‌ಧಾರವಾಡ | ಎಸ್‌ಐಆರ್ ಪ್ರಕ್ರಿಯೆ ʼಅವೈಜ್ಞಾನಿಕʼ ಮತ್ತು ʼಪ್ರಜಾಪ್ರಭುತ್ವ ವಿರೋಧಿʼಯಾಗಿ ನಡೆದಿದೆ: ಪ್ರಕಾಶ್‌ ರಾಜ್

Date:

ಎಸ್‌ಐಆರ್‌ ಪ್ರಕ್ರಿಯೆ ಅವೈಜ್ಞಾನಿಕವಾಗಿ ನಡೆದಿದ್ದು, ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇದರಿಂದ ಲಕ್ಷಾಂತರ ಮಂದಿ ಅರ್ಹ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಆರೋಪಿಸಿದ ಅವರು, ಎಸ್ಐಆರ್ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸಿ ಬಳಿಕ ಆರಂಭಿಸಬೇಕು ಎಂದು ಆಗ್ರಹಿಸಿದರು.

- Advertisement -

ಧಾರವಾಡದಲ್ಲಿ ಪರ್ತಕಾಗೋಷ್ಟಿ ಉದ್ದೇಶಿಸಿ ಮಾತನಾಡಿ, “2006ರವರೆಗೂ ಎಸ್‌ಐಆರ್‌ ಬೇರೆ ರೀತಿ ನಡೆದಿದ್ದು, ಈಗಲೇ ಬೇರೆ ರೀತಿ ನಡೆಯುತ್ತಿದೆ. ಚುನಾವಣಾ ಆಯೋಗದ ಅಧಿಕಾರಿ ಒಬ್ಬ ಮತದಾರನ ಸ್ವಾಭಿಮಾನವನ್ನು ಪ್ರಶ್ನೆ ಮಾಡಿದರೆ ಎಷ್ಟು ಸರಿ. ಸಾಮಾನ್ಯ ಪ್ರಜೆಯ ಟ್ಯಾಕ್ಸ್‌ ಹಣದಿಂದ ಸರ್ಕಾರಗಳು ಬದುಕುತ್ತಿವೆ. ಹೀಗಿರುವಾಗ ಪ್ರತಿಯೊಬ್ಬ ಮತರ ಮನೆಗಳ ಬಾಗಿಲಿಗೆ ಹೋಗಿ ಕೇಳಬೇಕು. ಮತದಾರನೇ ನಿಜವಾದ ಮಾಲೀಕ ಅವನ ಸ್ವಾಭಿಮಾನಕ್ಕೆ ಧಕ್ಕೆ ತರುವಂತ ಕೆಲಸ ಆಗುತ್ತಿದೆ” ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

“ಮನೆಯಲ್ಲಿ ಯಾರೂ ಇಲ್ಲವೆನ್ನುವ ಕಾರಣಕ್ಕೆ ಅವರು ಫಾರಂ ನಂ.6 ಭರ್ತಿ ಮಾಡಬೇಕೆಂದರೆ ಎಷ್ಟು ಸರಿ?. ಬರಗಾಲ ಬಂದಿದೆ ಕೂಲಿಗಾಗಿ ಬೇರೆ ಊರುಗಳಿಗೆ ಹೋಗಿರ್ತರೆ. ಹೆಣ್ಣುಮಗಳು ಮದುವೆಯಾಗಿ ಹೋಗಿರ್ತಳೆ, ತಾಯಿಮನೆಗೆ ಹಾರೈಕೆಗೆ ಹೋಗಿರ್ತರೆ, ನಿತ್ಯದ ಕೂಲಿಗೆ ಹೋಗಿರ್ತರೆ. ಬಿಎಲ್‌ಒಗಳು ಬರ್ತರೆ, ಇಲ್ಲದಿದ್ದರೆ ಶಿಫ್ಟ್‌ ಅಂತ ಹೇಳಿ ಬರದುಕೊಂಡು ಹೋದ್ರೆ, ಅಲ್ಲೂ ಇಲ್ಲ ಇಲ್ಲೂ ಇಲ್ಲ ಅನ್ನುವಂತಾಗುತ್ತೆ. ಫಾರಂ 6 ಹೊಸ ಮತದಾರ ಭರ್ತಿ ಮಾಡಬೇಕಾಗಿರುವುದು. ಇಷ್ಟು ವರ್ಷ ಮತ ಹಾಕಿರುವ ಮತದಾರರಿಗೆ ಬೆಲೆಯೇ ಇಲ್ಲವೇ? ಕರ್ನಾಟಕದಲ್ಲಿ ಚುನಾವಣೆಗೆ ಇನ್ನೂ ಎರಡು ವರ್ಷ ಸಮಯ ಇರಬೇಕಾದರೆ, ತರಾತುರಿಯಲ್ಲಿ ಎಸ್‌ಐಆರ್‌ ಮಾಡುವ ಅಗತ್ಯವೇನಿತ್ತು?” ಎಂದರು.

ಕೇಂದ್ರ ಚುನಾವಣಾ ಆಯೋಗದ ವಿರುದ್ಧ ವಿವಿಧ ಸಂಘಟನೆಗಳು, ನಾಗರಿಕರು ಸಿದ್ಧಪಡಿಸಿದ ದೂರುಗಳ ಎಫ್ಐಆರ್ ಅನ್ನು ಬಿಡುಗಡೆ ಮಾಡಿದ ಪ್ರಕಾಶ್ ರಾಜ್ ಅವರು, “ಒಂದು ತಿಂಗಳಲ್ಲಿ 1.08 ಕೋಟಿ ಮತದಾರರ ಹಕ್ಕು ಕಸಿದಿರುವುದು ಅಪರಾಧ. ಈ ಎಲ್ಲ ಮತದಾರರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡುವವರೆಗೆ ಹೋರಟಾ ಮಾಡುತ್ತೇವೆ” ಎಂದು ತಿಳಿಸಿದರು.

ಇದನ್ನೂ ಓದಿದ್ದೀರಾ? ವಿಜಯಪುರ | ಕುಟುಂಬ ರಾಜಕಾರಣದಿಂದ ಕಾರ್ಯಕರ್ತರಿಗೆ ಅವಕಾಶ ಇಲ್ಲದಂತಾಗುತ್ತಿದೆಯೇ?: ಪ್ರದೀಪ್ ಪಾಟೀಲ

“ಮುಂದಿನ(ವಿಧಾನಸಭೆ) ಚುನಾವಣೆಗೆ ನಮಗೆ ಇನ್ನೂ ಎರಡು ವರ್ಷವಿದ್ದರೂ ಮತದಾರರಲ್ಲಿ ಯಾವುದೇ ಜಾಗೃತಿ ಮೂಡಿಸದೇ ತರಾತುರಿಯಲ್ಲಿ ಎಸ್ಐಆರ್ ಕೈಗೊಂಡು ಐದು ಕೋಟಿಗೂ ಹೆಚ್ಚು ಮತದಾರರನ್ನು ಒಳಗೊಂಡ ಈ ಪ್ರಕ್ರಿಯೆಯನ್ನು ನೀವು ಒಂದು ತಿಂಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ನೀವು ಅದನ್ನು ಆರು ತಿಂಗಳ ಮುಂಚಿತವಾಗಿ ಘೋಷಿಸಬೇಕಾಗಿತ್ತು. ಎಷ್ಟು ಜಾಗೃತಿ ಕಾರ್ಯಕ್ರಮಗಳು ನಡೆದಿವೆ. ಎಷ್ಟು ಜನರಿಗೆ ಈ ಬಗ್ಗೆ ಜಾಗೃತಿ ಇದೆ” ಎಂದು ಹೇಳಿದರು.

“ಇಡೀ ಎಸ್‌ಐಆರ್ ಪ್ರಕ್ರಿಯೆಯನ್ನು ʼಅವೈಜ್ಞಾನಿಕʼ ಮತ್ತು ʼಪ್ರಜಾಪ್ರಭುತ್ವ ವಿರೋಧಿʼ ರೀತಿಯಲ್ಲಿ ನಡೆಸಲಾಗಿದೆ” ಎಂದು ಆರೋಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಿ: ಕೋಟ ಶ್ರೀನಿವಾಸ ಪೂಜಾರಿ

ಬಿ.ಎಸ್.ಎನ್.ಎಲ್. ಸಂಸ್ಥೆಯು ನೆಟ್‌ವರ್ಕ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಖಾಸಗಿ ಟೆಲಿಕಾಂ ಕಂಪನಿಗಳಿಗೆ...

ಕಾರವಾರ | ಅಕ್ಟೋಬರ್ 16ರಂದು ಹಾರವಾಡದಿಂದ ಮಾಜಾಳಿವರೆಗೆ ಮೀನುಗಾರಿಕೆಗೆ ನಿರ್ಬಂಧ

ಕಾರವಾರ: ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ಅಕ್ಟೋಬರ್ 16ರಂದು ಉತ್ತರ ಕನ್ನಡ...

ಕಾಶಿ ವಿಶ್ವನಾಥ ದೇವಾಲಯದಲ್ಲಿ ಚಿನ್ನ ಕಣ್ಮರೆ ಆರೋಪ: ಪಿಎಂಒಗೆ ವಕೀಲರ ಪತ್ರ

ಅಯೋಧ್ಯೆಯ ರಾಮ ಮಂದಿರದ ಕಾಣಿಕೆಯಲ್ಲಿ ದುರ್ನಡೆಯಾಗಿದೆ ಎಂಬ ಆರೋಪದ ಮೇಲೆ ನ್ಯಾಯಾಲಯ...