ಲೋಕಸಭಾ ಚುನಾವಣೆ | ಭಾರೀ ವಿವಾದದ ಬಳಿಕ ಜೈಪುರ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸಿದ ಕಾಂಗ್ರೆಸ್!

Date:

ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ದ್ವೇಷ ಹರಡುವುದರಲ್ಲೇ ಕುಖ್ಯಾತಿ ಪಡೆದಿರುವ ರಾಜಸ್ಥಾನದ ‘ಜೈಪುರ್ ಡೈಲಾಗ್ಸ್‌’ನ ನಿರ್ದೇಶಕನಿಗೆ ಕಾಂಗ್ರೆಸ್ ಲೋಕಸಭಾ ಟಿಕೆಟ್ ನೀಡಿದ್ದು, ದೇಶಾದ್ಯಂತ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಭಾನುವಾರ ಜೈಪುರ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸಿದೆ.

ಕಾಂಗ್ರೆಸ್ ಸೇರಿದಂತೆ ಧರ್ಮಾಧಾರಿತ ದ್ವೇಷ ಹರಡುವ ಕೆಲಸ ಮಾಡುತ್ತಿರುವ thejaipurdialogues.comನ ಪಾಲುದಾರ ಹಾಗೂ ನಿರ್ದೇಶಕನೂ ಆಗಿರುವ ಸುನಿಲ್ ಶರ್ಮಾಗೆ ಜೈಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಆಯ್ಕೆ ಮಾಡಿತ್ತು. ಇದು ಭಾರೀ ಈಗ ವಿವಾದಕ್ಕೆ ಕಾರಣವಾಗಿತ್ತು. ಇದು ದೊಡ್ಡ ಸುದ್ದಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್, ಸುನಿಲ್ ಶರ್ಮಾರನ್ನು ಬದಲಿಸಿದೆ. ಇವರ ಬದಲಿಗೆ ಈ ಕ್ಷೇತ್ರಕ್ಕೆ ನೂತನ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರತಾಪ್ ಸಿಂಗ್ ಖಚರಿಯಾವಾಸ್ ಅವರ ಹೆಸರನ್ನು ಪ್ರಕಟಿಸಿದೆ.

ಈ ನಡುವೆ ಸುದ್ದಿಗೋಷ್ಠಿ ಕರೆದು ಮಾತನಾಡಿರುವ ವಿವಾದಿತ ಅಭ್ಯರ್ಥಿ ಸುನಿಲ್ ಶರ್ಮಾ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನನಗೆ ಜೈಪುರ ಕ್ಷೇತ್ರದಿಂದ ನನಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಆದರೆ ಕೆಲವರು ಕುತಂತ್ರ ಮಾಡಿದ್ದು, ನಾನು ‘ಜೈಪುರ್ ಡೈಲಾಗ್ಸ್‌’ನ ನಿರ್ದೇಶಕ ಎಂದು ಆರೋಪ ಹೊರಿಸಲಾಗಿದೆ. ಇದು ನನ್ನ ವಿರುದ್ಧದ ಷಡ್ಯಂತ್ರವಷ್ಟೇ. ನಾನು ‘ಜೈಪುರ್ ಡೈಲಾಗ್ಸ್‌’ನ ನಿರ್ದೇಶಕನಾಗಿಲ್ಲ. ಅದರಲ್ಲಿ ಕೇವಲ ಇಬ್ಬರಷ್ಟೇ ನಿರ್ದೇಶಕರಿದ್ದಾರೆ. ಆ ಇಬ್ಬರಲ್ಲಿ ನಾನಿಲ್ಲ. ಆದರೂ ನಾನು ಮುಂದಿನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಉಮೇದುವಾರಿಕೆಯಿಂದ ಹಿಂದೆ ಸರಿಯುತ್ತೇನೆ” ಎಂದು ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಯಾರು ಈ ಸುನಿಲ್ ಶರ್ಮಾ?

ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ದ್ವೇಷ ಹರಡುವುದರಲ್ಲೇ ಕುಖ್ಯಾತಿ ಪಡೆದಿರುವ ರಾಜಸ್ಥಾನದ ‘ಜೈಪುರ್ ಡೈಲಾಗ್ಸ್‌’ನ ನಿರ್ದೇಶಕ ಎಂಬ ಆರೋಪ ಕಾಂಗ್ರೆಸ್ ಲೋಕಸಭಾ ಟಿಕೆಟ್ ಪಡೆದಿದ್ದ ಸುನಿಲ್ ಶರ್ಮಾ ಮೇಲಿತ್ತು.

ಈ ಬಗ್ಗೆ ಟ್ವೀಟ್ ಮೂಲಕ ಗಮನ ಸೆಳೆದಿದ್ದ ಆಲ್ಟ್ ನ್ಯೂಸ್ ಸಹಸಂಸ್ಥಾಪಕ, ದ್ವೇಷ ಹರಡುವವರ ವಿರುದ್ಧ ನಿರಂತರ ಬೇಟೆಯಾಡುತ್ತಿರುವ ಮುಹಮ್ಮದ್ ಝುಬೈರ್, “ಜೈಪುರ್ ಡೈಲಾಗ್ಸ್‌ನ ಪಾಲುದಾರ ಹಾಗೂ ನಿರ್ದೇಶಕ ಸುನೀಲ್ ಶರ್ಮಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಆಹಾ. ಇದು ಅದ್ಭುತವೇ ಸರಿ” ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಟ್ಯಾಗ್ ಮಾಡಿದ್ದರು. ಈ ಟ್ವೀಟ್‌ನ ಬಳಿಕ ಕಾಂಗ್ರೆಸ್‌ನ ಹಿರಿಯ ಮುಖಂಡ ಶಶಿ ತರೂರ್‌ ಕೂಡ ಪಕ್ಷದ ಮುಖಂಡರ ನಡೆಯನ್ನೇ ಪ್ರಶ್ನಿಸಿದ್ದರು.

ಝುಬೈರ್ ಅವರು ಹಂಚಿಕೊಂಡಿರುವ ವೀಡಿಯೋದಲ್ಲಿ ರಾಜಸ್ಥಾನ್ ಚೌಕ್ ಎಂಬ ಡಿಜಿಟಲ್ ಮೀಡಿಯಾದ ವರದಿಗಾರರೊಬ್ಬರು ಸುನಿಲ್ ಶರ್ಮಾ ಅವರನ್ನು ಜೈಪುರ್ ಡೈಲಾಗ್ಸ್ ಬಗ್ಗೆ ಪ್ರಶ್ನಿಸಿದ್ದಕ್ಕೆ, ಸುನಿಲ್ ಶರ್ಮಾ ಕ್ಯಾಮೆರಾದಿಂದ ತಪ್ಪಿಸಿಕೊಂಡು ಹೋಗುವುದು ದೃಶ್ಯಗಳಲ್ಲಿ ಸೆರೆಯಾಗಿತ್ತು.

ಇದನ್ನು ಓದಿದ್ದೀರಾ? ರಾಜಸ್ಥಾನ | ನಿರಂತರ ದ್ವೇಷ ಹರಡುವ ‘ಜೈಪುರ್ ಡೈಲಾಗ್ಸ್‌’ನ ನಿರ್ದೇಶಕನಿಗೆ ಕಾಂಗ್ರೆಸ್ ಟಿಕೆಟ್!

‘ಜೈಪುರ್ ಡೈಲಾಗ್ಸ್‌’ ಬಲಪಂಥೀಯ ವಿಚಾರಧಾರೆ, ದ್ವೇಷವನ್ನು ವೆಬ್‌ಸೈಟ್‌ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಹಂಚುವಲ್ಲಿ ಕುಖ್ಯಾತಿ ಪಡೆದಿದೆ. ಇವರ ಯೂಟ್ಯೂಬ್ ಚಾನೆಲ್ ಸುಮಾರು 14 ಲಕ್ಷ Subcribers ಅನ್ನು ಕೂಡ ಹೊಂದಿದೆ. ಇದಕ್ಕೆ ಐವರು ನಿರ್ದೇಶಕರಿದ್ದು, ಅದರಲ್ಲಿ ಸುನಿಲ್ ಶರ್ಮಾ ಕೂಡ ಒಬ್ಬರು ಎಂಬುದೇ ವಿವಾದಕ್ಕೆ ಕಾರಣವಾಗಿತ್ತು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈಶಾನ್ಯ ಭಾರತದ 25 ಸೀಟುಗಳು: ಗುಡಿಸಿ ಹಾಕುವ ಬಿಜೆಪಿಯ ಗುರಿ ಮೂರನೆಯ ಸಲವೂ ಈಡೇರುವುದೇ?

ಅಸ್ಸಾಮ್ ಸೇರಿದಂತೆ ಈಶಾನ್ಯ ಭಾರತ(North East India)ದ ಎಂಟು ರಾಜ್ಯಗಳು ಒಟ್ಟು...

ಮೋದಿ ಆತ್ಮಸ್ಥೈರ್ಯ ಕಳೆದುಕೊಂಡು ಭಾಷಣ ಮಾಡುವಾಗ ತೊದಲುತ್ತಿದ್ದಾರೆ: ಅಖಿಲೇಶ್ ಯಾದವ್

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ಅರಿತ ಪ್ರಧಾನಿ ನರೇಂದ್ರ ಮೋದಿ...

ಜುಲೈ 5ರಂದು ಬಡ ಮಹಿಳೆಯರ ಖಾತೆಗೆ 8,500 ರೂ ಜಮೆ: ರಾಹುಲ್ ಗಾಂಧಿ

ಮಹಾಲಕ್ಷ್ಮೀ ಯೋಜನೆ ದೇಶದಲ್ಲಿರುವ ಬಡ ಮಹಿಳೆಯರ ಬ್ಯಾಂಕ್ ಖಾತೆಗೆ ಜುಲೈ 5ರಂದು...

ಅನುಮಾನಗಳನ್ನು ಹುಟ್ಟುಹಾಕುವುದೇ ಕೆಲವರ ಕೆಲಸ: ಮುಖ್ಯ ಚುನಾವಣಾ ಆಯುಕ್ತ

ಅನುಮಾನಗಳನ್ನು ಹುಟ್ಟುಹಾಕುವುದೇ ಕೆಲವರ ಕೆಲಸ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್...