ಉಡುಪಿ | ಅಗ್ರಿಗೋಲ್ಡ್ ಹಗರಣ: ದಾಖಲೆ ಪರಿಶೀಲನಾ ಕೇಂದ್ರದಲ್ಲಿ ಸಂತ್ರಸ್ತರ ಪರದಾಟ

Date:

ಬಹುಕೋಟಿ ರೂ.ಗಳ ಅಗ್ರಿಗೋಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರ ದಾಖಲೆ ಪರಿಶೀಲನೆ ಕಾರ್ಯ ಉಡುಪಿಯಲ್ಲಿ ಆರಂಭವಾಗಿದ್ದು, ನಿಗದಿತ ಟೋಕನ್‌ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರು ಆಗಮಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಅಧೀಕ್ಷಕರ ಕಚೇರಿ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

- Advertisement -

ಆಂಧ್ರಪ್ರದೇಶದ ಸಿಐಡಿ ಅಧಿಕಾರಿಗಳು ಕರ್ನಾಟಕ ಸಿಐಡಿ ಪೊಲೀಸರ ಸಹಕಾರದೊಂದಿಗೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಂತ್ರಸ್ತರ ಬಾಂಡ್‌ಗಳ ಪರಿಶೀಲನೆಗೆ ಬನ್ನಂಜೆಯಲ್ಲಿರುವ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ವಿಶೇಷ ಕೇಂದ್ರ ಸ್ಥಾಪಿಸಿದ್ದಾರೆ. ಅ.27ರಿಂದ ನ.2ರವರೆಗೆ ಪರಿಶೀಲನೆಗೆ ದಿನಾಂಕ ನಿಗದಿಪಡಿಸಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಆಂಧ್ರಪ್ರದೇಶದ ವಿಜಯವಾಡದಲ್ಲಿ ಪ್ರಧಾನ ಕಚೇರಿ ಹೊಂದಿದ್ದ ಅಗ್ರಿಗೋಲ್ಡ್ ಸಂಸ್ಥೆಯು ಕರ್ನಾಟಕದಲ್ಲಿ 56 ಶಾಖೆಗಳನ್ನು ತೆರೆದು ಸಿಬ್ಬಂದಿ ಹಾಗೂ ಏಜೆಂಟರನ್ನು ನೇಮಿಸಿತ್ತು. ಹಣ ದ್ವಿಗುಣಗೊಳಿಸುವುದು, ಹೆಚ್ಚಿನ ಬಡ್ಡಿ ನೀಡುವುದು ಹಾಗೂ ನಿವೇಶನ ಕೊಡಿಸುವುದಾಗಿ ಆಮಿಷವೊಡ್ಡಿ ರಾಜ್ಯದ 8,41,616 ಹೂಡಿಕೆದಾರರಿಂದ ಒಟ್ಟು 1,639,63,45,230 ರೂ. ಸಂಗ್ರಹಿಸಿ ವಂಚಿಸಿರುವ ಆರೋಪ ಸಂಸ್ಥೆಯ ಮೇಲಿದೆ.

Advertisements

ಈ ಪ್ರಕರಣದ ಕುರಿತು ಆಂಧ್ರಪ್ರದೇಶ ಮತ್ತು ಕರ್ನಾಟಕ ಸಿಐಡಿ ಪೊಲೀಸರು ತನಿಖೆ ನಡೆಸಿದ್ದು, ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದೀಗ ಸಂತ್ರಸ್ತರ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಟೋಕನ್‌ಗಾಗಿ ಸಂತ್ರಸ್ತರ ಪರದಾಟ

ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅ.27ರಂದು 150 ಸಂತ್ರಸ್ತರಿಗೆ ಟೋಕನ್ ನೀಡಿ, ಅ.28ರಂದು ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಗ್ರಿಗೋಲ್ಡ್‌ನಿಂದ ನಷ್ಟ ಅನುಭವಿಸಿದ ಸುಮಾರು 1.5 ಲಕ್ಷ ಸಂತ್ರಸ್ತರು ಇರಬಹುದೆಂಬ ಮಾಹಿತಿ ಹಿನ್ನೆಲೆಯಲ್ಲಿ ನೂರಾರು ಮಂದಿ ಪೊಲೀಸ್ ಕಚೇರಿಗೆ ಆಗಮಿಸಿದರು.

ದೂರದ ದಾಂಡೇಲಿ, ಹರಿಹರ ಸೇರಿದಂತೆ ವಿವಿಧ ಪ್ರದೇಶಗಳಿಂದ ಮಹಿಳೆಯರು ಮತ್ತು ವೃದ್ಧರೂ ಆಗಮಿಸಿದ್ದರು. ದಿನಕ್ಕೆ 150 ಮಂದಿಗೆ ಮಾತ್ರ ಟೋಕನ್ ನೀಡುವ ವ್ಯವಸ್ಥೆ ಇದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಗೊಂದಲ ಉಂಟಾಯಿತು. ಪೊಲೀಸರು ಮನವಿ ಮಾಡಿದರೂ ಟೋಕನ್ ನೀಡುವಂತೆ ಸಂತ್ರಸ್ತರು ಒತ್ತಾಯಿಸಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಅವರು ಸಂತ್ರಸ್ತರಿಗೆ ಟೋಕನ್ ವ್ಯವಸ್ಥೆ ಹಾಗೂ ದಾಖಲೆ ಪರಿಶೀಲನೆಯ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದರು. ತಾಲೂಕುವಾರು ಟೋಕನ್ ವಿತರಿಸುವ ವ್ಯವಸ್ಥೆ ಮಾಡಲಾಗುವುದು. ಎಲ್ಲ ಸಂತ್ರಸ್ತರ ದಾಖಲೆಗಳನ್ನು ಪರಿಶೀಲಿಸಲಾಗುವುದು. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು. ಬಳಿಕ ಟೋಕನ್ ಪಡೆದವರನ್ನು ಹೊರತುಪಡಿಸಿ ಉಳಿದವರು ವಾಪಸಾದರು.

ಹೆಬ್ರಿ ತಾಲೂಕಿಗೆ ಮೂರು ದಿನ ಅವಕಾಶ

ಪೊಲೀಸ್ ಪ್ರಕಟಣೆಯ ಪ್ರಕಾರ, ಅ.29ರಂದು ಹೆಬ್ರಿ ತಾಲೂಕಿನ ಎಲ್ಲ ಗ್ರಾಮಗಳ ಅಗ್ರಿಗೋಲ್ಡ್ ಬಾಂಡ್ ಹೊಂದಿರುವ ಗ್ರಾಹಕರಿಗೆ, ಅ.30ರಂದು ಮುನಿಯಾಲು ಹಾಗೂ ಆಸುಪಾಸಿನ ಗ್ರಾಮಗಳ ಗ್ರಾಹಕರಿಗೆ ಮತ್ತು ಅ.31ರಂದು ಅಜೆಕಾರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರಿಗೆ ದಾಖಲೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಟೋಕನ್ ವಿತರಣೆ ಆರಂಭವಾಗಲಿದ್ದು, ಮೊದಲಿಗೆ ಆಗಮಿಸುವ 150 ಗ್ರಾಹಕರಿಗೆ ಮಾತ್ರ ಟೋಕನ್ ನೀಡಲಾಗುತ್ತದೆ. ನಿಗದಿತ ದಿನದಂದು ಹೆಬ್ರಿ ತಾಲೂಕಿಗೆ ಸೇರಿದ ಗ್ರಾಹಕರು ಮಾತ್ರ ಕೇಂದ್ರಕ್ಕೆ ಆಗಮಿಸಬೇಕು ಎಂದು ಸೂಚಿಸಲಾಗಿದೆ.

ಅಂಗವೈಕಲ್ಯ, ಅನಾರೋಗ್ಯ ಅಥವಾ ಇತರ ಆರೋಗ್ಯ ಸಮಸ್ಯೆಗಳಿಂದ ಸ್ವತಃ ಹಾಜರಾಗಲು ಸಾಧ್ಯವಾಗದವರು ತಮ್ಮ ಏಜೆಂಟರು ಅಥವಾ ಸಂಬಂಧಿಕರ ಮೂಲಕ ಬಾಂಡ್‌ಗಳನ್ನು ಸಲ್ಲಿಸಬಹುದು. ಅಶಕ್ತರು, ಗರ್ಭಿಣಿಯರು ಹಾಗೂ ವೈದ್ಯಕೀಯ ಸಮಸ್ಯೆ ಹೊಂದಿರುವ ಗ್ರಾಹಕರು ಸಂಬಂಧಿತ ವೈದ್ಯಕೀಯ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ತಿಳಿಸಲಾಗಿದೆ.

ನ.1ರಂದು ರಜೆ ಇರುವುದರಿಂದ ನ.2ರಿಂದ ಯಾವ ತಾಲೂಕು ಹಾಗೂ ಜಿಲ್ಲೆಯ ಗ್ರಾಹಕರಿಗೆ ಅವಕಾಶ ನೀಡಲಾಗುತ್ತದೆ ಎಂಬುದನ್ನು ಅ.31ರ ಸಂಜೆ ಒಳಗೆ ಪ್ರಕಟಿಸಲಾಗುವುದು. ಅ.29ರಂದು ಹೆಬ್ರಿ ತಾಲೂಕಿನಿಂದ ಆಗಮಿಸಿದರೂ ಟೋಕನ್ ಸಿಗದ ಗ್ರಾಹಕರಿಗೆ ಮುಂದಿನ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 0820-2526444 ಅಥವಾ 9480805400 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಅಗ್ರಿಗೋಲ್ಡ್ ದಾಖಲೆ ಪರಿಶೀಲನೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಪೊಲೀಸರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಉಡುಪಿ ಜಿಲ್ಲೆಯಲ್ಲಿಯೇ 40 ಸಾವಿರಕ್ಕೂ ಅಧಿಕ ಸಂತ್ರಸ್ತರು ಇರುವುದರಿಂದ ನ.2ರವರೆಗೆ ನಿಗದಿಪಡಿಸಿರುವ ಪರಿಶೀಲನಾ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ದಿನಕ್ಕೆ 150 ಮಂದಿಯ ದಾಖಲೆಗಳನ್ನು ಮಾತ್ರ ಪರಿಶೀಲಿಸಲು ಸಾಧ್ಯವಾಗುವುದರಿಂದ ತಾಲೂಕುವಾರು ಸಂತ್ರಸ್ತರನ್ನು ವಿಂಗಡಿಸಿ ಕರೆಸಲು ನಿರ್ಧರಿಸಲಾಗಿದೆ. ಪ್ರತಿ ತಾಲೂಕಿಗೆ ಎರಡು ಅಥವಾ ಮೂರು ದಿನಗಳ ಅವಕಾಶ ನೀಡುವ ಕುರಿತು ತೀರ್ಮಾನಿಸಲಾಗಿದೆ. ಎಲ್ಲ ಸಂತ್ರಸ್ತರ ದಾಖಲೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts
Advertisements

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ಬಿಜೆಪಿ-ಜೆಡಿಎಸ್ ನೇತೃತ್ವದ ಮೈತ್ರಿಕೂಟ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ನಾಲ್ಕು ಕ್ಷೇತ್ರದ...

ಕೋಲಾರ | ಡಿಸಿಸಿ ಬ್ಯಾಂಕ್ ಅಕ್ರಮಗಳ ತನಿಖೆಗೆ ಸಹಕರಿಸಲಿ: ಅನಿಲ್‌ಕುಮಾರ್ ಒತ್ತಾಯ

ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ನಲ್ಲಿ ನಡೆದಿರುವ ಹಣಕಾಸು ಅಕ್ರಮಗಳ...

ಜೋಯ್ಡಾ | ದೂರು ಹಿಂಪಡೆಯಲು ರೂ.10 ಲಕ್ಷ ಬೇಡಿಕೆ! ಅಬಕಾರಿ ನಿರೀಕ್ಷಕರಿಂದ ದೂರು

ಉತ್ತರ ಕನ್ನಡ ಜಿಲ್ಲೆ, ಜೋಯ್ಡಾದ ಅನಮೋಡ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ...

ಗದಗ | ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಸಾಕ್ಷರತೆ, ತಾಂತ್ರಿಕ ಕೌಶಲ್ಯ ಬೆಳೆಸುವುದು ಅಗತ್ಯ: ಆರ್.ಎಸ್ ಬುರಡಿ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಸಾಕ್ಷರತೆ ಹಾಗೂ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸುವುದರ...