ಯಾದಗಿರಿ | ನೀರು ಹರಿಸುವಂತೆ ದಸಂಸ ಮನವಿ

Date:

ಕಲಬುರಗಿ ಮತ್ತು ಯಾದಗಿರಿ ಎರಡು ಜಿಲ್ಲೆಗಳಲ್ಲಿರುವ ಒಟ್ಟು 5 ಬ್ಯಾರೇಜ್‌ಗಳಲ್ಲಿ ನೀರು ತುಂಬಿದರೂ ಜೋಳದಡಿಗಿ ಬ್ಯಾರೇಜಿನಿಂದ ಸಂಗಮದವರೆಗೆ ಬರುವ ಸುಮಾರು 10 ರಿಂದ 15 ಗ್ರಾಮಗಳಿಗೆ ನೀರು ಸಾಕಾಗುವುದಿಲ್ಲ. ದನಕರುಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗಾಗಿ ಹೆಚ್ಚಿನ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಯಾದಗಿರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, “ಕಲಬುರಗಿ ಜಿಲ್ಲೆಯಲ್ಲಿ ಬರುವ ಘತ್ತರಗಿ ಮತ್ತು ಸನ್ನತಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಬರುವ ವಡಗೇರಾ ತಾಲೂಕಿನ ಗುಲ್ಲರಂ (ಗುರುಸಣಗಿ) ಕಂದಳ್ಳಿ ಹಾಗೂ ಜೋಳದಡಗಿ ಈ ಎರಡು ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಒಟ್ಟು 5 ಗ್ರಾಮಗಳ ಬ್ಯಾರೇಜುಗಳಲ್ಲಿ ಸದ್ಯ ನೀರು ಸ್ಟಾಕ್ ಇದೆ. ಆದರೆ ಜೋಳದಡಗಿ ಬ್ಯಾರೇಜಿನ್ ಕೆಳಗಡೆಯಿಂದ ಸಂಗಮದವರೆಗೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಜೋಳದಡಗಿ, ಕೊಂಗಂಡಿ, ಸೂಗೂರು, ಅಗ್ನಿಹಾಳ ಮತ್ತು ತೆಲಂಗಾಣಕ್ಕೆ ಸಂಬಂಧಪಟ್ಟಂತೆ ಲಿಂಗದಳ್ಳಿ, ಐನಾಪೂರ, ಕುಸಮೂರ್ತಿ, ತಂಗಡಗಿ ಈ ಪ್ರಕಾರ ಜೋಳದಡಗಿ ಬ್ಯಾರೇಜ್‌ನಿಂದ ಸಂಗಮದವರೆಗೆ 10 ರಿಂದ 15 ಕಿಮೀಟರ್‌ವರೆಗೆ ನೀರಿನ ಅಗತ್ಯವಿದೆ” ಎಂದರು.

“ಕರ್ನಾಟಕ ಮತ್ತು ತೆಲಂಗಾಣ ಸೇರಿ ಒಟ್ಟು 10 ರಿಂದ 15 ಗ್ರಾಮಗಳ ದನಕರುಗಳಿಗೆ ಪ್ರಾಣಿ ಪಕ್ಷಿಗಳಿಗೆ ನೀರು ಬೇಕಾಗುತ್ತದೆ. ವಿಜಯಪುರ, ಬೆಳಗಾಂ ಮತ್ತು ಇತರೆ ಜಿಲ್ಲೆಗಳಿಂದ ಮನವಿಯಲ್ಲಿ ತೋರಿಸಿದ ಗ್ರಾಮಗಳಿಗೆ ಬೇಸಿಗೆ ಸಮಯದಲ್ಲಿ ಲಕ್ಷಾನುಗಟ್ಟಲೆ ಕುರಿಗಳ ಸಹಿತ ಕುರಿಗಾಹಿಗಳು ಬಂದು, ಮಳೆಗಾಲ ಪ್ರಾರಂಭವಾಗುವವರೆಗೆ ಇಲ್ಲೇ ತಂಗಿರುತ್ತಾರೆ. ಸದ್ಯ ನಾವುಗಳು ಕೆಲ ಗ್ರಾಮಸ್ಥರು ನಮಗೆ ಹೇಳಿದ ಪ್ರಕಾರ ಫೆಬ್ರವರಿ 18ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಜೋಳದಡಗಿಯಿಂದ ಸಂಗಮದವರೆಗೆ ನದಿಯನ್ನು ನೋಡಲಾಗಿ ಭೀಮಾ ನದಿಯಲ್ಲಿ ಒಂದೇ ಒಂದು ಹನಿ ನೀರಿಲ್ಲ” ಎಂದು ಹೇಖಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಜಲಚರ ಪ್ರಾಣಿಗಳಾದ ಮೀನುಗಳು, ಮೊಸಳೆ ಹಾಗೂ ಇತರೆ ಪ್ರಾಣಿಗಳು ನೀರಿಲ್ಲದೆ ಈಗಾಗಲೇ ಸತ್ತು ಹೋಗಿವೆ. ಆದರೆ ಕೇವಲ ಭತ್ತ ಬೆಳೆ ಬಾರದೆಂಬ ಒಂದೇ ಒಂದು ಉದ್ದೇಶದಿಂದ ಇವತ್ತು ಜಿಲ್ಲಾಡಳಿತ ನೀರು ಬಿಡುವುದನ್ನು ಬಂದ್ ಮಾಡಿ, ಜೂನ್ ತಿಂಗಳವರೆಗೆ ತಾವು ಕ್ರಮ ಕೈಗೊಂಡಿರುವುದು ಭತ್ತ ಬೆಳೆಯುವ ಕೆಲವರಿಗೆ ಅನುಕೂಲವಾಗಿದೆ. ಕೆಲವರಿಗೆ ಅನಾನುಕೂಲವಾಗಿದೆ. ಆದರೆ ಜೋಳದಡಗಿ ಬ್ಯಾರೇಜಿನಿಂದ ಕೆಳಗಡೆ ನಾವುಗಳು ಕಲ್ಲುಗಳಿರುವ ನದಿಯ ಒಳಗಡೆಯ ವಿಡಿಯೋ ಮತ್ತು ಫೋಟೋಗಳನ್ನು ತೆಗೆದಿರುತ್ತೇವೆ. ಆದರೆ ಸದ್ಯ ಜಲಚರ ಪ್ರಾಣಿಗಳು ಸತ್ತು ಹೋಗಿರುವುದು ಕಂಡುಬಂದಿದೆ” ಎಂದರು.

