲಿನ ‘ದಾಸೋಹ’ ಪದ್ದತಿಗಳ ಸಾಮ್ಯತೆಯನ್ನು ಸಾಂದರ್ಭಿಕವಾಗಿ ವಿವರಿಸುತ್ತ ಎರಡೂ ಧರ್ಮಗಳಲ್ಲಿ ಕೆಲವೊಂದು ಸಾಮ್ಯತೆಗಳಿವೆ ಎಂದು ಮಾತನಾಡಿದ ಸಂಗತಿ ಭಾರೀ ಸುದ್ದಿಯಾಗಿತ್ತು. ಈ ಸುದ್ದಿಯನ್ನು ವೈದಿಕ ಮಾಧ್ಯಮಗಳು ಬೇಕಂತಲೇ ವಿವಾದಗೊಳಿಸಲು ಪ್ರಯತ್ನಿಸಿದ್ದವು. ಈ ಹಿಂದೆ ಡಾ ಎಂ ಎಂ ಕಲಬುರಗಿಯವರ ಹೇಳಿಕೆಯನ್ನು ತಿರುಚಿ ಅವರ ಕೊಲೆಗೆ ಇದೇ ವೈದಿಕ ಮಾಧ್ಯಮಗಳು ಸಾಕಷ್ಟು ಪ್ರಚೋದನೆ ಮಾಡಿದ್ದನ್ನು ನಾವು ಸ್ಮರಿಸಬಹುದು. ಈ ವಿಷಯವನ್ನಿಟ್ಟುಕೊಂಡು ವಿವಿಧ ಹಿಂದುತ್ವವಾದಿ ಸಂಘಟನೆಗಳು, ಅವುಗಳ ರಾಜಕೀಯ ವೇದಿಕೆ ನಿಯಂತ್ರಿತ ವಿವಿಧ ಸೋಷಿಯಲ್ ಮೀಡಿಯಾ ಗುಂಪುಗಳುˌಹಾಗೂ ಪೇಜ್‌ಗಳು ‘ಮಠಾಧೀಶರು ಲಿಂಗಾಯತ ಧರ್ಮವನ್ನು ಇಸ್ಲಾಮೀಕರಣಗೊಳಿಸುತ್ತಿದ್ದಾರೆ’ ಎಂದು ವ್ಯಾಪಕವಾಗಿ ಅಪಪ್ರಚಾರ ಮಾಡಿದ್ದವು. ಅದೇ ಸಂದರ್ಭದಲ್ಲಿ ಉಡುಪಿ ಕಡೆಯ ಬ್ರಾಹ್ಮಣ ಮಠಾಧೀಶರೊಬ್ಬರು ಮುಸ್ಲಿಮ್ ಮತ್ತು ಬ್ರಾಹ್ಮಣ ಧರ್ಮಗಳ ನಡುವೆ ಸಾಕಷ್ಟು ಸಾಮ್ಯತೆಗಳಿವೆ ಎಂದು ಹೇಳಿದ್ದ ಸಂಗತಿ ಯಾವ ಮುಖ್ಯವಾಹಿನಿ ಮಾಧ್ಯಮಗಳಲ್ಲಿಯೂ ಸದ್ದು ಮಾಡಲಿಲ್ಲ ಹಾಗೂ ಅದನ್ನು ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಗುಂಪುಗಳು ಟ್ರೋಲ್ ಮಾಡಲಿಲ್ಲ. ಮತ್ತೊಬ್ಬ ಉಡುಪಿ ಮಠಾಧೀಶರೊಬ್ಬರು ಬ್ರಾಹ್ಮಣರು ಹಿಂದುಗಳಲ್ಲ ಎಂದು ನಿರ್ಲಜ್ಜವಾಗಿ ಹೇಳಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಇದಾದ ಕೆಲವು ದಿನಗಳ ನಂತರ ಹಿಂದುತ್ವವಾದಿಗಳ ಒಡೆತನದ ಪ್ರಕಾಶನ ಸಂಸ್ಥೆಯದೆಂದು ಹೇಳಲಾಗುವ ಪ್ರಬಂಧ ಸ್ಪರ್ಧೆಯ ಜಾಹೀರಾತೊಂದು ಸೋಷಿಯಲ್ ಮಾಧ್ಯಮದಲ್ಲಿ ಹರಿದಾಡಿತು. ಈಗಾಗಲೇ ಈ ಸಂಸ್ಥೆಗಳು ‘ವಚನದರ್ಶನ’ ವೆಂಬ ಒಂದು ಕಳಪೆ ಪುಸ್ತಕವನ್ನು ಪ್ರಕಟಿಸಿ ಬಿಡುಗಡೆಯ ನೆಪದಲ್ಲಿ ಅದನ್ನು ದಿಲ್ಲಿ ಸೇರಿದಂತೆ ನಾಡಿನೆಲ್ಲೆಡೆ ಪ್ರಚಾರ ಮಾಡುತ್ತಾ ಸಮಾಜದಲ್ಲಿನ ಸೌಹಾರ್ದತೆಯನ್ನು ಕದಡಿವೆ. ಹಿಂದುತ್ವವಾದಿಗಳ ದ್ವೇಷದ ಗುರಿ ಮೇಲ್ನೋಟಕ್ಕೆ ಮುಸ್ಲಿಮರು ಎನ್ನುವಂತೆ ಕಂಡರೂ ಅದು ಸ್ಪಷ್ಟವಾಗಿ ಬ್ರಾಹ್ಮಣೇತರ ಹಿಂದುಗಳು ಎನ್ನುವ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ. ಈ ಪ್ರಬಂಧ ಸ್ಪರ್ಧೆಯಲ್ಲಿ ನಮೂದಿಸಿರುವ ವಿಷಯಗಳು ಸಂಪೂರ್ಣವಾಗಿ ಬಸವತತ್ವ ಮತ್ತು ವಚನ ಚಳವಳಿಯ ಮೂಲ ಆಶಯಗಳನ್ನು ತಿರುಚುವುದಷ್ಟೆ ಆಗಿರದೆ ಅವು ಲಿಂಗಾಯತ ಸಂಸ್ಕೃತಿಯನ್ನೆ ನಾಶಗೊಳಿಸುವ ದುರುದ್ದೇಶ ಹೊಂದಿವೆ. ಅವುಗಳಲ್ಲಿ ‘ಲಿಂಗತತ್ವದ ಇಸ್ಲಾಮೀಕರಣ’ ಎನ್ನುವ ವಿಷಯವಂತೂ ಭಯಾನಕವಾಗಿದೆ. ಇದು ಹಿಂದುತ್ವವಾದಿಗಳು ಲಿಂಗಾಯತ ಧರ್ಮವನ್ನು ನಾಶಗೊಳಿಸಲು ಮಾಡುತ್ತಿರುವ ಯತ್ನದ ಭಯಂಕರ ಮುಖವನ್ನು ಬಹಿರಂಗಪಡಿಸಿದೆ. ಈ ಜಾಹೀರಾತನ್ನು ಓದಿದ ನನ್ನ ಸ್ನೇಹಿತರೊಬ್ಬರು ಅದರಲ್ಲಿದ್ದ ಸಂಪರ್ಕ ಸಂಖ್ಯೆಗೆ ಕರೆ ಮಾಡಿ “ಪ್ರಬಂಧ ಸ್ಪರ್ಧೆಗೆ ಇಂತಹ ವಿವಾದಾತ್ಮಕ ವಿಷಯ ಏಕೆ ಇಟ್ಟಿದ್ದೀರಿ” ಎಂದು ವಿಚಾರಿಸಿದಾಗ ಆ ಕಡೆಯ ವ್ಯಕ್ತಿ ಕೊಟ್ಟ ಉತ್ತರ ಇನ್ನೂ ಅಪಾಯಕಾರಿಯಾಗಿತ್ತು.

ಹಿಂದುತ್ವವಾದಿಗಳು ಲಿಂಗಾಯತ ಸಂಸ್ಕೃತಿ ನಾಶ ಮಾಡುವ ಉದ್ದೇಶದಿಂದಲೇ ಹೀಗೆ ಮಾಡುತ್ತಿದ್ದಾರೆ ಎನ್ನುವುದು ಆತ ಕೊಟ್ಟ ಉತ್ತರದಿಂದ ಸ್ಪಷ್ಟವಾಗಿತ್ತು. “ನಿಮ್ಮ ಮಠಾಧೀಶರೇ ಲಿಂಗಾಯತ ಹಾಗೂ ಮುಸ್ಲಿಮ್ ಧರ್ಮಗಳ ನಡುವೆ ಸಾಮ್ಯತೆ ಇದೆ ಎಂದಿದ್ದಾರಲ್ಲ ಅವರನ್ನೇ ಕೇಳಿ” ಎಂದು ಆ ಕಡೆಯ ವ್ಯಕ್ತಿ ಉದ್ಧಟತನದಿಂದ ಉತ್ತರಿಸಿದ್ದ. ಆಗ ನನ್ನ ಸ್ನೇಹಿತರು “ಅದೇ ಸಮಯದಲ್ಲಿ ಉಡುಪಿ ಕಡೆಯ ಬ್ರಾಹ್ಮಣ ಸಮಾಜದ ಮಠಾಧೀಶರೊಬ್ಬರು ಮುಸ್ಲಿಮ್ ಮತ್ತು ಬ್ರಾಹ್ಮಣ ಧರ್ಮಗಳು ಒಂದೇ” ಅಂದಿದ್ದರಲ್ಲ ಅದನ್ನೇಕೆ ವಿವಾದಗೊಳಿಸಲಿಲ್ಲ” ಎಂದು ಮರು ಪ್ರಶ್ನಿಸಿದಾಗ ಆತ ಹಾರಿಕೆಯ ಉತ್ತರವನ್ನು ನೀಡಿ ಕರೆಯನ್ನು ಅರ್ಧಕ್ಕೆ ನಿಲ್ಲಿಸಿದ್ದ. ಸಮಾಜದಲ್ಲಿ ಅನಗತ್ಯ ವಿವಾದಗಳನ್ನು ಹುಟ್ಟುಹಾಕಿ ಸಾಮರಸ್ಯವನ್ನು ಕದಡುವ ಹಾಗೂ ಬಸವಾನುಯಾಯಿಗಳನ್ನು ಅವಹೇಳನ ಮಾಡುವ ಹಿಂದುತ್ವವಾದಿಗಳ ಈ ಕಪಟ ಹುನ್ನಾರ ಏನನ್ನು ಸಾಂಕೇತಿಸುತ್ತದೆ ಎನ್ನುವುದು ಇಂದು ನಮ್ಮೆಲ್ಲರ ಮುಂದಿರುವ ಗಂಭೀರವಾದ ಪ್ರಶ್ನೆ. ಸಾಂದರ್ಭಿಕವಾಗಿ ಅನೇಕ ಸಾರ್ವಜನಿಕ ಸಭೆಗಳಲ್ಲಿ ಸಮನ್ವಯಕಾರರು “ಎಲ್ಲಾ ಧರ್ಮಗಳು ಸಮಾನ ಅಂಶಗಳನ್ನು ಹೊಂದಿವೆ” ಎನ್ನುವುದು ತಪ್ಪೇ? ಭಾರತದಲ್ಲಿ ಎಲ್ಲಾ ಧರ್ಮದವರು ಸಾಮರಸ್ಯದಿಂದ ಬಾಳುವುದು ಹಿಂದುತ್ವವಾದಿಗಳಿಗೆ ಬೇಡವಾಗಿದೆಯೆ? “ವಸುದೈವ ಕುಟುಂಬಕಂ” ಎನ್ನುವ ಉಪನಿಷತ್ತಿನ ಸೂಕ್ತಿಯು ಕೇವಲ ಹಿಂದು ಧರ್ಮದ ಆಚಾರಣಾರಹಿತ ಹಿರಿಮೆಯನ್ನು ಹೊಗಳಲು ಮಾತ್ರ ಬಳಕೆಯಾಗಬೇಕೆ ಎನ್ನುವ ಬಹುದೊಡ್ಡ ಪ್ರಶ್ನೆ ಇಂದು ಹಿಂದೂ ಸಮಾಜ ಎದುರಿಸುತ್ತಿದೆ.

ಜಗತ್ತಿನ ಎಲ್ಲಾ ಧರ್ಮಗಳು ಒಳಿತನ್ನೇ ಹೇಳಿವೆ. ಆದರೆ, ಆಯಾ ಧರ್ಮದ ಅನುಯಾಯಿಗಳು ತಮ್ಮ ತಮ್ಮ ಧರ್ಮವನ್ನು ವಿಕೃತಗೊಳಿಸಿ ಆಚರಿಸಿದರೆ ಅದು ಅವರ ತಪ್ಪೇ ಹೊರತು ಆಯಾ ಧರ್ಮಗಳ ತಪ್ಪಲ್ಲ. ಹಾಗೆಯೇ, ಎಲ್ಲಾ ಧರ್ಮಗಳಲ್ಲಿರುವ ಬಹುತೇಕ ಸಿದ್ಧಾಂತಗಳು ಹಾಗೂ ಆಚರಣೆಗಳು ಒಂದಕ್ಕೊಂದು ಹೋಲುತ್ತವೆ. ಅಂದ ಮಾತ್ರಕ್ಕೆ ಒಂದು ಧರ್ಮ ಇನ್ನೊಂದು ಧರ್ಮಕ್ಕೆ ಶರಣಾಯಿತು ಎನ್ನುವುದು ತೀರಾ ಬಾಲಿಶ ವಾದ. ಹಾಗೆ ನೋಡಿದರೆ ಮಧ್ಯಪ್ರಾಚ್ಯದಲ್ಲಿ ಹುಟ್ಟಿದ ಯಹೂದಿ, ಕ್ರೈಸ್ತ, ಪಾರ್ಸಿ, ಮುಸ್ಲಿಮ್ ಹಾಗೂ ಆರ್ಯನ್ ಸಿದ್ಧಾಂತದ ಬ್ರಾಹ್ಮಣ ಧರ್ಮಗಳ ನಡುವೆ ಸಾಕಷ್ಟು ಸಮಾನ ಅಂಶಗಳಿವೆ. ಭಾರತದಲ್ಲಿ ಇಂದು ಅಸ್ತಿತ್ವದಲ್ಲಿರುವ ವೈದಿಕ ಧರ್ಮದ ಅನೇಕ ಅಂಶಗಳು ಪಾರ್ಸಿ ಹಾಗೂ ಮುಸ್ಲಿಮ್ ಧರ್ಮದ ತತ್ವಗಳನ್ನು ಯಥಾವತ್ತಾಗಿ ಹೋಲುತ್ತವೆ. ಹಾಗೆಂದು ಸಾಂದರ್ಭಿಕವಾಗಿ ಯಾರಾದರೂ ಹೇಳಿದರೆ, ಅದು ವೈದಿಕ ಧರ್ಮದ ಪಾರ್ಷೀಕರಣ ಅಥವಾ ಇಸ್ಲಾಮೀಕರಣ ಎಂದು ವ್ಯಾಖ್ಯಾನಿಸಿ ಅದನ್ನು ಪ್ರಚಾರ ಮಾಡುವುದು ನಾಗರಿಕ ಮತ್ತು ಹಾಗೂ ಸಭ್ಯ ಧರ್ಮೀಯರ ಲಕ್ಷಣವಂತೂ ಖಂಡಿತ ಅಲ್ಲ. ಹಾಗೆ ಕೇವಲ ಮಾನಸಿಕ ಅಸ್ವಸ್ಥರು, ಪೀಡನಸುಖಿಗಳು, ಪರಧರ್ಮ ದ್ವೇಷಿಗಳು ಮಾತ್ರ ಮಾಡಬಲ್ಲರು. ಲಿಂಗಾಯತ ಮಠಾಧೀಶರ ಸಾಂದರ್ಭಿಕ ಹೇಳಿಕೆಯನ್ನು ತಿರುಚಿ “ಲಿಂಗತತ್ವದ ಇಸ್ಲಾಮೀಕರಣ” ಎಂದು ಅಪಪ್ರಚಾರ ಮಾಡುವುದು ಹಾಗು ಆ ವಿಷಯದ ಮೇಲೆ ಪ್ರಬಂಧ ಬರೆಯುವಂತೆ ಪ್ರಚೋದಿಸುವುದು ಹಿಂದುತ್ವವಾದಿಗಳ ಮಾನಸಿಕ ಅಸ್ವಸ್ಥತೆ, ಅನಾಗರಿಕತೆ, ಪೀಡನಸುಖಿ ಗುಣ ಮತ್ತು ಪರ ಧರ್ಮದ್ವೇಷವನ್ನು ತೋರಿಸುತ್ತದೆ.

ಲಿಂಗಾಯತ ಧರ್ಮವನ್ನು ‘ಮರುಳುಗಾಡಿನ'(ಮುಸ್ಲಿಂ) ಧರ್ಮದೊಂದಿಗೆ ಸಮೀಕರಿಸುತ್ತಿದ್ದಾರೆ ಎಂದು ಬ್ರಾಹ್ಮಣ ವಿದ್ವಂಸಕನೊಬ್ಬ ಯಾರೂ ಓದದ ಪತ್ರಿಕೆಯಲ್ಲಿ ಅವಲತ್ತುಕೊಳ್ಳುವುದು ಎಲ್ಲರಿಗೂ ನಗೆ ತರಿಸುವುದಲ್ಲದೆ ಮರುಕ ಕೂಡ ಹುಟ್ಟಿಸುತ್ತದೆ. ಅಸಲಿಗೆ ಆರ್ಯ ವೈದಿಕ ಧರ್ಮಕ್ಕೂ ಮರಳುಗಾಡಿನ ಧರ್ಮಕ್ಕೂ ಎಲ್ಲಾ ರೀತಿಯಲ್ಲೂ ಅತ್ಯಂತ ಹತ್ತಿರದ ನಂಟಿದೆ. ಹಾಗೆ ನೋಡಿದರೆ, ಆರ್ಯರ ವಲಸೆ ಇತಿಹಾಸದ ಅನುಸಾರ ಆರ್ಯ ವೈದಿಕರು ವೇದಕಾಲದಲ್ಲಿ ಪಕೃತಿ ಆರಾಧಕರಾಗಿದ್ದರು. ಅವರ ಅನೇಕ ಆಚರಣೆಗಳು ಆರಂಭದಲ್ಲಿ ಹಾಗೂ ಇಂದಿಗೂ ಮಧ್ಯಪ್ರಾಚ್ಯದ ಪಾರ್ಸಿ ಮತ್ತು ಇಸ್ಲಾಮ್ ಧರ್ಮದ ಆಚರಣೆಗಳನ್ನು ಹೋಲುತ್ತವೆ. ಅಷ್ಟೆ ಅಲ್ಲದೆ ರಷ್ಯಾದ ಸ್ಲಾವಿಕ್ ಆರ್ಯನ್ನರ ವೇದಗಳು ಹಾಗೂ ಭಾರತದ ವಲಸೆ ವೈದಿಕ ಆರ್ಯನ್ನರ ವೇದಗಳಲ್ಲಿ ಬಹುತೇಕ ಹೋಲಿಕೆಗಳಿವೆ. ಸ್ಲಾವಿಕ್ ಆರ್ಯನ್ನರ ವಿಷನ್ ಮತ್ತು ರೋದ್ ಎನ್ನುವ ಆದಿಮ ದೇವತೆಗಳು ಇಲ್ಲಿನ ವೈದಿಕರು ಪೂಜಿಸುವ ವಿಷ್ಣು ಹಾಗೂ ರುದ್ರರನ್ನು ಹೋಲುತ್ತಾರೆ. ಆರ್ಯ ವೈದಿಕ ಧರ್ಮದ ಮೂಲ, ಪ್ರಾಚೀನ ಋಗ್ವೇದ ಹಾಗೂ ಇರಾನಿಯನ್ನರ ಝೆಂಡ್ ಅವೆಸ್ತಾ ಇವೆರಡರ ನಡುವೆ ಬಹಳ ನಿಕಟವಾದ ಹೋಲಿಕೆ ಕಾಣುತ್ತದೆ. ಋಗ್ವೇದದ ಪುರುಷ ಸೂಕ್ತದಲ್ಲಿರುವಂತೆ ಪಾರ್ಸಿಗಳ ಅವೆಸ್ತಾವು ಚಾತುರ್ವರ್ಣ ವ್ಯವಸ್ಥೆಯನ್ನು ಹೊಂದಿದ್ದು ಅದು ಹೀಗಿದೆ:
೧) ಹರಿಸ್ತರ್ಣ (ವಿದ್ವಾಂಸ) – ಬ್ರಾಹ್ಮಣ
೨) ನುರಿಸ್ತರನ್ (ಯೋಧ) – ಕ್ಷತ್ರಿಯ
೩) ಸೋಸಿಸ್ತರನ್ (ವ್ಯಾಪಾರಿ) – ವೈಶ್ಯ
೪) ರೋಜೀಸ್ವರನ್ (ಸೇವಕ)- ಶೂದ್ರ. ಪಾರ್ಸಿಗಳು
ನಾಲ್ಕನೇ ವರ್ಣದಲ್ಲಿಟ್ಟರು (ರೋಜೀಸ್ವರನ್) ರೈತನನ್ನು ಪವಿತ್ರ ಎಂದು ಪರಿಗಣಿಸುತ್ತಾರೆ. ಎರಡೂ ಧರ್ಮಗಳಲ್ಲಿ ಏಕ ದೇವನ ಕಲ್ಪನೆ ಇದೆ ಹಾಗು ಮಂದಿರ ಮತ್ತು ವಿಗ್ರಹಾರಾಧನೆ ಇಲ್ಲ. ‘ಝೆಂಡ್ ಅವೆಸ್ತಾ’ದಲ್ಲಿ ವೈದಿಕರ ವೇದಗಳಲ್ಲಿರುವಂತೆ ಗಾಥಾ ಮತ್ತು ಮಂತ್ರಗಳಿವೆ. ಋಗ್ವೇದದಲ್ಲಿ “ಸೋಮ” ಎನ್ನುವುದನ್ನು ಪಾರ್ಸಿಗಳು “ಹೋಮ್” ಎಂದು ಕರೆಯುತ್ತಾರೆ.

ಅವೆಸ್ತಾದಲ್ಲಿ ವೇದಗಳಲ್ಲಿರುವಂತೆ ಶ್ಲೋಕಗಳಿವೆ. ಇಂದ್ರ, ಚಂದ್ರ ಮತ್ತು ಮಿತ್ರರಂತಹ ದೇವರುಗಳ ಹೆಸರಗಳೂ ಸಹ ಇವೆ. ಯಾಗ, ಹೋಮ, ಸೋಮ ಆಚರಣೆಗಳು ಎರಡೂ ಧರ್ಮಗಳಲ್ಲಿವೆ. ಪಾರ್ಸಿಗಳಲ್ಲಿಯೂ ಸಹ ಋಗ್ವೇದವನ್ನು ಹೋಲುವಂತಹ ಕ್ರಮಗಳಿವೆ. ಪಾರ್ಸಿಗಳು ವೈದಿಕರ ಯಜ್ಞವನ್ನು ಯಾಸ್ನಾ ಎಂದು ಕರೆಯುತ್ತಾರೆ. ಅವೆಸ್ತಾದ (ಯಾಸ್ನಾ 28-53) ಆಚರಣೆಯಲ್ಲಿ 5 ದೀರ್ಘ, ಮತ್ತು 17 ಪ್ರತ್ಯೇಕ ಗಾಥಾಗಳಿದ್ದು ಅವು ಬಹುತೇಕ ಋಗ್ವೇದದ ಸೂಕ್ತಗಳನ್ನು ಹೋಲುತ್ತವೆ. ಈ ಗಾಥಾಗಳಲ್ಲಿ ಅಗ್ನಿ ಆರಾಧನೆ ಮತ್ತು ಯಜ್ಞ ಆಚರಣೆಗೆ ಸಂಬಂಧಿಸಿದ ಯಾಸ್ನಾ-ಹಪ್ತನ್-ಹೈತಿ ಭಾಗಗಳೂ ಸೇರಿದ್ದು ಇವು ಯಜುರ್ವೇದದ ಆಚರಣೆಯ ಭಾಗಗಳನ್ನು ಹೋಲುತ್ತವೆ. ಋಗ್ವೇದಿಗಳು ದಿನಕ್ಕೆ ಮೂರು ಬಾರಿ ಸೋಮರಸ ಕುಡಿದರೆ, ಪಾರ್ಸಿಗಳು ಯಾಸ್ನಾ ಆಚರಣೆಯ ವೇಳೆ ಎರಡು ಬಾರಿ ಸೋಮರಸವನ್ನು ಕುಡಿಯುತ್ತಾರೆ. ವೇದಗಳಲ್ಲಿ ಕಾಣಸಿಗುವ ವೈದಿಕರ ಪ್ರಮುಖ ದೇವತೆ ಇಂದ್ರನ ಕೈಯಲ್ಲಿ ವಜ್ರಾಯುಧವಿರುವಂತೆ ಅವೆಸ್ತಾದ ಝಾಸ್ ಕೂಡ ವಜ್ರಾಯುಧ ಹಿಡಿದಿರುತ್ತಾನೆ. ಅವೆಸ್ತಾದ ಉಳಿದ ಭಾಗ ಝರಾತುಷ್ಟ್ರನ ನಂತರದ ಕಾಲಕ್ಕೆ ಸೇರಿದ್ದು ಎಂದು ಹೇಳಲಾಗುವ (ಯಾಸ್ನಾ ೧೯.೯-೧೪.೨೦-೨೧) ಆಚರಣೆಗಳು ವೈದಿಕರು ಆಚರಿಸುವ ಬ್ರಾಹ್ಮಣಗಳ ಶೈಲಿಯಲ್ಲಿದೆ. ವೇದಗಳ ಅರ್ಥ ತಿಳಿಯಲು ವೈದಿಕರು ಯಾಸ್ಕನ್ ನಿಘಂಟು ಬಳಸುವಂತೆ, ಪಾರ್ಸಿಗಳು ಅವೆಸ್ತಾ ಅರ್ಥ ಮಾಡಿಕೊಳ್ಳಲು ಫರ್ಹಂಗ್-ಈ-ಓಯಿಂ ಬಳಸುತ್ತಾರೆ.

ಋಗ್ವೇದದಂತೆ ಅವೆಸ್ತಾ ಕೂಡ ಮೌಖಿಕ ಧ್ವನಿಮುದ್ರಿಕೆಯ ಮಾದರಿಯಲ್ಲಿ ತಲೆಮಾರುಗಳಿಂದ ಹರಿದು ಬಂದಿದೆ ಎಂದು ನಂಬಲಾಗುತ್ತದೆ. ಎರಡರ ಮಂತ್ರಗಳಲ್ಲಿರುವ ಸಂಧಿಗಳಲ್ಲಿನ ಪ್ರತ್ಯೇಕ ಪದಗಳನ್ನು ಸುಲಭವಾಗಿ ನೆನಪಿನಲ್ಲಿರಿಸಿಕೊಳ್ಳಲು ಪದಪಾಠ ಪದ್ಧತಿ ಅಸ್ತಿತ್ವದಲ್ಲಿದೆ. ಆಚರಣೆಯ ಸಂದರ್ಭದಲ್ಲಿ ಈ ಪದಗಳನ್ನು ಬಿಡಿಸದೆ ಮೂಲ ರಚನೆಯ ಅನುಸಾರವೆ ಹಾಡಲಾಗುತ್ತದೆ. ಇದನ್ನು ಸಂಹಿತಾ ಪಾಠವೆನ್ನುತ್ತಾರೆ. ಇದರಿಂದ ಋಕ್ ಗಳ ಮೂಲ ಪದ ಮತ್ತು ಅರ್ಥಗಳು ಬದಲಾಗದಂತೆ ಸಾವಿರಾರು ವರ್ಷಗಳಿಂದ ಕಾಯ್ದುಕೊಂಡು ಬರಲಾಗಿದೆ. ಋಗ್ವೇದ ಮತ್ತು ಅವೆಸ್ತಾಗಳೆರಡೂ ಒಂದೇ ರೀತಿಯಲ್ಲಿ ಮಂಡಲ/ಅಧ್ಯಾಯ/ವಂಶದ ಸೂಕ್ತಗಳನ್ನು ಸಂಗ್ರಹಿಸಿ, ಸಂಹಿತೆಯ ರೂಪಕ್ಕೆ ತಂದಿವೆ. ವೇದಗಳು ಮತ್ತು ಅವೆಸ್ತಾಗಳ ನಡುವಿನ ಸಂಬಂಧವನ್ನು: 1) ಯಾಸ್ನ (28-53) = ಋಗ್ವೇದˌ2) ಯಾಸ್ನ ಹಪ್ತಂಹೈತಿ = ಯಜುರ್ವೇದˌ
3) ಯಾಸ್ನ 19-9-14, 20-21 = ಬ್ರಾಹ್ಮಣಗಳುˌ
4) ನಿರಂಗಿಸ್ತಾನ್ = ಶ್ರೌತ ಸೂತ್ರˌ
5) ವಿವೇವ್ದಾದ್ = ಗೃಹ್ಯ ಮತ್ತು ಧರ್ಮ ಸೂತ್ರˌ
6) ಯಾಸ್ಕನ ನಿಘಂಟು = ಪರ್ಹಂಗ್-ಈ-ಓಯಿಂˌ ಇವುಗಳಿಂದ ಗುರುತಿಸಬಹುದು. ಈ ಎಲ್ಲಾ ಸಾಮ್ಯತೆಗಳನ್ನು ಪರಿಗಣಿಸಿ ಋಗ್ವೇದ ಹಾಗೂ ಅವೆಸ್ತಾ ಒಂದೇ ಮೂಲದ ಎರಡು ಕವಲುಗಳೆಂದು ವಿಶ್ವಾಸದಿಂದ ಹೇಳಿದರೆ ವೈದಿಕ ಧರ್ಮದ ಪಾರ್ಸೀಕರಣ ಅನ್ನಬಹುದೆ? ಪಾರ್ಸಿ ಪುರೋಹಿತರು ಭಾರತಕ್ಕೆ ಬಂದು ಬ್ರಾಹ್ಮಣ ವಿದ್ವಾಂಸರಾದರು ಎನ್ನುವುದು ಎಷ್ಟು ಸೂಕ್ತ? ಇದನ್ನು ಹಿಂದುತ್ವವಾದಿಗಳು ಒಪ್ಪಿಕೊಳ್ಳುವರೆ?

ಧರ್ಮ ಮತ್ತು ಆಚರಣೆಗಳಷ್ಟೆಯಲ್ಲದೆ ಹಿಂದುತ್ವವಾದಿಗಳು ಜಗತ್ತಿನಲ್ಲಿಯೇ ಭಾರತದ ಸನಾತನ ನಾಗರಿಕತೆಯು ಪ್ರಾಚೀನವಾದದ್ದು ಎಂದು ಪ್ರತಿಪಾದಿಸುತ್ತಿರುವುದು ಅವರ ಇನ್ನೊಂದು ಅತಿರಂಜನೆ. ಪಶ್ಚಿಮದ ಮೇಲೆ ಪ್ರಾಚೀನ ಭಾರತದ ಪ್ರಾಧಾನ್ಯತೆ ಸ್ಥಾಪಿಸಲು ಹಿಂದುತ್ವವಾದಿಗಳು ಐತಿಹಾಸಿಕ ದಾಖಲಾತಿಗಳಿಗಿಂತ ಸಾಮಾನ್ಯ ಜ್ಞಾನವನ್ನು ಅವಲಂಬಿಸುತ್ತಾರೆ. ಈ ಕುರಿತು ಸಾಲ್ವಟೋರ್ ಬಾಬೋನ್ಸ್ ಎಂಬ ಲೇಖಕರು ಮೇ 31, 2023 ರ ದಿ ಫಸ್ಟ್‌ ಪೋಸ್ಟ್.ಕಾಮ್ ವೆಬ್ ಜರ್ನಲ್‌ನಲ್ಲಿ ಬರೆದ ತಮ್ಮ ಅಂಕಣದಲ್ಲಿ ಪಾಶ್ಚಿಮಾತ್ಯ ನಾಗರಿಕತೆಯು ಭಾರತದಲ್ಲಿ ಆರಂಭವಾಯಿತೆ? ಎನ್ನುವ ತಲೆ ಬರಹದಡಿಯಲ್ಲಿ ಭಾರತದ ವೈದಿಕ ಪ್ರಣೀತ ನಾಗರಿಕತೆಯ ಪ್ರಾಚೀನತೆ ಕುರಿತು ವಿದೇಶಿಯರ ದೃಷ್ಟಿಕೋನವನ್ನು ವಿವರಿಸಿದ್ದಾರೆ. ಲೇಖಕರು ಹಿಂದುತ್ವವಾದಿಗಳು ಹರಡುತ್ತಿರುವ ಮಿತ್ಯಗಳನ್ನು ತಾರ್ಕಿಕವಾಗಿ ವಿವರಿಸಿದ್ದಾರೆ. ಪ್ರಪಂಚದ ಉಳಿದ ಜನರಂತೆ, ಭಾರತೀಯರು ಕೂಡ ತಮ್ಮ ದೇಶದ ನಾಗರಿಕತೆಯ ಪ್ರಾಚೀನ ಬೇರುಗಳ ಬಗ್ಗೆ ಹೆಚ್ಚು ಹೆಮ್ಮೆಪಡುತ್ತಾರೆ. ಆದರೆ ಹಿಂದುತ್ವವಾದಿಗಳು ಅದನ್ನು ಅತಿರಂಜಿಸುತ್ತಾರಂತೆ. ಆದರೆ, ಈ ಪಾಶ್ಚಿಮಾತ್ಯ ಅನುಮಾನಗಳು ಹೆಚ್ಚಾಗಿ ಸಾಕ್ಷ್ಯದ ಅನುಪಸ್ಥಿತಿಯನ್ನು ಆಧರಿಸಿವೆ ಎನ್ನುತ್ತಾರೆ ಲೇಖಕರು. ಪ್ರಾಚೀನ ಭಾರತೀಯರು ತಾಳೆ ಎಲೆಗಳ ಮೇಲೆ ಬರೆಯುತ್ತಿದ್ದ ಸಂಗತಿ ನಮಗೆಲ್ಲ ತಿಳಿದಿದೆ. ಆದರೆ ಮೆಸೊಪಟ್ಯಾಮಿಯನ್ನರು ಸೂರ್ಯನ ಬಿಸಿಲಿನಲ್ಲಿ ಒಣಗಿಸಿದ ಮಣ್ಣಿನ ಹಲಗೆಗಳ ಮೇಲೆ ಬರೆದು ಅವುಗಳನ್ನು ಮರುಭೂಮಿಯಲ್ಲಿ ಸಂಗ್ರಹಿಸಿ ಇಡುತ್ತಿದ್ದರಂತೆ.

