ಲೋಕಸಭಾ ಚುನಾವಣೆ | ಮೊದಲ ಹಂತದಲ್ಲಿ ಉತ್ತಮ ಮತದಾನ; ಪ. ಬಂಗಾಳದಲ್ಲಿ ಶೇ.77.57ರಷ್ಟು ಹಕ್ಕು ಚಲಾವಣೆ

Date:

18ನೇ ಲೋಕಸಭೆಗೆ ಇಂದು(ಏಪ್ರಿಲ್ 19) ಮೊದಲ ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು, ಭರ್ಜರಿ ಮತದಾನ ನಡೆದಿದೆ. ಬಿಸಿ ಗಾಳಿಯ ನಡುವೆಯೂ ಭಾರೀ ಪ್ರಮಾಣದಲ್ಲಿ ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

- Advertisement -

ಮೊದಲ ಬಾರಿಗೆ ಮತದಾನ ಮಾಡುವ ಮೂಲಕ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಗ್ರೇಟ್ ನಿಕೋಬಾರ್‌ನ ಶೋಂಪೆನ್ ಬುಡಕಟ್ಟಿನ ಬಸ್ತಾರ್‌ನಲ್ಲಿರುವ 56 ಗ್ರಾಮಗಳು ಮೊದಲ ಬಾರಿಗೆ ಮತ ಚಲಾಯಿಸಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

21 ರಾಜ್ಯದ 102 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ ನಡೆದ ಬಗ್ಗೆ ವರದಿಯಾಗಿದೆ. 20 ಶಾಸಕರು ಒಳಗೊಂಡತೆ 4 ಲಕ್ಷ ಮತದಾರರು ಮತಗಟ್ಟೆಗೆ ಬರಲಿಲ್ಲ. ನಾಗಾ ಬುಡಕಟ್ಟಿನ ಜನ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದಾರೆ. 8 ಕೇಂದ್ರ ಸಚಿವರು ಸೇರಿ 1,625 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ.

eci 3
ರಾತ್ರಿ 7 ಗಂಟೆಗೆ ಚುನಾವಣಾ ಆಯೋಗ ಮಾಧ್ಯಮಗಳಿಗ ಬಿಡುಗಡೆ ಮಾಡಿದ ಮತ ಪ್ರಮಾಣದ ವಿವರ

ಚುನಾವಣಾ ಆಯೋಗವು ರಾತ್ರಿ 7 ಗಂಟೆಗೆ ಮಾಧ್ಯಮಗಳಿಗ ಬಿಡುಗಡೆ ಮಾಡಿದ ಮತ ಪ್ರಮಾಣದ ವಿವರದ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ 77.57 ಶೇಕಡಾದಷ್ಟು ಮತ ಚಲಾವಣೆಯಾಗಿದೆ. ಬಿಹಾರದಲ್ಲಿ 47.49 ಶೇ. ಮತದಾನ ನಡೆದಿರುವುದಾಗಿ ಮಾಹಿತಿ ಹಂಚಿಕೊಂಡಿದೆ. ಒಟ್ಟು ಶೇ.60ರಷ್ಟು ಮತ ಚಲಾವಣೆಯಾಗಿರುವುದಾಗಿ ಆಯೋಗ ತಿಳಿಸಿದೆ.

ಮತದಾನ 18

ತಮಿಳುನಾಡಲ್ಲಿ ಸಿಎಂ ಸ್ಟಾಲಿನ್, ಎಡಪ್ಪಾಡಿ ಪಳನಿಸ್ವಾಮಿ, ಚಿದಂಬರಂ, ಅಣ್ಣಾಮಲೈ, ತಮಿಳ್‌ಸೈ ಸೌಂದರರಾಜನ್, ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್‌ಹಾಸನ್, ಅಜಿತ್, ವಿಜಯ್ ಸೇರಿ ಹಲವರು ಮತದಾನ ಮಾಡಿದರು.

ಮಹಾರಾಷ್ಟ್ರದ ನಾಗ್ಪುರದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರಾಖಂಡದಲ್ಲಿ ಸಿಎಂ ಪುಷ್ಕರ್‌ಸಿಂಗ್ ಧಾಮಿ, ಬಾಬಾ ರಾಮ್‌ದೇವ್, ರಾಜಸ್ಥಾನದಲ್ಲಿ ಡಿಸಿಎಂ ದಿಯಾ ಕುಮಾರಿ, ಮಣಿಪುರದಲ್ಲಿ ಸಿಎಂ ಬೀರೇನ್ ಸಿಂಗ್, ಅಸ್ಸಾಂನಲ್ಲಿ ಸರ್ಬಾನಂದ ಸೋನಾವಾಲ್ ಹಕ್ಕು ಚಲಾಯಿಸಿದರು.

ಚುನಾವಣೆ ವೇಳೆ ಅಲ್ಲಲ್ಲಿ ಹಿಂಸಾಚಾರ ನಡೆದಿವೆ. ಮಣಿಪುರದ ಇಂಫಾಲದಲ್ಲಿ ಮತಗಟ್ಟೆ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಮತದಾರರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಬಂಗಾಳದ ಚಂದ್ಮರಿ, ಕೂಚ್‌ಬೆಹಾರ್‌ನಲ್ಲಿ ಕಲ್ಲು ತೂರಾಟ ನಡೆದಿದೆ. ದಿನ್‌ಹಟಾದಲ್ಲಿ ಟಿಎಂಸಿ ಕಾರ್ಯಕರ್ತರು ಬಾಂಬ್ ಎಸೆದಿದ್ದಾರೆ. ಇತ್ತ ಛತ್ತೀಸ್‌ಘಡದ ಬಿಜಾಪುರ್‌ನಲ್ಲಿ ಮತಗಟ್ಟೆ ಸಮೀಪ ಗ್ರೆನೇಡ್ ಸ್ಫೋಟಗೊಂಡಿದೆ. ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿರುವುದಾಗಿ ವರದಿಯಾಗಿದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭೆ ಸ್ಪೀಕರ್ ಚುನಾವಣೆ| ಟಿಡಿಪಿ ಸ್ಪರ್ಧಿಸಿದರೆ ‘ಇಂಡಿಯಾ’ ಒಕ್ಕೂಟ ಬೆಂಬಲಿಸುತ್ತೆ: ಸಂಜಯ್ ರಾವತ್

ಲೋಕಸಭೆ ಸ್ಪೀಕರ್ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಆಡಳಿತಾರೂಢ ಮಿತ್ರ ಪಕ್ಷವಾದ ತೆಲುಗು...

140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಕ್ಕಿಂತ ಎಣಿಕೆಯಾದ ಮತಗಳ ಸಂಖ್ಯೆ ಹೆಚ್ಚು: ಏನು ಈ ವ್ಯತ್ಯಾಸ?

2024ರ ಲೋಕಸಭೆ ಚುನಾವಣೆಯ ಫಲಿತಾಂಶಗಳು ಹೊರಬಿದ್ದಿವೆ. ಮೂರನೇ ಬಾರಿಗೆ ಮೋದಿ ನೇತೃತ್ವದಲ್ಲಿ...