“ಮುಂದೆ 10 ರಿಂದ 15 ಗ್ರಾಮಗಳ ದನಕರುಗಳಿಗೆ ಕುಡಿಯಲಿಕ್ಕಾದರೂ ತಾವುಗಳು ಎಲ್ಲ ಬ್ಯಾರೇಜ್‌ಗಳಿರುವ ಅಲ್ಪ-ಸ್ವಲ್ಪವಾದರೂ ನೀರು ಬಿಟ್ಟು ಜೋಳದಡಗಿ ಬ್ಯಾರೇಜ್ ಕೆಳಗಡೆ ಹಿನ್ನೀರು ಕರ್ನಾಟಕ ಮತ್ತು ತೆಲಂಗಾಣಗಳ ರಾಜ್ಯಗಳಿಗೆ ಸಂಬಂಧಪಟ್ಟ 10 ರಿಂದ 15 ಗ್ರಾಮಗಳ ದನಕರುಗಳಿಗೆ ಈ ನೀರಿನಿಂದ ಅನುಕೂಲವಾಗಿರುತ್ತದೆ. ಒಂದು ವೇಳೆ ವಿಳಂಭವಾದರೆ ಸುಮಾರು 10 ರಿಂದ 15 ಗ್ರಾಮಗಳ ದನ ಕರುಗಳೊಂದಿಗೆ ಮತ್ತು ಕುರಿಗಳೊಂದಿಗೆ ತಮ್ಮ ಕಚೇರಿಯ ಎದುರು ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ದೇವದಾಸಿಯರ ಬೇಡಿಕೆ ಈಡೇರಿಕೆಗೆ ಆಗ್ರಹ

ರವಿಚಂದ್ರ ಬೊಮ್ಮನಹಳ್ಳಿ, ದಲಿತ ಮುಖಂಡ ಮಾನು ಗುರಿಕಾರ, ಮಲ್ಲಿಕಾರ್ಜುನ ಕುರುಕುಂದಿ, ಆಜೀಜ್ ಸಾಬ ಐಕೂರು, ಮಲ್ಲಿಕಾರ್ಜುನ ಶಾಖಾನವರ, ಬುದ್ದಿವಂತ ನಾಗರಾಳ, ಮಹಾದೇವಪ್ಪ ಬಿಜಾಪುರ, ಮರೆಪ್ಪ ಹಾಲಗೇರಾ, ರಾಮಣ್ಣ ಶೆಳ್ಳಗಿ, ಮೂರ್ತಿ ಬೊಮ್ಮನಹಳ್ಳಿ, ಬಸವರಾಜ್ ಗೋನಾಲ, ನಿಂಗಪ್ಪ ಕಟಗಿ ಶಹಾಪುರ, ಮಲ್ಲಪ್ಪ ಉರುಸುಲ್, ಭೀಮಣ್ಣ ಲಕ್ಷ್ಮೀಪುರ, ಭೀಮನಗೌಡ ಸೂಗೂರು, ಬಸವರಾಜ್ ದೊಡ್ಡಮನಿ ಶೆಳ್ಳಗಿ, ಖಾಜಾಹುಸೇನ್ ಗುಡಗುಂಟಿ ಇದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಬೈಕ್‌ಗೆ ಸಾರಿಗೆ ಬಸ್ ಢಿಕ್ಕಿ; ಒಂದೇ ಊರಿನ ಮೂವರು ಯುವಕರು ದುರ್ಮರಣ

ಸಾರಿಗೆ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಮೇಲೆ...

ಬೆಳಗಾವಿ | ಕರ್ನಾಟಕಕ್ಕೆ ಹರಿದುಬರುತ್ತಿದ್ದ ನೀರು ತಡೆದ ಮಹಾರಾಷ್ಟ್ರ; ಬ್ಯಾರೇಜ್‌ ಸುತ್ತ ಪೊಲೀಸ್‌ ನಿಯೋಜನೆ

ಮಹಾರಾಷ್ಟ್ರದಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ತುಂಬಿರುವ ರಾಜಾಪುರ ಬ್ಯಾರೇಜ್‌ನಿಂದ ಕರ್ನಾಟಕಕ್ಕೆ...

ರಾಜ್ಯದಲ್ಲಿ ಮುಂದಿನ ಒಂದು ವಾರ ಮಳೆ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯ ಕೆಲವೆಡೆ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ...

ರಾಜ್ಯದಲ್ಲಿ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಂದೇ ದಿನ 51 ಮಂದಿ ಸಾವು; ಎಡಿಜಿಪಿ ಅಲೋಕ್ ಕುಮಾರ್

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಕ್ರಮೇಣ...