ವಿಜಯಪುರ | ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ವಿರೋಧಿಸಿ ರಂಗೋಲಿ ಚಳವಳಿ

Date:

ಸರ್ಕಾರಿ, ಖಾಸಗಿ, ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯ ವೈದಿಕೀಯ ಕಾಲೇಜು ಸ್ಥಾಪನೆಯನ್ನು ವಿರೋಧಿಸಿ ವಿಜಯಪುರ ಹಾಗೂ ಕರ್ನಾಟಕ ಜನಾರೋಗ್ಯ ಚಳವಳಿ ಸಂಸ್ಥೆಯ ಸಾವಿರಾರು ಕಾರ್ಯಕರ್ತೆಯರು ಜಿಲ್ಲಾದ್ಯಂತ ರಂಗೋಲಿ ಚಳವಳಿ ನಡೆಸಿದರು.

- Advertisement -

ನಗರದ ಅಂಬೇಡ್ಕರ್ ವೃತ್ತ, ಬಸವೇಶ್ವರ ಸರ್ಕಲ್, ಗಾಂಧಿ ಚೌಕ, ಸಿದ್ದೇಶ್ವರ ದೇವಸ್ಥಾನ, ಶಿವಾಜಿ ಸರ್ಕಲ್, ಜಿಲ್ಲಾಸ್ಪತ್ರೆ, ಜಿಲ್ಲಾ ಪಂಚಾಯತಿ ಹತ್ತಿರ ಹಾಗೂ 13 ತಾಲೂಕಿನ ಮುಖ್ಯ ವೃತ್ತದಲ್ಲಿ ರಂಗೋಲಿ ಚಿತ್ರ ಬಿಡಿಸಿ ಸಂಪೂರ್ಣ ಸರ್ಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಈ ವೇಳೆ ಮಾತನಾಡಿದ ಜನವೇದಿಕೆ ಸಂಘಟನೆ ಹಾಗೂ ಜನಾರೋಗ್ಯ ಚಳವಳಿಯ ಮುಖ್ಯಸ್ಥೆ ಟೀನಾ ಜೇವಿಯರ್, “ಕರ್ನಾಟಕ ರಾಜ್ಯ ಸರ್ಕಾರ ತನ್ನ ಖಾಸಗಿಪರ, ಜನವಿರೋಧಿ ಆರೋಗ್ಯ ನೀತಿಗಳನ್ನು ಮತ್ತಷ್ಟು ತೀವ್ರಗೊಳಿಸುತ್ತಾ ಬಂದಿದೆ. ಹೀಗೆ ಮಾಡಿ ನಮ್ಮ ಜಿಲ್ಲಾಸ್ಪತ್ರೆಯ 149 ಎಕರೆ ಭೂಮಿ, ಕಟ್ಟಡ, ಸಿಬ್ಬಂದಿ, ಸಲಕರಣೆಗಳು ಇತ್ಯಾದಿ ಒಳಗೊಂಡಂತೆ ಎಲ್ಲವನ್ನೂ ಖಾಸಗಿ ಕಂಪನಿಗಳ ತಿಜೋರಿಗೆ ಸಾಗಿಸುವ ಹುನ್ನಾರವನ್ನು ತೀವ್ರವಾಗಿ ಖಂಡಿಸುತ್ತೇವೆ. ಬಡ ಮಧ್ಯಮ ವರ್ಗದ ಮಕ್ಕಳನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಉದ್ದೇಶವನ್ನು ಕೈ ಬಿಡಲು ಒತ್ತಾಯಿಸುತ್ತೇವೆ. ಖಾಸಗಿ ಆಸ್ಪತ್ರೆಯಾದರೆ ದುಡ್ಡಿದ್ದರೆ ಆರೋಗ್ಯ, ದುಡ್ಡಿದ್ದರೆ ವೈದ್ಯಕೀಯ ಶಿಕ್ಷಣ ಎಂಬಂತಾಗುತ್ತದೆ, ಆದ್ದರಿಂದ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನ ವೇದಿಕೆ ಸಂಘಟನೆಯ ಕಾರ್ಯಕರ್ತೆ ಸುನಿತಾ ಮೋರೆ ಮಾತನಾಡಿ, “ಬಡ, ದಲಿತ, ಆದಿವಾಸಿ, ಹಿಂದುಳಿದ ಜನಾಂಗಗಳ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಈಗಿರುವ ಅಲ್ಪ ಅವಕಾಶವೂ ಕೂಡ ಕಣ್ಮರೆಯಾಗುತ್ತದೆ. ವೈದ್ಯರಾಗಬೇಕೆನ್ನುವ ನಮ್ಮ ಮಕ್ಕಳ ಕನಸು ನುಚ್ಚು ನೂರಾಗುತ್ತದೆ. ಕೇವಲ ಉಳ್ಳವರು ಮಾತ್ರ ವೈದ್ಯ ವೃತ್ತಿಗೆ ಸೇರಿ ತಾವು ಖರ್ಚು ಮಾಡಿದ ಹಣವನ್ನು ಮರು ಪಡೆದು ಲಾಭ ಗಳಿಸಲು ವೈದ್ಯಕೀಯ ಸೇವೆಯ ವ್ಯಾಪಾರಕ್ಕೆ ಇಳಿಯುವಂತಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ವಿಜಯಪುರ | ಸೂಕ್ತ ಪರಿಹಾರ ನೀಡುವುದಾಗಿ ಅಧಿಕಾರಿಗಳ ಭರವಸೆ: ಧರಣಿ ಹಿಂಪಡೆದ ನಿರಾಶ್ರಿತರು

ಜನ ವೇದಿಕೆ ಮುಖಂಡರಾದ ರಾಜೇಶ್ವರಿ ಮಠಪತಿ, ಫರ್ಜನಾ ಜಮಾದಾರ, ಶ್ರೀದೇವಿ ಡೆಂಗಿ, ಕವಿತಾ ರಾಥೋಡ್, ಹಮೀದ ಪಟೇಲ್, ಭಾರತಿ ಶಿವಣಗಿ,ಅರುಣ ಬೂದಿಹಾಳ, ಮೀನಾಕ್ಷಿ ಕಾಲೆಬಾಗ, ಗೀತಾ ಹೊಸಳ್ಳಿ, ರೇಣುಕಾ ತಮ್ಮಗೊಂಡ, ಜ್ಯೋತಿ ರಾಥೋಡ, ಫಾದರ್ ಕೆವಿನ್, ಶ್ರೀಧರ ಕೊಣ್ಣೊರ, ಅಕ್ರಮ್ ಮಾಶಾಳಕರ, ಮುತ್ತು ಬೋವಿ, ದಸ್ತಗಿರಿ ಮುಲ್ಲಾ, ಭರತ್ಕುಮಾರ್ ಎಚ್ ಟಿ, ಗೀತಾ ಎಚ್, ಸುರೇಶ ಬಿಜಾಪುರ, ಅನಿಲ ಹೊಸಮನಿ, ಶ್ರೀನಾಥ ಪೂಜಾರಿ, ಚನ್ನು ಕಟ್ಟಿಮನಿ, ಯಮನಪ್ಪ ಗುಣಿಕಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಕುಡಿದ ಮತ್ತಿನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಹಾಸನದ ಹೆಗ್ಗಡಿಹಳ್ಳಿ ಫಾರೆಸ್ಟ್ ಸಮೀಪ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನನ್ನು ಅಡ್ಡಗಟ್ಟಿ...

ರಾಯಚೂರು | ಸೂರ್ಯಕಾಂತಿ ಬೆಂಬಲ ಬೆಲೆ ಕ್ವಿಂಟಾಲ್‌ಗೆ ₹8,343: ಖರೀದಿ ಕೇಂದ್ರ ಆರಂಭ; ಡಿಸಿ

ಸರ್ಕಾರದ ಆದೇಶದಂತೆ 2026-27ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು...

ರಾಯಚೂರು | ಹತ್ತಿ ಮಿಲ್ ಗೆ ಆಕಸ್ಮಿಕ ಬೆಂಕಿ: 60 ಲಕ್ಷದ ಹತ್ತಿ ಭಸ್ಮ

ಹತ್ತಿ ಮಿಲ್‌ಗೆ ಅಕಸ್ಮಿಕ ಬೆಂಕಿ ತಗುಲಿ ಸುಮಾರು 60ಲಕ್ಷ ಮೌಲ್ಯದ ಬೆಂಕಿ...

ರಾಯಚೂರು | ವಿದ್ಯುತ್ ಅವಘಡದಲ್ಲಿ ರೈತ ಸಾವು: ಕುಟುಂಬಕ್ಕೆ ಬೋಸರಾಜು, ಹಂಪಯ್ಯ ನಾಯಕ್ ಸಾಂತ್ವನ

ಮಾನ್ವಿ ತಾಲ್ಲೂಕಿನ ಕಾತರಕಿ ಗ್ರಾಮದಲ್ಲಿ ಮೋಟಾರ್ ಸ್ಟಾರ್ಟ್ ಮಾಡಲು...