ರಾಹುಲ್‌ ವಿರುದ್ಧ 272 ‘ಗಣ್ಯʼರ ಪತ್ರ; ಮಣಿಪುರ, ಉತ್ತರಪ್ರದೇಶ ಘಟನೆಗಳ ಬಗ್ಗೆ ಯಾಕೆ ಮೌನ?

Date:

ಪತ್ರಕ್ಕೆ ಸಹಿ ಹಾಕಿದವರ ಹಿನ್ನೆಲೆಯನ್ನು ನೋಡಿದರೆ ಅವರಲ್ಲಿ ಹಲವರು ಬಿಜೆಪಿ-ಆರ್‌ಎಸ್‌ಎಸ್ ಸಂಪರ್ಕದಲ್ಲಿ ಇರುವವರು ಎಂಬುದು ಎದ್ದು ಕಾಣುತ್ತದೆ. ಹೆಚ್ಚಿನವರು ಮೋದಿ ಸರ್ಕಾರದ ಅವಧಿಯಲ್ಲಿ ನೇಮಕಗೊಂಡವರು ಅಥವಾ ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ಹತ್ತಿರವಾದವರು ಎಂಬುದು ಗಮನಾರ್ಹ.

- Advertisement -

ದೇಶದ ಚುನಾವಣಾ ಆಯೋಗದ ವಿರುದ್ಧ ವೋಟ್‌ ಆರೋಪ ಮಾಡುತ್ತಿರುವ ಲೋಕಸಭೆಯ ವಿಪಕ್ಷ ನಾಯಕ ಗಾಂಧಿ ಮತ್ತು ಕಾಂಗ್ರೆಸ್‌ ವಿರುದ್ಧ 272 ‘ಗಣ್ಯ ನಾಗರಿಕರು’ – ಅಂದರೆ 16 ನಿವೃತ್ತ ನ್ಯಾಯಮೂರ್ತಿಗಳು, 123 ನಿವೃತ್ತ ಅಧಿಕಾರಿಗಳು, ಅವರಲ್ಲಿ 14 ರಾಯಭಾರಿಗಳು, 133 ನಿವೃತ್ತ ಸಶಸ್ತ್ರ ಪಡೆಗಳ ಅಧಿಕಾರಿಗಳು – ಸೇರಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ತೀಕ್ಷ್ಣವಾದ ಪತ್ರ ಬರೆದಿದ್ದಾರೆ. “Assault on National Constitutional Authorities” ಎಂಬ ಶೀರ್ಷಿಕೆಯ ಈ ಪತ್ರದಲ್ಲಿ ಚುನಾವಣಾ ಆಯೋಗದ ಮೇಲೆ ಮತಚೋರಿ ಆರೋಪ ಮಾಡುತ್ತಿರುವುದು ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿಯೇ ಆಗಿದೆ ಎಂದು ಆರೋಪಿಸಲಾಗಿದೆ. ವಿರೋಧ ಪಕ್ಷದ ನಾಯಕರು ಪ್ರಮುಖ ಸಂಸ್ಥೆಗಳ ವಿರುದ್ಧ ವಿಷಕಾರಿ ಹೇಳಿಕೆ ಮತ್ತು ರಾಜಕೀಯಕ್ಕೆ ಪ್ರಚೋದನಕಾರಿ ಹಾಗೂ ಆಧಾರರಹಿತ ಆರೋಪಗಳನ್ನು ಬಳಸುತ್ತಿದ್ದಾರೆ ಎಂದು ಟೀಕಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು...

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ ಮತ ಬಾಚುವ ಕಣ್ಣು ಮುಚ್ಚಿ ತನ್ಮ ಕರ್ತವ್ಯದ ಕಣ್ಣು ತೆರೆದು ನೋಡುವುದು ಅಗತ್ಯ. ಬೈಗಾ ಸಮುದಾಯದಂತಹ ಅಪರೂಪದ ಬುಡಕಟ್ಟು ಸಂತತಿಯನ್ನು...

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18...

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ ವಿಶಾಲ ವೃಕ್ಷ, ಪ್ರಕೃತಿ ಮತ್ತು ಬದುಕಿನ ಸಂಬಂಧದ ಪ್ರತಿಫಲನ. ಗೊಂಡ್ ಆದಿವಾಸಿ ಕಲಾವಿದನ ಚಿತ್ರ ಕಲಾಕೃತಿಯೊಂದು ಆತನ ಮರಣದ 25...

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಈ ಪತ್ರದಲ್ಲಿ ಸಹಿ ಹಾಕಿರುವವರ ಪೈಕಿ ಜಮ್ಮು-ಕಾಶ್ಮೀರದ ಮಾಜಿ ಡಿಜಿಪಿ ಎಸ್.ಪಿ. ವೈದ್, ಮಾಜಿ ರಾ ಮುಖ್ಯಸ್ಥ ಸಂಜೀವ್ ತ್ರಿಪಾಠಿ, ಮಾಜಿ ಐಎಫ್‌ಎಸ್ ಅಧಿಕಾರಿ ಲಕ್ಷ್ಮೀ ಪುರಿ (ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಅವರ ಪತ್ನಿ) ಇತ್ಯಾದಿ ಪ್ರಮುಖ ಹೆಸರುಗಳಿವೆ. ರಾಹುಲ್‌ ಗಾಂಧಿ ಅವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಸಹಿದಾರರು ಪ್ರತಿಪಾದಿಸಿದ್ದಾರೆ. “ಚುನಾವಣಾ ವೈಫಲ್ಯ ಮತ್ತು ಹತಾಶೆ” ಯಿಂದ ಈ ರೀತಿಯ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ವಿರೋಧ ಪಕ್ಷಗಳು ಚುನಾವಣಾ ಫಲಿತಾಂಶಗಳು ತಮ್ಮ ಪರವಾಗಿಲ್ಲದಿದ್ದಾಗ ಮಾತ್ರಕ್ಕೆ ಚುನಾವಣಾ ಆಯೋಗವನ್ನು ಟೀಕಿಸುತ್ತವೆ. ಇವು ಉದ್ದೇಶ ಪೂರ್ವಕ ಮತ್ತು “ಅವಕಾಶವಾದ” ಎಂದು ಪತ್ರವು ವಿವರಿಸಿದೆ.

ರಾಹುಲ್‌ ಗಾಂಧಿ ವಿರುದ್ಧ ಪತ್ರ

ಆದರೆ ಈ ಪತ್ರದ ಹಿಂದಿನ ನಿಜವಾದ ಉದ್ದೇಶ ಏನು? ಇದು ನಿಜವಾಗಿಯೂ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಗಣ್ಯರ ಧ್ವನಿಯೇ? ಅಥವಾ ಮೋದಿ ಸರ್ಕಾರದ ರಾಜಕೀಯ ಉದ್ದೇಶಕ್ಕಾಗಿ ಬರೆಸಲಾದ ಪತ್ರವೇ? ಸೋಷಿಯಲ್ ಮೀಡಿಯಾ ಮತ್ತು ವಿರೋಧ ಪಕ್ಷಗಳಲ್ಲಿ ಈಗ ಈ ಪ್ರಶ್ನೆಗಳೇ ಗಟ್ಟಿಯಾಗಿ ಕೇಳಿ ಬರುತ್ತಿವೆ.

ಮಹಾರಾಷ್ಟ್ರ ಹರಿಯಾಣ ಮತ್ತು ಜಾರ್ಖಂಡ್ ಚುನಾವಣೆಗಳ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮತದಾರರ ಪಟ್ಟಿಯಲ್ಲಿ ಭಾರೀ ಪ್ರಮಾಣದ ನಕಲಿ ಮತದಾರರ ಸೇರ್ಪಡೆಯ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಬಿಜೆಪಿ ಗೆದ್ದ ಕ್ಷೇತ್ರಗಳಲ್ಲಿ ಲಕ್ಷಾಂತರ ಹೊಸ ಮತದಾರರು ಸೇರಿದ್ದಾರೆ, ಆದರೆ ಕಾಂಗ್ರೆಸ್-ಎನ್‌ಸಿಪಿ ಗೆದ್ದ ಕ್ಷೇತ್ರಗಳಲ್ಲಿ ಅಂತಹ ಏರಿಕೆಯಿಲ್ಲ ಎಂಬುದನ್ನು ಅಂಕಿ ಅಂಶಗಳ ಸಮೇತ ತೋರಿಸಿದ್ದರು. ಮತಚೋರಿ ಎಂಬ ಪದ ಬಳಸಿ, ಚುನಾವಣಾ ಆಯೋಗವು ಬಿಜೆಪಿಯ ಬಿ-ಟೀಮ್ ಆಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪೂರಕವಾಗಿ, ಚುನಾವಣಾ ಆಯೋಗದ ಹೊಸ ಆಯುಕ್ತರ ನೇಮಕಾತಿಯಲ್ಲೂ ವಿರೋಧ ಪಕ್ಷಗಳ ಅಭಿಪ್ರಾಯವನ್ನು ಪರಿಗಣಿಸದೇ ಮೋದಿ ಸರ್ಕಾರ ನೇಮಕ ಮಾಡಿಕೊಂಡಿದೆ ಎಂಬ ಆರೋಪವಿದೆ. ಈ ಎಲ್ಲ ಆರೋಪಗಳು ಸಾರ್ವಜನಿಕ ಚರ್ಚೆಯಲ್ಲಿದ್ದಾಗಲೇ ಈ “ಗಣ್ಯರ” ಪತ್ರ ಬಂದಿದೆ.

ಸಹಿ ಹಾಕಿದವರ ಹಿನ್ನೆಲೆಯನ್ನು ನೋಡಿದರೆ ಅವರಲ್ಲಿ ಹಲವರು ಬಿಜೆಪಿ-ಆರ್‌ಎಸ್‌ಎಸ್ ಸಂಪರ್ಕದಲ್ಲಿ ಇರುವವರು ಎದ್ದು ಕಾಣುತ್ತದೆ. ಪತ್ರದಲ್ಲಿ ಸಹಿ ಹಾಕಿರುವ ಹೆಚ್ಚಿನವರು ಮೋದಿ ಸರ್ಕಾರದ ಅವಧಿಯಲ್ಲಿ ನೇಮಕಗೊಂಡವರು ಅಥವಾ ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ಹತ್ತಿರವಾದವರು ಎಂಬುದು ಗಮನಾರ್ಹ.

ಲಕ್ಷ್ಮೀ ಪುರಿ: ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಅವರ ಪತ್ನಿ. ಇದೊಂದೇ ಸಾಕು – ಇದು ಕುಟುಂಬದ ರಾಜಕೀಯ ಬೆಂಬಲ. ಎಸ್.ಪಿ. ವೈದ್: ಜಮ್ಮು-ಕಾಶ್ಮೀರದ ಮಾಜಿ ಡಿಜಿಪಿ. ಆರ್ಟಿಕಲ್ 370 ರದ್ದತಿಯ ನಂತರ ಮೋದಿ ಸರ್ಕಾರವನ್ನು ತುಂಬಾ ಹೊಗಳಿದ್ದರು. ಬಿಜೆಪಿ ಸಮರ್ಥಕ ಎಂದೇ ಪ್ರಸಿದ್ಧರು. ಸಂಜೀವ್ ತ್ರಿಪಾಠಿ: ಮಾಜಿ ರಾ ಮುಖ್ಯಸ್ಥ. ಮೋದಿ ಸರ್ಕಾರದ ರಾಷ್ಟ್ರೀಯ ಭದ್ರತಾ ನೀತಿಗಳ ಬಗ್ಗೆ ಯಾವಾಗಲೂ ಪ್ರಶಂಸೆ ಮಾಡುತ್ತಾರೆ.

ಲಕ್ಷ್ಮೀಪುರಿ 1

ಇವರ ಜೊತೆಗೆ ಇನ್ನೂ ಹಲವು ಹೆಸರುಗಳು ನಿವೃತ್ತ ನ್ಯಾಯಮೂರ್ತಿಗಳು, ಜನರಲ್‌ಗಳು. ಹಿಂದೆಯೂ ಸಿಎಎ, ಎನ್‌ಆರ್‌ಸಿ, ಆರ್ಟಿಕಲ್ 370 ರದ್ದತಿ, ರೈತ ಕಾನೂನುಗಳ ವಿರುದ್ಧ ಧ್ವನಿ ಎತ್ತಿದ್ದ ವಿರೋಧಿಗಳನ್ನು ಖಂಡಿಸಿ ಪತ್ರ ಬರೆದವರೇ ಆಗಿದ್ದಾರೆ. ಇದೊಂದು ಸಂಘಟಿತ ಗುಂಪು ಅನ್ನೋದರಲ್ಲಿ ಯಾವುದೇ ಅನುಮಾನ ಇಲ್ಲ ಅಂತ ಸಾಮಾನ್ಯ ಜನರು ಆರೋಪ ಮಾಡುತ್ತಿದ್ದಾರೆ.

ಸಂಜೀವ್ ತ್ರಿಪಾಠಿ 1

ಈ ಬಗ್ಗೆ ಕಾಂಗ್ರೆಸ್ ವಕ್ತಾರ ಪವನ್ ಖೇರಾ ನೇರವಾಗಿ ಪ್ರತಿಕ್ರಿಯಿಸಿದ್ದಾರೆ. “ಮೊದಲು ಬಿಜೆಪಿಯನ್ನ ಚುನಾವಣಾ ಮುಖ್ಯ ಅಧಿಕಾರಿ ಗ್ಯಾನೇಶ್ ಕುಮಾರ್ ಅವರು ರಕ್ಷಿಸಿದರು, ಈಗ ನಿವೃತ್ತ ಅಧಿಕಾರಿಗಳು ಬಂದು ರಕ್ಷಣೆಗೆ ನಿಂತಿದ್ದಾರೆ.” ಇದು “ಬಿಜೆಪಿ ಉದ್ಯೋಗ ವಿನಿಮಯ ಕಚೇರಿ”ಯ ಅರ್ಜಿದಾರರು ಎಂದು ಕಾಂಗ್ರೆಸ್ ಟೀಕಿಸಿದೆ. 2014ರ ಮೊದಲು ಸರ್ಕಾರವನ್ನು ಪ್ರಶ್ನಿಸುತ್ತಿದ್ದ ಗಣ್ಯರು ಈಗ ವಿರೋಧ ಪಕ್ಷವನ್ನೇ ಪ್ರಶ್ನಿಸುತ್ತಿದ್ದಾರೆ ಎಂಬ ಟೀಕೆಯೂ ಇದೆ.

ಎಸ್.ಪಿ. ವೈದ್

ಆದರೆ ಇದು ಹೊಸದೇನಲ್ಲ, 2019ರಿಂದೀಚೆಗೆ ಇಂತಹ “ಗಣ್ಯರ” ಪತ್ರಗಳು ಬಂದಾಗ ಎಲ್ಲವೂ ಸರ್ಕಾರದ ಪರವಾಗಿಯೇ ಇತ್ತು ಎಂಬುದು ಗಮನಾರ್ಹ ಸಂಗತಿ. ಸಿಎಎ ವಿರೋಧಿಸಿದಾಗ ನಿವೃತ್ತ ಅಧಿಕಾರಿಗಳು ಪತ್ರ ಬರೆದಿದ್ದರು. ರೈತ ಆಂದೋಲನದ ವೇಳೆ “ದೇಶವಿರೋಧಿ” ಎಂದು ಖಂಡಿಸಿ ಪತ್ರ ಬರೆದಿದ್ದರು. ಆರ್ಟಿಕಲ್ 370 ರದ್ದತಿಯನ್ನು ಸಮರ್ಥಿಸಿ ಪತ್ರ ಬರೆದಿದ್ದರು. ಈ ಎಲ್ಲ ಪತ್ರಗಳ ಹಿಂದೆಯೂ ಇರೋದು ಇದೇ ಗುಂಪುಗಳು. ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದಾಗ ಯಾವೊಬ್ಬ ಗಣ್ಯರಾದರೂ ಧ್ವನಿ ಎತ್ತಿದ್ದಾರಾ? ಇಲ್ಲ ಎತ್ತಿಲ್ಲ.

WhatsApp Image 2025 11 21 at 1.02.26 PM 2

ರಾಹುಲ್ ಗಾಂಧಿಯವರ ಆರೋಪಗಳು ಖಾಲಿ ಮಾತಲ್ಲ. ಮಹಾರಾಷ್ಟ್ರದಲ್ಲಿ 2024ಕ್ಕೆ ಹೋಲಿಸಿದರೆ 2025ರಲ್ಲಿ 42 ಲಕ್ಷ ಹೊಸ ಮತದಾರರು ಸೇರಿದ್ದಾರೆ. ಬಿಜೆಪಿ ಗೆದ್ದ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಭಾರೀ ಏರಿಕೆ ಆಗಿದೆ. ಇದನ್ನು ಚುನಾವಣಾ ಆಯೋಗ ಸಂಪೂರ್ಣ ಪಾರದರ್ಶಕವಾಗಿ ವಿವರಿಸಿದೆಯೇ? ಇಲ್ಲ. ಇನ್ನೂ ಹರಿಯಾಣದಲ್ಲಿ ಸುಮಾರು
25 ಲಕ್ಷ ನಕಲಿ ಮತ ಚಲಾವಣೆ ಆಗಿದೆ ಅಂತ ರಾಹುಲ್‌ ಗಾಂಧಿ ಸಾಕ್ಷ್ಯ ಸಮೇತ ಆರೋಪ ಮಾಡಿದ್ದಾರೆ. ಇದಕ್ಕಾದ್ರೂ ಚುನಾವಣಾ ಆಯೋಗ ಸರಿಯಾದ ಉತ್ತರವನ್ನ ಕೊಟ್ಟಿದೆಯಾ? ಈ ಎಲ್ಲಾ ಆರೋಪಗಳನ್ನು ಮುಚ್ಚಿಹಾಕಲು “ಗಣ್ಯರ” ಪತ್ರವನ್ನು ಆಯುಧವಾಗಿ ಬಳಸಿಕೊಳ್ತಾ ಇರೊದಂತೂ ನಿಜ.

ಈ ಪತ್ರ ನಿಜವಾಗಿಯೂ ಸ್ವತಂತ್ರ ಧ್ವನಿಯೇ ಆಗಿದ್ದರೆ ಚುನಾವಣಾ ಆಯೋಗದ ನಿಷ್ಪಕ್ಷಪಾತವನ್ನು ಖಚಿತಪಡಿಸಿಕೊಳ್ಳಲು ಸ್ವತಂತ್ರ ತನಿಖೆಗೆ ಒತ್ತಾಯ ಮಾಡಬೇಕಿತ್ತು. ಆದರೆ ಇದು ಕೇವಲ ವಿರೋಧ ಪಕ್ಷದ ಧ್ವನಿಯನ್ನು ಮುಚ್ಚಿಹಾಕುವ ಪ್ರಯತ್ನ. ಮೋದಿ ಸರ್ಕಾರದ ರಾಜಕೀಯ ಲಾಭಕ್ಕಾಗಿ ನಿವೃತ್ತ ಅಧಿಕಾರಿಗಳನ್ನು ಬಳಸಿಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ನಿಜವಾದ ಗಣ್ಯರು ಯಾವಾಗ ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಗಾಗಿ ಧ್ವನಿ ಎತ್ತುತ್ತಾರೋ ಆಗ ನಂಬಿಕೆ ಮೂಡುತ್ತದೆ.

ಇದನ್ನೂ ಓದಿ ಜಮ್ಮು ವೈಷ್ಣೋದೇವಿ ವೈದ್ಯಕೀಯ ಕಾಲೇಜು | ಮುಸ್ಲಿಂ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳ; ವಿವಾದ ಸೃಷ್ಟಿಸಿದ ಸಂಘಪರಿವಾರ

ಕಡೆಯದಾಗಿ ಮೂಡುವ ಪ್ರಶ್ನೆ ಏನೆಂದರೆ, ಈ ಗಣ್ಯರು ಮಣಿಪುರದಲ್ಲಿ ಒಂದೂವರೆ ವರ್ಷಗಳ ಕಾಲ ನರಹತ್ಯೆಗಳಾದಾಗ, ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರಗಳಾದಾಗ ಎಲ್ಲಿದ್ದರು? ಅಷ್ಟೇ ಏಕೆ ಶ್ರೀರಾಮನ ಮಂದಿರ ನಿರ್ಮಾಣವಾಗಿರುವ ಉತ್ತರ ಪ್ರದೇಶದಲ್ಲಿ ದಿನವೂ ಹೆಣ್ಣುಮಕ್ಕಳ ಅತ್ಯಾಚಾರ, ಕೊಲೆಗಳಾಗುತ್ತಿವೆ. ದಲಿತರನ್ನು ಅಮಾನವೀಯವಾಗಿ ಹಿಂಸಿಸಲಾಗುತ್ತಿದೆ, ದೇಶದಲ್ಲಿ ಸಾಮಾಜಿಕ ಹೋರಾಟಗಾರರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗುತ್ತಿದೆ. ತೀವ್ರ ಆರೋಗ್ಯ ಸಮಸ್ಯೆಯಿದ್ದ ಬುಡಕಟ್ಟು ಸಮುದಾಯಪರ ಹೋರಾಟಗಾರ ಸ್ಟಾನ್‌ ಸ್ವಾಮಿ ವಿರುದ್ಧ ಯುಎಪಿಎ ಕಾಯ್ದೆಯಡಿ ಸುಳ್ಳು ಪ್ರಕರಣ ದಾಖಲಿಸಿ ಜೈಲಿನಲ್ಲಿಟ್ಟು, ಕೈಗಳ ಸ್ವಾಧೀನ ಇಲ್ಲದ ಕಾರಣ ನೀರುಕುಡಿಯಲು ಸ್ಟ್ರಾ ಕೊಡಲೂ ಕೋರ್ಟ್‌ ಒಪ್ಪಿರಲಿಲ್ಲ. ಎರಡೂ ಕಾಲುಗಳು ಪೋಲಿಯೋ ವೀಡಿತರಾಗಿ ವೀಲ್‌ ಚೇರ್‌ಲ್ಲಿದ್ದ ಪ್ರೊ ಜಿ ಎನ್‌ ಸಾಯಿಬಾಬ ಅವರನ್ನು ಮಾವೋವಾದಿಗಳ ಜೊತೆ ಲಿಂಕ್‌ ಇದೆ ಎಂಬ ಆರೋಪದಲ್ಲಿ ಹತ್ತು ವರ್ಷ ಜೈಲಿನಲ್ಲಿಟ್ಟು ಕೊನೆಗೆ ಖುಲಾಸೆಗೊಳಿತ್ತು. ಆ ಹತ್ತು ವರ್ಷ ನಿರಪರಾಧಿಯ ಬದುಕು ಕಿತ್ತುಕೊಂಡವರ ವಿರುದ್ಧ ಯಾಕೆ ಮಾತಾಡಿಲ್ಲ? ಆಗ ಈ ಗಣ್ಯರು ಎಲ್ಲಿದ್ದರು? ಇಡಿ, ಸಿಬಿಐ, ಯುಎಪಿಎ ಕಾಯ್ದೆ ಎಲ್ಲವನ್ನೂ ರಾಜಾರೋಷವಾಗಿ ರಾಜಕೀಯ ಎದುರಾಳಿಗಳ ಮಟ್ಟಹಾಕಲು ಮೋದಿ ಸರ್ಕಾರ ಬಳಸಿಕೊಳ್ಳುವಾಗ ಒಂದು ಪತ್ರ ಬರೆಯುವ ನೆನಪಾಗಲಿಲ್ಲ ಯಾಕೆ? ಈ ಪ್ರಶ್ನೆಗಳು ಮೂಡುವುದು ಸಹಜ. ಎಲ್ಲಾ ಸಂದರ್ಭಗಳಲ್ಲೂ ಈ ದೇಶದ ಸತ್ಪ್ರೆಜೆಗಳು, ಹಿರಿಯ ಗಣ್ಯರು ಪ್ರತಿಕ್ರಿಯೆ ನೀಡಬೇಕಲ್ವಾ?

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿಯಲ್ಲಿ ಹೊಸ ಖಾಸಗಿ ಶಾಲೆಗಳ ಸ್ಥಾಪನೆ ನಿಯಮ ಸಡಿಲಿಕೆ: ಎರಡು ಕಡ್ಡಾಯ ಷರತ್ತುಗಳ ರದ್ದು

ಹೊಸ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಇರುವ ನಿಯಮಗಳನ್ನು ದೆಹಲಿ ಸರ್ಕಾರವು ಸಡಿಲಿಸಿದ್ದು,...

ಕೇರಳ ಸರ್ಕಾರದಲ್ಲಿ ಭಿನ್ನಮತ ಸ್ಫೋಟ; ಮುಖ್ಯಮಂತ್ರಿ ವಿರುದ್ಧವೇ ತಿರುಗಿಬಿದ್ದ ಯುಡಿಎಫ್ ಸಂಚಾಲಕ

ಕೇರಳದಲ್ಲಿ ವಿ.ಡಿ. ಸತೀಶನ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸರ್ಕಾರ...

ಸಾಮಾನ್ಯರಿಗೆ ಮತ್ತೆ ‘ಇಎಂಐ’ ಬರೆ: ರೆಪೊ ದರ ಶೇ. 0.25ರಷ್ಟು ಹೆಚ್ಚಳಕ್ಕೆ ಆರ್‌ಬಿಐ ಒಲವು

ದೇಶದಲ್ಲಿ ಏರಿಕೆಯಾಗುತ್ತಿರುವ ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)...

ಯುಪಿ ಚುನಾವಣೆ | ಕಾಂಗ್ರೆಸ್‌ಗೆ ಫಲ ನೀಡುವುದೇ ಬ್ರಾಹ್ಮಣ-ಮುಸ್ಲಿಂ ಸಮೀಕರಣ

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದ ಫೆಬ್ರವರಿ-ಮಾರ್ಚ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಗೆ...