ನಾಲತವಾಡ | ಜನಸಂಪರ್ಕ ಸಭೆ: ಶಾಸಕ ನಾಡಗೌಡ ಎದುರು ಸಮಸ್ಯೆಗಳ ಸರಣಿ ಇಟ್ಟ ಸಾರ್ವಜನಿಕರು

Date:

ಗ್ರಾಮದ ರೈತರ ಜಮೀನುಗಳಿಗೆ ವ್ಯವಸ್ಥಿತ ರಸ್ತೆಗಳಿಲ್ಲ, ಗುಡ್ಡವನ್ನು ಅತಿಕ್ರಮಿಸಿಕೊಂಡು ಉಳುಮೆ ಮಾಡಿಕೊಳ್ಳುತ್ತಿದ್ದಾರೆ. ನೀರಾವರಿಗೆ ಜಮೀನು ಕಳೆದುಕೊಂಡ ಇನ್ನು ಹಲವು ರೈತರಿಗೆ ಅವಾರ್ಡ್ ಕಾಪಿ ನೀಡಿಲ್ಲ, ಜಮೀನು ಪರಿಹಾರ ದರ ಹೆಚ್ಚಿಸಿ ಎಂದು ಸ್ಥಳೀಯರು ಶಾಸಕ ಸಿ ಎಸ್ ನಾಡಗೌಡ ಅವರಿಗೆ ಒತ್ತಾಯಿಸಿದರು.

- Advertisement -

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಸಮೀಪದ ನಾಗರಬೆಟ್ಟದಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ, ಸಮಸ್ಯೆಗಳ ಸರಣಿಯನ್ನೆ ಶಾಸಕರೆದುರು ಇರಿಸಲಾಯಿತು, “ನಾಗರಬೆಟ್ಟ ಗುಡ್ಡದಲ್ಲಿ ನಿರ್ಮಿಸಲಾದ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಘಟಕದ ನೀರು ಕಲುಷಿತಗೊಂಡಿದೆ, ಈ ಕುರಿತು ಮೇಲಾಧಿಕಾರಿಗಳು ಹಿರೇಗೌಡರಗೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ” ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

“ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಫೋನ್ ಮಾಡಿದರೂ ಅಧಿಕಾರಿಗಳು ಕರೆ ಸ್ವೀಕರಿಸುತ್ತಿಲ್ಲ, ಅಂತಹ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ” ಎಂದು ಸ್ಥಳೀಯರು ಒತ್ತಾಯಿಸಿದರು.

“ಗ್ರಾಮ ಪಂಚಾಯಿತಿಯವರು ಕಚೇರಿಯಲ್ಲಿಯೇ ಕುಳಿತು ಕ್ರಿಯಾ ಯೋಜನೆ ಮಾಡುತ್ತಾರೆ, ಶಿರಾಡೋಣ ರಸ್ತೆಯನ್ನು ರೈತರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಪಿಡಬ್ಲ್ಯೂಡಿ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ” ಎಂದು ರೈತ ಪರ ಹೋರಾಟಗಾರ ಮಲ್ಲನಗೌಡ ಸಿದ್ದರೆಡ್ಡಿ ಆರೋಪಿಸಿದರು.

“ರೈತರಿಗೆ ವಿತರಣೆ ಮಾಡುವ ಗೊಬ್ಬರದ ದರ ಹೊರೆಯಾಗುತ್ತಿದ್ದು, ಇದನ್ನು ತಪ್ಪಿಸಬೇಕು. ಗ್ರಾಮದಲ್ಲಿ ಟಿಸಿ ಸುಟ್ಟರೆ ಎರಡು ಮೂರು ದಿನ ರಾತ್ರಿಯಲ್ಲೇ ಕಳೆಯಬೇಕಾಗಿದೆ. ಶುದ್ಧ ಕುಡಿಯುವ ನೀರು ಗಗನ ಕುಸುಮವಾಗಿದ್ದು, ನಾಲತವಾಡಕ್ಕೆ ಹೋಗಿ ತರುತ್ತೇವೆ. ರಸ್ತೆಗಳಿಲ್ಲ ಚರಂಡಿಗಳ ಸ್ವಚ್ಛತೆ ಇಲ್ಲ” ಎಂದು ನಾನಾ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತರಲಾಯಿತು.

ವಿವಿಧ ಸಮಸ್ಯೆಗಳನ್ನು ಆಲಿಸಿದ ಶಾಸಕ, “ಪರಸ್ಪರ ಸಹಕಾರದಿಂದ ಸಾರ್ವಜನಿಕರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ರೈತರೊಂದಿಗೆ ಚರ್ಚಿಸಿ, ಸುಮಾರು ವರ್ಷಗಳಿಂದ ಅಲ್ಲಲ್ಲಿ ನೆನೆಗುದಿಗೆ ಬಿದ್ದ ಕಾಲುವೆ ಕಾಮಗಾರಿಯನ್ನು ತಾವು ಸಹಕರಿಸಿದರೆ ಶೀಘ್ರವೇ ಪೂರ್ಣಗೊಳಿಸಿ, ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ನಿಮಗಾಗಿ ಕೆಬಿಜೆಎನ್ಎಲ್ ಅಧಿಕಾರಿಗಳು ಒಂದು ವಾರದಲ್ಲಿ ಜಮೀನುಗಳ ಸಮಸ್ಯೆ ಇತ್ಯರ್ಥ ಹಾಗೂ ಅವಾರ್ಡ್ ವಿತರಣೆ ಸಭೆ ಕರೆಯುತ್ತಾರೆ. ನೀರು ಹರಿಸುವ ಕನಸು ನನಗೂ ಇದೆ, ಇದರಲ್ಲಿ ಯಾವುದೇ ಸಂಶಯ ಬೇಡ, ರೈತರ ಅಡೆತಡೆಗಳಿಂದ ಯೋಜನೆ ವಿಳಂಬವಾಗುತ್ತಿದೆ, ನಿಮ್ಮ ಭಾಗಕ್ಕೆ ಈಗಾಗಲೇ ಭೂ ಪರಿಹಾರಕ್ಕೆ ಸುಮಾರು 220 ಕೋಟಿ ಬಂದಿದೆ. ಶೀಘ್ರವೇ ವಿತರಣೆ ನಡೆಯುತ್ತದೆ” ಎಂದು ಭರವಸೆ ನೀಡಿದರು.

ಗ್ಯಾರೆಂಟಿ ಯೋಜನೆ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡ್ರ್, ಬಿಇಓ ಬಸವರಾಜ ಸಾವಳಗಿ, ಕೃಷಿ ಅಧಿಕಾರಿ ಸುರೇಶ ಬಾವಿಕಟ್ಟಿ, ಅಶೋಕ ಕಾಂಬಳೆ, ಆಹಾರ ಇಲಾಖೆಯ ಗುಮ್ಮತ್ತಿಮಠ, ತೋಟಗಾರಿಕಾ ಇಲಾಖೆಯ ಶಾಲಿನಿ, ಪಿಡಿಒ ನಾರಾಯಣ, ಕೆಬಿಜೆಎನ್ಎಲ್ ನ ಎಇಇ ಅಮರೇಗೌಡ, ಶಿವರಾಜ, ಅಬುಬಕರ್ ಭಾಗವಾನ್, ಸಿಡಿಪಿಓ ಶಿವಮೂರ್ತಿ ಕುಂಬಾರ, ಅಬಕಾರಿ ಇಲಾಖೆ ಮಹೇಶ ಮಳವಾಡಕರ, ತಾಲೂಕು ಪಂಚಾಯಿತಿ ಇ ಓ ಸಂಗನಗೌಡ, ಸಮಾಜ ಕಲ್ಯಾಣ ಇಲಾಖೆಯ ಬಸಂತಿ ಮಠ, ಕಂದಾಯ ಇಲಾಖೆ ಏನ್ ಬಿ ದೊರೆ, ಹೆಸ್ಕಾಂ ಗುರಡ್ಡಿ, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಮುರಾಳ, ಅರಣ್ಯ ಇಲಾಖೆಯ ಗಿರೀಶ ಬಿರಾದಾರ, ಪಿಎಸ್ಐ ಸಂಜಯ್ ತಿಪ್ಪಾರೆಡ್ಡಿ, ಎಂ ಎಂ ಬೆಳಗಲ್ ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಮಕ್ಕಳ ಸುರಕ್ಷತೆ ಸಮಾಜದ ಹೊಣೆ: ಪೋಕ್ಸೋ, ಬಾಲ್ಯವಿವಾಹ ತಡೆಗೆ ಕಾನೂನು ಅರಿವು ಅಭಿಯಾನ

ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕಳ ಮೇಲಿನ ದೌರ್ಜನ್ಯ ತಡೆ ಹಾಗೂ ಸುರಕ್ಷಿತ...

ಕಲಬುರಗಿ | ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರ ದುಸ್ತರ: ದುರಸ್ತಿಗೆ ದಲಿತ ಸೇನೆ ಆಗ್ರಹ

ಮಳಖೇಡದಿಂದ ಚಿತ್ತಾಪುರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ...

ಕಲಬುರಗಿ ಜಿಲ್ಲೆಯ 4.77 ಲಕ್ಷ ಮತದಾರರು ಎಲ್ಲಿ ಹೋದರು? ಎಸ್‌ಐಆರ್ ವಿರುದ್ಧ ಸಿಪಿಐ ತೀವ್ರ ಆಕ್ರೋಶ

ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಬಳಿಕ ಲಕ್ಷಾಂತರ ಮತದಾರರ ಹೆಸರುಗಳು...