5,೦೦೦ ವರ್ಷಗಳಿಗಿಂತಲೂ ಹಿಂದಿನ ಮೂಲ ಸುಮೇರಿಯನ್ ಪಠ್ಯಗಳ ಆರ್ಚಿವ್ ಗಳು ಇಂದಿಗೂ ಲಭ್ಯಯಿವೆ. ಆದರೆ, ಭಾರತದ ಯಾವುದೇ ಲಿಖಿತ ಸಾಹಿತ್ಯಕ್ಕೆ 2,೦೦೦ ವರ್ಷಗಳಿಗಿಂತ ಹಿಂದಿನ ಸಾಕ್ಷ್ಯಗಳಿಲ್ಲ. ಅಶೋಕನ ಸ್ತಂಭಗಳು ಸಹ ಇರಾಕ್‌ನಲ್ಲಿ ಅಳಿದುಳಿದ ಅಂಗಡಿಗಳಿಗಿಂತ ಅರ್ಧ ಆಯುಷ್ಯ ಮಾತ್ರ ಹೊಂದಿವೆ ಎನ್ನುತ್ತಾರೆ ಲೇಖಕರು. ಪಾಶ್ಚಿಮಾತ್ಯ ವಿದ್ವಾಂಸರು ಭಾರತದ ಈ ಬಗೆಯ ಅತಿರಂಜಿತ ಆವೃತ್ತಿಗಳನ್ನು ಗ್ರೀಕ್‌ನಿಂದ ಎರವಲು ಪಡೆಯಲಾಗಿದೆ ಎನ್ನುತ್ತಾರೆ. ಏಕೆಂದರೆ ಗ್ರೀಕ್ ಆವೃತ್ತಿಯು ಭಾರತಕ್ಕಿಂತ ಹಲವಾರು ಶತಮಾನಗಳ ಹಿಂದೆ ದೃಢೀಕರಿಸಲ್ಪಟ್ಟಿದೆ ಎನ್ನುವುದು ಲೇಖಕರ ಅಭಿಮತ. ಪ್ರಾಚೀನ ಭಾರತಕ್ಕೆ ಲಿಖಿತ ದಾಖಲೆಗಳು ತುಂಬಾ ವಿರಳವಾಗಿವೆ. ಹೀಗಾಗಿ ಭಾರತೀಯ ಪ್ರಾಚೀನ ಇತಿಹಾಸಕ್ಕೆ ಕರಾರುವಕ್ಕಾದ ಸಾಕ್ಷ್ಯಗಳ ಕೊರತೆ ಇದೆಯಂತೆ. ಇದೆ ಮಾದರಿಯಲ್ಲಿ ರಾಮಾಯಣದ ನಾಯಕನ ಕತೆ ಬರುತ್ತದೆ. ಒಡಿಸ್ಸಿಯಸ್, ದೇಶಭ್ರಷ್ಟನಾಗಿ ಹತ್ತು ವರ್ಷಗಳ ಅವಧಿಗೆ ವನವಾಸಕ್ಕೆ ಹೋದರೆ ಇಲ್ಲಿ ರಾಮ ಹದಿನಾಲ್ಕು ವರ್ಷ ವನವಾಸಕ್ಕೆ ಹೋಗುತ್ತಾನೆ. ಇಬ್ಬರೂ ಭೂಗತ ಜಗತ್ತಿಗೆ ಭೇಟಿ ನೀಡುವ ಕತೆಯಲ್ಲಿ ಸಾಮ್ಯತೆಯಿದೆ. ಹೀಗೆ ಭಾರತದ ಪ್ರತಿಯೊಂದು ಕಾಲ್ಪನಿಕ ಪುರಾಣಗಳು ವಿದೇಶದ ಪೌರಾಣಿಕ ಕತೆಗಳನ್ನು ಹೋಲುತ್ತವೆ. ಇಲಿಯಡ್, ಹೋಮರ್ನ ಮಹಾನ್ ಯುದ್ಧದ ಮಹಾಕಾವ್ಯದಲ್ಲಿ ಮಹಾನ್ ನಾಯಕ ಅಕಿಲ್ಸ್ ತನ್ನ ಭರವಸೆಯ ಸಂಗಾತಿಯನ್ನು ಕಳೆದುಕೊಂಡ ನಂತರ ಯುದ್ಧದಿಂದ ಹಿಂದೆ ಸರಿಯುತ್ತಾನಂತೆ.

ಅವನ ರಥ ಓಡಿಸುವ ಸಾರಥಿಯು ಬುದ್ಧಿವಂತ.ˌ ಆತ ಗ್ರೀಕರ ಸಲಹೆಯನ್ನು ಪಡೆಯುತ್ತಾನೆ ಮತ್ತು ಯುದ್ದದಲ್ಲಿ ಹೋರಾಡುವುದೇ ಸೈನಿಕನ ಆದ್ಯ ಕರ್ತವ್ಯ ಎಂದು ಆಕಿಲ್ಸ್ ನಿಗೆ ಸಲಹೆ ನೀಡುತ್ತಾನೆ. ಅಕಿಲ್ಸ್ ನನ್ನು ಅಂತಿಮವಾಗಿ ಮತ್ತೆ ಯುದ್ಧ ಮಾಡಲು ಮನವೊಲಿಸುತ್ತಾನೆ. ಇದು ನಮ್ಮ ಮಹಾಭಾರತದ ಕುರುಕ್ಷೇತ್ರ ಯುದ್ಧವನ್ನು ವರ್ಣಿಸುವ ಭಗವದ್ಗೀತೆಯನ್ನು ನೆನಪಿಸುತ್ತದೆ. ಕುರುಕ್ಷೇತ್ರ ಯುದ್ದದ ಪ್ರಸಂಗವು ಕೂಡ ಒಂದಷ್ಟು ಬದಲಾವಣೆಗಳ ಹೊರತಾಗಿ ಗಮನಾರ್ಹವಾಗಿ ಗ್ರೀಕ್ ಕಾಲ್ಪನಿಕ ಪುರಾಣಗಳ ನಕಲಿನಂತೆ ಗೋಚರಿಸುತ್ತದೆ. ಇದು ಕಾಕತಾಳೀಯವೆ ಅಥವಾ ಭಾರತದ ಕಾಲ್ಪನಿಕ ಪುರಾಣಗಳು ಗ್ರೀಕ್ ಕತೆಗಳಿಂದ ಪ್ರಭಾವಿತವಾಗಿದ್ದವೆ ಎನ್ನುವ ಸಂಶಯ ಸಹಜವಾಗಿ ಮೂಡುತ್ತದೆ. ಭಗವದ್ಗೀತೆಯು ಪ್ರಾಚೀನ ಭಾರತದಲ್ಲಿರುವಂತೆ ಪೂರ್ವ-ಶಾಸ್ತ್ರೀಯ ಗ್ರೀಕ್ ನಲ್ಲಿ ರಚಿತವಾಗಿರಬಹುದು. ಉದಾಹರಣೆಗೆ, ಅಧ್ಯಾಯ ೬ ರಲ್ಲಿ, ಕೃಷ್ಣನು ಅರ್ಜುನನಿಗೆ ಯೋಗಿ ಹೇಗೆ ಧ್ಯಾನ ಮಾಡಬೇಕುಂದು ವಿವರಿಸುತ್ತಾನೆ. ಆದರೆ ಆತನ ಭೋದನೆಯ ಮಿತಿ ಎಂದರೆ “ಎಲ್ಲ ವಿಷಯಗಳಲ್ಲಿ ಮಿತವಾಗಿರುಬೇಕು” ಎಂಬ ಪ್ರಾಚೀನ ಗ್ರೀಕ್ ತತ್ವವನ್ನು ಹೆಚ್ಚು ನಿರರ್ಗಳವಾಗಿ ವ್ಯಕ್ತಪಡಿಸಲು ಭಗವದ್ಗೀತೆ ವಿಫಲವಾಗಿದೆ. ಹೀಗೆ ಪ್ರಾಚೀನ ಗ್ರೀಕ್ ಸಾಹಿತ್ಯದೊಡನೆ ಭಾರತೀಯ ವೈದಿಕ ಸಾಹಿತ್ಯವನ್ನು ತುಲನೆ ಮಾಡುತ್ತಾ ˌ ಭಾರತೀಯ ವೈದಿಕ ಸಂಸ್ಕೃತಿಯು ವಿದೇಶದಿಂದ ಎರವಲು ಪಡೆದದ್ದು ಎನ್ನುತ್ತಾರೆ ಲೇಖಕರು.

ಬರೆಯುತ್ತಾ ಹೋದರೆ ಈ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಬ್ರಾಹ್ಮಣರು ಮತ್ತು ಮುಸ್ಲಿಮರ ನಡುವೆ ಇಂದಿಗೂ ಅನೇಕ ಆಚರಣೆಗಳು ಸಮಾನವಾಗಿವೆ. ಇಬ್ಬರಲ್ಲೂ ಮಹಿಳೆಗೆ ಸಮಾನ ಸ್ಥಾನಮಾನಗಳಿಲ್ಲ. ಎರಡೂ ಧರ್ಮದ ಹೆಣ್ಣುಮಕ್ಕಳಿಗೆ ಪೂಜೆ, ಪ್ರಾರ್ಥನೆಯ ಸ್ಥಳಗಳಿಗೆ ಮುಕ್ತ ಪ್ರವೇಶವಿಲ್ಲ. ಧಾರ್ಮಿಕ ಸಂಸ್ಕಾರವಿಲ್ಲ. ಎರಡೂ ಧರ್ಮಗಳಲ್ಲಿ ಸತ್ತವರ ಶವವನ್ನು ಸ್ಮಶಾನಕ್ಕೆ ಒಯ್ಯುವ ಶೈಲಿ ಒಂದೆ ತೆರನಾಗಿದ್ದು ಇಬ್ಬರಲ್ಲೂ ಮಹಿಳೆಯರು ಶವಸಂಸ್ಕಾರದಲ್ಲಿ ಭಾಗವಹಿಸುವುದು ನಿಷಿದ್ಧ. ಇಬ್ಬರ ಮನೆಗಳಲ್ಲಿ ಅನ್ಯ ಧರ್ಮಿಯರಿಗೆ ಸುಲಭವಾಗಿ ಪ್ರವೇಶವಿಲ್ಲ. ಸಾಮಾನ್ಯವಾಗಿ ಬ್ರಾಹ್ಮಣರು ಮತ್ತು ಮುಸ್ಲಿಮರಲ್ಲಿ ಬಹುತೇಕರು ಸಮಾನ ಧರ್ಮನಿಷ್ಠರಾಗಿರುತ್ತಾರೆ. ಇದೇ ಕಾರಣದಿಂದಲೊ ಏನೊ ಬಹುತೇಕ ಹಿಂದುತ್ವವಾದಿಗಳ ಹೆಣ್ಣುಮಕ್ಕಳು ಮುಸ್ಲಿಮ್ ಯುವಕರನ್ನು ಮದುವೆಯಾಗುತ್ತಾರೆ. ಉದಾಹರಣೆಗೆ ಬಿಜೆಪಿ ನಾಯಕರಾದ ಮುರಳಿ ಮನೋಹರ ಜೋಶಿ, ಲಾಲ್‌ಕೃಷ್ಣ ಅಡ್ವಾಣಿ ಹಾಗೂ ಸುಬ್ರಮಣಿಯನ್‌ ಸ್ವಾಮಿಯವರ ಹೆಣ್ಣುಮಕ್ಕಳು ವರಿಸಿದ್ದು ಮುಸ್ಲಿಮ್ ಯುವಕರನ್ನು. ಬಹುತೇಕ ಬ್ರಾಹ್ಮಣರ ವ್ಯವಹಾರಗಳು ಮುಸ್ಲಿಮರೊಂದಿಗೆ ಇರುವುದು ಸಾಮಾನ್ಯ ಸಂಗತಿಯಾಗಿದೆ. ಶೂದ್ರ ಹಾಗು ಅಸ್ಪ್ರಶ್ಯ ಹಿಂದೂಗಳಿಗಿಂತ ಬ್ರಾಹ್ಮಣರು ಮುಸ್ಲಿಮರನ್ನೆ ಹೆಚ್ಚು ಇಷ್ಟಪಡುತ್ತಾರೆ. ಆದರೆ, ಹಿಂದುತ್ವವಾದಿಗಳು ತಾವು ಮಾತ್ರ ಧರ್ಮನಿಷ್ಠರು, ರಾಷ್ಟ್ರಪ್ರೇಮಿಗಳೆನ್ನುವಂತೆ ಬಿಂಬಿಸಿಕೊಳ್ಳುತ್ತ ಅದಕ್ಕೆ ತದ್ವಿರುದ್ಧವಾಗಿ ಬದುಕುತ್ತಾರೆ. ಉಳಿದ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುತ್ತಾರೆ.

siddaramaiah

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹೀನಾಯ ಸೋಲು ಹಾಗೂ ಇಂದಿನ ಸರಕಾರ ಬಸವಣ್ಣನವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಿಸಿದ ನಂತರ ಹಿಂದುತ್ವವಾದಿಗಳು ತೀವ್ರವಾಗಿ ಹತಾಶೆಗೊಂಡಿದ್ದಾರೆ. ಪಕ್ಷ ರಾಜಕಾರಣದಲ್ಲಿ ಹಿಂದುತ್ವ ಸಿದ್ಧಾಂತವನ್ನು ಮುನ್ನೆಲೆಗೆ ತಂದು ಲಿಂಗಾಯತ ನಾಯಕತ್ವವನ್ನು ಗೌಣಗೊಳಿಸಲಾಗಿದೆ. ಲಿಂಗಾಯತರ ಸುದೀರ್ಘ ಕಾಲದ ಸಂವಿಧಾನ ಮಾನ್ಯತೆಯ ಬೇಡಿಕೆಯನ್ನು ನಿರಾಕರಿಸುವುದಷ್ಟೆ ಅಲ್ಲದೆ ಅದನ್ನು ಉಗ್ರವಾಗಿ ವಿರೋಧಿಸಿ, ಲಿಂಗಾಯತ ಹೋರಾಟಗಾರರನ್ನು ಧರ್ಮ ಒಡೆದವರೆಂದು ಅವರು ಬಿಂಬಿಸಿದ್ದಾರೆ. ಇದರಿಂದ ತಮ್ಮ ರಾಜಕೀಯಕ್ಕೆ ಬಹುದೊಡ್ಡ ಹಿನ್ನಡೆಯಾಗುತ್ತಿದ್ದರೂ ಲಿಂಗಾಯತ ಸಂಸ್ಕೃತಿಯ ನಾಶಕ್ಕೆ ಅರ್ಹನಿಶಿ ಪ್ರಯತ್ನಿಸುವುದನ್ನು ಅವರು ಇಂದಿಗೂ ನಿಲ್ಲಿಸಿಲ್ಲ. ವಚನ ದರ್ಶನ ಎಂಬ ಕಳಪೆ ಪುಸ್ತಕ ಪ್ರಕಟಿಸಿ ಮಾಡಬಾರದ ಅವಾಂತರ ಮಾಡುತ್ತಿರುವುದಷ್ಟೆ ಅಲ್ಲದೆ ಪ್ರಬಂಧ ಸ್ಪರ್ಧೆಯಲ್ಲಿ ಲಿಂಗಾಯತರ ಮನಸ್ಸಿಗೆ ನೋವಾಗುವ ವಿಷಯಗಳನ್ನು ಇಟ್ಟಿದ್ದಾರೆ. ಈಗಾಗಲೆ ಲಿಂಗಾಯತ ಮಠಗಳನ್ನು ಹಾಗು ಶಿಕ್ಷಣ ಸಂಸ್ಥೆಗಳನ್ನು ನಾಶಗೊಳಿಸುವ ಹಿಂದುತ್ವವಾದಿಗಳ ಅಜೆಂಡಾ ಬಹಿರಂಗಗೊಂಡಿದೆ. ಲಿಂಗಾಯತ ಧರ್ಮನಿಷ್ಠ ಮಠಾಧೀಶರ ತೇಜೋವಧೆ ಹಿಂದುತ್ವವಾದಿಗಳ ಮತ್ತೊಂದು ಕುಚೇಷ್ಠೆಯಾಗಿದೆ. ಲಿಂಗಾಯತರು ಹಾಗೂ ಲಿಂಗಾಯತ ಮಠಾಧೀಶರನ್ನು ವೈದಿಕರ ಕುಂಭಮೇಳ ಎಂಬ ಧಾರ್ಮಿಕ ಮೌಢ್ಯದ ಜಾತ್ರೆಗೆ ಎಳೆತರುವ ಯೋಜನೆಗಳು ನಡೆದಿವೆ.

ಚುನಾವಣಾ ದೃಷ್ಟಿಯಿಂದ ಭವಿಷತ್ತಿನಲ್ಲಿ ಲಿಂಗಾಯತ ಧರ್ಮಗುರು ಬಸವಣ್ಣನವರನ್ನು ಹಿಂದೂ ಧರ್ಮದ ದಾರ್ಶನಿಕ ಎಂದು ಬಿಂಬಿಸುವ ಕೃತ್ಯಗಳಲ್ಲಿ ಹಿಂದುತ್ವವಾದಿಗಳು ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ಲಿಂಗಾಯತರನ್ನು ವೈದಿಕತೆಯ ಗುಲಾಮರನ್ನಾಗಿ ಮಾಡಿಕೊಳ್ಳುವ ಅವರ ಹುನ್ನಾರಗಳು ದಿನದಿಂದ ದಿನಕ್ಕೆ ಹೆಚ್ಚು ಬಯಲುಗೊಳ್ಳುತ್ತಿವೆ. ಈಗ ಲಿಂಗಾಯತರು ಸಾಕಷ್ಟು ಜಾಗೃತರಾಗಿದ್ದಾರೆ. ಹಿಂದುತ್ವವಾದಿಗಳ ಈ ಮೂರನೇ ದರ್ಜೆಯ ಹರಕತ್ತುಗಳು ಇನ್ನು ಮುಂದೆ ಯಾವ ನಿರೀಕ್ಷಿತ ಫಲವನ್ನೂ ನೀಡಲಾರವು. ಲಿಂಗಾಯತ ಸಂಸ್ಕೃತಿಯ ನಾಶ ಹಾಗೂ ವಚನ ಚಳವಳಿಯ ಮೂಲ ಆಶಯಕ್ಕೆ ಧಕ್ಕೆ ತರುವ ಕುಚೇಷ್ಟೆಗೆ ಕೈಹಾಕಿದಷ್ಟು ಹಿಂದುತ್ವವಾದಿಗಳಿಗೆ ಎಲ್ಲಾ ರೀತಿಯಲ್ಲಿ ಹಿನ್ನಡೆಯಾಗುವುದಂತೂ ಖಚಿತ. ಇದನ್ನು ಅರ್ಥ ಮಾಡಿಕೊಂಡು ಇನ್ನಾದರೂ ಅವರು ಸಭ್ಯ ನಾಗರಿಕರಂತೆ ವರ್ತಿಸುವುದನ್ನು ಕಲಿತರೆ ಒಳಿತು. ಪ್ರಬಂಧ ಸ್ಪರ್ಧೆಯಂಥ ಗೌರವಯುತ ಹಾಗೂ ಗಂಭೀರ ಶೈಕ್ಷಣಿಕ ಚಟುವಟಿಕೆಯನ್ನು ಕೆಳಮಟ್ಟಕ್ಕಿಳಿಸಿ “ಲಿಂಗತತ್ವದ ಇಸ್ಲಾಮೀಕರಣ” ಎನ್ನುವಂತ ಹಗುರವಾದ, ಅನಾಕರಿಕವಾದ ವಿಷಯವನ್ನು ಇಟ್ಟಿರುವುದು ಹಿಂದುತ್ವವಾದಿಗಳ ಕುಲೀನ ಮನಸ್ಥಿತಿಯನ್ನು ಅನಾವರಣಗೊಳಿಸಿದ್ದಷ್ಟೇ ಅಲ್ಲದೆ, ಕರ್ನಾಟಕದಲ್ಲಿ ಅವರ ರಾಜಕೀಯ ಅವನತಿಗೆ ನಾಂದಿ ಹಾಡಬಲ್ಲದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ದೇಶದಲ್ಲಿ ಹಿಂದುತ್ವ ರಾಜಕಾರಣ ಕಳೆದೊಂದು ದಶಕದಲ್ಲಿ ಸಭ್ಯತೆಯ ಎಲ್ಲೆಯನ್ನು ಮೀರಿ ವರ್ತಿಸುತ್ತಿರುವುದು ಭವಿಷ್ಯತ್ತಿನಲ್ಲಿ ರಾಜಕೀಯ ಪ್ರೇರಿತ ಹಿಂದುತ್ವ ಸಿದ್ಧಾಂತದ ಅವನತಿಗೆ ಮುನ್ನುಡಿ ಬರೆಯುವುದಂತೂ ಖಚಿತ.

ಆಕರಗಳು:
೧. ಪಾರ್ಸಿ ಮತ್ತು ವೈದಿಕ ಧರ್ಮದ ಸಾಮ್ಯತೆಗಳಿಗಾಗಿ ಝೆಂಡ್ ಅವೆಸ್ತಾ ಹಾಗು ಋಗ್ವೇದಗಳನ್ನ ಪರಾಮರ್ಶಿಸಬೇಕಾಗಿ ಓದುಗರಲ್ಲಿ ವಿನಂತಿ.
೨. “ಪಾಶ್ಚಿಮಾತ್ಯ ನಾಗರಿಕತೆಯು ಭಾರತದಲ್ಲಿ ಆರಂಭವಾಯಿತೆ?” ಲೇಖಕ: ಸಾಲ್ವಟೋರ್ ಬಾಬೋನ್ಸ್. ‘ದಿ ಫಸ್ಟಪೋಸ್ಟ್.ಕಾಮ್’ ವೆಬ್ ಜರ್ನಲ್ˌ ಮೇˌ ೩೧ˌ ೨೦೨೩.

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಜೆನ್-ಝಿಗಳಿಂದ ಕಲಿಯಬೇಕಾದ ಪಾಠಗಳೇನು?

ಭ್ರಷ್ಟಗೊಂಡ ನಮ್ಮ ಶಿಕ್ಷಣ ವ್ಯವಸ್ಥೆಯಿಂದ ರೋಸಿ‌ ಹೋದ ಮತ್ತು ಭವಿಷ್ಯದ ಭರವಸೆಯನ್ನೇ...

ಪ್ರೀಮಿಯಂ ಲೇಖನ | ಸಂಗೀತದಲ್ಲಿ ಅಪಸ್ವರ ನುಡಿಸುತ್ತಿರುವ ಹವಾಮಾನ ಬದಲಾವಣೆ!

ಹವಾಮಾನ ಬದಲಾವಣೆಯು ಕೇವಲ ಕೃಷಿ ಅಥವಾ ಪರಿಸರದ ಸಮಸ್ಯೆಯಲ್ಲ. ಅದರ ಪರಿಣಾಮ...

ಪ್ರೀಮಿಯಂ ಲೇಖನ | ಎಐ ಡೇಟಾ ಸೆಂಟರ್‌ಗಳ ವಿಸ್ತರಣೆ ಮತ್ತು ಪರಿಸರ ಸವಾಲು

2025ರಲ್ಲಿ ಅಮೆರಿಕದಲ್ಲಿ ಸ್ಥಳೀಯ ವಿರೋಧದ ಕಾರಣ ಸುಮಾರು 152 ಬಿಲಿಯನ್ ಡಾಲರ್...

ಪ್ರೀಮಿಯಂ ಲೇಖನ | ಅಮೆರಿಕೆಯ ಭಾರತೀಯರ ತ್ರಿಶಂಕು ಸ್ಥಿತಿ: ʼಮೌನಂ ಸರ್ವತ್ರ ಸಾಧನಂʼ- ಉಳಿವಿನ ತಂತ್ರ

ಅಮೆರಿಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ, ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರ...