ನಗರದ ಮುತ್ನಾಳ್ ಕ್ರಾಸ್ ಸಮೀಪದ ಜಿಲ್ಲಾ ನ್ಯಾಯಾಲಯಕ್ಕೆ ಗುರುವಾರ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಬೆದರಿಕೆ ಸಂದೇಶದ ಮಾಹಿತಿ ತಿಳಿಯುತ್ತಿದ್ದಂತೆಯೇ ನ್ಯಾಯಾಲಯದ ಸಿಬ್ಬಂದಿ, ವಕೀಲರು ಹಾಗೂ ಸಾರ್ವಜನಿಕರನ್ನು ಸುರಕ್ಷತಾ ದೃಷ್ಟಿಯಿಂದ ನ್ಯಾಯಾಲಯದ ಆವರಣದಿಂದ ಹೊರಗೆ ಸ್ಥಳಾಂತರಿಸಲಾಯಿತು.
ತಕ್ಷಣವೇ ಸ್ಥಳಕ್ಕೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (ಬಿಡಿಡಿಎಸ್) ಹಾಗೂ ಶ್ವಾನ ದಳದ ಸಿಬ್ಬಂದಿ ಆಗಮಿಸಿ, ನ್ಯಾಯಾಲಯದ ಕಟ್ಟಡ ಮತ್ತು ಆವರಣದ ವಿವಿಧ ಭಾಗಗಳಲ್ಲಿ ಸವಿಸ್ತಾರವಾಗಿ ಪರಿಶೀಲನೆ ನಡೆಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಸಾಲದ ಬಾಧೆಗೆ ರೈತ ಬಲಿ: ಕುಟುಂಬಕ್ಕೆ ಪರಿಹಾರ ನೀಡಲು ದಸಂಸ ಒತ್ತಾಯ
ಇ-ಮೇಲ್‌ನಲ್ಲಿ, “ಇಂದು ಮಧ್ಯಾಹ್ನ 1:20 ರಿಂದ 3 ಗಂಟೆಯ ನಡುವೆ ನ್ಯಾಯಾಲಯದಲ್ಲಿ 13 ವಿಷ ಅನಿಲ ಹಾಗೂ ಆರ್‌ಡಿಎಕ್ಸ್(RDX) ಬಾಂಬ್‌ಗಳು ಸ್ಫೋಟಗೊಳ್ಳಲಿವೆ. ನ್ಯಾಯಾಧೀಶರು ಮತ್ತು ಸಾರ್ವಜನಿಕರನ್ನು ಸ್ಥಳಾಂತರಿಸಿ” ಎಂದು ಬೆದರಿಕೆ ಹಾಕಲಾಗಿತ್ತು ಎಂದು ತಿಳಿದು ಬಂದಿದೆ.





