ಇನ್ಮುಂದೆ ಜಾಮೀನು ಪ್ರಕ್ರಿಯೆ ಸೂಪರ್ ಫಾಸ್ಟ್; ಆಧಾರ್ ಸ್ಕ್ಯಾನ್ ಕಡ್ಡಾಯಗೊಳಿಸಿದ ದೆಹಲಿ ಹೈಕೋರ್ಟ್!

Date:

ನ್ಯಾಯಾಲಯದಿಂದ ಜಾಮೀನು ಮಂಜೂರಾದ ನಂತರವೂ ಕೈದಿಗಳ ಬಿಡುಗಡೆ ತಡವಾಗುವುದನ್ನು ತಡೆಯಲು ದೆಹಲಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಜಾಮೀನು ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಶ್ಯೂರಿಟಿ ನೀಡುವವರ ಗುರುತು ಪತ್ತೆ ಹಚ್ಚಲು ಕಡ್ಡಾಯವಾಗಿ ‘ಆಧಾರ್ ಕ್ಯೂಆರ್ ಕೋಡ್ ವೆರಿಫಿಕೇಶನ್’ ಅಪ್ಲಿಕೇಶನ್‌ಗಳನ್ನು ಬಳಸುವಂತೆ ದೆಹಲಿ ರಾಷ್ಟ್ರೀಯ ರಾಜಧಾನಿ ವಲಯದ ಎಲ್ಲಾ ಜೈಲು ಸೂಪರಿಂಟೆಂಡೆಂಟ್‌ಗಳಿಗೆ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

- Advertisement -

ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಮತ್ತು ಅಮಿತ್ ಮಹಾಜನ್ ಅವರಿದ್ದ ವಿಭಾಗೀಯ ಪೀಠವು ಮೇ 22 ರಂದು ಈ ಆದೇಶವನ್ನು ಹೊರಡಿಸಿದೆ. ಜಾಮೀನು ಸಿಕ್ಕ ಮೇಲೂ ಕೈದಿಗಳು ಬಿಡುಗಡೆಯಾಗಲು 50 ದಿನಗಳಿಗಿಂತ ಹೆಚ್ಚು ಸಮಯ ವಿಳಂಬವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಈ ಮಹತ್ತರ ಹೆಜ್ಜೆ ಇಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಸಾಮಾನ್ಯವಾಗಿ ಕೋರ್ಟ್‌ನಿಂದ ಜಾಮೀನು ಸಿಕ್ಕಾಗ, ಆರೋಪಿಗಳು ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗುತ್ತಾರೆ ಎಂದು ಗ್ಯಾರಂಟಿ ನೀಡಲು ಅವರ ಸ್ನೇಹಿತರು ಅಥವಾ ಸಂಬಂಧಿಕರು ಶ್ಯೂರಿಟಿ (ಜಾಮೀನುದಾರರು) ಆಗಿ ನಿಲ್ಲಬೇಕಾಗುತ್ತದೆ. ಆದರೆ ಈ ಜಾಮೀನುದಾರರ ಗುರುತು ಮತ್ತು ದಾಖಲೆಗಳನ್ನು ಪರಿಶೀಲಿಸಲು ಜೈಲು ಅಧಿಕಾರಿಗಳು ಸುದೀರ್ಘ ಸಮಯ ತೆಗೆದುಕೊಳ್ಳುತ್ತಿದ್ದರು. ಇದನ್ನು ತಪ್ಪಿಸಲು ಕೋರ್ಟ್ ಈಗ ಆಧಾರ್ ತಂತ್ರಜ್ಞಾನದ ಮೊರೆ ಹೋಗಿದೆ.

ಇದನ್ನೂ ಓದಿ: ಮಾಜಿ ಸಿಎಂ ಪಿಣರಾಯಿ ವಿಜಯನ್‌ ಮನೆ ಮೇಲೆ ED ದಾಳಿ; ಅಧಿಕಾರಿಗಳ ಕಾರಿಗೆ ಮುತ್ತಿಗೆ ಹಾಕಿದ CPM ಕಾರ್ಯಕರ್ತರು

ಇನ್ನು ಮುಂದೆ ಜಾಮೀನು ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ದೆಹಲಿಯ ಎಲ್ಲಾ ಜೈಲು ಸೂಪರಿಂಟೆಂಡೆಂಟ್‌ಗಳು ʼಆಧಾರ್ ಕ್ಯೂಆರ್ ಸ್ಕ್ಯಾನರ್ ಆಪ್ʼ, ʼಎಂ-ಆಧಾರ್ ಆಪ್ʼ ಹಾಗೂ ಆಧಾರ್ ಆಪ್‌ಗಳ ಮೂಲಕ ಜಾಮೀನುದಾರರ ಆಧಾರ್ ಕಾರ್ಡ್‌ನಲ್ಲಿರುವ ‘ಸೆಕ್ಯೂರ್ ಕ್ಯೂಆರ್ ಕೋಡ್’ ಅನ್ನು ಸ್ಕ್ಯಾನ್ ಮಾಡಿ ತಕ್ಷಣ ಪರಿಶೀಲಿಸಬೇಕು ಎಂದು ಕೋರ್ಟ್‌ ಆದೇಶಿಸಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಶಿಕ್ಷಕರು ಬದುಕಿನ ಭವಿಷ್ಯ ರೂಪಿಸಿದ ಶಿಲ್ಪಿಗಳು: ಪತ್ರಕರ್ತ ಗೌರೀಶ ಅಕ್ಕಿ

ಶಿಕ್ಷಕರು ನಮಗೆ ವಿದ್ಯೆಯ ಜೊತೆಗೆ ಸಂಸ್ಕಾರ ನೀಡಿ, ಬದುಕಿನ ಭವಿಷ್ಯವನ್ನು ರೂಪಿಸಿದ...

ವಿಜಯಪುರ | ಯುವಜನರು ಜವಾಬ್ದಾರಿಯುತ ನೀತಿ ನಿರೂಪಕರಾಗಲಿ: ಡಿಸಿ ಆನಂದ ಕೆ

ಯುವಜನರು ಸಂವಿಧಾನದ ಆಶಯಗಳು, ಸಂಸದೀಯ ಕಾರ್ಯಕಲಾಪಗಳು ಹಾಗೂ ಕಾನೂನು ರಚನೆಯ ಪ್ರಕ್ರಿಯೆಯ...

ಶಾಲೆಯಲ್ಲಿ ಅಸಾರಾಂ ಪ್ರಚಾರ; ಶಾಲಾ ಮುಖ್ಯಶಿಕ್ಷಕ ವಜಾ!

ಛತ್ತೀಸ್‌ಗಢದ ಬಲರಾಮಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ...

ರಾಜ್ಯ ಸಚಿವ ಸಂಪುಟ ಸಭೆ: 12 ಮಹತ್ವದ ಯೋಜನೆಗಳಿಗೆ ಅನುಮೋದನೆ

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು (ಅ.29) ನಡೆದ ಕರ್ನಾಟಕ...