ಉಡುಪಿ | ಮೋದಿ ಮಾಡಿದ ತಪ್ಪಿಗೆ ದೇಶದ ಜನರೇಕೆ ಶಿಕ್ಷೆ ಅನುಭವಿಸಬೇಕು..? ಶುಭದ ರಾವ್ ಪ್ರಶ್ನೆ

Date:

ಮಧ್ಯಪ್ರಾಚ್ಯ ಯುದ್ದದ ಕಾರಣದಿಂದಾಗಿ ದೇಶದ ಉತ್ಪಾದನಾ ಕ್ಷೇತ್ರದಲ್ಲಿ ಮತ್ತು ಜನಜೀವನದ ಮೇಲೆ ಮುಂದೆ ಭಾರಿ ದುಷ್ಪರಿಣಾಮಗಳು ಬೀಳಲಿವೆ ಎಂದು ಲೋಕಸಭಾ ವಿರೋದಪಕ್ಷದ ನಾಯಕ ಸನ್ಮಾನ್ಯ ರಾಹುಲ್ ಗಾಂಧಿಯವರು ಯುದ್ಧದ ಆರಂಭದ ದಿನಗಳಿಂದಲೂ ಸರ್ಕಾರವನ್ನು ಎಚ್ಚರಿಸುತ್ತಾ ಬಂದಿದ್ದಾರೆ, ಆದರೆ ಆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಮಾತನ್ನು ಕೇಳದೆ ಪ್ರಧಾನಿ ಮೋದಿಯವರು ಸರ್ವಾಧಿಕಾರಿ ಧೋರಣೆ ಅನುಸರಿಸಿದ ಕಾರಣದಿಂದಾಗಿ ದೇಶಕ್ಕೆ ಇಂದು ಆರ್ಥಿಕ ದಿಗ್ಭಂದನದಂತಾ ಪರಿಸ್ಥಿತಿ ಎದುರಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಹೇಳಿದ್ದಾರೆ.

- Advertisement -

ಅಂದು ರಾಹುಲ್ ಗಾಂಧಿ ಮಾತಿಗೆ ಅಪಹಾಸ್ಯ ಮಾಡಿದ ಮೋದಿಯವರು ಇಂದು ದೇಶದ ಜನರಿಗೆ ಚಿನ್ನ ಖರೀದಿಸಬೇಡಿ, ಕಾರಲ್ಲಿ ಓಡಾಟ ಮಾಡಬೇಡಿ, ವಿದೇಶ ಪ್ರಯಾಣ ಮಾಡಬೇಡಿ, ರಸಗೊಬ್ಬರ ಖರೀದಿ ಮಾಡಬೇಡಿ, ಮನೆಯಿಂದ ಹೊರಗೆ ಬರಬೇಡಿ ಎನ್ನುವ ಬಿಟ್ಟಿ ಸಲಹೆಯನ್ನು ನೀಡಿದ್ದಾರೆ. ಪ್ರಧಾನಿ ಮೋದಿಯವರು ಮಾಡಿದ ತಪ್ಪಿಗೆ ದೇಶದ ಜನರು ಯಾಕೆ ಶಿಕ್ಷೆ ಅನುಭವಿಸಬೇಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಖಾರವಾಗಿ ಪ್ರಶ್ನಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಸರ್ಕಾರ ನಡೆಸುವವರು ವಿರೋದ ಪಕ್ಷಗಳ ನಾಯಕರ ಮಾತಿಗೂ ಮನ್ನಣೆ ನೀಡಬೇಕು, ವಿರೋದ ಪಕ್ಷದ ನಾಯಕರ ಮಾತಿನಲ್ಲಿ ದೇಶದ ಜನರ ಹಿತ ಅಡಗಿದೆ ಎನ್ನುವುದನ್ನು ಈಗಲಾದರೂ ಪ್ರಧಾನಿ ಮೋದಿಯವರು ಅರ್ಥ ಮಾಡಿಕೊಳ್ಳಲಿ. ದೇಶಕ್ಕೆ ಸಂಕಟ ಬಂದಾಗ ಆಡಳಿತ ಪಕ್ಷಗಳು ಮತ್ತು ವಿರೋಧ ಪಕ್ಷಗಳು ಜೊತೆಯಾಗಿ ದೇಶದ ಜನರಿಗಾಗಿ ಕೆಲಸ ಮಾಡುವುದು ಇದು ಪ್ರಜಾಪ್ರಭುತ್ವದ ಪ್ರಧಾನ ಆಶಯವಾಗಿದೆ, ಆದರೆ ಸರ್ವಾಧಿಕಾರಿ ಧೋರಣೆಯ ನರೇಂದ್ರ ಮೋದಿಯವರು ಇಂದು ಯಾರ ಮಾತನ್ನು ಕೇಳದೆ ದೇಶವನ್ನು ಆರ್ಥಿಕ ದಿಗ್ಬಂಧನಕ್ಕೆ ಕೊಂಡೊಯ್ದಿದ್ದಾರೆ. ದೇಶಕ್ಕೆ ಇಂತಾ ಪರಿಸ್ಥಿತಿಯನ್ನು ತಂದೊದಗಿಸಿದ ಪ್ರಧಾನಿ ಮೋದಿ ದೇಶದ ಜನರ ಬಳಿ ಕ್ಷಮೆ ಯಾಚಿಸಬೇಕು.

