ಕೇಂದ್ರ ಸರಕಾರದ ಕಾರ್ಮಿಕ ರೈತ ಕೂಲಿಕಾರರ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ನಗರದ ಅಂಚೆ ಕಚೇರಿ ಎದುರು ಪ್ರತಿಭಟನೆ, ರಸ್ತೆ ತಡೆ ನಡೆಸಿ ಬಂಧನಕ್ಕೊಳಗಾದರು.
ನಾಲ್ಕು ಲೇಬರ್ ಕೋಡ್ ಜಾರಿಯಿಂದ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳಲಾಗುತ್ತಿದೆ. ರಾಜ್ಯ ಸರ್ಕಾರ ಪರಿಷ್ಕರಿಸಿದ ಕನಿಷ್ಠ ವೇತನ ಕಟ್ಟು ನಿಟ್ಟಿನ ಜಾರಿ ಮಾಡಬೇಕು ಕಾರ್ಮಿಕ ವರ್ಗ ಬಲಿಕೊಟ್ಟು ಬಂಡವಾಳಗಾರರ ಸೂಪರ್ ಲಾಭಗಳಿಗೆ ಅನುವು ಮಾಡಿಕೊಡುವ ಕಾರ್ಪೋರೇಟ್ ಕಂಪೆನಿಗಳೇ ದೇಶ ಬಿಟ್ಟು ತೊಲಗಿ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.

ದೇಶದ ಯುವಜನರನ್ನು ಗುತ್ತಿಗೆ ಆಧಾರದಲ್ಲಿ ದುಡಿಸಿ ಶೋಷಿಸುವ ನೀತಿಗಳು ಮುಂದೊಂದು ದಿನ ಜೆನ್ ಜೀ ಹೋರಾಟದ ರೀತಿಯಲ್ಲಿಯೇ ಬುಗಿಲೇಳಲಿದೆ.ಇಂದಿಗೂ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಏಜೆನ್ಸಿಗಳು ತಿಂಗಳುಗಟ್ಟಲೇ ವೇತನ ಬಾಕಿ ಇರಿಸಿಕೊಂಡರು ಜಿಲ್ಲಾಡಳಿತ ಕ್ರಮವಹಿಸಿಲ್ಲ ಜಿಲ್ಲಾ ಗ್ರಂಥಾಲಯಗಳ ಸಿಬ್ಬಂದಿಗೆ ನಾಲ್ಕು ತಿಂಗಳಿಂದ ವೇತನ ನೀಡಿಲ್ಲ ಎಂದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಎಡಪಕ್ಷಗಳು ಬಾಹ್ಯ ಬೆಂಬಲ ನೀಡಿ ಗ್ರಾಮೀಣ ಜನರ ಆದಾಯ ಹೆಚ್ಚಿಸಲು ಆರ್ಥಿಕ ಚಟುವಟಿಕೆಗೆ ಪೂರಕವಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರದ್ದುಗೊಳಿಸಿ ಅನುದಾನವೇ ಕೊಡದ ವಿಬಿಜಿ ಗ್ರಾಮ್ ಜಿ ಯೋಜನೆ ಬಡವರ ಪಾಲಿಗೆ ಇದೊಂದು ಮರಣಶಾಸನವಾಗಿ ಮಾಡಿದೆ ಎಂದರು.ರೈತರು ಕಾರ್ಮಿಕರು, ಕೂಲಿಕಾರರ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹೋರಾಟಗಾರರು 1942 ಆಗಸ್ಟ್ 08 ಎತ್ತಿದ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಹೋರಾಟದಂತೆ ಬಹುರಾಷ್ಟ್ರೀಯ ಕಾರ್ಪೋರೇಟ್ ಸಂಸ್ಥೆಗಳೇ ದೇಶ ಬಿಟ್ಟು ತೊಲಗಿ ಎಂಬ ಮುಂದಿನ ಹೋರಾಟ ತೀವ್ರ ಗೊಳಿಸಲಿದೆ ಎಂದು ಹೇಳಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಶಶಿಧರ ಗೊಲ್ಲ ಬೀಡಿ, ಕಟ್ಟಡ,ಕಾರ್ಖಾನೆಗಳ ಕಾರ್ಮಿಕರ ಸಮಸ್ಯೆಗಳನ್ನು ಸರಕಾರ ಮುಂದಾಗಬೇಕು ಎಂದು ಹೇಳಿದರು.
ಅಂಚೆ ಕಚೇರಿಯಿಂದ ರಸ್ತೆ ತಡೆಗೆ ಬಂದ ಕಾರ್ಮಿಕ ರೈತರು ಕೂಲಿಕಾರರನ್ನು ಪೋಲೀಸರು ತಡೆದು ಬಂಧನ ನಡೆಸಿ ಬಿಡುಗಡೆ ಮಾಡಿದರು.
ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್ ಕಾಂಚನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆಯಲ್ಲಿ ಕ್ರಷಿಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷರಾದ ಸೈಯ್ಯದ್ ಅಲಿ ರೈತರಿಗೆ ಬೆಂಬಲ ಬೆಲೆ, ಬಲವಂತದ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಲು ಆಗ್ರಹಿಸಿದರು. ಸುಭಾಶ್ಚಂದ್ರ ನಾಯಕ್, ಉಮೇಶ್ ಕುಂದರ್, ಸುನೀತಾ ಶೆಟ್ಟಿ, ನಳಿನಿ, ನಾಗರಾಜ್ ಕಾಂಚನ್, ಸರೋಜ, ಪ್ರಭಾಕರ್ ಕುಂದರ್, ಮೋಹನಚಂದ್ರ, ನಾಗೇಶ್, ರಮೇಶ್, ವಾಮನ ಪೂಜಾರಿ, ಮುರುಳಿ, ರಂಗನಾಥ್ ಸಾರಿಕ, ಶಾರದ, ಶರ್ಮಿಳಾ ಇದ್ದರು.






