ಉಡುಪಿ | ಹೂಡೆಯಲ್ಲಿ ನವಜಾತ ಶಿಶು ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ SDPI ಮನವಿ

Date:

ಉಡುಪಿ ನಗರದ ಹೂಡೆ ಪ್ರದೇಶದಲ್ಲಿ ಕಳೆದ ಸೆಪ್ಟೆಂಬರ್ 7ರಂದು ನಡೆದ ನವಜಾತ ಶಿಶು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ, ಪ್ರಕರಣವನ್ನು ಶೀಘ್ರವಾಗಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ SDPI ಉಡುಪಿ ಕ್ಷೇತ್ರ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

- Advertisement -

ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ಎಸ್. ನಾಯಕ್ ಅವರನ್ನು ಭೇಟಿ ಮಾಡಿದ SDPI ಮುಖಂಡರು, ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಿ ತಪ್ಪಿತಸ್ಥರನ್ನು ಪತ್ತೆಹಚ್ಚಬೇಕು. ಅಲ್ಲದೆ, ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಉಂಟಾಗಿರುವ ಆತಂಕವನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ...

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್ ಕಲಾಪದಲ್ಲಿ, "ವಂದೇ ಮಾತರಂ" ವಿಷಯವನ್ನು ಮುನ್ನೆಲೆಗೆ ತಂದು, ಯುವಜನತೆಯ ಗಮನವನ್ನು ಬೇರೆಡೆ ಸೆಳೆಯುವ old trick ಮಾಡಲಾಗಿದೆ ಎಂಬುದು ಈ...

ಮುಂಗಾರು ಹಿನ್ನಡೆ, ಹಿಂಗಾರಿಗೆ ಕಂಟಕ: ದೇಶದಲ್ಲಿ 2027ರವರೆಗೆ ಬರಗಾಲದ ಆತಂಕ!

ಪ್ರಕೃತಿಯ ಏರುಪೇರುಗಳನ್ನು ಎದುರಿಸಲು ಸರ್ಕಾರಗಳು ತಕ್ಷಣದ ಆಪತ್ಕಾಲೀನ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ದೀರ್ಘಕಾಲೀನ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ. ಮಣ್ಣಿನ ತೇವಾಂಶ ಸಂರಕ್ಷಣೆ, ನೀರಾವರಿ ವ್ಯಾಪ್ತಿಯ ವೈಜ್ಞಾನಿಕ ವಿಸ್ತರಣೆ, ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಹೊಂದಿರುವ(Climate-resilient)...

ಕಾಲೇಜು ಕ್ಯಾಂಪಸ್‌ಗಳಲ್ಲಿ ದಲಿತ ವಿದ್ಯಾರ್ಥಿಗಳೇ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?

‘ದಲಿತ ವಿದ್ಯಾರ್ಥಿಗಳೇ ಏಕೆ ಹೀಗೆ ಸಾಯುತ್ತಿದ್ದಾರೆ?’ — ಇದು ಐಐಟಿ ಬಾಂಬೆಯ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ತಾಯಿ ಸೋನಾಲಿ ವಾಕೋಡೆ ಕೇಳಿದ ಪ್ರಶ್ನೆ. ಈ ಪ್ರಶ್ನೆ ಕೇವಲ ಮಗನನ್ನು ಕಳೆದುಕೊಂಡ ತಾಯಿಯ...

ಈ ಸಂದರ್ಭದಲ್ಲಿ SDPI ಹೂಡೆ ಗ್ರಾಮ ಸಮಿತಿ ಅಧ್ಯಕ್ಷ ಅಲ್ತಾಫ್, ಉಡುಪಿ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಮುಝಕ್ಕಿರ್ ಹಾಗೂ ಸಮಿತಿ ಸದಸ್ಯರಾದ ಬಶೀರ್ ಮತ್ತು ಫೈಸಲ್ ಉಪಸ್ಥಿತರಿದ್ದರು.

ಮನವಿಯಲ್ಲಿ ಏನಿದೇ ?

2026ರ ಸೆಪ್ಟೆಂಬರ್ 7ರಂದು ಬೆಳಗ್ಗೆ ಸುಮಾರು 7:10 ರ ವೇಳೆಗೆ ಮಲ್ಪೆ ಪೊಲೀಸ್ ರಾಣಾ ವ್ಯಾಪ್ತಿಯ ಹೂಡೆ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ನವಜಾತ ಗಂಡು ಶಿಶು ಪತ್ತೆಯಾಗಿದ್ದು, ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದುರದೃಷ್ಟವಶಾತ್ ಅದೇ ದಿನ ಬೆಳಗ್ಗೆ ಸುಮಾರು 10 :30ರ ವೇಳೆಗೆ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿರುವುದು ವರದಿಯಾಗಿದೆ. ಇದು ಅತ್ಯಂತ ದುಃಖುಕರ ಹಾಗೂ ಅಮಾನವೀಯ ಘಟನೆಯಾಗಿದೆ.

