‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

Date:

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ ತೀವ್ರಗೊಂಡಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

- Advertisement -

ಗುಜರಾತ್‌ನ ​ವಡೋದರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸೋಮವಾರ ಲೋಕಸಭೆಯಲ್ಲಿ ಪ್ರಧಾನಿಯವರು ಮಾಡಿದ ಭಾಷಣವನ್ನು ಪ್ರಶ್ನಿಸಿದರು. ವಿಶೇಷವಾಗಿ ತಮ್ಮ ಭಾಷಣದಲ್ಲಿ ಅಮೆರಿಕವನ್ನು ನೇರವಾಗಿ ಉಲ್ಲೇಖಿಸದಿರುವುದನ್ನು ‘ಎದ್ದುಕಾಣುವ ಲೋಪ’ ಎಂದು ಹೇಳಿದರು. ಮೋದಿಯವರ ಮೌನ ಕೇವಲ ಆಕಸ್ಮಿಕವಲ್ಲ, ಇದು ಆಳವಾದ ಸಮಸ್ಯೆಯ ಸೂಚಕವಾಗಿದೆ ಎಂದು ರಾಹುಲ್ ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ಕವಿತೆ | ನಾನು, ರಸ್ತೆ ಹಾಗೂ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಮರಾಠಿ ಕವಿ ವಸಂತ್ ಆಬಾಜಿ ದಹಾಕೆ ಅವರ "ನಾನು, ರಸ್ತೆ ಹಾಗೂ ಕಪ್ಪು ಹಕ್ಕಿ" ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ...

ಶಿವಮೊಗ್ಗ | 40 ವರ್ಷ ದುಡಿದರೂ ಗಜಾನನ ಸಂಸ್ಥೆ...

ಮಲೆನಾಡಿನ ಸಾರಿಗೆ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದ್ದ ಸಾಗರ ತಾಲೂಕಿನ ಹೆಸರಾಂತ ಗಜಾನನ ಬಸ್ ಸಂಸ್ಥೆ ಒಂದು ಕಾಲದಲ್ಲಿ ಸುಮಾರು 150ಕ್ಕೂ ಹೆಚ್ಚು ಬಸ್‌ಗಳ ಮೂಲಕ ಜನಪ್ರಿಯತೆ ಗಳಿಸಿತ್ತು. ಸಂಸ್ಥೆಯ ಬೆಳವಣಿಗೆಯಲ್ಲಿ...

ರಾಜಕೀಯ ಪಕ್ಷಗಳಿಗೆ ಪ್ರವೇಶವಿಲ್ಲ: ಚುನಾವಣೆ ಬಹಿಷ್ಕರಿಸಿದ ಹೊನ್ನಗುಂಡಿ ಗ್ರಾಮಸ್ಥರು!

ಅದೆಷ್ಟೋ ಚುನಾವಣೆ ನಡೆದು ಹೋದವು, ಆದರೆ ನಮ್ಮೂರಿಗೆ ಮೂಲಭೂತ ಸೌಕರ್ಯಗಳಿಲ್ಲ. ಕನಿಷ್ಠ ಸೌಲಭ್ಯವಾದ ಡಾಂಬರ್ ರಸ್ತೆ ಕಾಣದೆ ಅದೆಷ್ಟೋ ವರ್ಷ ಕಳೆದಿದೆ. ನಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಯಾವ ರಾಜಕೀಯ ಪಕ್ಷಗಳು...

​”ಪ್ರಧಾನಿ 25 ನಿಮಿಷಗಳ ಕಾಲ ಭಾಷಣ ಮಾಡಿದ್ದಾರೆ ಎಂದು ನಾನು ಕೇಳಿದ್ದೇನೆ. ಆದರೆ ಅವರು ಸಂಸತ್ತಿನಲ್ಲಿ ಮುಕ್ತ ಚರ್ಚೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ನಾನು ಖಾತರಿಪಡಿಸುತ್ತೇನೆ, ಏಕೆಂದರೆ ಅವರು ರಾಜಿ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿ 25 ನಿಮಿಷಗಳ ಕಾಲ ಮಾತನಾಡಿದರು, ಆದರೆ ಅಮೆರಿಕದ ವಿರುದ್ಧ ಒಂದೇ ಒಂದು ಮಾತನ್ನೂ ಹೇಳಲಿಲ್ಲ. ನರೇಂದ್ರ ಮೋದಿ ಶೇಕಡಾ 100 ರಷ್ಟು ಟ್ರಂಪ್ ನಿಯಂತ್ರಣದಲ್ಲಿದ್ದಾರೆ” ಎಂದು ಅವರು ಆರೋಪಿಸಿದರು.

ಸರ್ಕಾರದ ಆರ್ಥಿಕ ನಿರ್ಧಾರಗಳನ್ನೂ ಟೀಕಿಸಿದ ಕಾಂಗ್ರೆಸ್ ನಾಯಕ, ಅಮೆರಿಕದೊಂದಿಗಿನ ಮಧ್ಯಂತರ ವ್ಯಾಪಾರ ಒಪ್ಪಂದಗಳು ಭಾರತೀಯ ರೈತರ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು. ಉಭಯ ದೇಶಗಳ ಕೃಷಿ ವ್ಯವಸ್ಥೆಗಳ ನಡುವಿನ ವ್ಯತ್ಯಾಸವನ್ನು ಎತ್ತಿತೋರಿಸಿದ ಅವರು, ಅಮೆರಿಕದ ಸರಕುಗಳಿಗೆ ಹೆಚ್ಚಿನ ಅವಕಾಶ ನೀಡುವುದರಿಂದ ದೇಶೀಯ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಎಚ್ಚರಿಸಿದರು.

​”ಭಾರತದ ಜನರು ಸಣ್ಣ ಜಮೀನುಗಳನ್ನು ಹೊಂದಿದ್ದು, ಅವರು ಕೈಯಾರೆ ಕೆಲಸ ಮಾಡುತ್ತಾರೆ. ಆದರೆ ಅಮೆರಿಕದಲ್ಲಿ ಯಂತ್ರಗಳ ಮೂಲಕ ಕಾರ್ಯನಿರ್ವಹಿಸುವ ಬೃಹತ್ ಜಮೀನುಗಳಿವೆ. ಅಮೆರಿಕದ ಸರಕುಗಳು ಭಾರತಕ್ಕೆ ಬರಲು ಪ್ರಾರಂಭಿಸಿದರೆ, ನಮ್ಮ ರೈತರು ನಾಶವಾಗುತ್ತಾರೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು.

​”ಆದಿವಾಸಿ ಎಂದರೆ ಭಾರತದ ಮೂಲ ನಿವಾಸಿಗಳು – ಈ ಭೂಮಿ, ನೀರು ಮತ್ತು ಕಾಡುಗಳ ನಿಜವಾದ ಮಾಲೀಕರು. ಆದರೆ ಆರ್‌ಎಸ್‌ಎಸ್-ಬಿಜೆಪಿ ‘ವನವಾಸಿ’ ಎಂಬ ಹೊಸ ಪದವನ್ನು ಪರಿಚಯಿಸಿದೆ. ಇದರರ್ಥ ನೀವು ಕೇವಲ ಕಾಡುಗಳಲ್ಲಿ ವಾಸಿಸುವವರೇ ಹೊರತು, ಈ ಸಂಪನ್ಮೂಲಗಳ ನಿಜವಾದ ಮಾಲೀಕರಲ್ಲ ಎಂಬುದಾಗಿದೆ” ಎಂದು ಅವರು ಹೇಳಿದರು.

ಇದನ್ನು ಓದಿದ್ದೀರಾ? 84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

​ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರನ್ನು ಸ್ಮರಿಸಿದ ರಾಹುಲ್, ಆಡಳಿತರೂಢ ಬಿಜೆಪಿ ಕೇವಲ ಸಾಂಕೇತಿಕ ಗೌರವವನ್ನು ನೀಡುತ್ತಾ, ಅವರು ಪ್ರತಿಪಾದಿಸಿದ ತತ್ವಗಳನ್ನೇ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು. “ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಬಿರ್ಸಾ ಮುಂಡಾ ಪ್ರತಿಮೆಯ ಮುಂದೆ ಕೈ ಮುಗಿಯುತ್ತಾರೆ. ಆದರೆ ಬಿರ್ಸಾ ಮುಂಡಾ ಹೋರಾಡಿದ ಮತ್ತು ಹುತಾತ್ಮರಾದ ಆದರ್ಶಗಳ ಮೇಲೆಯೇ ಅವರು ದಾಳಿ ಮಾಡುತ್ತಾರೆ. ಆದಿವಾಸಿಗಳಿಂದ ಭೂಮಿ, ನೀರು ಮತ್ತು ಕಾಡುಗಳನ್ನು ಕಸಿದುಕೊಳ್ಳುವುದು ಕೇವಲ ಬಿರ್ಸಾ ಮುಂಡಾ ಮೇಲಿನ ದಾಳಿಯಲ್ಲ, ಇದು ಸಂವಿಧಾನದ ಮೇಲಿನ ದಾಳಿಯೂ ಹೌದು” ಎಂದು ಅವರು ಕಿಡಿಕಾರಿದರು.

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇರಾನ್ ಯುದ್ಧ ಪ್ರಾರಂಭವಾದ ನಂತರ ಮೊದಲ ಬಾರಿಗೆ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸೋಮವಾರ, ಯುದ್ಧದಿಂದ ಉದ್ಭವಿಸಿರುವ ಆರ್ಥಿಕ, ಭದ್ರತಾ ಮತ್ತು ಮಾನವೀಯ ಸವಾಲುಗಳನ್ನು ಭಾರತವು ಸಮರ್ಥವಾಗಿ ನಿಭಾಯಿಸುತ್ತಿದೆ. ಇದರ ಜೊತೆಗೆ ತನ್ನ ನಾಗರಿಕರು ಮತ್ತು ಪ್ರಮುಖ ಪೂರೈಕೆಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ಭರವಸೆ ನೀಡಿದರು.

​ಹಾರ್ಮುಜ್ ಜಲಸಂಧಿಯಲ್ಲಿನ ಅಡೆತಡೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮೋದಿ, ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ‘ಸ್ವೀಕಾರಾರ್ಹವಲ್ಲ’ ಮತ್ತು ಕಚ್ಚಾ ತೈಲ, ಅನಿಲ ಹಾಗೂ ರಸಗೊಬ್ಬರಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಕಡಲ ಮಾರ್ಗಗಳನ್ನು ನಿಕಟವಾಗಿ ಗಮನಿಸುತ್ತಿದೆ ಎಂದು ಸಂಸತ್ತಿಗೆ ತಿಳಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಾಹನ ಸವಾರರಿಗೆ ಗುಡ್ ನ್ಯೂಸ್: ನ. 21ರಿಂದ ಡಿ. 11ರವರೆಗೆ ಬಾಕಿ ದಂಡ ಪಾವತಿಗೆ 50% ರಿಯಾಯಿತಿ!

ವಾಹನ ಸವಾರರ ಮೇಲಿರುವ ಬಾಕಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ (ಇ-ಚಲನ್)...

ಸೋನಿಯಾ ಗಾಂಧಿ ಪೂರ್ವಿಕರ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಮುಂದಾದ ಪಂಜಾಬಿ ಉದ್ಯಮಿ!

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ...

‘ಹೋ, ಅದು ನಿಮ್ಮ ಮಡಿಲೇ?’ — ಅದಾನಿ ಸಮೂಹದ ಲೀಗಲ್ ನೋಟಿಸ್‌ಗೆ ವ್ಯಂಗ್ಯವಾಗಿ ಮೊಯಿತ್ರಾ ತಿರುಗೇಟು

ಸಾಮಾಜಿಕ ಜಾಲತಾಣ 'ಎಕ್ಸ್' (ಹಿಂದಿನ ಟ್ವಿಟರ್) ನಲ್ಲಿ ಹಂಚಿಕೊಂಡ ವ್ಯಂಗ್ಯಚಿತ್ರವೊಂದಕ್ಕೆ ಸಂಬಂಧಿಸಿದಂತೆ...

ಮಹಿಳೆಯ ವೇಷದಲ್ಲಿ ನೆರವಿನ ನಾಟಕ: ದೆಹಲಿಯಲ್ಲಿ ವಿಚಿತ್ರ ದರೋಡೆ ಜಾಲ ಭೇದಿಸಿದ ಪೊಲೀಸರು

ನಸುಕಿನ ವೇಳೆ ನಿರ್ಜನ ರಸ್ತೆಗಳಲ್ಲಿ ಮಹಿಳೆಯ ವೇಷ ಧರಿಸಿ ನೆರವಿಗಾಗಿ ಕೈಬೀಸಿ...