ಏ.01ರಿಂದ ಆರ್ಥಿಕ ನಿಯಮಗಳಲ್ಲಿ ಬದಲಾವಣೆ : ಸಂಪೂರ್ಣ ಮಾಹಿತಿ

Date:

ಆದಾಯ ತೆರಿಗೆ ಇಲಾಖೆ ಕಾಯ್ದೆಗೆ ಕೇಂದ್ರ ಸರ್ಕಾರ ಕೆಲವೊಂದು ಬದಲಾವಣೆಗಳನ್ನು ತಂದಿದೆ. ನಗದು ವ್ಯವಹಾರಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಇದು ನಾಳೆಯಿಂದ(ಏ.01) ಜಾರಿಗೆ ಬರಲಿದೆ. ಸಾರ್ವಜನಿಕರು ಈ ಕುರಿತು ಗಮನ ಹರಿಸಬೇಕಾದುದು ಅಗತ್ಯವಾಗಿದೆ.

- Advertisement -

2025ರ ಆದಾಯ ತೆರಿಗೆ ಕಾಯ್ದೆಯ ಹೊಸ ನಿಯಮಗಳ ಪ್ರಕಾರ, ವಾರ್ಷಿಕ 12.75 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ತೆರಿಗೆ ರಿಯಾಯಿತಿ ದೊರಕಲಿದೆ. ಮನೆ ಬಾಡಿಗೆ ಮತ್ತು ಮಕ್ಕಳ ಶಿಕ್ಷಣದ ಮೇಲಿನ ವಿನಾಯಿತಿಗಳು ಮುಂದುವರಿಯಲಿವೆ. ಮುಖ್ಯವಾಗಿ, ಇನ್ನು ಮುಂದೆ ‘ಫಿನಾನ್ಸಿಯಲ್ ಇಯರ್’/ಆರ್ಥಿಕ ವರ್ಷ ಮತ್ತು ‘ಅಸೆಸ್ಮೆಂಟ್ ಇಯರ್’ ಎಂಬ ಗೊಂದಲಕಾರಿ ಪದಗಳ ಬದಲಿಗೆ ‘ಟ್ಯಾಕ್ಸ್ ಇಯರ್’/ತೆರಿಗೆ ವರ್ಷ ಎಂಬ ಏಕರೂಪದ ಪದವನ್ನು ಬಳಸಲಾಗುತ್ತಿದೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಸ್ಟಾಂಡರ್ಡ್ ಡಿಡಕ್ಷನ್ ಏರಿಕೆ

ವೇತನ ಪಡೆಯುವ ಉದ್ಯೋಗಿಗಳಿಗೆ ನೀಡಲಾಗುವ ಪ್ರಮಾಣಿತ ಕಡಿತದ ಮಿತಿಯನ್ನು 50,000 ರೂ.ಗಳಿಂದ 75,000 ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ ತೆರಿಗೆದಾರರ ಕೈಯಲ್ಲಿ ಹೆಚ್ಚಿನ ಹಣ ಉಳಿಯಲಿದೆ. ಇನ್ನು, ಐಟಿಆರ್ ಸಲ್ಲಿಕೆಯ ಅಂತಿಮ ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿರುವುದು ತೆರಿಗೆದಾರರಿಗೆ ನಿರಾಳ ತಂದಿದೆ. ಆದರೆ, ಹೆಚ್ಆರ್‌ಎ ನಿಯಮಗಳು ಇನ್ನು ಮುಂದೆ ಹೆಚ್ಚು ಕಟ್ಟುನಿಟ್ಟಾಗಿರಲಿವೆ. ಮಾತ್ರವಲ್ಲದೆ, ಬ್ಯಾಂಕಿಂಗ್ ವಲಯದಲ್ಲಿಯೂ ಕೆಲವು ಬದಲಾವಣೆಗಳಾಗಿದ್ದು, ತಿಂಗಳಿಗೆ ಗರಿಷ್ಠ 5 ಬಾರಿ ಮಾತ್ರ ಉಚಿತವಾಗಿ ಎಟಿಎಂನಿಂದ ಹಣ ಪಡೆಯಬಹುದು. ನಿಗದಿತ ಮಿತಿಗಿಂತ ಹೆಚ್ಚಿನ ಬಾರಿ ಹಣ ಡ್ರಾ ಮಾಡಿದರೆ ಪ್ರತಿ ವಹಿವಾಟಿಗೆ 23 ರೂ. ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಅಲ್ಲದೆ, ನಿಮ್ಮ ಡೆಬಿಟ್ ಕಾರ್ಡ್‌ ನ ಮಾದರಿಗೆ ಅನುಗುಣವಾಗಿ ಪ್ರತಿದಿನದ ಹಣ ವಿಥ್‌ಡ್ರಾ ಮಿತಿಯಲ್ಲಿ ವ್ಯತ್ಯಾಸವಾಗಲಿದೆ.

ಆನ್ಲೈನ್ ವಹಿವಾಟುಗಳನ್ನು ಹೆಚ್ಚು ಭದ್ರಪಡಿಸಲು ಟು-ಫ್ಯಾಕ್ಟರ್ ಅಥೆಂಟಿಕೇಶನ್ ಕಡ್ಡಾಯಗೊಳಿಸಲಾಗಿದೆ. ಸಣ್ಣ ಮೊತ್ತದ ಪಾವತಿಗಳಿಗೂ ಇನ್ಮುಂದೆ ಒಟಿಪಿ ಅಥವಾ ಬಯೋಮೆಟ್ರಿಕ್ ದೃಢೀಕರಣ ಅನಿವಾರ್ಯವಾಗಲಿದೆ. ಇದು ಸೈಬರ್ ವಂಚನೆಗಳನ್ನು ತಡೆಯಲು ಸಹಕಾರಿಯಾಗಲಿದೆ.

ಇನ್ನೇನೆಲ್ಲಾ ಬದಲಾವಣೆಯಾಗಲಿದೆ ?

ಐಟಿಆರ್-ಯು ಫೈಲ್: ಆದಾಯ ತೆರಿಗೆ ರಿಟರ್ನ್ ಬಗ್ಗೆ ರಿಪೂರ್ಟ್ ಮಾಡುವುದನ್ನು ತಪ್ಪಿಸಿದ್ದರೆ, ನವೀಕರಿಸಿದ ಆದಾಯ ತೆರಿಗೆ ರಿಟರ್ನ್ (ಐಟಿಆರ್-ಯು) ಫೈಲ್ ಮಾಡಬೇಕಾಗಿದೆ. ಹೆಚ್ಚುವರಿ ತೆರಿಗೆ, ದಂಡ ಪಾವತಿಸಬೇಕಾಗಬಹುದಾಗಿದೆ. ಆದರೆ ಇದು ಮುಂದೆ ಆದಾಯ ತೆರಿಗೆ ಇಲಾಖೆಯಿಂದ ಪರಿಶೀಲನೆಗೆ ಒಳಗಾಗುವುದನ್ನು ತಪ್ಪಿಸುತ್ತದೆ.

ಪಾನ್ ಕಾರ್ಡ್ ಪಡೆಯಲು ಹೊಸ ನಿಯಮ : ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಏಪ್ರಿಲ್ 1ರಿಂದ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಪ್ರಮುಖವಾಗಿ ಆಧಾರ್ ದೃಢೀಕರಣ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಪಾನ್ ಕಾರ್ಡ್ನಲ್ಲಿರುವ ಹೆಸರು ಆಧಾರ್ ಕಾರ್ಡ್ನಲ್ಲಿರುವಂತೆಯೇ ಇರಲಿದೆ. ಅರ್ಜಿ ಸಲ್ಲಿಸುವವರು ತಮ್ಮ ಆಧಾರ್ ವಿವರಗಳು ಸರಿಯಾಗಿವೆಯೇ ಎನ್ನುವುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ಎಸ್‌ಬಿಐ ಕ್ರೆಡಿಟ್ ಕಾರ್ಡ್: ಏಪ್ರಿಲ್ 1ರಿಂದ  ಎಸ್.ಬಿ.ಐ ಕಾರ್ಡ್ ಗ್ರಾಹಕರು ರಿವಾರ್ಡ್ ಪಾಯಿಂಟ್ಗಳನ್ನು ಸ್ಟೇಟ್ಮೆಂಟ್ ಕ್ರೆಡಿಟ್ ಆಗಿ ಹೇಗೆ ಪರಿವರ್ತಿಸಬಹುದು ಎನ್ನುವುದರ ಮೇಲೆ ಪರಿಷ್ಕೃತ ನಿಯಮಗಳು ಜಾರಿಯಾಗಲಿವೆ. ಇದರ ಕುರಿತು ಸಂಪೂರ್ಣ ಮಾಹಿತಿಯು ಬ್ಯಾಂಕ್ ವೆಬ್ ಸೈಟ್ ನಲ್ಲಿ ಲಭ್ಯವಿದೆ.

ಹೆಚ್ ಡಿಎಫ್ ಸಿ ಬ್ಯಾಂಕ್ ನಿಯಮ ಬದಲಾವಣೆ:ಸಾಲ ದರಗಳಲ್ಲಿನ ಬದಲಾವಣೆ, ಸ್ಥಿರ ಠೇವಣಿ ಬಡ್ಡಿದರ, ಎಟಿಎಂ ನಗದು ಪಡೆಯುವಿಕೆ ನಿಯಮಗಳು ಮತ್ತು ಲಾಕರ್ ಶುಲ್ಕಗಳು ಒಳಗೊಂಡಂತೆ ಹಲವು ನವೀಕರಣಗಳನ್ನು ಹೆಚ್ ಡಿಎಫ್ ಸಿ ಬ್ಯಾಂಕ್ ಪ್ರಕಟಿಸಿದೆ.

ಫಾಸ್ಟ್ ಟ್ಯಾಗ್ ಪಾಸ್ ಶುಲ್ಕ ಹೆಚ್ಚಳ:

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2026–27ರ ಹಣಕಾಸು ವರ್ಷದಲ್ಲಿ ಫಾಸ್ಟ್ ಟ್ಯಾಗ್ ವಾರ್ಷಿಕ ಪಾಸ್ ಅನ್ನು ಪರಿಷ್ಕರಿಸುವುದಾಗಿ ಘೋಷಣೆ ಮಾಡಿದೆ. ವಾರ್ಷಿಕ ಪಾಸ್ ಶುಲ್ಕವನ್ನು 3,000 ರೂ.ಗಳಿಂದ 3,075 ರೂ.ಗಳಿಗೆ ಹೆಚ್ಚಳ ಮಾಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಣೆ ಮಾಡಿದೆ. ಏಪ್ರಿಲ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ರೂಪೇ ಡೆಬಿಟ್ ಕಾರ್ಡ್:ಏಪ್ರಿಲ್ 1ರಿಂದ ರೂಪೇ ಡಿಬಿಟ್ ಕಾರ್ಡ್ ಹೊಂದಿರುವವರು ಉಚಿತವಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರೈಲು ಲಾಂಜ್ಗಳನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ವಿಮಾನ ನಿಲ್ದಾಣ ಅಥವಾ ರೈಲ್ವೆ ಲೌಂಜ್ ಪ್ರವೇಶ ಪ್ರಯೋಜನಗಳಿಗೆ ಅರ್ಹತೆ ಪಡೆಯಲು ಗ್ರಾಹಕರು ಬ್ಯಾಂಕ್ ನಿರ್ದಿಷ್ಟ ಪಡಿಸಿದ ಖರ್ಚು ಮಾನದಂಡಗಳನ್ನು ಪೂರೈಸಿರಬೇಕಾಗುತ್ತದೆ.

ಪಾವತಿ ದೃಢೀಕರಣಕ್ಕೆ ಹೆಚ್ಚುವರಿ ನಿಯಮ : ನಾಳೆಯಿಂದ ಎಲ್ಲಾ ಡಿಜಿಟಲ್ ಪಾವತಿ ವಹಿವಾಟುಗಳು ದೃಢೀಕರಣದ ಎರಡು ಅಂಶಗಳನ್ನು ಪೂರೈಸಬೇಕಾಗುತ್ತದೆ. ಡಿಜಿಟಲ್ ಪಾವತಿ ವ್ಯವಸ್ಥೆ ಪ್ರಾಥಮಿಕವಾಗಿ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಅನ್ನು ಹೆಚ್ಚುವರಿ ಅಂಶವಾಗಿ ಅಳವಡಿಸಿಕೊಂಡಿದೆ. ಒಟಿಪಿ ಇನ್ನು ಮುಂದೆ ಎಸ್ಎಂಎಸ್ ಬದಲಿಗೆ ಗ್ರಾಹಕರು ಬಳಸುವ ಬ್ಯಾಂಕಿಂಗ್ ಅಪ್ಲಿಕೇಶನ್’ನಲ್ಲಿಯೇ ದೊರೆಯಲಿದೆ. ಹಾಗಾಗಿ ಯಾವ ಬ್ಯಾಂಕ್ ಅಲ್ಲಿ ಖಾತಾದಾರರಾಗಿರುತ್ತಿರೋ ಆ ಬ್ಯಾಂಕುಗಳ ಅಪ್ಲಿಕೇಶನ್ ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳವುದು ಅಗತ್ಯ.

ವಹಿವಾಟಿಗೆ 5 ಲಕ್ಷ ಮಿತಿ : ಬ್ಯಾಂಕಿಂಗ್ ಅಪ್ಲಿಕೇಶನ್ ಮೂಲಕ ಐದು ಲಕ್ಷಕ್ಕಿಂತ ಮೇಲ್ಪಟ್ಟು ಮಾಡುವ ಎಲ್ಲಾ ವಹಿವಾಟಿಗೆ ಆಧಾರ್ ಲಿಂಕ್, ಫಿಂಗರ್ ಪ್ರಿಂಟ್ ಅಥವಾ ಫೇಸ್ ಸ್ಕ್ಯಾನ್ ಮಾಡಲೇಬೇಕು. ಇಲ್ಲವಾದರೆ ಯಾವುದೇ ಪಾವತಿಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ ಆನ್ಲೈನ್ ಪಾವತಿಯ ಸಂದರ್ಭದಲ್ಲಿ ಹೆಚ್ಚುವರಿ ಪ್ರಶ್ನೆಗಳನ್ನು(Queries) ಕೇಳಲಾಗುತ್ತದೆ.

ಬಿಹೇವಿಯರ್ ಬಯೋಮೆಟ್ರಿಕ್ಸ್ : ಬ್ಯಾಂಕಿಂಗ್ ಅಪ್ಲಿಕೇಶನ್ ನಲ್ಲಿ ಬಿಹೇವಿಯರ್ ಬಯೋಮೆಟ್ರಿಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನು ಮುಂದೆ ಗ್ರಾಹಕರು ಬ್ಯಾಂಕಿಂಗ್ ಅಪ್ಲಿಕೇಶನ್ ಬಳಸುವಾಗ ಅವರು ಟೈಪ್ ಮಾಡುವ ವಿಧಾನ, ವೇಗ, ಸ್ಕ್ರೀನ್ ನಿರ್ವಹಣೆ ಮೂಲಕ ಗ್ರಾಹಕರ ಗುರುತು ಪತ್ತೆ ಹಚ್ಚುತ್ತದೆ.

ಅಲರ್ಟ್ ಸಂದೇಶ : ಏಪ್ರಿಲ್ 1ರಿಂದ ನಕಲಿ ಆಪ್ ಅಥವಾ ಮಾಲ್ವೇರ್ ಡೌನ್’ಲೋಡ್ ಆದ ತಕ್ಷಣವೇ ಬ್ಯಾಂಕ್ ನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರಿಗೆ ಎಚ್ಚರಿಕೆಯ ಸಂದೇಶಗಳು ದೊರೆಯಲಿದೆ.

ಸಮಯ ನಿರ್ಬಂಧ: ಇನ್ನು ಮುಂದೆ ಬ್ಯಾಂಕುಗಳು ತಮ್ಮ ಅಪ್ಲಿಕೇಶನ್’ಗಳಲ್ಲಿ ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆಯವರೆಗೆ ಎಲ್ಲಾ ವಹಿವಾಟುಗಳನ್ನು ಲಾಕ್ ಮಾಡುವ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಿದೆ.

ಡೈನಾಮಿಕ್- ಟು-ಫ್ಯಾಕ್ಟರ್ : ಇನ್ನು ಮುಂದೆ ಗ್ರಾಹಕರು ಎಲ್ಲಿಂದ ಪಾವತಿ ಮಾಡುತ್ತಾರೆ ಎಂಬುದನ್ನು ಕೂಡ ಪರಿಶೀಲಿಸಲಾಗುತ್ತದೆ. ಡೈನಾಮಿಕ್- ಟು-ಫ್ಯಾಕ್ಟರ್ ದೃಢೀಕರಣದ ಭಾಗವಾಗಿ ಪಾವತಿ ಸ್ಥಳವನ್ನು ಪತ್ತೆ ಹಚ್ಚಲಾಗುತ್ತದೆ. ಇದರೊಂದಿಗೆ ಪಾವತಿಯ ಸ್ಕ್ರೀನ್’ಶಾಟ್ ತೆಗೆಯಲು ಇನ್ನು ಅವಕಾಶವಿಲ್ಲ. ಇದು ಖಾತೆಯ ಸುರಕ್ಷತೆಯನ್ನು ಖಚಿತ ಪಡಿಸಿಕೊಳ್ಳಲು ಅಳವಡಿಸಿರುವ ವ್ಯವಸ್ಥೆಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ಎಎಪಿ ನಾಯಕ ಸೌರಭ್ ಭಾರದ್ವಾಜ್ ಸೇರಿ ಹಲವು ಮಂದಿ ದೆಹಲಿ ಪೊಲೀಸರ ವಶಕ್ಕೆ

ಚುನಾವಣಾ ಆಯೋಗದ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಂತರ್ ಮಂತರ್‌‌ಗೆ ಆಗಮಿಸಿದ್ದ...

ಸಿಜೆಪಿ ಬೆಂಬಲಕ್ಕೆ ನಿಂತ ಪಾಲ್ಘರ್ ವಕೀಲರ ಸಂಘ: ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು ಘೋಷಣೆ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಕೀಲರ ಸಂಘವೊಂದು 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ)...

ಅಯೋಧ್ಯೆ ರಾಮಮಂದಿರ ಸಿಬ್ಬಂದಿಗೆ ಶೇ. 100ರಷ್ಟು ಪೊಲೀಸ್ ವೆರಿಫಿಕೇಷನ್; ಹಿನ್ನೆಲೆ ಪರಿಶೀಲನೆ ಕಡ್ಡಾಯ

ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು...

ಸಿಇಸಿ ಗ್ಯಾನೇಶ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ: ಅನುಮತಿ ನಿರಾಕರಣೆ; ಜಂತರ್ ಮಂತರ್‌ನಲ್ಲಿ ಬಿಗಿ ಭದ್ರತೆ

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...