ಈ ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ, ಗೊಂದಲ ಹಾಗೂ ಕಳವಳವನ್ನು ಉಂಟುಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಇನ್ನೂ ಪತ್ತೆಯಾಗದಿರುವುದರಿಂದ ಸಾರ್ವಜನಿಕರಲ್ಲಿ ಹಲವು ಅನುಮಾನಗಳು ಮೂಡಿದ್ದು, ಈ ಆತಂಕ ಮತ್ತು ಗೊಂದಲಗಳಿಗೆ ಅಂತ್ಯ ಹಾಡಲು ಪೊಲೀಸರು ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಿ, ತಪ್ಪಿತಸ್ಥರನ್ನು ಶೀಘ್ರವಾಗಿ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರ ಪರವಾಗಿ ಆಗ್ರಹಿಸುತ್ತೇವೆ.

ಹೂಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಿಶಾ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿ ವಾಸಿಸುತ್ತಿರುವ ವಲಸೆ ಕಾರ್ಮಿಕರ ಕುರಿತು ಸಾರ್ವಜನಿಕರಲ್ಲಿ ಕೆಲವು ಅನುಮಾನಗಳು ಹಾಗೂ ಅನೈತಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಈ ಮಾಹಿತಿಗಳ ಸತ್ಯಾಸತ್ಯತೆಯನ್ನು ಪೊಲೀಸ್ ಇಲಾಖೆ ಪರಿಶೀಲಿಸಿ, ಪ್ರಕರಣಕ್ಕೆ ಸಂಬಂಧಿಸಿದವರ ಕುರಿತು ಸಮಗ್ರ ತನಿಖೆ ನಡೆಸಬೇಕು.

ಅದೇ ವೇಳೆ, ತನಿಖೆಯ ಹೆಸರಿನಲ್ಲಿ ಯಾವುದೇ ನಿರಪರಾಧಿ ಸ್ಥಳೀಯರು ಅಥವಾ ವಲಸೆ ಕಾರ್ಮಿಕರಿಗೆ ಅನಗತ್ಯ ತೊಂದರೆ ನೀಡದಂತೆ ಕ್ರಮ ವಹಿಸಬೇಕು. ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಪ್ರಕರಣದ ಸತ್ಯಾಂಶವನ್ನು ಬಹಿರಂಗಪಡಿಸುವ ಮೂಲಕ ಸ್ಥಳೀಯರಲ್ಲಿ ಉಂಟಾಗಿರುವ ಆತಂಕ, ಗೊಂದಲವನ್ನು ನಿವಾರಿಸಬೇಕು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪ್ರದೇಶದಲ್ಲಿ ಪೊಲೀಸ್ ಗಸ್ತು ಹೆಚ್ಚಿಸುವುದು, ಸಿಸಿಟಿವಿ ವ್ಯವಸ್ಥೆ ಬಲಪಡಿಸುವುದು ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿನಮ್ರವಾಗಿ ಮನವಿ ಮಾಡುತ್ತೇವೆ.

ಅಲ್ತಾಫ್ ಕೆಮ್ಮಣ್ಣು
ಅಧ್ಯಕ್ಷರು SDPI ಹೂಡೆ ಗ್ರಾಮ ಸಮಿತಿ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಲಮಟ್ಟಿ 3ನೇ ಹಂತದ ಯೋಜನೆ ಜಾರಿಗೆ ಹೋರಾಟ ತೀವ್ರ

ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು 519.60 ಮೀಟರ್‌ನಿಂದ 524.256...

ರಾಯಚೂರು | ದಲಿತರ ಸರಣಿ ಮೂರು ಕೊಲೆಗಳ ಸಿಐಡಿ ತನಿಖೆಗೆ ಆಗ್ರಹ: ಗೃಹ ಸಚಿವರಿಗೆ ಮನವಿ

ಜಿಲ್ಲೆಯಲ್ಲಿ ನಡೆದ ದಲಿತರ ಸರಣಿ ಮೂರು ಕೊಲೆ ಪ್ರಕರಣಗಳನ್ನು ಸಿಐಡಿ ತನಿಖೆಗೆ...

ರಾಯಚೂರು | ಬಸವರಾಜ ಆತ್ಮಹತ್ಯೆ ಪ್ರಕರಣ: 15 ಮಂದಿ ವಿರುದ್ಧ ಕೇಸ್, ಮೂವರ ಬಂಧನ

ಮಸ್ಕಿ ತಾಲ್ಲೂಕಿನ ಮೆದಕಿನಾಳ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿ...