ಉತ್ತರ ಕನ್ನಡ ಜಿಲ್ಲಾಡಳಿತದಿಂದ ಗಣಪತಿ ವಿಸರ್ಜನೆಗೆ ಮೀಸಲಿಟ್ಟ ಕೆರೆಯಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷವಾಗಿದ್ದು, ಇದೀಗ ಯಲ್ಲಾಪುರ ನಗರದ ಜೋಡಿ ಕೆರೆಯಲ್ಲಿ ಗಣಪತಿ ವಿಸರ್ಜನೆಗೆ ಭಯ ಪಡುವಂತಹ ಸ್ಥಿತಿ ಎದುರಾಗಿದೆ.
ಜೋಡಿ ಕೆರೆಯಲ್ಲಿ ಗಣಪತಿ ವಿಸರ್ಜನೆಗಾಗಿ ಸ್ಥಳ ನಿಗದಿ ಮಾಡಲಾಗಿದೆ. ಪ್ರತಿ ವರ್ಷ ಯಲ್ಲಾಪುರ ನಗರದ ಗಣಪತಿಯನ್ನು ಇದೇ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತಿತ್ತು. ಆದರೆ ಕೆಲವು ದಿನದಿಂದ ಈ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ,ಕೆರೆಯಲ್ಲಿ ಓಡಾಟ ನಡೆಸುತ್ತಿದೆ. ಆಗಾಗ ದಂಡೆಯ ಮೇಲೆ ಬಂದು ಬೀಡುಬಿಡುತ್ತಿದ್ದ ಮೊಸಳೆಯನ್ನು ನೋಡಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸೋಲಿಡಾರಿಟಿ ಯೂತ್ ಮೂವ್ಮೆಂಟ್ ನಿಯೋಗದಿಂದ ಶಾಸಕ ಎನ್ ಎ ಹ್ಯಾರಿಸ್ ಭೇಟಿ: ಹಲವು ವಿಚಾರಗಳ ಬಗ್ಗೆ ಚರ್ಚೆ
ಇದೀಗ ಅರಣ್ಯ ಇಲಾಖೆ ತದಡಿಯ ವನ್ಯಜೀವಿ ರಕ್ಷಕ ಅಶೋಕ್ ನಾಯ್ಕ ನೇತ್ರತ್ವದಲ್ಲಿ ಮೊಸಳೆ ಹಿಡಿಯುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಆದರೆ ಜೋಡಿ ಕೆರೆಯಲ್ಲಿ ಮೊಸಳೆ ಇರುವುದರಿಂದ ಗಣಪತಿ ವಿಸರ್ಜನೆಗೆ ಬೇರೆ ಕೆರೆಯನ್ನು ಗುರುತುಮಾಡಿ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. ಇನ್ನು ಸದ್ಯ ಮೊಸಳೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುತಿದ್ದು ಮೊಸಳೆಗಾಗಿ ಹುಡುಕಾಟ ಮುಂದುವರೆದಿದೆ.





