ಗಗನಸಖಿ ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣ | ಮಾಜಿ ಶಾಸಕ ಗೋಪಾಲ್ ಗೋಯಲ್ ಕಾಂಡ ಖುಲಾಸೆ

Date:

ಗಗನಸಖಿ ಗೀತಿಕಾ ಶರ್ಮ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಿಂದ ಹರಿಯಾಣದ ಮಾಜಿ ಸಚಿವ ಗೋಪಾಲ್ ಗೋಯಲ್ ಕಾಂಡ ಅವರನ್ನು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಖುಲಾಸೆಗೊಳಿಸಿದೆ.

ಕಾಂಡಾ ಅವರ ಒಡೆತನದ ಎಂಎಲ್‌ಡಿಆರ್ ಏರ್‌ಲೈನ್ಸ್‌ನಲ್ಲಿ ಗೀತಿಕಾ ಶರ್ಮ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. ದೆಹಲಿಯ ಅವರ ಅಶೋಕ್ ವಿಹಾರ್ ಮನೆಯಲ್ಲಿ 2012ರ ಆಗಸ್ಟ್ 5ರಂದು ಗೀತಿಕಾರ ಮೃತದೇಹ ಪತ್ತೆಯಾಗಿತ್ತು. ಕಾಂಡ ಅವರ ಕಿರುಕುಳಕ್ಕೆ ಬೇಸತ್ತು ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅವರು ಡೆತ್‌ನೋಟ್ ಬರೆದಿಟ್ಟಿದ್ದರು.  

ಹರಿಯಾಣದ ಸಿರ್ಸಾ ಕ್ಷೇತ್ರದ ಶಾಸಕರಾಗಿದ್ದ ಗೋಪಿನಾಥ್ ಗೋಯಲ್ ಕಾಂಡ, ಭೂಪೇಂದರ್ ಹೂಡಾ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣದ ನಂತರ ಅವರು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2019ರ ಚುನಾವಣೆಯಲ್ಲಿ ಬಿಜೆಪಿ ಗೋಪಾಲ್ ಕಾಂಡ ಅವರ ಜೊತೆ ಮಾತುಕತೆಗೆ ಮುಂದಾಗಿತ್ತು. ಅವರ ಮೂಲಕ ಸ್ವತಂತ್ರ ಶಾಸಕರನ್ನು ಸೆಳೆಯುವುದು ಬಿಜೆಪಿ ಉದ್ದೇಶವಾಗಿತ್ತು. ನಂತರ ಪಕ್ಷದೊಳಗೆ ಅದರ ಬಗ್ಗೆ ಭಿನ್ನಮತ ವ್ಯಕ್ತವಾಗಿದ್ದರಿಂದ ಬಿಜೆಪಿ ಆ ಪ್ರಸ್ತಾವನೆಯಿಂದ ಹಿಂದೆ ಸರಿದಿತ್ತು.     

ಗೀತಿಕಾ ಶರ್ಮ ಅವರ ಸಾವಿನ ದುಃಖದಲ್ಲಿಯೇ ಅವರ ತಾಯಿ ಅನುರಾಧ ಕೂಡ 2013ರಲ್ಲಿ ಆತ್ಮಹತ್ಯೆ ಮಾಡಿಕೊಂಡು ಸತ್ತಿದ್ದರು. ಮಗಳು ಸತ್ತ ಕೋಣೆಯಲ್ಲಿಯೇ ಅದೇ ರೀತಿ ತಾಯಿ ಕೂಡ ತಮ್ಮ ಜೀವನ ಅಂತ್ಯ ಮಾಡಿಕೊಂಡಿದ್ದರು.              

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೂರ್ನಾಲ್ಕು ದಿನಗಳಲ್ಲಿ ಕೇಜ್ರಿವಾಲ್ ಬಂಧನ ಸಾಧ್ಯತೆ: ದೆಹಲಿ ಸಚಿವೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇನ್ನು ಮೂರ್ನಾಲ್ಕು ದಿನಗಳಲ್ಲಿ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ...

ಬಿಜೆಪಿಗೆ ದೇಣಿಗೆ: ಐಟಿ, ಇಡಿ ಮುಂತಾದ ಸಂಸ್ಥೆಗಳ ದಾಳಿಗೆ ತುತ್ತಾದ 30 ಸಂಸ್ಥೆಗಳ ಪಟ್ಟಿ ಇಲ್ಲಿದೆ

ಮಾಧ್ಯಮ ಸಂಸ್ಥೆಗಳಾದ ದಿ ನ್ಯೂಸ್ ಮಿನಿಟ್ ಹಾಗೂ ನ್ಯೂಸ್‌ ಲಾಂಡ್ರಿ ಬಿಜೆಪಿಗೆ...

ಎಕ್ಸ್ ಖಾತೆ ಸ್ಥಗಿತಗೊಳಸಲು ಹೊರಟ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ: ಕಾಂಗ್ರೆಸ್ ಆಕ್ರೋಶ

ಕೇಂದ್ರ ಗೃಹ ಇಲಾಖೆಯ ಮನವಿಯ ಮೇರೆಗೆ ರೈತರ ಹೋರಾಟದಲ್ಲಿ ಭಾಗಿಯಾದ 177...

ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ: ಪ್ರಧಾನಿ ಮೋದಿ

ರೈತರ ಕಲ್ಯಾಣಕ್ಕಾಗಿ ತನ್ನ ಭರವಸೆಯನ್ನು ಈಡೇರಿಸುವಲ್ಲಿ ಸರ್ಕಾರ ಬದ್ಧವಾಗಿದೆ. ಕಬ್ಬಿನ ಬೆಲೆಯಲ್ಲಿ...