ಇಂದಿನಿಂದ ವಿಬಿ-ಜಿ ರಾಮ್‌ ಜಿ ಜಾರಿ: ರಾಜ್ಯವಾರು ಕೂಲಿ ದರ ಪರಿಷ್ಕರಣೆ

Date:

ಇಂದಿನಿಂದ ದೇಶಾದ್ಯಂತ ವಿಬಿ-ಜಿ ರಾಮ್‌ ಜಿ ಕಾಯ್ದೆಯು ಅನುಷ್ಠಾನಕ್ಕೆ ಬರಲಿದೆ, ಹೊಸ ಕಾಯ್ದೆಯಡಿ ಪರಿಷ್ಕೃತ ವೇತನನ ದರಗಳನ್ನು ಮಂಗಳವಾರ ಪ್ರಕಟಿಸಲಾಗಿದೆ.

ಕೇಂದ್ರ ಸರ್ಕಾರವೂ ನರೇಗಾ ಯೋಜನೆಯಡಿ 100 ದಿನ ಲಭ್ಯವಿದ್ದ ಕೆಲಸದ ದಿನಗಳನ್ನು 125 ದಿನಗಳಿಗೆ ಹೆಚ್ಚಿಸುವ ಆಶ್ವಾಸನೆ ನೀಡಿದೆ. ಮನರೇಗಾ ಅಡಿಯಲ್ಲಿ 298.8 ರೂ ಇದ್ದ ವೇತನವನ್ನು 327.4 ರೂಗಳಿಗೆ ಅಂದರೆ 28.6 ರೂ ಹೆಚ್ಚಿಸುವುದಾಗಿ ಹೇಳಿದೆ. ಜುಲೈ 1ರಿಂದ ಈ ಪರಿಷ್ಕೃತ ವೇತನ ಜಾರಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ.

ವಿಬಿ-ಜಿ ರಾಮ್‌ ಜಿ ಕಾಯ್ದೆಗೆ ಒಳಪಡುವ ಕಾರ್ಮಿಕರಿಗೆ ಉದ್ಯೋಗ ಚೀಟಿ ದೊರೆಯುವವರೆಗೂ ನರೇಗಾ ಯೋಜನೆಯಲ್ಲಿ ನೀಡಲಾದ ಉದ್ಯೋಗ ಚೀಟಿಯನ್ನೇ ಮಾನ್ಯ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಯೋಜನೆಯ ಅನುಷ್ಠಾನಕ್ಕೆ ಈಗಾಗಲೇ 95,692.31 ಕೋಟಿಯ ಮೊದಲ ಹಂತದ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.

ಉದ್ಯೋಗ ಚೀಟಿಗೆ ನೋಂದಣಿಯಾಗದ ಕಾರ್ಮಿಕರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಲಸ ಮುಂದುವರೆಸಲು ಸಾಧ್ಯವಿದ್ದು, ಇ-ಕೆವೈಸಿ ಮುಖೇನ ಉದ್ಯೋಗ ಚೀಟಿ ಪಡೆಯಲು ಬಾಕಿ ಇರುವ ಕಾರ್ಮಿಕರಿಗೂ ಉದ್ಯೋಗ ನಿರಾಕರಿಸುವಂತಿಲ್ಲ ಎಂಬ ಸೂಚನೆ ನೀಡಲಾಗಿದೆ.

ರಾಜ್ಯಾವಾರು ಕೂಲಿ ದರಗಳನ್ನು ಪರಿಷ್ಕರಿಸಲಾಗಿದ್ದು ಕರ್ನಾಟಕ: ರೂ. 349 ಕೇರಳ: ರೂ. 401 ಗೋವಾ: ರೂ. 406 ತಮಿಳುನಾಡು: ರೂ. 336 ಮಹಾರಾಷ್ಟ್ರ: ರೂ. 312 ಆಂಧ್ರಪ್ರದೇಶ: ರೂ. 307 ತೆಲಂಗಾಣ: ರೂ. 307 ಉತ್ತರ ಪ್ರದೇಶ, ಬಿಹಾರ & ಪಶ್ಚಿಮ ಬಂಗಾಳ: ತಲಾ ರೂ. 300 ವೇತನ ನಿಗದಿ ಪಡಿಸಲಾಗಿದೆ.

ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ, ಬಿಹಾರ ಉತ್ತರ ಪ್ರದೇಶ ರಾಜ್ಯಗಳಲ್ಲಿ ಶೇಕಡ 15ರಿಂದ 25ರಷ್ಟು ವೇತನ ಪ್ರಮಾಣ ಹೆಚ್ಚಿಸಿದರೆ, ಅರುಣಾಚಲ ಮತ್ತು ನಾಗಲ್ಯಾಂಡ್‌ ರಾಜ್ಯಗಳಲ್ಲಿ ಶೇಕಡ 24.5ರಷ್ಟು ವೇತನ ಹೆಚ್ಚು ಮಾಡಲಾಗಿದೆ. ಮನರೇಗಾದಲ್ಲಿ ಕೂಲಿ ಹಣವನ್ನು ಶೇ. 100ರಷ್ಟು ಒಕ್ಕೂಟ ಸರ್ಕಾರ ನೀಡುತ್ತಿತ್ತು. ಕೇಂದ್ರದ ಹೊಸ ಕಾನೂನಿನಂತೆ ಒಕ್ಕೂಟ ಸರ್ಕಾರ ಕೇವಲ ಶೇ.60ರಷ್ಟು ಅನುದಾನ ಮಾತ್ರ ಒದಗಿಸುತ್ತದೆ, ಉಳಿದ 40ರಷ್ಟನ್ನು ರಾಜ್ಯ ಸರ್ಕಾರಗಳು ನೀಡಬೇಕಾಗಿದೆ. 



eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

KPSC ನೇಮಕಾತಿ ಹಗರಣ: SIT ರಚನೆಗೆ ಸುಪ್ರೀಂ ತಡೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು, ಗೋವಾ, ಕೋಲ್ಕತ್ತದಲ್ಲಿ ಸಿಜೆಪಿ ‘ಮೋರ್ಚಾ’

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ....

ನಾಳೆ ‘ಕೊಂದವರು ಯಾರು?’ ರಾಷ್ಟ್ರೀಯ ವಿಚಾರ ಸಂಕಿರಣ: ಪಿತೃಪ್ರಧಾನತೆ, ಹೊಣೆಗಾರಿಕೆ ಕುರಿತು ಚರ್ಚೆಗೆ ವೇದಿಕೆ

ಕರ್ನಾಟಕದ ‘ನಾವೆದ್ದು ನಿಲ್ಲದಿದ್ದರೆ' ಸಂಘಟನೆಯು ಆರಂಭಿಸಿರುವ 'ಕೊಂದವರು ಯಾರು? Who Killed...