ಬಂಗಾಳ | ಆದಿನಾ ಮಸೀದಿಗೆ ಹಿಂದೂ ಸಂಘಟನೆ ಲಗ್ಗೆ; ದಾವೆ ತಳ್ಳಿಹಾಕಿದ ಇತಿಹಾಸಕಾರರು

Date:

ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯಲ್ಲಿರುವ ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ಸಂರಕ್ಷಿತ 14ನೇ ಶತಮಾನದ ಐತಿಹಾಸಿಕ ಆದಿನಾ ಮಸೀದಿ ಮತ್ತೆ ವಿವಾದದ ಕೇಂದ್ರಬಿಂದುವಾಗಿದೆ. ಮಸೀದಿಯು ಪ್ರಾಚೀನ ಶಿವ ದೇವಾಲಯದ ಸ್ಥಳದಲ್ಲಿ ನಿರ್ಮಾಣವಾಗಿದೆ ಎಂದು ಆರೋಪಿಸುತ್ತಿರುವ ಹಿಂದೂ ಸುರಕ್ಷಾ ಸಮಿತಿ, ಮುಂದಿನ ವರ್ಷ ಮಸೀದಿ ಆವರಣದೊಳಗೆ ಪೂಜೆ ನಡೆಸುವುದಾಗಿ ಘೋಷಿಸಿ ಉದ್ವಿಗ್ನತೆಗೆ ಕಾರಣವಾಗಿದೆ.

- Advertisement -

ಜುಲೈ 27ರಂದು ಹಿಂದೂ ಸುರಕ್ಷಾ ಸಮಿತಿಯ ಕಾರ್ಯಕರ್ತರು ಸುಮಾರು 1.5 ಟನ್ ತೂಕದ 3.5 ಅಡಿ ಎತ್ತರದ ಕಲ್ಲಿನ ಶಿವಲಿಂಗವನ್ನು ಹೂಗ್ಲಿಯ ತಾರಕೇಶ್ವರದಿಂದ ತರಿಸಿ, ಆದಿನಾ ಮಸೀದಿ ಸಂರಕ್ಷಿತ ಪ್ರದೇಶದ ಗಡಿಯಿಂದ ಸುಮಾರು 50 ಗಜ ದೂರದಲ್ಲಿರುವ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದಾರೆ. ಈ ಬಾರಿ ಪೂಜೆ ಸಂರಕ್ಷಿತ ಪ್ರದೇಶದ ಹೊರಗಡೆ ನಡೆದಿದ್ದರೂ, ಮುಂದಿನ ವರ್ಷ ಮಸೀದಿಯೊಳಗೆ ಪೂಜೆ ನಡೆಸಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಅವಿಜಿತ್ ದಾಸ್ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

“ಮುಂದಿನ ವರ್ಷದೊಳಗೆ ನ್ಯಾಯಾಲಯದ ಆದೇಶ ಸಿಗದಿದ್ದರೂ ಮಸೀದಿ ಆವರಣದೊಳಗೆ ಪೂಜೆ ನಡೆಸುತ್ತೇವೆ,” ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ. ಈ ಹೇಳಿಕೆ ಸ್ಥಳೀಯವಾಗಿ ಆತಂಕಕ್ಕೆ ಕಾರಣವಾಗಿದೆ.

ಇದೇ ವೇಳೆ, ಸಂಘಟನೆಯ ಮತ್ತೊಬ್ಬ ಮುಖಂಡ ಶುಭಂಕರ್ ದಾಸ್, ತಾವು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಚಾರಕರಾಗಿದ್ದು, ಆರ್‌ಎಸ್‌ಎಸ್ ತಮ್ಮ ಮಾತೃಸಂಸ್ಥೆ ಎಂದು ಹೇಳಿದ್ದಾರೆ. ಆದರೆ, ಅವಿಜಿತ್ ದಾಸ್ ಸಂಘಟನೆಗೆ ಆರ್‌ಎಸ್‌ಎಸ್‌ನೊಂದಿಗೆ ಯಾವುದೇ ಅಧಿಕೃತ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯದರ್ಶಿ ಸಾಮಿಕ್ ಭಟ್ಟಾಚಾರ್ಯ, ಆದಿನಾ ಮಸೀದಿ ಮೂಲತಃ ಶಿವನ ಆದಿನಾಥ ದೇವಾಲಯವಾಗಿದ್ದು, ಮುಸ್ಲಿಂ ಆಡಳಿತಗಾರರು ಅದನ್ನು ಆದಿನಾ ಮಸೀದಿ ಎಂದು ಮರುನಾಮಕರಣ ಮಾಡಿದ್ದರು ಎಂದು ಹೇಳಿದ್ದಾರೆ. ಆದರೆ, ಈ ಹೇಳಿಕೆಗೆ ಯಾವುದೇ ಐತಿಹಾಸಿಕ ಆಧಾರವಿಲ್ಲ ಎಂದು ಇತಿಹಾಸಕಾರರು ಸ್ಪಷ್ಟಪಡಿಸಿದ್ದಾರೆ.

ಇತಿಹಾಸಕಾರರಿಂದ ದಾವೆ ತಿರಸ್ಕಾರ

ಇತಿಹಾಸಕಾರ ದೀಪಾಂಜನ ಘೋಷ್, “ಆ ಪ್ರದೇಶದಲ್ಲಿ ‘ಆದಿನಾಥ ದೇವಾಲಯ’ ಇತ್ತು ಎಂಬುದಕ್ಕೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ. ಪರ್ಷಿಯನ್ ಭಾಷೆಯಲ್ಲಿ ‘ಆದಿನಾ’ ಎಂದರೆ ‘ಶುಕ್ರವಾರ’. ಆದಿನಾ ಮಸೀದಿ ಎಂದರೆ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗಾಗಿ ನಿರ್ಮಿಸಲಾದ ಮಸೀದಿ,” ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರದ ದಾಖಲೆಗಳ ಪ್ರಕಾರ, ಆದಿನಾ ಮಸೀದಿಯನ್ನು ಕ್ರಿ.ಶ. 1369ರಲ್ಲಿ ಸುಲ್ತಾನ್ ಸಿಕಂದರ್ ಷಾ ನಿರ್ಮಿಸಿದ್ದರು. ಸುಮಾರು 500 ಮೀಟರ್ ಉದ್ದ ಮತ್ತು 300 ಮೀಟರ್ ಅಗಲದ ಈ ಭವ್ಯ ಮಸೀದಿಯಲ್ಲಿ 260 ಕಂಬಗಳು ಹಾಗೂ 387 ಗುಮ್ಮಟಗಳಿದ್ದವು. 19ನೇ ಶತಮಾನದಲ್ಲಿ ಸಂಭವಿಸಿದ ಭೂಕಂಪಗಳಿಂದ ಕಟ್ಟಡಕ್ಕೆ ಹಾನಿಯಾಗಿದ್ದು, ಬಳಿಕ ಇದನ್ನು ರಾಷ್ಟ್ರೀಯ ಮಹತ್ವದ ಸ್ಮಾರಕವಾಗಿ ಘೋಷಿಸಿ ಎಎಸ್‌ಐ ಸಂರಕ್ಷಣೆಗೆ ಒಳಪಡಿಸಲಾಯಿತು.

ಮಸೀದಿಯಲ್ಲಿ ಕಮಲ, ಗಣೇಶ ಹಾಗೂ ಶಿವನಿಗೆ ಸಂಬಂಧಿಸಿದಂತೆ ವ್ಯಾಖ್ಯಾನಿಸಲಾದ ಕೆಲವು ಶಿಲ್ಪಗಳಿರುವ ಹಳೆಯ ಕಲ್ಲುಗಳನ್ನು ಬಳಸಲಾಗಿದೆ ಎಂಬ ಕಾರಣವನ್ನು ಮುಂದಿಟ್ಟು ಬಲಪಂಥೀಯ ಸಂಘಟನೆಗಳು ದೇವಾಲಯ ಧ್ವಂಸ ಮಾಡಿ ಮಸೀದಿ ನಿರ್ಮಿಸಲಾಗಿದೆ ಎಂದು ವಾದಿಸುತ್ತಿವೆ.

ಆದರೆ, ಮಧ್ಯಯುಗದ ಬಂಗಾಳದ ವಾಸ್ತುಶಿಲ್ಪದಲ್ಲಿ ಹಳೆಯ ಕಟ್ಟಡಗಳ ಕಲ್ಲುಗಳನ್ನು ಮರುಬಳಕೆ ಮಾಡುವುದು ಸಾಮಾನ್ಯ ಪದ್ಧತಿಯಾಗಿತ್ತು. ಅದೊಂದೇ ಆಧಾರವಾಗಿ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ವಾಸ್ತುಶಿಲ್ಪ ಮತ್ತು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2026ರ ಜನವರಿ 19ರಂದು ಕಲ್ಕತ್ತಾ ಹೈಕೋರ್ಟ್, ಆದಿನಾ ಮಸೀದಿಯಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಹಾಗೂ ಒಳಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದೆ.

ಇದನ್ನೂ ಓದಿ: ಜೀತಪದ್ಧತಿಗೆ ಸಿಲುಕಿ ನಾಶವಾಗಬೇಕಿದ್ದ ಮೊಗಳ್ಳಿಯನ್ನು ಸ್ವತಂತ್ರವಾಗಿಸಿದ್ದು ಕತೆ: ನಟರಾಜ್‌ ಹುಳಿಯಾರ್

ಇನ್ನೊಂದೆಡೆ, ಎಎಸ್‌ಐ ಹಾಗೂ ರಾಜ್ಯ ಆಡಳಿತವು, ಸಂರಕ್ಷಿತ ಸ್ಮಾರಕಗಳ ಧಾರ್ಮಿಕ ಸ್ವರೂಪವನ್ನು ಬದಲಾಯಿಸಲು ಅವಕಾಶವಿಲ್ಲ. ಈಗಾಗಲೇ ಅಸ್ತಿತ್ವದಲ್ಲಿಲ್ಲದ ಹೊಸ ಧಾರ್ಮಿಕ ಆಚರಣೆಗಳನ್ನು ಸಂರಕ್ಷಿತ ಸ್ಮಾರಕದೊಳಗೆ ಆರಂಭಿಸಲು ಸಾಧ್ಯವಿಲ್ಲ ಎಂಬ ನಿಲುವನ್ನು ಪುನರುಚ್ಚರಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮಸೀದಿಯೊಳಗೆ ಈಗಾಗಲೇ ಪೂಜೆ ನಡೆದಿದೆ ಎಂಬ ವದಂತಿಗಳು ಹರಡುತ್ತಿದ್ದಂತೆ ಮಾಲ್ದಾ ಜಿಲ್ಲಾ ಪೊಲೀಸರು ಸ್ಪಷ್ಟನೆ ನೀಡಿ, ಸಂರಕ್ಷಿತ ಆದಿನಾ ಮಸೀದಿ ಆವರಣದೊಳಗೆ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಎಎಸ್‌ಐ ಸಂರಕ್ಷಿತ ಪ್ರದೇಶದೊಳಗೆ ಯಾವುದೇ ಧಾರ್ಮಿಕ ಚಟುವಟಿಕೆಗೆ ಅವಕಾಶವಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಈ ಮಧ್ಯೆ, ಮಾಲ್ದಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಈ ಕಾರ್ಯಕ್ರಮವನ್ನು ಹಿಂದೂ ಸುರಕ್ಷಾ ಸಮಿತಿಯು ಸ್ವತಂತ್ರವಾಗಿ ಆಯೋಜಿಸಿದ್ದು, ಬಿಜೆಪಿಗೆ ಇದರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಎಂದಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ವಿರುದ್ಧ ಹೇಳಿಕೆ ಆರೋಪ; ಸಿಜೆಪಿ ನಾಯಕ ಸೌರವ್‌ ದಾಸ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ CJP ವಕ್ತಾರ...

ಶಿಕಾರಿಪುರ | ಖಾಸಗಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಶಿಕಾರಿಪುರ ಪಟ್ಟಣದ ಗಬ್ಬೂರು ಸಮೀಪ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ...

ದೆಹಲಿ | ‘ಫಾರ್ಮ್ 7’ ಅಸ್ತ್ರ ಬಳಸಿ ಮುಸ್ಲಿಂ ಮತದಾರರ ಹೆಸರು ಡಿಲೀಟ್ ಮಾಡಿಸಿದ ಬಿಜೆಪಿ BLAಗಳು! 

ದೆಹಲಿಯಲ್ಲಿ ಸುದೀರ್ಘ ಕಾಲದಿಂದ ವಾಸಿಸುತ್ತಿರುವ ಮುಸ್ಲಿಂ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...