ವಿಜಯಪುರ | ಮುದ್ದೇಬಿಹಾಳ ತಾಲೂಕು ಕಸಾಪ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಅಶೋಕ್ ಮಣಿ ಆಯ್ಕೆ

Date:

ಫೆ. 15ರಂದು ನಡೆಯಲಿರುವ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನಾಟಕಕಾರ, ಕವಿ, ಹಿರಿಯ ಸಾಹಿತಿ, ನಿವೃತ್ತ ಮುಖ್ಯೋಪಾಧ್ಯಾಯ ಅಶೋಕ ಪಿ.ಮಣಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

- Advertisement -

ಕಸಾಪ ಸಮ್ಮೇಳನ ಕಾರ್ಯಾಲಯದಲ್ಲಿ ಪದಾಧಿಕಾರಿಗಳ ಸಮೇತ ಕಾರ್ಯಕಾರಿಣಿ ಸಭೆ ನಡೆಸಿ,ಮೊದಲು ಮಣಿ ಅವರ ಆಯ್ಕೆಗೆ ಒಪ್ಪಿಗೆ ಪಡೆದು ಅದನ್ನು ಅನುಮೋದಿಸಿ ಅಧಿಕೃತಗೊಳಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ವಿದ್ಯಾನಗರದಲ್ಲಿರುವ ಮಾರುತೇಶ್ವರ ದೇವಸ್ಥಾನದ ಬಳಿ ಸೇರಿದ್ದ ಸಾಹಿತಿಗಳು, ಕನ್ನಡಾಭಿಮಾನಿಗಳು,ಕನ್ನಡಮ್ಮನ ಜಯಘೋಷಣೆ ಹಾಕುತ್ತ ಮಣಿ ಅವರ ನಿವಾಸಕ್ಕೆ ಆಗಮಿಸಿ ಅವರಿಗೆ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸಂದೇಶ ಪತ್ರ ಹಸ್ತಾಂತರಿಸಿ ಸರ್ವಾಧ್ಯಕ್ಷತೆ ಒಪ್ಪಿಕೊಳ್ಳುವಂತೆ ಮನವಿ ಮಾಡಿದರು.

ಇದಕ್ಕೂ ಮೊದಲು ಕಸಾಪ ಗೌರವ ಕಾರ್ಯದರ್ಶಿ ಸಿದ್ದನಗೌಡ ಬಿಜ್ಜೂರ ಅವರ ಕಸಾಪ ಸ್ವಾಗತ ಸಮಿತಿಯ ಅನುಮೋದನೆ ಮತ್ತು ಆಯ್ಕೆ ವಿಷಯವನ್ನು ಎಲ್ಲರಿಗೂ ತಿಳಿಸಿ 4-5 ಜನ ಅರ್ಹರನ್ನು ಗುರುತಿಸಲಾಗಿತ್ತು. ಅವರಲ್ಲಿ ಮಣಿ ಅವರನ್ನು ಎಲ್ಲರ ಒಪ್ಪಿಗೆ ಪಡೆದು ಅಧಿಕೃತಗೊಳಿಸಲಾಯಿತು. ಕಸಾಪ ಜಿಲ್ಲಾ ಘಟಕದವರು ಕಸಾಪ ತಾಲೂಕು ಘಟಕದ ತೀರ್ಮಾನವನ್ನು ಎತ್ತಿ ಹಿಡಿದು ತಮ್ಮ ಒಪ್ಪಿಗೆ ಸೂಚಿಸಿದರು. ಮಣಿ ಅವರು 3-4 ಚಲನಚಿತ್ರಗಳಲ್ಲಿ ನಟಿಸಿ ತಮ್ಮ ಕಲಾಪಾಂಡಿತ್ಯವನ್ನೂ ಪ್ರದರ್ಶಿಸಿದ್ದು, ಮಾತ್ರವಲ್ಲದೆ ತಾಲೂಕಿನ ಸಾಹಿತ್ಯಿಕ, ನಾಟಕ ವಲಯದಲ್ಲಿ ವಿಶೇಷ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ.

ಕಸಾಪ ಗೌರವ ಕಾರ್ಯದರ್ಶಿ ವೈ.ಎಚ್.ವಿಜಯಕರ್, ಹಿರಿಯ ಸಾಹಿತಿ ಪ್ರೊ. ಬಿ.ಎಂ.ಹಿರೇಮಠ ಅವರು ಮಾತನಾಡಿದರು.

ಅಧ್ಯಕ್ಷ ಕಾಮರಾಜ ಬಿರಾದಾರ ಅವರು ಮಾತನಾಡಿ, ಸರ್ವಾಧ್ಯಕ್ಷತೆಗೆ ಅರ್ಹರು, ಸಮರ್ಥರನ್ನೇ ಆಯ್ಕೆ ಮಾಡಿರುವ ಸಂತೃಪ್ತಿ ಇದೆ. ನಾನು ಸಾಹಿತಿ ಅಲ್ಲದಿದ್ದರೂ ಸಂಘಟಕ ಎಂದು ನನ್ನನ್ನು ಈ ಹುದ್ದೆಯಲ್ಲಿ ಕೂಡಿಸಿದ್ದು ಸಮ್ಮೇಳನ ಯಶಸ್ವಿಗೊಳಿಸುವ ನನ್ನ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ಎಲ್ಲರೂ ಸಹೃದಯವಂತರು, ಸಾಹಿತ್ಯ ಮತ್ತು ಕನ್ನಡ ಪ್ರೇಮಿಗಳು ನನಗೆ ಕೈಜೋಡಿಸಿ ಹೆಗಲಿಗೆ ಹೆಗಲು ಕೊಟ್ಟು ಯಶಸ್ವಿನಲ್ಲಿ ಪಾಲುದಾರರಾಗಬೇಕು ಎಂದರು.

WhatsApp Image 2025 02 07 at 11.57.40 AM

ಅಶೋಕ ಮಣಿ ಅವರು ಕೃತಜ್ಞಾಪೂರ್ವಕ ನುಡಿಗಳನ್ನಾಡುತ್ತ, ತಮ್ಮ ಹಿರಿಯರು ಬಿಟ್ಟು ಹೋದ ಸಾಹಿತ್ಯಿಕ ಚಿಂತನೆಗಳು ತಮ್ಮ ಕಾಲದಲ್ಲಿ ಮುಂದುವರೆದಿದ್ದರ ಸಂಕೇತವಾಗಿ ಈ ಸರ್ವಾಧ್ಯಕ್ಷತೆ ಹುದ್ದೆ ಅರಸಿ ಬಂದಿದೆ. ತನ್ಮೂಲಕ ಸಣ್ಣ ಪ್ರಮಾಣದಲ್ಲಿರುವ ದಿಗಂಬರ ಜೈನ ಸಮಾಜಕ್ಕೆ ಗೌರವ ಕಟ್ಟಿಕೊಟ್ಟಂತಾಗಿದೆ. ಅವಕಾಶ ಕೊಟ್ಟ ಎಲ್ಲರಿಗೂ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುವುದರ ಜೊತೆಗೆ ಸಮ್ಮೇಳನ ಯಶಸ್ವಿಯಾಗಲು ಕಾಯಾ ವಾಚಾ ಮನಸಾ ಒಪ್ಪಿಗೆ ನೀಡಿ ಗೌರವವನ್ನು ಸ್ವೀಕರಿಸುತ್ತೇನೆ. ನನಗೆ ಸಂದ ಈ ಗೌರವ ಮನೆಯಲ್ಲಿ ಮಹಾಬಳಗಕ್ಕೆ ಮಾತ್ರವಲ್ಲದೆ ಎಲ್ಲ ಸಮಾಜದವರಿಗೂ ಸಂದ ಗೌರವವಾಗಿದೆ ಎಂದರು.

ಇದನ್ನು ಓದಿದ್ದೀರಾ? ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಸುದ್ದಿ ಛಾಯಾಚಿತ್ರ ಗ್ರಾಹಕರಿಗಾಗಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

ಈ ವೇಳೆ ಹಿರಿಯರಾದ ಎಸ್.ಬಿ.ಕನ್ನೂರ, ಬಸವರಾಜ ನಾಲತವಾಡ, ಅಬ್ದುಲ್‌ ರೆಹಮಾನ ಬಿದರಕುಂದಿ, ಎಸ್.ಎಸ್.ಕರಡ್ಡಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುದೇವ ಕಲಬುರ್ಗಿ, ದಿಗಂಬರ ಜೈನ ಸಮಾಜದ ಪ್ರಮುಖರಾದ ಬಾಬು ಗೋಗಿ, ಮಾಣಿಕಚಂದ ದಂಡಾವತಿ, ಅಭಿನಂದನ್ ಜೈನ್, ಕಸಾಪದ ಚಂದ್ರಶೇಖರ ಕಲಾಲ, ರಾಜು ಬಳ್ಳೊಳ್ಳಿ, ಎಸ್.ಎ.ಬೇವಿನಗಿಡದ, ಬಿ.ಎಸ್.ಪಾಟೀಲ ಸರೂರ, ಹುಸೇನ ಮುಲ್ಲಾ ಕಾಳಗಿ, ಸಿದ್ದಣ್ಣ ಹಡಲಗೇರಿ, ಡಾ. ಪ್ರಕಾಶ ನರಗುಂದ, ನೇತಾಜಿ ನಲವಡೆ, ಜಹಾಂಗೀರ ಮುಲ್ಲಾ, ಎಂ.ಎಂ.ಬೆಳಗಲ್ಲ, ಸಂಗಣ್ಣ ಮೇಲಿನಮನಿ, ಅಶೋಕ ವನಹಳ್ಳಿ, ಸರಸ್ವತಿ ಪೀರಾಪೂರ, ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕಿರುತೆರೆಯ ಹಾಸ್ಯಕಲಾವಿದ ಶ್ರೀಶೈಲ ಹೂಗಾರ ಕಾರ್ಯಕ್ರಮ ನಿರ್ವಹಿಸಿದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹನೂರು | ರಾತ್ರಿಪೂರ್ತಿ ಸುರಿದ ಭಾರೀ ಮಳೆ: ಮನೆ, ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಹುತೇಕ ಕಡೆ ರಾತ್ರಿಪೂರ್ತಿ ಭಾರೀ ಮಳೆಯಾಗಿದ್ದು,...

​ಶಿಡ್ಲಘಟ್ಟ | ಒಂಬತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ:ಪ್ರಾಂಶುಪಾಲ ಈಶ್ವರ್ ರೆಡ್ಡಿಗೆ ಕಠಿಣ ಶಿಕ್ಷೆಗೆ ಒತ್ತಾಯ

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಗುರ್ಲಗುಮ್ಮನಹಳ್ಳಿ(11ನೇ ಮೈಲಿ) ಬಳಿ ವಸತಿ ಶಾಲೆಯ...

ಬೆಂಗಳೂರು | 700 ಕೆ.ಜಿ ಪಿಒಪಿ ಗಣೇಶ ಮೂರ್ತಿ ತ್ಯಾಜ್ಯ ತೆರವುಗೊಳಿಸಿದ ‘ವಿ ಆರ್ ಆರಂಭ್’

ಬೆಂಗಳೂರಿನ ಸರ್ಜಾಪುರ ಸಮೀಪದ ಹಲನಾಯಕನಹಳ್ಳಿ ಕೆರೆಯಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟರ್ ಆಫ್ ಪ್ಯಾರಿಸ್...