ಕೋಮುದ್ವೇಷ | ನಮಾಜ್ ಭಾಷಣದಲ್ಲಿ ಯೋಗಿ ಅಡಗಿಸಿಟ್ಟ ಗೂಢಾರ್ಥವೇನು?

Date:

2ನೇ ಅವಧಿಯ ಅಧಿಕಾರದ ದರ್ಬಾರ್ ನಡೆಸುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮ್ಮ ಭಾಷಣವೊಂದರ ಸುಮಾರು ಎರಡು ನಿಮಿಷಗಳ ವಿಡಿಯೋ ತುಣುಕನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದರ ಬಗ್ಗೆ ದ್ವೇಷಪೂರಿತ ಮಾತನಾಡಿದ್ದಾರೆ. “ನಮಾಜ್ ಮಾಡಬೇಕಿದ್ದರೆ, ಅದನ್ನು ನೀವು ಪಾಳಿ (ಶಿಫ್ಟ್‌)ನಲ್ಲಿ ಮಾಡಿ… ಇದನ್ನು ಪ್ರೀತಿಯಿಂದ ಒಪ್ಪಿಕೊಂಡರೆ ಸರಿ, ಇಲ್ಲದಿದ್ದರೆ ಬೇರೆ ಮಾರ್ಗವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ…” ಎಂದು ಬೆದರಿಕೆಯನ್ನೂ ಹಾಕಿದ್ದಾರೆ.

- Advertisement -

ಆದಿತ್ಯನಾಥ್ ಅವರು ಪ್ರಾರ್ಥನೆಯ ವಿಷಯವನ್ನು ಪ್ರಸ್ತಾಪಿಸುವಾಗ ‘ರಸ್ತೆಗಳು ಜನರಿಗಾಗಿ ಇವೆ’ ಮತ್ತು ‘ಕಾನೂನಿನ ಆಡಳಿತ’ದಂತಹ ಪದಗಳನ್ನು ಬಳಸಿ ತಟಸ್ಥ ಆಡಳಿತದ ಭಾಷೆಯನ್ನು ಬಳಸಿದ್ದಾರೆ. ಆದರೆ, ಅವರ ಭಾಷಣವು ಪದೇ ಪದೇ ನಮಾಜ್ ಅನ್ನು ಮಾತ್ರ ಪ್ರತ್ಯೇಕವಾಗಿ ಎತ್ತಿ ತೋರಿಸಿದೆ. ಸಾರ್ವಜನಿಕ ರಸ್ತೆ ಒತ್ತುವರಿ ಅಥವಾ ಕಾವಡಿ ಯಾತ್ರೆಗಳಂತಹ ಇತರ ಯಾವುದೇ ಧಾರ್ಮಿಕ ಸಭೆಗಳ ಬಗ್ಗೆ ಅವರು ಯಾವುದೇ ಪ್ರಸ್ತಾಪಗಳನ್ನು ಮಾಡಿಲ್ಲ. ಈ ಕಾವಡಿ ಯಾತ್ರೆಗಳು ದಿನಕಳೆದಂತೆ ಹೆಚ್ಚುತ್ತಲೇ ಇವೆ, ಕೋಮು ಒಲವು ಪದೇ ಪದೇ ಸುದ್ದಿಗಳಲ್ಲಿ ಮುಂಚೂಣಿಗೆ ಬರುತ್ತಿರುತ್ತದೆ. ಆದರೂ, ಆ ಬಗ್ಗೆ ಯೋಗಿ ಉಸಿರೆತ್ತಿಲ್ಲ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

