ಕೋಚಿಂಗ್ ತರಗತಿಯಲ್ಲಿ ಪಾಠ ಕೇಳುತ್ತಿದ್ದಾಗಲೇ ಹೃದಯ ಸ್ತಂಭನ: ವಿದ್ಯಾರ್ಥಿ ಸಾವು

Date:

ಹದಿನೆಂಟು ವರ್ಷದ ವಿದ್ಯಾರ್ಥಿಯೊಬ್ಬ ಕೋಚಿಂಗ್‌ ತರಗತಿಯಲ್ಲಿ ಪಾಠ ಕೇಳುತ್ತಿದ್ದಾಗಲೇ ಹೃದಯ ಸ್ತಂಭನಕ್ಕೊಳಗಾಗಿ ಮೃತಪಟ್ಟ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಇಂಧೋರ್‌ನ ಬಾನ್‌ವರ್‌ಕೋನ್‌ ಪ್ರದೇಶದಲ್ಲಿ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಯನ್ನು 18 ವರ್ಷದ ರಾಜ್‌ ಲೋಧಿ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಯು ಕೋಚಿಂಗ್‌ ತರಗತಿಯಲ್ಲಿ ಕೈಕಟ್ಟಿಕೊಂಡು ಪಾಠ ಕೇಳುತ್ತಿದ್ದಾಗಲೇ ಹೃದಯ ಸ್ತಂಭನವುಂಟಾಗಿ ಮೇಜಿನ ಮೇಲೆ ಬಿದ್ದಿದ್ದಾನೆ. ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನಕಾರಿಯಾಗಲಿಲ್ಲ. ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.

ಇಂಧೋರ್‌ನ 650 ಕಿ.ಮೀ ದೂರದ ಸಂತ ಜಿಲ್ಲೆಯವನಾದ ರಾಜ್‌ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಇಂಧೋರ್‌ಗೆ ಆಗಮಿಸಿದ್ದ. ಪಾಠ ಕೇಳುವ ಸಂದರ್ಭದಲ್ಲಿ ಹೃದಯದಲ್ಲಿ ನೋವು ಕಾಣಿಸಿಕೊಂಡು ಅಸ್ವಸ್ಥನಾಗಿ ಮೇಜಿನ ಮೇಲೆ ಬಿದ್ದ. ಘಟನೆಯ ಪೂರ್ಣ ದೃಶ್ಯಗಳು ಸಿಸಿ ಟಿವಿಯಲ್ಲಿ ದಾಖಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

“ಈತ ಕೈಕಟ್ಟಿ ಕುಳಿತುಕೊಂಡು ಪಾಠ ಕೇಳುತ್ತಿದ್ದ ಸಂದರ್ಭದಲ್ಲಿಯೇ ಇದ್ದಕ್ಕಿದ್ದಂತೆ ಮೇಜಿನ ಮೇಲೆ ಬಿದ್ದಿದ್ದಾನೆ. ಮೊದಲಿಗೆ ನಾವು ಮಲಗಿರಬಹುದು ಎಂದುಕೊಂಡೆ. ಆದರೆ ಆತನ ಮುಖದ ಭಾವನೆಗಳನ್ನು ಗಮನಿಸಿದಾಗ ನೋವಿನಿಂದ ಬಳಲುತ್ತಿರುವುದಾಗಿ ಅನಿಸಿತು. ನಾನು ಆತನ ಬೆನ್ನನ್ನು ಉಜ್ಜಲು ಪ್ರಯತ್ನಿಸಿದೆ. ಆದರೆ ಆತ ಕೆಳಗೆ ಕುಸಿದುಬಿದ್ದ” ಎಂದು ಪಕ್ಕದಲ್ಲಿದ್ದ ರಾಜ್‌ನ ಸ್ನೇಹಿತ ರಾಹುಲ್ ಯಾದವ್‌ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನ ಈ ಕಚ್ಚಾಟ, ‘ಆತ್ಮಹತ್ಯೆ’ಯ ಹುಚ್ಚಾಟ

ಕೇವಲ ಐದಾರು ನಿಮಿಷಗಳಲ್ಲಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ವಿದ್ಯಾರ್ಥಿ ಮೃತಪಟ್ಟಿರುವುದಾಗಿ ಘೋಷಿಸಿದರು. ವಿದ್ಯಾರ್ಥಿಯ ಪೋಷಕರು ಇಂಧೋರ್‌ಗೆ ಆಗಮಿಸಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಒಪ್ಪಿಸಲಾಯಿತು. ವಿದ್ಯಾರ್ಥಿಯ ತವರಿನಲ್ಲಿ ಅಂತಿಮ ಸಂಸ್ಕಾರ ನಡೆಸಲಾಗಿದೆ.

ಸದ್ಯ ಸಾವಿಗೆ ಹೃದಯ ಸ್ತಂಭನ ಕಾರಣ ಎಂದು ಶಂಕಿಸಲಾಗಿದೆ. ಪೂರ್ಣ ಪರೀಕ್ಷೆಯ ನಂತರ ನಿಖರವಾದ ಕಾರಣವನ್ನು ಹೇಳಬಹುದು ಎಂದು ಶವ ಪರೀಕ್ಷೆ ಕೈಗೊಂಡ ವೈದ್ಯರು ತಿಳಿಸಿದ್ದಾರೆ.

ಮೃತಪಟ್ಟ ವಿದ್ಯಾರ್ಥಿ ರಾಜ್‌ ಲೋಧಿ ಪೌಷ್ಟಿಕಾಂಶ ಆಹಾರ ಸೇವಿಸುತ್ತಿದ್ದ ಜಿಮ್‌ಗೆ ಹೋಗುವ ಸಲುವಾಗಿ ನಿತ್ಯ ಮುಂಜಾನೆ 5 ಗಂಟೆಗೆ ಎದ್ದೇಳುತ್ತಿದ್ದ. ಕೆಲವು ದಿನಗಳಿಂದ ಕೂದಲು ಉದರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಮಾತ್ರೆಗಳನ್ನು ಸೇವಿಸುತ್ತಿದ್ದ ಎಂದು ವಿದ್ಯಾರ್ಥಿ ಸಹೋದರ ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್-ಇರಾನ್ ಸಂಘ‍ರ್ಷ | ಅಮೆರಿಕಾ ಕುತಂತ್ರಕ್ಕೆ ಇಸ್ರೇಲ್ ದಾಳ

ಇರಾನ್‌ ಸೇರಿದಂತೆ ತನ್ನ ನೆರೆಯ ರಾಷ್ಟ್ರಗಳ ಮೇಲೆ ಕಳೆದೊಂದು ವರ್ಷದಲ್ಲಿ ಇಸ್ರೇಲ್...

ಹೈದರಾಬಾದ್‌ ಕ್ರಿಕೆಟ್ ಸಂಸ್ಥೆ ಭ್ರಷ್ಟಾಚಾರ ಹಗರಣ: ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್‌ಗೆ ಇ.ಡಿ ಸಮನ್ಸ್

ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆಯಲ್ಲಿನ(ಹೆಚ್‌ಸಿಎ) ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇ.ಡಿ) ಮಾಜಿ...

ರಾಜ್ಯದಲ್ಲಿ ಮಳೆ ಅಬ್ಬರ; ಬೆಂಗಳೂರು ತತ್ತರ

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು (ಅಕ್ಟೋಬರ್...

ದೆಹಲಿ: ಆಸ್ಪತ್ರೆಯಲ್ಲೇ ವೈದ್ಯನ ಗುಂಡಿಕ್ಕಿ ಹತ್ಯೆ

ದೆಹಲಿಯ ಜೈತ್‌ಪುರ ನಗರದ ನೀಮಾ ಆಸ್ಪತ್ರೆಯಲ್ಲಿ ವೈದ್ಯರೊಬ್ಬರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ...