ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್‌ನಂತೆ ಭಾರತದಲ್ಲಿ ಈಗ BJP ಏಕಚಕ್ರಾಧಿಪತ್ಯ: ಅಮಿತ್ ಶಾ

Date:

ಸ್ವಾತಂತ್ರ್ಯದ ನಂತರ ಮಹಾತ್ಮಾ ಗಾಂಧೀಜಿಯವರ ಪ್ರಭಾವದಿಂದಾಗಿ ಕಾಂಗ್ರೆಸ್ ದೇಶಾದ್ಯಂತ ಸಾಧಿಸಿದ್ದ ‘ಏಕಚಕ್ರಾಧಿತ್ಯ ಆಡಳಿತ’ದ ದಿಕ್ಕಿನತ್ತ ಈಗ ಬಿಜೆಪಿ ವೇಗವಾಗಿ ಮುನ್ನಡೆಯುತ್ತಿದೆ. ಪ್ರಸ್ತುತ, ಭಾರತದ ಒಟ್ಟು ಭೂಪ್ರದೇಶದ 80% ರಷ್ಟು ಭಾಗದಲ್ಲಿ ಬಿಜೆಪಿ ಅಥವಾ ಎನ್‌ಡಿಎ ಮೈತ್ರಿಕೂಟದ ಸರ್ಕಾರಗಳ ಆಡಳಿತ ನಡೆಸುತ್ತಿವೆ ಎಂದು ಹೇಳಿದ್ದಾರೆ.

- Advertisement -

ಗುಜರಾತ್‌ನ ಗಾಂಧಿನಗರದಲ್ಲಿ ಮಾತನಾಡಿರುವ ಅವರು, “ಪ್ರಸ್ತುತ ಗಂಗಾ ನದಿಯ ಉಗಮ ಸ್ಥಾನದಿಂದ ಹಿಡಿದು ಅದು ಸಾಗರವನ್ನು ಸೇರುವ ಪವಿತ್ರ ಜಾಗದ ವರೆಗಿನ ಇಡೀ ಭೂಪ್ರದೇಶವನ್ನು ಒಳಗೊಂಡಿರುವ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳದವರೆಗಿನ ಎಲ್ಲ ರಾಜ್ಯಗಳಲ್ಲೂ ಈಗ ಸಾಲು ಸಾಲಾಗಿ ಬಿಜೆಪಿಯೇ ಆಡಳಿತ ನಡೆಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಕಳೆದ 50 ವರ್ಷಗಳ ನಿರಂತರ ದುರಾಡಳಿತದಿಂದ ಸಂಪೂರ್ಣವಾಗಿ ಬೇಸತ್ತಿದ್ದ ಪಶ್ಚಿಮ ಬಂಗಾಳದ ಪ್ರಜ್ಞಾವಂತ ಜನರು ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವವನ್ನು ನಂಬಿ ಮತ ಚಲಾಯಿಸಿ ಆಶೀರ್ವದಿಸಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸೋನಿಯಾ ಗಾಂಧಿಯವರ ಪುಸ್ತಕಕ್ಕೆ ನಿಷೇಧದ ಬೇಡಿಕೆ: ಇತಿಹಾಸವನ್ನು ಅಳಿಸಿಹಾಕಲು...

ಸಾವರ್ಕರ್ ಮತ್ತು ಆರ್‌ಎಸ್‌ಎಸ್ ಕುರಿತ ಐತಿಹಾಸಿಕ ಉಲ್ಲೇಖಗಳನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಣ ಸೋನಿಯಾ ಗಾಂಧಿಯವರ ಆತ್ಮಕಥನಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸುತ್ತಿದೆ. ಗಾಂಧೀಜಿಯವರ ಹಂತಕ ಗೋಡ್ಸೆಯನ್ನು ಸಮರ್ಥಿಸುವ...

ಇತಿಹಾಸದ ಕಮಾನು: ಸಮಾನತೆಯಿಂದ ಅಸಮಾನತೆಗೆ, ಮತ್ತೆ ಸಮಾನತೆಯತ್ತವೇ ಮನುಷ್ಯನ...

ಒಂದು ಕಾಲದಲ್ಲಿ ಮನುಷ್ಯನ ಕೈಕೆಲಸವನ್ನು ಯಂತ್ರಗಳು ಬದಲಾಯಿಸಿದವು. ಈಗ ಮನುಷ್ಯನ ಬುದ್ಧಿಶಕ್ತಿಯ ಕೆಲವು ಕೆಲಸಗಳನ್ನೂ ಯಂತ್ರಗಳು ಮಾಡತೊಡಗಿವೆ. ಭಾಷಾಂತರ, ಲೆಕ್ಕಾಚಾರ, ವಿನ್ಯಾಸ, ಮಾಹಿತಿ ವಿಶ್ಲೇಷಣೆ, ವೈದ್ಯಕೀಯ ಪರೀಕ್ಷೆಗಳಿಗೆ ನೆರವು, ಆಡಳಿತದ ನಿರ್ಧಾರಗಳಿಗೆ ಸಹಾಯ...

‘ಎಪ್ಸ್ಟೀನ್‌’ನದ್ದು ಆತ್ಮಹತ್ಯೆಯಲ್ಲ, ಕೊಲೆ! ತಜ್ಞರ ಹೊಸ ಅಧ್ಯಯನದಿಂದ ಸ್ಫೋಟ;...

ಅಮೆರಿಕದ ಜಾರ್ಜ್ ಫ್ಲಾಯ್ಡ್ ಸಾವಿನ ಪ್ರಕರಣ ಸೇರಿದಂತೆ ವಿಧಿವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಪ್ರೊ. ಮೈಕೆಲ್ ಫ್ರೀಮನ್ ಅವರು ಎಪ್ಸ್ಟೀನ್ ಸಾವಿಗೆ ಸಂಬಂಧಿಸಿದ ಶವಪರೀಕ್ಷೆಯ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಸುಮಾರು ಒಂದು ವರ್ಷ...

“ಪಶ್ಚಿಮ ಬಂಗಾಳದ ಭೀಕರ ಉರಿಬಿಸಿಲಿನ ನಡುವೆಯೂ ಪ್ರಧಾನಿ ಮೋದಿಯವರ ಚುನಾವಣಾ ರ‍್ಯಾಲಿಗಳಿಗೆ ಅಭೂತಪೂರ್ವ ಜನಸ್ತೋಮ ಹರಿದುಬರುತ್ತಿತ್ತು. ಅದನ್ನು ಕಂಡು ತಮಗೆ ಮೊದಲೇ ಬಿಜೆಪಿಯ ವಿಜಯದ ಬಗ್ಗೆ ಸಂಪೂರ್ಣ ವಿಶ್ವಾಸವಿತ್ತು. ಬಂಗಾಳದ ಜನರು ಬಿಜೆಪಿಗೆ 207 ಸ್ಥಾನಗಳನ್ನು ನೀಡುವ ಮೂಲಕ ಪಕ್ಷದ ಹೆಗಲ ಮೇಲೆ ಅತ್ಯಂತ ದೊಡ್ಡ ಜವಾಬ್ದಾರಿಯನ್ನು ಹೊರಿಸಿದ್ದಾರೆ” ಎಂದಿದ್ದಾರೆ.

 “ಒಂದು ವೇಳೆ ಯಾರಾದರೂ 1964ರ ಅವಧಿಯ ಗುಜರಾತ್‌ನ ಹಳ್ಳಿಗಳು ಹೇಗಿದ್ದವು, ಅಲ್ಲಿನ ನಗರಗಳು ಹೇಗಿದ್ದವು ಹಾಗೂ ಅಲ್ಲಿನ ವಿದ್ಯುತ್ ದೀಪಗಳ ಪರಿಸ್ಥಿತಿ ಏನಾಗಿತ್ತು ಎಂಬುದನ್ನು ಸಾಕ್ಷ್ಯಚಿತ್ರದ ರೂಪದಲ್ಲಿ ಚಿತ್ರೀಕರಿಸಿದ್ದರೆ, ಅದೇ ರೀತಿ ಇಂದಿನ ಪಶ್ಚಿಮ ಬಂಗಾಳದ ಪರಿಸ್ಥಿತಿಯನ್ನು ಚಿತ್ರೀಕರಿಸಿದರೆ, ಈ ಎರಡನ್ನೂ ಹೋಲಿಕೆ ಮಾಡಿದರೆ, ಪ್ರಸ್ತುತ ಬಂಗಾಳಕ್ಕಿಂತ 1964ರ ಗುಜರಾತ್ ಆಡಳಿತವೇ ಎರಡು ಅಂಕಗಳನ್ನು ಹೆಚ್ಚು ಪಡೆಯುತ್ತದೆ. 1964ರಲ್ಲಿ ಗುಜರಾತ್‌ ಇದ್ದ ಪರಿಸ್ಥಿತಿಯಲ್ಲಿ ಇಂದು ಬಂಗಾಳ ಇದೆ” ಎಂದು ಲೇವಡಿ ಮಾಡಿದ್ದಾರೆ.

“ಕಳೆದ 50 ವರ್ಷಗಳಿಂದ ಬಂಗಾಳದಲ್ಲಿ ಯಾವುದೇ ನೈಜ ಅಭಿವೃದ್ಧಿ ಚಟುವಟಿಕೆಗಳು ನಡೆದಿಲ್ಲ. ಅಲ್ಲಿನ ಹಿಂದಿನ ಆಡಳಿತಾರೂಢ ಪಕ್ಷದ ನಾಯಕರು ಕೇವಲ ಒಂದು ಟ್ಯೂಬ್ ಲೈಟ್, ಇಟ್ಟಿಗೆ ಅಥವಾ ಸಿಮೆಂಟ್ ಖರೀದಿಯಲ್ಲೂ ಕಮಿಷನ್ ಪಡೆಯುತ್ತಿದ್ದರು. ಅಷ್ಟೇ ಅಲ್ಲದೆ, ಬಂಗಾಳದ ಯಾವುದೇ ಒಬ್ಬ ಸಾಮಾನ್ಯ ನಾಗರಿಕನು ನೆರೆಯ ರಾಜ್ಯಕ್ಕೆ ಹೋಗಿ ಅಲ್ಲಿ ಕೇವಲ 2,000 ರೂಪಾಯಿ ಅಗ್ಗವಾಗಿ ಸಿಗುವ ಒಂದು ಫ್ಯಾನ್ ಖರೀದಿಸಿ ತಂದರೂ ಸಹ, ಆತನಿಂದ ತೆರಿಗೆ ವಸೂಲಿ ಮಾಡಲು ಆಡಳಿತ ಪಕ್ಷದ ಏಜೆಂಟರು ರೈಲ್ವೆ ನಿಲ್ದಾಣಗಳಲ್ಲೇ ಬಂದು ನಿಲ್ಲುತ್ತಿದ್ದರು” ಎಂದು ಅಮಿತ್ ಶಾ ದೂರಿದ್ದಾರೆ.

“ಗುಜರಾತ್‌ನಲ್ಲಿ ಕಾಂಗ್ರೆಸ್ ಎಷ್ಟು ಘೋರವಾಗಿ ಧೂಳೀಪಟವಾಗಿದೆ ಎಂದರೆ, ಅದನ್ನು ಹುಡುಕಲು ಈಗ ದುರ್ಬೀನು ಹಿಡಿದು ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿನ, ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳನ್ನು ಗೆದ್ದಿರುವುದಲ್ಲದೆ, 85 ಪುರಸಭೆಗಳ ಪೈಕಿ 77ರಲ್ಲಿ, 34 ಜಿಲ್ಲಾ ಪಂಚಾಯತ್‌ಗಳ ಪೈಕಿ 33 ರಲ್ಲಿ ಹಾಗೂ 260 ತಾಲೂಕು ಪಂಚಾಯತ್‌ಗಳ ಪೈಕಿ 253 ರಲ್ಲಿ ಅಭೂತಪೂರ್ವ ಜಯಭೇರಿ ಬಾರಿಸಿದೆ” ಎಂದು ವಿವರಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್‌ಐಆರ್‌ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!

“ಮುಂದಿನ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ತಾವೇ ಗೆಲ್ಲಲಿದ್ದೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಆದರೆ, ನನ್ನ ಸಹೋದರನೇ (ರಾಹುಲ್‌ ಗಾಂಧಿ), ಮುಂದಿನ ಏಳು ಜನ್ಮಗಳೆತ್ತಿ ಬಂದರೂ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಯಾವುದೇ ಅವಕಾಶವಿಲ್ಲ” ಎಂದು ಅಮಿತ್ ಶಾ ಹೇಳಿದ್ದಾರೆ.

“ನಾವು ಆಡುತ್ತಿರುವ ಈ ಮಾತುಗಳು ಯಾವುದೇ ಕಾರಣಕ್ಕೂ ಅಹಂಕಾರದ ಪ್ರದರ್ಶನವಲ್ಲ. ಏಕೆಂದರೆ ಅಹಂಕಾರ ಅಥವಾ ಗರ್ವ ಎಂಬುದು ಎಂದಿಗೂ ಒಬ್ಬ ಸಾಮಾನ್ಯ ಬಿಜೆಪಿ ಕಾರ್ಯಕರ್ತನ ಸ್ವಭಾವ ಆಗಿರಲು ಸಾಧ್ಯವೇ ಇಲ್ಲ. ಆದರೆ, ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಮಾಡಿರುವ ಜನಪರ ಹಾಗೂ ಅಭಿವೃದ್ಧಿ ಕೆಲಸಗಳ ಗಟ್ಟಿಯಾದ ಅಡಿಪಾಯ ಮತ್ತು ವಿಶ್ವಾಸದ ಮೇಲೆಯೇ ನಾವು ಇಷ್ಟು ಖಚಿತವಾಗಿ ಭವಿಷ್ಯ ನುಡಿಯುತ್ತಿದ್ದೇವೆ” ಎಂದು ಅಮಿತ್ ಶಾ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೋನಿಯಾ ಗಾಂಧಿಯವರ ಪುಸ್ತಕಕ್ಕೆ ನಿಷೇಧದ ಬೇಡಿಕೆ: ಇತಿಹಾಸವನ್ನು ಅಳಿಸಿಹಾಕಲು ಸಾಧ್ಯವೇ?

ಸಾವರ್ಕರ್ ಮತ್ತು ಆರ್‌ಎಸ್‌ಎಸ್ ಕುರಿತ ಐತಿಹಾಸಿಕ ಉಲ್ಲೇಖಗಳನ್ನು ವಿರೋಧಿಸಿ ಬಿಜೆಪಿ ಬೆಂಬಲಿತ...

ಇತಿಹಾಸದ ಕಮಾನು: ಸಮಾನತೆಯಿಂದ ಅಸಮಾನತೆಗೆ, ಮತ್ತೆ ಸಮಾನತೆಯತ್ತವೇ ಮನುಷ್ಯನ ಪಯಣ?

ಒಂದು ಕಾಲದಲ್ಲಿ ಮನುಷ್ಯನ ಕೈಕೆಲಸವನ್ನು ಯಂತ್ರಗಳು ಬದಲಾಯಿಸಿದವು. ಈಗ ಮನುಷ್ಯನ ಬುದ್ಧಿಶಕ್ತಿಯ...

ಶಿರಹಟ್ಟಿ | ಸಮುದಾಯ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಐಇಸಿ ಸಂಯೋಜಕರ ಭೇಟಿ, ಪರಿಶೀಲನೆ

ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕೋಗನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಮಡುವು...

ನೀವು ಆ ಕುರ್ಚಿಗೆ ಅರ್ಹರಲ್ಲ: ಸಿಜೆಐ ವಿರುದ್ಧ ಆಕ್ರೋಶಗೊಂಡ ವಕೀಲನಿಗೆ ಸುಪ್ರೀಂ ನ್ಯಾಯಾಂಗ ನಿಂದನೆ ನೋಟಿಸ್

ತೆರೆದ ನ್ಯಾಯಾಲಯದ ಕಲಾಪದ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್...