“ಜನರು ನನ್ನನ್ನು ಕೇಳುತ್ತಾರೆ, ‘ನೀವು ನಿಜವಾಗಿಯೂ ಉತ್ತರ ಪ್ರದೇಶದ ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿದ್ದೀರಾ?’ ಮತ್ತು ನಾನು ಅವರಿಗೆ ಹೇಳುತ್ತೇನೆ, ‘ನಾವು ನಿಲ್ಲಿಸಿದ್ದೇವೆ ಮತ್ತು ಇದನ್ನು ನೀವೇ ಖುದ್ದಾಗಿ ಪರಿಶೀಲಿಸಬಹುದು.'” ಅವರ ಈ ಮಾತುಗಳು ಹೊರಹೊಮ್ಮುತ್ತಿದ್ದಂತೆಯೇ ನೆರೆದಿದ್ದ ಸಾರ್ವಜನಿಕರು ಚಪ್ಪಾಳೆ ತಟ್ಟುತ್ತಾರೆ, ನಮಾಜ್ ನಿಲ್ಲಿಸಲಾಗಿದೆ ಎಂಬ ಅವರ ಹೇಳಿಕೆಗೆ ಅತ್ಯಂತ ಉತ್ಸಾಹದಿಂದ ಪ್ರತಿಕ್ರಿಯಿಸುತ್ತಾರೆ.

ನಂತರ ಆದಿತ್ಯನಾಥ್ ಅವರು ಗರ್ಜಿಸುತ್ತಾ, “ಅಲ್ಲಾ, ರಸ್ತೆಯನ್ನು ತಡೆಯಲು ಅವನಿಗೆ [ಮುಸ್ಲಿಮನಿಗೆ] ಏನು ಹಕ್ಕಿದೆ? ಯಾರಿಗೆ ತಾನೇ ರಸ್ತೆಯನ್ನು ತಡೆಯಲು ಯಾವ ಹಕ್ಕು ಅವಕಾಶ ನೀಡುತ್ತದೆ? ಅದಕ್ಕಾಗಿಯೇ ಇರುವ ಜಾಗಕ್ಕೆ [ಮುಸ್ಲಿಮರು] ಹೋಗಿ ಅದನ್ನು ಮಾಡಬೇಕು. ಮತ್ತು ಜನರು [ಮುಸ್ಲಿಮರು] ನನಗೆ ಹೇಳಿದರು, ‘ಇದು ಹೇಗೆ ಸಾಧ್ಯ, ನಾವು ಸಂಖ್ಯೆಯಲ್ಲಿ ಹೆಚ್ಚಿದ್ದೇವೆ.’ ನಾನು ಅವರಿಗೆ ಹೇಳಿದೆ, ಶಿಫ್ಟ್‌ಗಳಲ್ಲಿ (ಪಾಳಿ) ಪ್ರಾರ್ಥಿಸಿ. ನಿಮ್ಮ ಮನೆಯಲ್ಲಿ ಜಾಗವಿಲ್ಲದಿದ್ದರೆ, ನಿಮ್ಮ ಸಂಖ್ಯೆಯನ್ನು ನಿಯಂತ್ರಿಸಿ,” ಎಂದಿದ್ದಾರೆ.

ಅವರ ಈ ಹೇಳಿಕೆಯು ಮುಸ್ಲಿಮರನ್ನು ‘ಸಮಸ್ಯೆಯ ಜನಸಂಖ್ಯೆ’ ಎಂದು ಬಿಂಬಿಸುವ ಕೋಮು ಗೂಢಾರ್ಥವನ್ನು ಸ್ಪಷ್ಟವಾಗಿ ಗುರುತಿಸಿದಂತೆ ತೋರುತ್ತದೆ. ಮುಸ್ಲಿಮರ ಜನಸಂಖ್ಯೆಯ ವಿಷಯವನ್ನು ಪ್ರಸ್ತಾಪಿಸಿದಾಗ ಚಪ್ಪಾಳೆಯ ಸದ್ದು ಜೋರಾಗಿತ್ತು, ರಸ್ತೆಗಳಲ್ಲಿ ನಮಾಜ್ ಮಾಡುವ ವಿಷಯವನ್ನು ಪ್ರೇಕ್ಷಕರು ಕೇವಲ ನಾಗರಿಕ ಸಮಸ್ಯೆಯಾಗಿ ನೋಡಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.

ಜನಸಂಖ್ಯಾ ನಿಯಂತ್ರಣ ಮತ್ತು ಕೋಮು ಸಂಕೇತ

ಮುಸ್ಲಿಮರು ಜನಸಂಖ್ಯಾ ಸಮತೋಲನಕ್ಕೆ ಸಂಚಕಾರ ತರುತ್ತಿದ್ದಾರೆ ಎಂದು ಬಿಂಬಿಸುವುದು ಹಿಂದು ರಾಷ್ಟ್ರೀಯತಾವಾದಿ ರಾಜಕಾರಣದ ಅಜೆಂಡಾವಾಗಿದೆ. ಹೀಗಾಗಿಯೇ, ಆದಿತ್ಯನಾಥ್ ಅವರು ‘ನಿಮ್ಮ ಮನೆಯಲ್ಲಿ ಜಾಗವಿಲ್ಲದಿದ್ದರೆ, ನಿಮ್ಮ ಸಂಖ್ಯೆಯನ್ನು ನಿಯಂತ್ರಿಸಿ’ ಎಂದು ಹೇಳಿದ್ದಾರೆ. ಜೊತೆಗೆ, ಅವರು ಕೇವಲ ಒಂದು ನಾಗರಿಕ ಸಮಸ್ಯೆಯನ್ನು ‘ಮುಸ್ಲಿಮರು ಭಾರತಕ್ಕೆ ಸೇರಿದವರೇ’ ಎಂಬ ಅನುಮಾನದ ಚೌಕಟ್ಟಿನೊಳಗೆ ಎಳೆದು ತಂದಿದ್ದಾರೆ.

ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್‌ಐಆರ್‌ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!

ಅವರ ಸರ್ಕಾರವು ಜನನಿಬಿಡ ರಸ್ತೆಗಳಲ್ಲಿ ಅಥವಾ ಹಬ್ಬಗಳ ಸಮಯದಲ್ಲಿ ಜನಸಂದಣಿ ನಿರ್ವಹಣೆಗಾಗಿ ಯಾವುದೇ ಆಡಳಿತಾತ್ಮಕ ಸಲಹೆ ಅಥವಾ ಕ್ರಮಗಳನ್ನು ಎಂದಿಗೂ ಪ್ರಸ್ತಾಪಿಸಿಲ್ಲ, ಅವರ ಭಾಷಣದಲ್ಲಿಯೂ ಅದನ್ನು ಪ್ರಸ್ತಾಪಿಸಲಿಲ್ಲ. ಅಂತೆಯೇ, ಮನೆಗಳ ಒಳಗೂ ಸಹ ಖಾಸಗಿ ನಮಾಜ್‌ಗಳಿಗೆ ಉಂಟಾಗುತ್ತಿರುವ ಅಡಚಣೆಗಳ ಬಗ್ಗೆಯೂ ಅವರು ಉಲ್ಲೇಖಿಸಲಿಲ್ಲ. ಆದರೆ, ಮುಸ್ಲಿಮರ ಜನಸಂಖ್ಯೆಯನ್ನು ಗುರಿಯಾಗಿಸಿಕೊಂಡು ಅವರು ಹಿಂದುಗಳಲ್ಲಿ ದ್ವೇಷ ಬಿತ್ತುತ್ತಿದ್ದಾರೆ. ಆ ದ್ವೇಷವು ಚಪ್ಪಾಳೆಯಾಗಿ ನೆರೆದಿದ್ದವರಿಂದ ಹೊರಬರುತ್ತಿದೆ.

ಪೌರತ್ವದಿಂದ ಷರತ್ತುಬದ್ಧ ಬದುಕಿನವರೆಗೆ

ಸುಮಾರು 20%ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ, ಭಾರತದ ಅತಿ ಹೆಚ್ಚು ಜನಸಂಖ್ಯೆಯ ರಾಜ್ಯ ಉತ್ತರಪ್ರದೇಶ. ಆ ರಾಜ್ಯ ಮುಖ್ಯಮಂತ್ರಿಗಳು, “ನೀವು ಒಂದು ವ್ಯವಸ್ಥೆಯೊಳಗೆ ಇರಬೇಕಾದರೆ… [ಒಂದು ವೇಳೆ] ನೀವು ನಮಾಜ್ ಮಾಡಲೇಬೇಕಾದರೆ, ಶಿಫ್ಟ್‌ಗಳಲ್ಲಿ ಮಾಡಿ, ನಾವು ಅದನ್ನು ತಡೆಯುವುದಿಲ್ಲ. ಆದರೆ, ರಸ್ತೆಯ ಮೇಲಲ್ಲ. ರಸ್ತೆಯು ಜನರಿಗಾಗಿ, ಸಾಮಾನ್ಯ ನಾಗರಿಕರಿಗಾಗಿ, ರೋಗಿಗಳಿಗೆ (ಆಸ್ಪತ್ರೆಗಳನ್ನು ತಲುಪಲು), ಕಾರ್ಮಿಕರಿಗಾಗಿ, ಕುಶಲಕರ್ಮಿಗಳಿಗಾಗಿ, ವ್ಯಾಪಾರಿಗಳಿಗಾಗಿ ಇದೆ ಮತ್ತು ಅದನ್ನು ಯಾರೂ ತಡೆಯಲು ನಾವು ಬಿಡುವುದಿಲ್ಲ. ಸರ್ಕಾರದ ನಿಯಮಗಳು ಎಲ್ಲರಿಗೂ ಒಂದೇ, ಎಲ್ಲರಿಗೂ ಸಮಾನ” ಎಂದಿದ್ದಾರೆ.

ಅವರ ಹೇಳಿಕೆಯು ಮುಸ್ಲಿಮರು ರಸ್ತೆಗಳಲ್ಲಿ ಪ್ರಾರ್ಥನೆ ಮಾಡುತ್ತಾ, ಸಂಚಾರ ಹಾಗೂ ಆರ್ಥಿಕ ಜೀವನಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ. ‘ವ್ಯವಸ್ಥೆಯಲ್ಲಿ’ ಇರುವ ಬಗ್ಗೆ ಆದಿತ್ಯನಾಥ್ ಅವರ ಷರತ್ತುಬದ್ಧ ಹೇಳಿಕೆಯು ಮುಸ್ಲಿಮರು ತಮ್ಮ ನಿಷ್ಠೆಯನ್ನು ನಿರಂತರವಾಗಿ ಸಾಬೀತುಪಡಿಸಬೇಕು ಎಂಬುದನ್ನು ಸೂಚಿಸುತ್ತದೆ.

ಮುಸ್ಲಿಂ ಧಾರ್ಮಿಕ ಆಚರಣೆಗಳು ಸಹಜವಾಗಿಯೇ ಸಾಮಾಜಿಕ ಮತ್ತು ಆರ್ಥಿಕ ಜೀವನಕ್ಕೆ ಅಡ್ಡಿಪಡಿಸುತ್ತವೆ ಎಂದು ಬಿಂಬಿಸಲು ಅವರು ‘ತಮಾಷಾ’, ‘ಅರಾಜಕತೆ’ ಹಾಗೂ ‘ರಸ್ತೆ ತಡೆಯುವುದು’ ರೀತಿಯ ಪದಗಳನ್ನು ಬಳಸಿದ್ದಾರೆ. ಅವರು ನಮಾಜ್‌ನ ಧಾರ್ಮಿಕ ಆಚರಣೆಗೆ ‘ಕಾರ್ಮಿಕರು, ಕುಶಲಕರ್ಮಿಗಳು, ವ್ಯಾಪಾರಿ’ಗಳನ್ನು ಹೋಲಿಸಿದ್ದಾರೆ. ಈ ಎಲ್ಲ ವರ್ಗಗಳು ಮುಸ್ಲಿಮರ ವಿರುದ್ಧ ಪ್ರಚೋದಿತರಾಗುವಂತೆ ಮಾಡಲು ಯತ್ನಿಸಿದ್ದಾರೆ. ಆ ಮೂಲಕ ಮುಸ್ಲಿಂ ಸಮುದಾಯಗಳನ್ನು ಉತ್ಪಾದಕ ನಾಗರಿಕರ ಚೌಕಟ್ಟಿನಿಂದ ಹೊರಗಿಡುವ ಪ್ರಯತ್ನವನ್ನೂ ಮಾಡಿದ್ದಾರೆ.

ಬೆದರಿಕೆಯೇ ಅಥವಾ ಆಡಳಿತವೇ?

ಆದಿತ್ಯನಾಥ್ ಅವರು, “ಅವರು (ಮುಸ್ಲಿಮರು) ಪ್ರೀತಿಯಿಂದ ಕೇಳಿದಾಗ ಒಪ್ಪಿಕೊಂಡರೆ ಒಳ್ಳೆಯದು, ಇಲ್ಲದಿದ್ದರೆ ನಾವು ಬೇರೆ ಮಾರ್ಗಗಳನ್ನು ಅಳವಡಿಸಿಕೊಳ್ಳುತ್ತೇವೆ” ಎಂದಿದ್ದಾರೆ. ಈ ಬೆದರಿಕೆಯ ಹೇಳಿಕೆ ಸಮಯದಲ್ಲಿ, ಅವರು ಬರೇಲಿ ನಗರವನ್ನು ಉಲ್ಲೇಖಿಸಿ, “ಅದು (ಬರೇಲಿ) ನಮ್ಮ ಶಕ್ತಿಯನ್ನು ಕಂಡ ಸ್ಥಳ” ಎಂದು ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ, ಬರೇಲಿಯಲ್ಲಿ ‘ಐ ಲವ್ ಮೊಹಮ್ಮದ್’ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು. ನಂತರ ಹಲವಾರು ಮುಸ್ಲಿಮರನ್ನು ಬಂಧಿಸಲಾಗಿತ್ತು. ಅದೇ ತಿಂಗಳು ಅದೇ ನಗರದ ರೆಸ್ಟೋರೆಂಟ್‌ ಒಂದರಲ್ಲಿ ನಡೆದ ಜನ್ಮದಿನದ ಆಚರಣೆಗೆ ಅಡ್ಡಿಪಡಿಸಲಾಗಿತ್ತು. ಏಕೆಂದರೆ ಅಲ್ಲಿ ಬಂದಿದ್ದ ಆರು ಅತಿಥಿಗಳಲ್ಲಿ ಇಬ್ಬರು ಮುಸ್ಲಿಂ ಯುವಕರಾಗಿದ್ದರು. ಈ ದಾಂಧಲೆಗಳನ್ನು ಯೋಗಿ ತಮ್ಮ ಶಕ್ತಿಯೆಂದು ಬಣ್ಣಿಸಿಕೊಂಡಿದ್ದಾರೆ. ಹಿಂಸೆಯೇ ತಮ್ಮ ಸರ್ಕಾರದ ಮಾರ್ಗವೆಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ವ್ಯಂಗ್ಯವೆಂದರೆ, ಮುಖ್ಯಮಂತ್ರಿಗಳು ಶಿಸ್ತು, ಸುವ್ಯವಸ್ಥೆ ಮತ್ತು (ಕೆಲವು) ನಾಗರಿಕರು ತಮ್ಮ ಮಿತಿಯನ್ನು ತಿಳಿದುಕೊಳ್ಳುವ ಬಗ್ಗೆ ಮಾತನಾಡುತ್ತಿರುವಾಗ, ಅದೇ ದಿನ ಉತ್ತರ ಪ್ರದೇಶದ ಶಿಕ್ಷಕರು ರಾಜ್ಯದ ರಾಜಧಾನಿ ಲಕ್ನೋದಲ್ಲಿ ತೆವಳಿಕೊಂಡು ಹೋಗುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದರು. ಸರ್ಕಾರವು ತಮ್ಮನ್ನು ‘ಕೀಟಗಳಂತೆ’ ನಡೆಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದರು. ತಾವು ತಮ್ಮ ಬೇಡಿಕೆಗಳೊಂದಿಗೆ ರಾಜ್ಯ ಶಿಕ್ಷಣ ಸಚಿವರ ನಿವಾಸದ ಕಡೆಗೆ ತೆವಳುವ ಪ್ರತಿಭಟನಾ ಮಾರ್ಗವನ್ನು ಅಳವಡಿಸಿಕೊಂಡಿದ್ದೇವೆ ಎಂದು ಪ್ರತಿಭಟನಾನಿರತ ಶಿಕ್ಷಕರು ಹೇಳಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗೆ ಆಹ್ವಾನ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಈ...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...