ದೇಶದ ಪ್ರಜೆಗಳು ಯಾವ ರೀತಿಯ ಬಟ್ಟೆಯನ್ನು ತೊಡಬೇಕು, ಯಾವ ರೀತಿಯ ಕೇಶವಿನ್ಯಾಸ ಮಾಡಿಸಿಕೊಳ್ಳಬೇಕು, ಯಾವ ರೀತಿಯ ಆಭರಣಗಳನ್ನ ತೊಡಬೇಕು, ಯಾವ ರೀತಿಯ ವಾಹನಗಳಲ್ಲಿ ಓಡಾಟ ಮಾಡಬೇಕು, ಯಾವ ದೇಶಗಳಿಗೆ ಪ್ರವಾಸ ಮಾಡಬೇಕು ಎಂದು ಆಡಳಿತ ನಡೆಸುವವರೇ ನಿರ್ಧಾರ ಮಾಡುವುದು ಇದು ಉತ್ತರ ಕೋರಿಯಾದ ಸರ್ವಾಧಿಕಾರಿ ಶೈಲಿಯಾಗಿದೆ. ಪ್ರಧಾನಿ ಮೋದಿಯವರ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶಕ್ಕೆ ಇಂತಾ ಪರಿಸ್ಥಿತಿ ಎದುರಾಗಿದೆ, ಪ್ರಧಾನಿಯವರು ಇನ್ನಾದರೂ ತಜ್ಙರ ಅಭಿಪ್ರಾಯವನ್ನು ಪಡೆದು ದೇಶದ ಜನರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲಿ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಗ್ರಂಥಾಲಯದಲ್ಲಿ ಎಐ ಬಳಕೆ ಇತಿ-ಮಿತಿ ಇರಲಿ: ವಿಶ್ರಾಂತ ಕುಲಪತಿ ಪ್ರೊ. ಬಿ.ಡಿ.ಕುಂಬಾರ

"ಗ್ರಂಥಾಲಯದಲ್ಲಿ ಎಐ ಅಳವಡಿಕೆ ಮಾಡಿಕೊಳ್ಳುವದು ಒಳ್ಳೆಯದು. ಆದರೆ ಇದು ಮನುಷ್ಯನ ಸೃಜನಶೀಲತೆ...

ಯಾದಗಿರಿ | ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಸಿಡಬ್ಲ್ಯೂ‌ಎಫ್‌ಐ, ಸಿಐಟಿಯು ಆಗ್ರಹ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ...

ಮಂಗಳೂರು | ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಓರ್ವ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯ, ನಾಲ್ವರಿಗೆ ಗಾಯ

ಮಂಗಳೂರಿನ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್‌ನ ಬಾಲ್ಕನಿಯ ತಡೆಗೋಡೆ ಕುಸಿದು...

ಯಾದಗಿರಿ | ಯಕ್ಷಿಂತಿ ಗ್ರಾಮಕ್ಕೆ ಮೂಲಸೌಲಭ್ಯ ನೀಡಿ: ಪ್ರಜಾಸೇವಾ ಅಭಿಯಾನದಲ್ಲಿ ಗ್ರಾಮಸ್ಥರ ಮನವಿ

ವಡಗೇರಾ ತಾಲ್ಲೂಕಿನ ಹಯ್ಯಾಳ ಬಿ ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ...