ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ಮುಳವಾಡ ಏತ ನೀರಾವರಿ ಟಕ್ಕಳಕಿ ವೃತ್ತದಡಿ ಬರುವ ಕಾಲುವೆಗೆ 2025-26ರ ಹಿಂಗಾರು ಹಂಗಾಮಿಗೆ ನೀರು ಹರಿಸುವ ಅವಧಿಯನ್ನು ಏ.1 ರಿಂದ ಏ.7ರವರೆಗೆ ವಿಸ್ತರಿಸಲಾಗಿದೆ ಎಂದು ಕೆಬಿಜೆಎನ್ಎಲ್ ಮುಳವಾಡ ಏತ ನೀರಾವರಿ ಯೋಜನೆಯ ಟಕ್ಕಳಕಿ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
2025-26ನೇ ಸಾಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಮುಳವಾಡ ಏತ ನೀರಾವರಿ ವೃತ್ತ ಟಕ್ಕಳಕಿ ಅಡಿಯಲ್ಲಿ ಬರುವ ಹಂತ-2 ರ ಪೂರ್ವ ಮತ್ತು ಪಶ್ಚಿಮ ಕಾಲುವೆ, ಸೊನ್ನ ಏತ ನೀರಾವರಿ, ರೊಳ್ಳಿ ಮನ್ನಿಕೇರಿ ಏತ ನೀರಾವರಿ ಮತ್ತು ತೆಗ್ಗಿ ಸಿದ್ದಾಪೂರ ಏತ ನೀರಾವರಿ ಯೋಜನೆಗಳ ಕಾಲುವೆ ಜಾಲಕ್ಕೆ ಹಿಂಗಾರು ಹಂಗಾಮಿಗೆ 2025ರ ಡಿಸೆಂಬರ್ 2ರಿಂದ 2026ರ ಏ.4ರವರೆಗೆ ಒಟ್ಟು 123 ದಿನಗಳವರೆಗೆ ನೀರು ಪೂರೈಸಲು ತೀರ್ಮಾನಿಸಲಾಗಿತ್ತು.
ಈಗ ನೀರಿನ ಲಭ್ಯತೆಯ ಅನುಸಾರ 2025-26ನೇ ಸಾಲಿನ ಹಿಂಗಾರು ಹಂಗಾಮಿಗೆ ನೀರು ಪೂರೈಸುವ ಅವಧಿಯನ್ನು ಏಪ್ರಿಲ್ 1 ರಿಂದ 7 ರವರೆಗೆ ವಿಸ್ತರಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ಪುಸ್ತಕ ಮೇಳದ ವಾಲ್ ಪೋಸ್ಟರ್ ಬಿಡುಗಡೆ
ಯೋಜನಾ ವ್ಯಾಪ್ತಿಯ ಕಾಲುವೆಗಳಲ್ಲಿ ಬೆಳೆದು ನಿಂತಿರುವ ಲಘು ನೀರಾವರಿ ಬೆಳೆಗಳನ್ನು ಸಂರಕ್ಷಿಸಲು ಅವಶ್ಯವಿದ್ದಲ್ಲಿ ಮಾತ್ರ ನೀರನ್ನು ಮಿತವಾಗಿ ಬಳಸಬೇಕು ಎಂದು ಪ್ರಕಟಣೆಯಲ್ಲಿ ರೈತರಿಗೆ ಮನವಿ ಮಾಡಿದ್ದಾರೆ.




