ತಾಳಿಕೋಟೆ | ಜೂ.30ರಂದು ಮೂಕಿಹಾಳ ಗ್ರಾ.ಪಂ ಮುತ್ತಿಗೆ: ಭ್ರಷ್ಟಾಚಾರ, ಬೆಳೆ ವಿಮೆ, ಕುಡಿಯುವ ನೀರಿಗೆ ರೈತರ ಆಗ್ರಹ

Date:

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಘಟನೆಯ ನೇತೃತ್ವದಲ್ಲಿ ಜೂನ್ 30 ರಂದು ತಾಳಿಕೋಟೆ ತಾಲೂಕಿನ ಮೂಕಿಹಾಳ ಗ್ರಾಮ ಪಂಚಾಯತಿ ಎದುರು ಸಾವಿರಾರು ರೈತರೊಂದಿಗೆ ಪಂಚಾಯತಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ(ನಡಹಳ್ಳಿ) ಹೇಳಿದರು.

- Advertisement -

ತಾಳಿಕೋಟಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “2019ರಿಂದ ಇಲ್ಲಿಯವರೆಗೆ ಮೂಕಿಹಾಳ ಗ್ರಾಪಂ ವ್ಯಾಪ್ತಿಯ ರೈತರು ಪ್ರಧಾನ ಮಂತ್ರಿ ಬೀಮಾ ಯೋಜನೆಯ ಫಸಲ್ ಇನ್ಷೂರೆನ್ಸ್ ತುಂಬುತ್ತ ಬಂದಿದ್ದಾರೆ. ಆದರೆ, ರೈತರ ಬೆಳೆಗಳು ಹಾಳಾಗಿ ಹೋಗಿದ್ದರೂ ಕೂಡ ಈವರೆಗೂ ಇನ್ಷೂರೆನ್ಸ್ ಕಂಪನಿಯಿಂದ ಹಣ ರೈತರಿಗೆ ಜಮೆಯಾಗಿಲ್ಲ ಇದಕ್ಕೆ ಮುಖ್ಯ ಕಾರಣ ತಿಳಿಯಬೇಕಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

“ಬೆಳೆಹಾನಿ ವರದಿ ಸಲ್ಲಿಸಬೇಕಾದ ಪಿಡಿಒಗಳು, ಇಲಾಖಾ ಅಧಿಕಾರಿಗಳು, ಗ್ರಾಮಾಡಳಿತ ಅಧಿಕಾರಿಗಳು ಇನ್ಷೂರೆನ್ಸ್ ಕಂಪನಿಯ ಏಜೆಂಟರಂತೆ ವರ್ತಿಸುತ್ತಿರುವ ಪರಿಣಾಮ ರೈತರು ಸಾವಿನ ದವಡೆಗೆ ಸಿಲುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಅದಕ್ಕಾಗಿಹೋರಾಟ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.

“ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದ್ದರೂ ಕೂಡ ಯಾವುದೇ ಹಳ್ಳಿಗೂ ನೀರು ತಲುಪುತ್ತಿಲ್ಲ. ಪ್ರತಿ ತಿಂಗಳು ನಿರ್ವಹಣೆ ಗುತ್ತಿಗೆ ಹಿಡಿದವರು 5 ಲಕ್ಷ ರೂ.ಗೂ ಅಧಿಕ ಹಣವನ್ನು ಪಡೆದುಕೊಳ್ಳುತ್ತ ಸಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ಮೂಕಿಹಾಳ ಗ್ರಾಮದಲ್ಲಿ ಫ್ಲೋರೈಡ್ ಯುಕ್ತ ನೀರು ಇರುವುದರಿಂದ ಜನರು ಅನೇಕ ರೋಗ ರುಜಿನಗಳಿಗೆ ಒಳಗಾಗುತ್ತಿದ್ದಾರೆ. ಇದರ ವ್ಯಾಪ್ತಿಯ ಹರನಾಳ, ಕಲ್ಲದೇವನಹಳ್ಳಿ ಹಡಗಿನಾಳ ಗ್ರಾಮದ ಜನರು ತಾಳಿಕೋಟೆಗೆ ಹೋಗಿ ನೀರು ತರುವ ಪರಿಸ್ಥಿತಿ ಇದೆ. ಈ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು 11 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಒಂದು ಘಟಕವೂ ಸುಸ್ಥಿತಿಯಲ್ಲಿಲ್ಲ ಕೆಲವು ಕಡೆಗೆ ಹೊಸದಾಗಿ ನೀರಿನ ಘಟಕ ಕೂಡಿಸಿ ವರ್ಷ ಕಳೆದರೂ ಅದಕ್ಕೆ ನೀರಿನ ಸಂಪರ್ಕವಿಲ್ಲದ್ದಕ್ಕೆ ಇಟ್ಟ ಸ್ಥಳದಲ್ಲಿಯೇ ಹಾಳಾಗಿ ಹೋಗಿವೆ. ಕೋಟ್ಯಂತರ ರೂಪಾಯಿ ಹಣವನ್ನು ಅಧಿಕಾರಿಗಳು ನುಂಗಿ ನೀರು ಕುಡಿದಿದ್ದಾರೆ” ಎಂದು ಆರೋಪಿಸಿದರು.

“ಮೂಕಿಹಾಳ ಗ್ರಾ.ಪಂ ವ್ಯಾಪ್ತಿಯಲ್ಲಿ ಯಾರು ಬಡವರಿದ್ದಾರೆ, ಅರ್ಹರಿದ್ದಾರೆ ಅಂಥವರನ್ನು ಗುರುತಿಸಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 168 ಮನೆಗಳು ಮಂಜೂರಾಗಿವೆ. ಆದರೆ ಗ್ರಾ.ಪಂ ಸದಸ್ಯರು, ಅಧಿಕಾರಿಗಳು ತಮಗೆ ಬೇಕಾದವರಿಗೆ ನೀಡಿದ್ದಾರೆ. ಹೀಗಾಗಿ ನಿಜವಾದ ಫಲಾನುಭವಿಗಳಿಗೆ ಸೌಲಭ್ಯ ತಲುಪಿಲ್ಲವೆಂದು ಆರೋಪಿಸಿದ ಅವರು, ಮೂಕಿಹಾಳ ಗ್ರಾ.ಪಂ ವ್ಯಾಪ್ತಿಯಲ್ಲಿ ರೈತಪರ ಚಿಂತನೆಗಳೊಂದಿಗೆ ಜೂನ್ 30ರಂದು ಮೂಕಿಹಾಳ ಗ್ರಾಪಂ ಎದುರು ಹೋರಾಟವನ್ನು ನಮ್ಮ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು, ಅಂದಿನ ದಿನ ನಡೆಯುವ ಹೋರಾಟಕ್ಕೆ ಅಧಿಕಾರಿಗಳು ಆಗಮಿಸಿ ಸ್ಪಂದಿಸದಿದ್ದರೆ, ಮುಖ್ಯ ರಾಜ್ಯ ಹೆದ್ದಾರಿ ತಡೆದು ಹೋರಾಟ ಮಾಡುತ್ತೇವೆ. ಅಂದು ನಡೆಯುವ ಹೋರಾಟದಲ್ಲಿ ಸಾವಿರಕ್ಕೂ ಅಧಿಕ ರೈತರು ಭಾಗಿಯಾಗಲಿದ್ದಾರೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಪತ್ರಕರ್ತರು ಸಮಾಜದ ಸವಾಲು ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು: ರಫಿ ಭಂಡಾರಿ

ಕರ್ನಾಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕಲ್ಲು ಸೋನ್ನದ, ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ಅವರು 30ರಂದು ನಡೆಯಲಿರುವ ಹೋರಾಟದ ರೂಪುರೇಷೆಗಳ ಕುರಿತು ಮಾತನಾಡಿದರು.

ಸಂಘಟನೆಯ ತಾಲೂಕು ಅಧ್ಯಕ್ಷ ಶ್ರೀಶೈಲ ವಾಲಿಕಾರ, ಯುವ ಅಧ್ಯಕ್ಷ ದೇವರಾಜ ಗುಂಡಕನಾಳ, ಉಮೇಶ ಮಕಾಳಿ, ಹಣಮಂತ ಗೋನಾಳ, ಯಲ್ಲು ಹಡಗಿನಾಳ, ಹಣಮಂತ್ರಾಯ ಮಕಾಳೆ, ಬಸವರಾಜ ಮಕಾಳೆ, ಮಹದಹನೀಫ್ ಮುಲ್ಲಾ ಮೈಬು ಅವಟಿ, ದೇವಣ್ಣ ಮೇಟಿ, ಸತೀಶ ಬಡಿಗೇರ, ಪರಸು ಕೊಡಕೇಲ್ಲ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ದರ್ಗಾ ಆವರಣದಲ್ಲಿ ದಫನ್‌ಗೆ ಅನುಮತಿ ನಿರಾಕರಣೆ ಖಂಡನೀಯ: SDPI

ಚಿಕ್ಕಮಗಳೂರು: ಹಜರತ್ ಬಾಬಾ ಬುಡನ್ ಅವರ ವಂಶಸ್ಥರಾದ ಸೈಯದ್ ಹುಸೇನ್ ಶಾ...

ಚಿಕ್ಕಮಗಳೂರು | ‘ಮಳಲೂರು ಏತ ನೀರಾವರಿ ಯೋಜನೆ’: ಹೆಸರಿಗಷ್ಟೇ ಈ ಯೋಜನೆ ಆಗಿದೆಯೇ?

ಸರ್ಕಾರದಿಂದ ಅನೇಕ ರೀತಿಯ ಯೋಜನೆ ಮಾಡುತ್ತ ಬರುತ್ತಿದೆ. ಹಾಗೆಯೇ, ಚಿಕ್ಕಮಗಳೂರು ತಾಲೂಕಿನ...