ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ದಿಂದಾವರ ಗ್ರಾಮ ಪಂಚಾಯಿತಿ ಸಮೀಪ ಇಂದು ಬೆಳಗಿನ ಜಾವ 3.5 ತೀವ್ರತೆಯ ಭೂಕಂಪ ಉಂಟಾಗಿರುವುದಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರ (KSNDMC) ತಿಳಿಸಿದೆ.
ಕಂಪನದ ಪರಿಣಾಮವು ಕೇಂದ್ರಬಿಂದುವಿನಿಂದ ಸುಮಾರು 50–60 ಕಿ.ಮೀ ವ್ಯಾಪ್ತಿಯಲ್ಲಿ ಅನುಭವವಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
KSNDMC ವಿಶ್ಲೇಷಣೆಯಂತೆ, ಭೂಕಂಪದ ತೀವ್ರತೆ ಕಡಿಮೆ ಇದ್ದು, ಯಾವುದೇ ಆಸ್ತಿ ಹಾನಿಯಾಗುವ ಸಾಧ್ಯತೆ ಇಲ್ಲ. ಜನರು ಯಾವುದೇ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಕೇಂದ್ರವು ಸ್ಪಷ್ಟಪಡಿಸಿದೆ.
ಈ ಪ್ರದೇಶವು ಸೀಸ್ಮಿಕ್ ಝೋನ್ IIIನಲ್ಲಿ ಬರುತ್ತದೆ ಮತ್ತು ಪ್ರಮುಖ ಭೂವೈಜ್ಞಾನಿಕ ದೋಷಗಳಿಂದ ಮುಕ್ತವಾಗಿದೆ ಎಂದು ಹಿಂದಿನ ವರದಿಗಳು ಸೂಚಿಸುತ್ತವೆ. ಸ್ಥಳೀಯರಿಗೆ ಅಧಿಕೃತ ಮಾಹಿತಿಯತ್ತ ಗಮನ ಕೊಡಲು ಸಲಹೆ ನೀಡಲಾಗಿದೆ.
This video cannot be played in your browser. Open the video directly





